ಖರೀದಿಗೆ ಮುಗಿಬಿದ್ದ ಮದ್ಯ ಪ್ರಿಯರು!

ಮುಂಜಾನೆಯಿಂದಲೇ ಅಂಗಡಿಗಳ ಬಳಿ ಸಾಲುಗಟ್ಟಿ ನಿಂತ ಜನ

Team Udayavani, May 5, 2020, 6:30 PM IST

ಖರೀದಿಗೆ ಮುಗಿಬಿದ್ದ ಮದ್ಯ ಪ್ರಿಯರು!

ಸಾಂದರ್ಭಿಕ ಚಿತ್ರ

ಮಂಡ್ಯ: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ನಲವತ್ತು ದಿನಗಳಿಂದ ಬಂದ್‌ ಆಗಿದ್ದ ಮದ್ಯದಂಗಡಿಗಳು ಬಾಗಿಲು ತೆರೆಯುತ್ತಿದ್ದಂತೆ ಮದ್ಯಪ್ರಿಯರ ಸಂಭ್ರಮೋತ್ಸಾಹ ಮುಗಿಲುಮುಟ್ಟಿತ್ತು. ಪಟಾಕಿ ಸಿಡಿಸಿ, ಚಪ್ಪಾಳೆಯೊಂದಿಗೆ ಮದ್ಯದಂಗಡಿ ಬಾಗಿಲು ತೆರೆಯುವ ಕ್ಷಣ ವನ್ನು ಸ್ವಾಗತಿಸಿದರು. ಬೆಳಗ್ಗೆ 6 ಗಂಟೆಯಿಂದಲೇ ಮದ್ಯ ಖರೀದಿಗಾಗಿ ನೂರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಬೆಳಗ್ಗೆ 9 ಗಂಟೆಗೆ ಅಂಗಡಿ ಮಾಲೀಕರು ಬಾಗಿಲು ತೆರೆಯುತ್ತಿದ್ದಂತೆ ಸಾಮಾಜಿಕ ಅಂತರ ಕಾಯ್ದುಕೊಂಡು ಸರದಿಯಲ್ಲಿ ನಿಂತು ಮದ್ಯವನ್ನು ಖರೀದಿಸಿದರು. ನಗರದ ಬನ್ನೂರು ರಸ್ತೆ, ನೂರಡಿ ರಸ್ತೆ, ವಿಶ್ವೇಶ್ವರಯ್ಯ ರಸ್ತೆ ಸೇರಿದಂತೆ ಎಲ್ಲಾ ಮದ್ಯದಂಗಡಿಗಳ ಎದುರು ಮದ್ಯ ಖರೀದಿಗೆ ಬಂದಿದ್ದ ಜನರ ಉದ್ದನೆಯ ಸಾಲು ಕಂಡು ಬಂದಿತು.

ಎಲ್ಲೆಡೆ ಜನಜಂಗುಳಿ: ಬನ್ನೂರು ರಸ್ತೆಯ ನಾಗಣ್ಣ ವೈನ್ಸ್‌, ನೂರಡಿ ರಸ್ತೆಯ  ಮಾರ್ತಾಂಡ ವೈನ್ಸ್‌, ಮಧುಲೋಕ, ಗುತ್ತಲು ರಸ್ತೆಯ ಮಾರ್ತಾಂಡ ವೈನ್ಸ್‌ ಸೇರಿದಂತೆ ನಗರದ ಎಲ್ಲಾ ವೈನ್ಸ್‌ಸ್ಟೋರ್‌ಗಳ ಬಳಿ ಮದ್ಯ ಖರೀದಿಗೆ ಜನಜಂಗುಳಿ ನೆರೆದಿತ್ತು. ಮಾಸ್ಕ್ ಧರಿಸಿ ಬಂದವರಿಗಷ್ಟೇ ಮದ್ಯ ವಿತರಣೆ ಮಾಡಲಾಗುತ್ತಿತ್ತು. ಅಂಗಡಿಯೊಳಗೆ ಪ್ರತಿ 5 ಜನರಿಗೆ ಮಾತ್ರ ಪ್ರವೇಶ ನೀಡುತ್ತಿದ್ದು, ಎಲ್ಲರೂ ಯಾವುದೇ ನೂಕುನುಗ್ಗಲಿಲ್ಲದೆ, ಗಲಾಟೆಗೆ ಅವಕಾಶವಾಗದಂತೆ ಸಮಾಧಾನ ದಿಂದ ಮದ್ಯ ಖರೀದಿಸಿದರು. ನಲವತ್ತು ದಿನಗಳಿಂದ ಬಾಯಿ ಒಣಗಿಸಿಕೊಂಡಿದ್ದ ಮದ್ಯ
ಪ್ರಿಯರು ಸೋಮವಾರ ತಮಗಿಷ್ಟದ ಬ್ರಾಂಡ್‌ ಖರೀದಿಸಿ ಕುಡಿಯುವುದರೊಂದಿಗೆ ತೃಪ್ತರಾಗಿ ನಶೆಯಲ್ಲಿ ತೇಲಾಡಿದರು.

