ಪ್ರವಾಸಿ ತಾಣಗಳಿಗೆ ಹರಿದು ಬಂದ ಜನಸಾಗರ


Team Udayavani, Oct 19, 2021, 3:46 PM IST

madya news

ಶ್ರೀರಂಗಪಟ್ಟಣ: ಐತಿಹಾಸಿಕ ಪ್ರಸಿದ್ಧ ಶ್ರೀರಂಗಪಟ್ಟಣದ ಪ್ರವಾಸಿ ಕೇಂದ್ರಗಳಿಗೆ ಜನಸಾಗರವೇ ಹರಿದುಬರುತ್ತಿದ್ದು, ಎತ್ತ ನೋಡಿದರು ಪ್ರವಾಸಿಗರ ದಂಡುಎದ್ದು ಕಾಣುತ್ತಿದೆ.

ಕೊರೊನಾ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಪ್ರವಾಸೋದ್ಯಮಕ್ಕೆ ಯಾವುದೇ ಆದಾಯವಿಲ್ಲದೆ, ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಲ್ಲದೆಆರ್ಥಿಕವಾಗಿ ನೆಲಕಚ್ಚಿದ ಪ್ರವಾಸೋದ್ಯಮ ಇದೀಗಚೇತರಿಕೆಯಾಗುವ ಸಂಭವವಿದೆ. ಎರಡು ವರ್ಷದಿಂದಕೋವಿಡ್‌ ಹಿನ್ನೆಲೆ ತಾಲೂಕಿನ ಹಲವು ಪ್ರವಾಸಿತಾಣಗಳಿಗೆ ಬೀಗ ಜಡಿಯಲಾಗಿತ್ತು. ಇದರಿಂದತಾಲೂಕಿನ ಪ್ರವಾಸಿ ತಾಣಗಳಿಂದ ಸರ್ಕಾರದ ಬೋಕ್ಕಸಕ್ಕೆಕೋಟಿ ಕೋಟಿ ಹಣ ನಷ್ಟವಾಗಿತ್ತು.

ಇದರ ಪರಿಣಾಮಅಲ್ಲಿ ಕೆಲಸ ಮಾಡುವ ಕಾರ್ಮಿಕರು ಕಷ್ಟ ಅನುಭವಿಸಿದ್ದರು. ಸದ್ಯ ಪರಿಸ್ಥಿತಿ ಇದೀಗ ತಿಳಿಯಾಗಿದ್ದು, ಕೋವಿಡ್‌ಸೋಂಕು ಗಣನೀಯವಾಗಿ ಇಳಿಕೆ ಕಂಡು ಬಂದಿದೆ.ಸರ್ಕಾರ ತನ್ನ ಮಾರ್ಗಸೂಚಿಯನ್ನು ಸಡಲಿಕೆ ಮಾಡಿದನಂತರ ತಾಲೂಕಿನ ಧಾರ್ಮಿಕ ಕ್ಷೇತ್ರ ಹಾಗೂ ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಚೇತರಿಕೆ ಕಂಡಿದ್ದು, ಪ್ರವಾಸಿಗರು ಪ್ರವಾಸಿ ತಾಣಗಳತ್ತ ಮುಖ ಮಾಡಿದ್ದಾರೆ.

