ವಿದ್ಯಾರ್ಥಿಗಳಿಗೆ ನೈಸರ್ಗಿಕ ಕೈತೋಟದ ಅರಿವು ಮೂಡಿಸಿ

Team Udayavani, Jul 12, 2019, 12:06 PM IST

ಮಂಡ್ಯ: ನೈಸರ್ಗಿಕ ಕೈತೋಟ ಮತ್ತು ದೇಶಿ ಆರೋಗ್ಯ ಪದಾರ್ಥಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕು ಎಂದು ಆರೋಗ್ಯ ಭಾರತಿ ಸಂಸ್ಥೆ ಜಿಲ್ಲಾಧ್ಯಕ್ಷೆ ರಶ್ಮಿ ವಿಜಯಕುಮಾರ್‌ ಹೇಳಿದರು.

ತಾಲೂಕಿನ ಸೂನಗನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಆರೋಗ್ಯ ಭಾರತಿ ಸಂಸ್ಥೆ ಆಯೋಜಿಸಿದ್ದ ವನ ಮಹೋತ್ಸವ ಮತ್ತು ಆರೋಗ್ಯ ಮಿತ್ರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಕೈ ತೋಟಗಾರಿಕೆ ಮೂಲಕ ರೈತರ ಶ್ರಮ ಮತ್ತು ನೈಸರ್ಗಿಕ ಕೃಷಿ ಬಗ್ಗೆ ಅರಿವು ಮೂಡಿಸಬೇಕು. ಕೃಷಿ ಆಧಾರಿತ ಉದ್ಯೋಗಗಳನ್ನು ಅವಲಂಬಿಸುವಂತೆ ಪ್ರೇರೇಪಿಸಿ ಪ್ರಗತಿಪರ ರೈತರು ಹಾಗೂ ಪರಿಸರ ಸ್ನೇಹಿ ಪ್ರಜೆಗಳನ್ನಾಗಿ ರೂಪಿಸುವಂತೆ ಪೋಷಕರು ಮತ್ತು ಶಿಕ್ಷಕರಲ್ಲಿ ಮನವಿ ಮಾಡಿದರು.

ಗೋ ಆಧಾರಿತ ಕೃಷಿ, ದೇಶೀಯ ಆರೋಗ್ಯ ಪದಾರ್ಥಗಳು, ಬೆಳೆಗಳ ಬಗ್ಗೆ ಮಾಹಿತಿ ನೀಡಿ ಆರೋಗ್ಯ, ಸ್ವಚ್ಚತೆ, ಪರಿಸರ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಿದಾಗ ಸ್ವದೇಶಿತನ ಬೆಳವಣಿಗೆ ಕಾಣುತ್ತದೆ ಎಂದು ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಆರೋಗ್ಯ ಮಿತ್ರ ಎಂಬ ಶಾಲಾಮಟ್ಟದ ನೂತನ ವಿದ್ಯಾರ್ಥಿ ಸಂಘಟನೆಯನ್ನು ಸ್ಥಾಪಿಸಲಾಯಿತು. ಬಳಿಕ ಶಾಲಾ ಆವರಣದಲ್ಲಿ ವನಮಹೋತ್ಸವ ನಿರ್ಮಾಣಕ್ಕಾಗಿ ತೇಗ, ಹತ್ತಿ, ನೇರಳೆ, ಸೀಬೆ, ಹೊನ್ನೆ, ಹೊಂಗೆ ಮತ್ತು ತರಕಾರಿ ಹಾಗೂ ಹಣ್ಣು ಬಿಡುವ ಸಸಿಗಳು ಸೇರಿದಂತೆ ನೂರಕ್ಕು ಹೆಚ್ಚು ಗಿಡಗಳನ್ನು ನೆಡಲಾಯಿತು.

ಕಾರ್ಯಕ್ರಮದಲ್ಲಿ ಆರೋಗ್ಯ ಭಾರತೀ ಸಂಸ್ಥೆಯ ಸದಸ್ಯರಾದ ಯೋಗೇಂದ್ರ, ಮಹೇಶ್‌, ಸೌಮ್ಯ ಮುಖ್ಯ ಶಿಕ್ಷಕರು ಹಾಗೂ ದೈಹಿಕ ಶಿಕ್ಷಕರಾದ ಜೈಶಂಕರ ಹಾಜರಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