ಪೊಲೀಸ್‌ ಭದ್ರತೆ: ಬಾಗಿಲು ತೆರೆಯಲು ಅವಕಾಶ ಕಲ್ಪಿಸಲಾಗಿದ್ದ ಎಲ್ಲಾ ಎಂಎಸ್‌ಐಎಲ್‌, ಎಂಆರ್‌ಪಿ ಅಂಗಡಿಗಳ ಎದುರು ನೂರಾರು ಸಂಖ್ಯೆಯಲ್ಲಿ ಜನರು ಸೇರಿದ್ದರಿಂದ ಪೊಲೀಸ್‌ ಭದ್ರತೆಯನ್ನು ಒದಗಿಸಲಾಗಿತ್ತು. ಪೊಲೀಸರು ಕಾನೂನು ಸುವ್ಯವಸ್ಥೆ ಹಾಳಾಗದಂತೆ ಎಚ್ಚರ ವಹಿಸಿ ಮದ್ಯ ಮಾರಾಟಕ್ಕೆ ನೆರವಾಗಿದ್ದರು.

ಪಟಾಕಿ ಸಿಡಿಸಿ ಸಂಭ್ರಮ: ನಗರದ ಗುತ್ತಲು ರಸ್ತೆಯಲ್ಲಿರುವ ಮಾರ್ತಾಂಡ ವೈನ್ಸ್‌ ಬಾಗಿಲು ತೆರೆಯುವುದನ್ನೇ ಎದುರುನೋಡುತ್ತಾ ಬೆಳಗ್ಗೆಯಿಂದ ಜನರು ಅಂಗಡಿ ಎದುರು ಗುಂಪುಗೂಡಿದ್ದರು. ಬೆಳಗ್ಗೆ 9 ಗಂಟೆಗೆ ಅಂಗಡಿ ಓಪನ್‌ ಆದ ಕೂಡಲೇ ಪಟಾಕಿ ಸಿಡಿಸಿ ಹರ್ಷ ವ್ಯಕ್ತಪಡಿಸಿದರು. ಎಷ್ಟೇ ಹೊತ್ತಾದರೂ ಮದ್ಯ ಖರೀದಿಸಿಯೇ ತೆರಳಬೇಕೆಂದು ಬಂದಿದ್ದ ಜನರು
ಬ್ಯಾಗ್‌ಗಳು, ಏರ್‌ಬ್ಯಾಗ್‌ಗಳು, ಬ್ಯಾಸ್ಕೆಟ್‌ ಸೇರಿದಂತೆ ವಾಹನಗಳನ್ನು ತಂದು ಅವುಗಳಲ್ಲಿ ಮದ್ಯ ಕೊಂಡೊಯ್ಯುತ್ತಿದ್ದುದು ಕಂಡು ಬಂದಿತು.