ಪ್ರವಾಸಿಗರಿಂದ ತುಂಬಿದೆ ಪಕ್ಷಿಧಾಮ: ವಿಶ್ವ ಪ್ರಸಿದ್ಧರಂಗನತಿಟ್ಟು ಪಕ್ಷಿಧಾಮಕ್ಕೆ ಕಳೆದ 15 ದಿನಗಳಿಂದಪ್ರವಾಸಿಗರ ಆಗಮನದಲ್ಲಿ ಬಾರಿ ಏರಿಕೆಕಂಡುಬಂದಿದೆ. ನಿತ್ಯ ಮಕ್ಕಳು ಹಾಗೂ ವಯಸ್ಕರುಸೇರಿ ಅಂದಾಜು 1000ಕ್ಕೂ ಹೆಚ್ಚು ಜನ ಪಕ್ಷಿಗಳವೀಕ್ಷಣೆಗೆ ಬರುತ್ತಿದ್ದಾರೆ. ಹಲವು ತಿಂಗಳಿ ನಿಂದಪ್ರವಾಸಿಗರಿಲ್ಲದೆ ಬಿಕೋ ಎನ್ನುತಿದ್ದ ಪಕ್ಷಿಧಾಮ ಇಂದುಎತ್ತ ನೋಡಿದರತ್ತ ಪ್ರವಾಸಿ ಗರು ಬೈನಾಕುಲರ್‌ನಿಂದಪಕ್ಷಿ ವೀಕ್ಷಣೆ ಮಾಡುತ್ತಿರುವವರು ಒಂದು ಕಡೆಯಾದರೆ, ಮತ್ತೂಂದು ಕಡೆಡಿಎಸ್‌ಆರ್‌ ಕ್ಯಾಮರಾಗಳನ್ನುಹಿಡಿದು ಪಕ್ಷಿಗಳ ವಿವಿಧ ಭಂಗಿಗಳನ್ನು ಸೆರೆಹಿಡಿಯುತ್ತಿರು ವುದುಕಂಡುಬಂದಿದೆ. ಮತ್ತೂಂದು ಕಡೆ ಪಕ್ಷಿ ಸಂಕುಲಗಳನ್ನುಹತ್ತಿರ ದಿಂದ ವೀಕ್ಷಿಸಿ ಹರ್ಷವ್ಯಕ್ತಪಡಿ ಸಲು ಸಾಲುಗಟ್ಟಿಟಿಕೆಟ್‌ ಪಡೆದು ಸರದಿ ಸಾಲಿನಲ್ಲಿಜೀವ ರಕ್ಷಕಗಳನ್ನು ತೊಟ್ಟು ದೋಣಿವಿಹಾರ ಮಾಡುತ್ತಿರುವುದು ಸಾಮಾನ್ಯವಾಗಿದೆ.ವಿಶೇಷವೆಂದರೆ ರಂಗನ ತಿಟ್ಟಿಗೆ ಪಕ್ಷಿವೀಕ್ಷಣೆಗೆ ಪ್ರವಾಸಿಗರು ಕುಟುಂಬಸಮೇತರಾಗಿ ಬರುತ್ತಿರು ವುದುಉತ್ತಮ ಬೆಳವಣಿಗೆ ಯಾಗಿದೆ.

ನಿರೀಕ್ಷೆ ಮುಟ್ಟದ ಬೃಂದಾವನ:ರಂಗನತಿಟ್ಟು ಪಕ್ಷಿಧಾಮದಲ್ಲಿಪ್ರವಾಸಿಗರ ಕಲರವ ಹೆಚ್ಚುತ್ತಿದ್ದರೆ, ಇತ್ತ ದೇಶ ವಿದೇಶಗಳಪ್ರವಾಸಿಗರನ್ನು ಸೂಜಿಗಲ್ಲಿ ನಂತೆತನ್ನತ್ತ ಸೆಳೆಯುತ್ತಿದ್ದ ಕೃಷ್ಣರಾಜಸಾಗರಅಣೆಕಟ್ಟೆ ಯ ಬೃಂದಾವನ ಪ್ರವಾಸಿಗರಿಂದ ಅಷ್ಟೋ ಇಷ್ಟೋ ನೆಮ್ಮ ದಿಯನಿಟ್ಟುಸಿರು ಬಿಡುತ್ತಿದ್ದಾರೆ.

ಅಂಗಡಿ ವ್ಯಾಪಾರಿಗಳುಪ್ರವಾಸಿಗರನ್ನು ನೋಡಿ ಅಷ್ಟೋ ಇಷ್ಟೋ ವ್ಯಾಪಾರಮಾಡುವ ಕನಸು ಕಟ್ಟಿದ್ದಾರೆ.800ರಿಂದ 1000 ಮಂದಿ: ದಸರಾ ವೇಳೆ ಬೃಂದಾವನದಲ್ಲಿ ಎತ್ತ ನೋಡಿದರು ಜನಸಾಗರ ತುಂಬಿತುಳುಕುತಿತ್ತು. ನಮಗೂ ಹೆಚ್ಚಿನ ಪ್ರಮಾಣದಲ್ಲಿವ್ಯಾಪಾರ ಮಾಡಲು ಪ್ರವಾಸಿಗರು ಅಂಗಡಿಗಳತ್ತಇದೀಗ ಮುಖ ಮಾಡುತ್ತಿದ್ದಾರೆ. ಕಳೆದ ಎರಡುವರ್ಷದಿಂದ ಕೋವಿಡ್‌ ನಮ್ಮ ಬದುಕನ್ನು ಹತ್ತುವರ್ಷಗಳ ಹಿಂದಕ್ಕೆ ದೂಡಿದೆ.