ಬೆಳಗ್ಗೆ 9ಗಂಟೆಯಿಂದ ಸಂಜೆ 5 ಗಂಟೆವರೆಗೆ ಮದ್ಯ ಮಾರಾಟ
ಜಿಲ್ಲೆಯಲ್ಲಿ ಮದ್ಯ ಮಾರಾಟದ ಅವಧಿಯನ್ನು ಬೆಳಗ್ಗೆ 9 ರಿಂದ ಸಂಜೆ 5ರವರೆಗೆ ಮಾತ್ರ ಸೀಮಿತಗೊಳಿಸಲಾಗಿದೆ. ರಾಜ್ಯಸರ್ಕಾರದ ಮಾರ್ಗಸೂಚಿ ಪ್ರಕಾರ ಮದ್ಯದಂಗಡಿಗಳಲ್ಲಿ ಬೆಳಗ್ಗೆ 9 ರಿಂದ ಸಂಜೆ 7 ಗಂಟೆಯವರೆಗೆ ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಆದರೆ, ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಸಂಜೆ 7 ಗಂಟೆಯ ಬದಲು 5 ಗಂಟೆಯವರೆಗೆ ಮಾತ್ರ ಮದ್ಯದಂಗಡಿಗಳು ಬಾಗಿಲು ತೆರೆಯಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್‌ ಅಧೀಕ್ಷಕರ ಸಮ್ಮುಖದಲ್ಲಿ ನಡೆದ ಸಭೆ ಯಲ್ಲಿ ಮಾರ್ಪಾಡು ಮಾಡಲಾಗಿದೆ. ಸಂಜೆ 7ರವರೆಗೆ ಮದ್ಯ ಖರೀದಿಗೆ ಅವಕಾಶ ಮಾಡಿಕೊಟ್ಟರೆ ಮದ್ಯ ಖರೀದಿಸಿ ಹಳ್ಳಿಗಳಿಗೆ ಹೋಗುವವರು ಅಸಭ್ಯವಾಗಿ ವರ್ತಿಸಿ ಸಾರ್ವಜನಿ ಕರಿಗೆ ತೊಂದರೆ ಉಂಟು ಮಾಡಬಹುದು ಎಂಬ ಕಾರಣಕ್ಕೆ ಮದ್ಯ ಮಾರಾಟ ಅವಧಿಯನ್ನು ಕಡಿತಗೊಳಿಸಲಾಗಿದೆ.

ಒಬ್ಬರಿಗೆ 2.3 ಲೀಟರ್‌ ಮದ್ಯ 
ರಾಜ್ಯಸರ್ಕಾರ ಮದ್ಯದಂಗಡಿ ತೆರೆಯಲು ಅವಕಾಶ ಮಾಡಿಕೊಟ್ಟ ಬೆನ್ನಲ್ಲೇ ಇಷ್ಟಬಂದಷ್ಟು ಮದ್ಯ ಖರೀದಿಗೆ ನಿರ್ಬಂಧ ಹೇರಲಾಗಿತ್ತು. ಮದ್ಯ ಖರೀದಿಗೆ ಬಂದ ಪ್ರತಿ ವ್ಯಕ್ತಿಗೆ 2.3 ಲೀ.
(ಮೂರು ಫ‌ುಲ್‌ ಬಾಟಲ್‌) ಖರೀದಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿತ್ತು. ಆದರೆ, ಇಷ್ಟೇ ಪ್ರಮಾಣದಲ್ಲಿ ಜನರು ಮದ್ಯ ಖರೀದಿ ಮಾಡಿದ್ದಾರೆ ಎಂದು ನಿರ್ದಿಷ್ಟವಾಗಿ ಹೇಳಲಾಗುವುದಿಲ್ಲ.
ಏಕೆಂದರೆ, ಒಂದು ಅಂಗಡಿಯಲ್ಲಿ ಮದ್ಯ ಖರೀದಿಸಿದ ಬಳಿಕ ಮತ್ತೂಂದು ಅಂಗಡಿಯಲ್ಲಿ ಮದ್ಯ ಖರೀದಿ ಮಾಡಲೂಬಹುದು. ಅದನ್ನು ತಡೆಯುವುದು ಹಾಗೂ ಪತ್ತೆಹಚ್ಚುವುದು ಕಷ್ಟ
ಎಂದು ಅಬಕಾರಿ ಉಪ ಆಯುಕ್ತ ಶಿವ ಪ್ರಸಾದ್‌ ಹೇಳಿದರು.

ಮದ್ಯ ಖರೀದಿಗೆ ಇರುವ ಷರತ್ತುಗಳು
ಮದ್ಯದ ಮಳಿಗೆಗಳ ಒಳಗೆ 5 ಜನ ಗ್ರಾಹಕರು ಮಾತ್ರ ಇರಬೇಕು. ಪ್ರತಿಯೊಬ್ಬರೂ ಮಾಸ್ಕ್ ಧರಿಸಿರಬೇಕು. ಮಾಸ್ಕ್ ಧರಿಸಿ ಬರದವರಿಗೆ ಮದ್ಯ ಮಾರಾಟ ಮಾಡುವಂತಿಲ್ಲ. ಒಬ್ಬರಿಂದ ಒಬ್ಬರಿಗೆ ಕನಿಷ್ಠ 6 ಅಡಿ ಅಂತರವಿರಬೇಕು. ಷರತ್ತು ಉಲ್ಲಂ ಸಿದ ಮದ್ಯ ಮಳಿಗೆಗಳ ಅನುಮತಿ ರದ್ದುಗೊಳಿಸುವುದಾಗಿ ಅಬಕಾರಿ ಉಪ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾ ವ್ಯಾಪ್ತಿಯಲ್ಲಿ 100 ವೈನ್‌ಶಾಪ್‌ಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ. 52 ಗ್ರಾಮೀಣ ಹಾಗೂ ನಗರ ಪ್ರದೇಶದ 48 ವೈನ್‌ಶಾಪ್‌ಗಳು. ಅದೇ ರೀತಿ ನಗರದಲ್ಲಿ 12 ಹಾಗೂ 22 ಗ್ರಾಮೀಣ ಸೇರಿದಂತೆ ಒಟ್ಟು 34 ಎಂಎಸ್‌ಐಎಲ್‌ ಮಳಿಗೆಗಳಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ಕೊಟ್ಟಿದೆ.

ಮದ್ಯಕ್ಕೆ ನೂಕು ನುಗ್ಗಲು: ಲಘು ಲಾಠಿ ಪ್ರಹಾರ
ಮಂಡ್ಯ: ನಗರದಲ್ಲಿ ಮದ್ಯ ಖರೀದಿಗೆ ನೂಕು ನುಗ್ಗಲು ನಡೆಸಿದ ವೇಳೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ ಘಟನೆ ನೂರಡಿ ರಸ್ತೆಯ ಮಧುಲೋಕ ಬಳಿ ಸೋಮವಾರ ನಡೆದಿದೆ. ಅಂಗಡಿ ತೆರೆಯುವ ಮುನ್ನವೇ ಸಾಕಷ್ಟು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಅಲ್ಲದೆ, ಮದ್ಯ ಖರೀದಿಗೆ ಬಂದವರು ಅಲ್ಲಲ್ಲಿ ಗುಂಪುಗೂಡಿದ್ದರು. ಅಂಗಡಿ ತೆರೆದ ಸಮಯದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಮದ್ಯ ಖರೀದಿಸಲು ಮುಗಿ ಬಿದ್ದ ಸಮಯದಲ್ಲಿ ಸ್ವಲ್ಪ ನೂಕು ನುಗ್ಗಲು ಉಂಟಾಯಿತು. ಈ ಸಮಯದಲ್ಲಿ ಸ್ಥಳದಲ್ಲಿದ್ದ ಪೊಲೀಸರು ಅವರನ್ನು ಚದುರಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು.

ಜಿಲ್ಲಾ ವ್ಯಾಪ್ತಿಯಲ್ಲಿ 100 ವೈನ್‌ಶಾಪ್‌ಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ. 52 ಗ್ರಾಮೀಣ ಹಾಗೂ ನಗರ ಪ್ರದೇಶದ 48 ವೈನ್‌ಶಾಪ್‌ಗಳು. ಅದೇ ರೀತಿ ನಗರದಲ್ಲಿ 12 ಹಾಗೂ 22 ಗ್ರಾಮೀಣ ಸೇರಿದಂತೆ ಒಟ್ಟು 34 ಎಂಎಸ್‌ಐಎಲ್‌ ಮಳಿಗೆಗಳಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ಕೊಟ್ಟಿದೆ.
● ಡಾ.ವೆಂಕಟೇಶ್‌, ಜಿಲ್ಲಾಧಿಕಾರಿ

ಮಂಡ್ಯ ಮಂಜುನಾಥ್‌

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

ಹಾಲಾದರೂ ನೀಡಿ, ವಿಷವಾದರೂ ನೀಡಿ; ನಾನು ಸ್ವೀಕರಿಸುತ್ತೇನೆ: ಎಚ್‌ಡಿಕೆ

ಹಾಲಾದರೂ ನೀಡಿ, ವಿಷವಾದರೂ ನೀಡಿ; ನಾನು ಸ್ವೀಕರಿಸುತ್ತೇನೆ: ಎಚ್‌ಡಿಕೆ

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.