ಈಗ ಸದ್ಯ ಜನರುಪ್ರವಾಸಿ ತಾಣಗಳಿಗೆ ಬರುತ್ತಿರುವುದರಿಂದ ಜೀವನಸಾಗುತ್ತಿದೆ. ಆದರೂ, ನಾವು ಈ ಬಾರಿ ನಿರೀಕ್ಷಿಸಿದಷ್ಟುಜನ ಬರುತ್ತಿಲ್ಲ. ಪ್ರತಿ ದಿನ ಅಂದಾಜು 800ರಿಂದ1000 ಜನ ಬೃಂದಾವನಕ್ಕೆ ಭೇಟಿ ನೀಡುತಿದ್ದಾರೆಎಂದು ಅಂಗಡಿ ಮಾಲೀಕ ಮೋಹನ್‌ ತಿಳಿಸಿದ್ದಾರೆ.ಧಾರ್ಮಿಕ ಕ್ಷೇತ್ರದ ಚೇತರಿಕೆ: ಕಳೆದ ಮಹಾಲಯಅಮವಾಸ್ಯೆಯಿಂದ ಶ್ರೀರಂಗಪಟ್ಟಣದ ಧಾರ್ಮಿìಕಕ್ಷೇತ್ರ ಚುರುಕು ಕಂಡಿದೆ. ಸಾವಿರಾರು ಜನ ಪಿತೃಪಿಂಡಪ್ರಧಾನ ಮಾಡಲು ಕಾವೇರಿ ನದಿ ಪ್ರದೇಶಕ್ಕೆ ಭೇಟಿನೀಡಿ, ನಂತರ ಶ್ರೀರಂಗನಾಥ ಸ್ವಾಮಿ, ನಿಮಿಷಾಂಬ,ಕ್ಷಣಾಂಬಿಕ, ಕಾವೇರಿ ಸಂಗಮ, ಗೋಸಾಯ್‌ ಘಾಟ್‌,ಕಾಶಿ ವಿಶ್ವನಾಥ ಸೇರಿದಂತೆ ಹಲವು ದೇಗುಲಗಳಲ್ಲಿಭಕ್ತರ ದಂಡನ್ನು ಕಾಣಬಹುದಾಗಿದೆ.

ಗಂಜಾಂ ಮಂಜು

ಟಾಪ್ ನ್ಯೂಸ್

ಜಗತ್ತಿನ ಹೊಸ ರಾಷ್ಟ್ರದ ಉದಯ

ಜಗತ್ತಿನ ಹೊಸ ರಾಷ್ಟ್ರದ ಉದಯ

ಐಪಿಎಲ್‌: ರಿಟೈನ್‌ ಆಟಗಾರರ ಪಟ್ಟಿ ರಿಲೀಸ್‌

ಐಪಿಎಲ್‌: ರಿಟೈನ್‌ ಆಟಗಾರರ ಪಟ್ಟಿ ರಿಲೀಸ್‌

ಭಾರತಕ್ಕೆ ಬಂದವು ಅತ್ಯಾಧುನಿಕ ಹೆರಾನ್‌ ಡ್ರೋನ್‌ಗಳು

ಭಾರತಕ್ಕೆ ಬಂದವು ಅತ್ಯಾಧುನಿಕ ಹೆರಾನ್‌ ಡ್ರೋನ್‌ಗಳು

ವಾರಾಂತ್ಯದಲ್ಲಿ ಮತ್ತೆ ಮಳೆ ಅಬ್ಬರ

ವಾರಾಂತ್ಯದಲ್ಲಿ ಮತ್ತೆ ಮಳೆ ಅಬ್ಬರ

ಹಂಸಲೇಖ ವಿರುದ್ಧದ ತನಿಖೆಗೆ ಹೈಕೋರ್ಟ್‌ ಮಧ್ಯಂತರ ತಡೆ

ಹಂಸಲೇಖ ವಿರುದ್ಧದ ತನಿಖೆಗೆ ಹೈಕೋರ್ಟ್‌ ಮಧ್ಯಂತರ ತಡೆ

ಒಮಿಕ್ರಾನ್‌: ಭಾರತೀಯರು ಸುರಕ್ಷಿತ

ಒಮಿಕ್ರಾನ್‌: ಭಾರತೀಯರು ಸುರಕ್ಷಿತ

ವದಂತಿ ಹಬ್ಬಿಸುವವರ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳಲಿ

ವದಂತಿ ಹಬ್ಬಿಸುವವರ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳಲಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೃಷಿ ಮೇಳ

ನಾಳೆ, ನಾಡಿದ್ದು ಕೃಷಿ ಮೇಳ

ಶ್ರೀರಂಗಪಟ್ಟಣ ದಲ್ಲಿ ಅಪ್ಪು ಪುಣ್ಯ ಸ್ಮರಣೆ

ಶ್ರೀರಂಗಪಟ್ಟಣದಲ್ಲಿ ಅಪ್ಪು ಪುಣ್ಯ ಸ್ಮರಣೆ

ಶ್ರೀರಂಗಪಟ್ಟಣ : ಹಿರಿದೇವಿ ಅಮ್ಮನ ಜಾತ್ರಾ ಮಹೋತ್ಸವದಲ್ಲಿ ಮನರಂಜಿಸಿದ ನಾಡಕುಸ್ತಿ ಪಂದ್ಯಾವಳಿ

ಶ್ರೀರಂಗಪಟ್ಟಣ : ಹಿರಿದೇವಿ ಅಮ್ಮನ ಜಾತ್ರಾ ಮಹೋತ್ಸವದಲ್ಲಿ ಮನರಂಜಿಸಿದ ನಾಡಕುಸ್ತಿ ಪಂದ್ಯಾವಳಿ

ಅಕ್ರಮ ಪಡಿತರ ಅಕ್ಕಿ- ಕ್ಯಾಂಟರ್‌ ವಶ

ಅಕ್ರಮ ಪಡಿತರ ಅಕ್ಕಿ: ಕ್ಯಾಂಟರ್‌ ವಶ

1-fff

ಪಾಂಡವಪುರ: ಬಿಜೆಪಿ ಕಾರ್ಯಕರ್ತರಿಂದ ಪುರಸಭೆ ಅಧಿಕಾರಿಗಳಿಗೆ ತರಾಟೆ

MUST WATCH

udayavani youtube

ಕಾಪು ಪರಿಸರದಲ್ಲಿ ಗಾಳಿ, ಗುಡುಗು, ಮಿಂಚು ಸಹಿತ ಭಾರೀ ಮಳೆ

udayavani youtube

ದನಗಳ್ಳರನ್ನು ಹಿಡಿಯಲು ಹೋದವರ ಮೇಲೆ ವಾಹನ ಚಲಾಯಿಸಿ ಹಲ್ಲೆ: ಇಬ್ಬರಿಗೆ ಗಂಭೀರ ಗಾಯ

udayavani youtube

ಸುಟ್ಟಗಾಯ ಸಂರ್ಪೂಣ ನಿವಾರಣೆ ಆಗಲು ಈ ನಾಟಿ ವೈದ್ಯರ ಬಳಿ ಇದೆ ಔಷಧಿ.

udayavani youtube

ಕಸ್ತೂರಿರಂಗನ್ ಸಮೀಕ್ಷೆ ಅವೈಜ್ಞಾನಿಕ !?

udayavani youtube

ಭಾರತದಲ್ಲಿ ವ್ಯಾಸಂಗ ಮಾಡಿದ್ದನಂತೆ ಈ ತಾಲಿಬಾನ್‌ ವಕ್ತಾರ!

ಹೊಸ ಸೇರ್ಪಡೆ

ಜಗತ್ತಿನ ಹೊಸ ರಾಷ್ಟ್ರದ ಉದಯ

ಜಗತ್ತಿನ ಹೊಸ ರಾಷ್ಟ್ರದ ಉದಯ

ಐಪಿಎಲ್‌: ರಿಟೈನ್‌ ಆಟಗಾರರ ಪಟ್ಟಿ ರಿಲೀಸ್‌

ಐಪಿಎಲ್‌: ರಿಟೈನ್‌ ಆಟಗಾರರ ಪಟ್ಟಿ ರಿಲೀಸ್‌

ಭಾರತಕ್ಕೆ ಬಂದವು ಅತ್ಯಾಧುನಿಕ ಹೆರಾನ್‌ ಡ್ರೋನ್‌ಗಳು

ಭಾರತಕ್ಕೆ ಬಂದವು ಅತ್ಯಾಧುನಿಕ ಹೆರಾನ್‌ ಡ್ರೋನ್‌ಗಳು

ವಾರಾಂತ್ಯದಲ್ಲಿ ಮತ್ತೆ ಮಳೆ ಅಬ್ಬರ

ವಾರಾಂತ್ಯದಲ್ಲಿ ಮತ್ತೆ ಮಳೆ ಅಬ್ಬರ

ಹಂಸಲೇಖ ವಿರುದ್ಧದ ತನಿಖೆಗೆ ಹೈಕೋರ್ಟ್‌ ಮಧ್ಯಂತರ ತಡೆ

ಹಂಸಲೇಖ ವಿರುದ್ಧದ ತನಿಖೆಗೆ ಹೈಕೋರ್ಟ್‌ ಮಧ್ಯಂತರ ತಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.