ನಾಳೆ 9 ಕೋಟಿ ರೈತರ ಖಾತೆಗೆ ಹಣ ಜಮೆ
Team Udayavani, Dec 24, 2020, 2:05 PM IST
ಮಂಡ್ಯ: ಬಿಜೆಪಿ ವತಿಯಿಂದ ಡಿ.25ರಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಅಂಗವಾಗಿ ರಾಜ್ಯದ್ಯಂತ ಕಿಸಾನ್ ಸಮ್ಮಾನ್ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ದೇಶದ 9 ಕೋಟಿ ರೈತ ಬಾಂಧವರಿಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ 18 ಸಾವಿರಕೋಟಿ ರೂ. ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆಮಧ್ಯಾಹ್ನ 11.45ರಲ್ಲಿ ವರ್ಗಾಯಿಸಿ, ನಂತರ 12ಕ್ಕೆರೈತರನ್ನು ಉದ್ದೇಶಿಸಿ ಮಾತನಾಡಲಿದ್ದು, ಎಲ್ಲ ದೃಶ್ಯ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನೇರ ಪ್ರಸಾರವಾಗಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನೇರ ಪ್ರಸಾ ರವೀಕ್ಷಣೆ : ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಯುತ್ತಿರುವುದರಿಂದ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಎಲ್ಲ ಜಿಲ್ಲೆ, ಮಂಡಲ,ಎಪಿಎಂಸಿ, ಸಹಕಾರ ಸಂಘ-ಸಂಸ್ಥೆಗಳು ಹಾಗೂ ಶಕ್ತಿ ಕೇಂದ್ರಗಳಲ್ಲಿ ಬಿಜೆಪಿಯ ಪದಾಧಿಕಾರಿಗಳು ರೈತರನ್ನುಆಹ್ವಾನಿಸಿ,ಅಟಲ್‌ಜೀಅವರಭಾವಚಿತ್ರಕ್ಕೆಪುಷ್ಪಾರ್ಚನೆಮಾಡಿ, ಪ್ರಧಾನ ಮಂತ್ರಿಗಳ ಭಾಷಣದ ನೇರ ಪ್ರಸಾರ ವೀಕ್ಷಣೆ ಮಾಡಲಿದ್ದಾರೆ ಎಂದರು.
ಇದಕ್ಕೂ1 ಗಂಟೆ ಮುಂಚಿತವಾಗಿ ಚುನಾಯಿತ ಪ್ರತಿ ನಿಧಿಗಳು ಹಾಗೂ ಪದಾಧಿಕಾರಿಗಳು ರೈತ ಸಭೆಗಳನ್ನುಆಯೋಜಿಸಿ, ಕೇಂದ್ರ ಸರ್ಕಾರ ಕೃಷಿ ಕಲ್ಯಾಣಕ್ಕಾಗಿಹಾಗೂ ರೈತಆರ್ಥಿಕ ಸಬಲೀಕರಣಕ್ಕಾಗಿ ತೆಗೆದುಕೊಂಡಿರುವ ಕೃಷಿ ಸುಧಾರಣಾ ನೀತಿ, ರೈತಪರಯೋಜನೆಗಳಬಗ್ಗೆ ಜಾಗೃತಿ ಮೂಡಿಸಲಿದ್ದಾರೆ ಎಂದು ಹೇಳಿದರು.
ವಿವಿಧ ಯೋಜನೆ ಜಾರಿ: ಕೇಂದ್ರ ಸರ್ಕಾರ ರೈತರಿಗಾಗಿ ಬೇವು ಲೇಪಿತ ಯೂರಿಯಾ, ಬೀಜ್-ಸೆ-ಬಜಾರ್ ತಕ್’, 2022ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸುವ ಯೋಜನೆ, ಕಿಸಾನ್ ಕಾರ್ಡ್‌ಗಳ ವಿತರಣೆ, ರಸ ಗೊಬ್ಬರ ಉತ್ಪಾದನೆಯಲ್ಲಿ ಸ್ವಾವಲಂಬನೆ, ಮಣ್ಣಿನ ಫಲವತ್ತತೆ ಕಾರ್ಡ್ ವಿತರಣೆ, ಅಟಲ್ ಪೆನÒನ್‌ಯೋಜನೆ, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ,ರೈತರ ಪಂಪ್‌ಸೆಟ್‌ಗಳಿಗೆ ಸೋಲಾರ್ ವಿದ್ಯುತ್ ಜೋಡಣೆ,ಆತ್ಮನಿರ್ಭರ ಭಾರ ತಯೋಜನೆಯಡಿಯಲ್ಲಿ 1 ಲಕ್ಷ ಕೋಟಿ ಮೊತ್ತ ಕೃಷಿ ಸೌಲಭ್ಯಕ್ಕಾಗಿ ಮೀಸಲು,ಕಬ್ಬು ಬೆಳೆಗಾರರಿಗೆ ಸಬ್ಸಿಡಿ ಹಣ, ಪಶು ಸಂಗೋಪನಾ ಮೂಲಸೌಕರ್ಯನಿ, ಎಣ್ಣೆಕಾಳುಗಳ ಎಂಎಸ್‌ಪಿಯಲ್ಲಿಶೇ.59ರಷ್ಟು ಹೆಚcಳ , ಭತ ¤ ಮñು¤ ಗೋದಿ ಎಂಎಸ್ ಪಿಯಲ್ಲಿ ಹೆಚ್ಚಳ ಸೇರಿದಂತೆ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ವಿವರಿಸಿದರು.ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜೆ.
ವಿಜಯ್ ಕುಮಾರ್, ರೈತ ಮೋರ್ಚಾದ ರಾಜ್ಯ ಉಪಾಧ್ಯಕ್ಷಕೆ.ಎಸ್.ನಂಜುಂಡೇಗೌಡ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಜೋಗಿಗೌಡ, ಜಿಲ್ಲಾ ವಕ್ತಾರ ಕೆ.ಕಾಳೇಗೌಡ,ಮಾಧ್ಯಮ ಪ್ರಮುಖ್ ಎಂ.ಕೆ.ನಾಗಾನಂದ್ ಹಾಜರಿದ್ದರು.
ರೈತರ ಹೋರಾಟ ದಾರಿ ತಪ್ಪಿದೆ : ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟ ರೈತರಹೋರಾಟವಲ್ಲ. ರೈತರ ಹೋರಾಟ ದಾರಿ ತಪ್ಪಿದ್ದು, ಎಪಿಎಂಸಿ ಹಾಗೂ ಭೂ ಸುಧಾರಣೆ ಕಾಯ್ದೆಯಿಂದ ದಲ್ಲಾಳಿಗಳಿಗೆ ನಷ್ಟವಾಗಲಿದೆ. ಆ ದೃಷ್ಟಿಯಿಂದ ರೈತರನ್ನು ಎತ್ತಿಕಟ್ಟಿ ಹೋರಾಟ ಮಾಡಲಾಗುತ್ತಿದೆ.ಹೋರಾಟ ದಾರಿ ತಪ್ಪುತ್ತಿರುವ ಬಗ್ಗೆ ಅಲ್ಲಿನ ರೈತರೇ ಹೇಳಿದ್ದಾರೆ.ಕೇಂದ್ರದ ಮಂತ್ರಿಗಳು ಹಲವಾರು ಬಾರಿ ಮಾತುಕತೆ ನಡೆಸಿದ್ದರೂ ಪ್ರಯೋಜನವಾಗಿಲ್ಲ. ಕಾಯ್ದೆಗಳಿಗೆ ತಿದ್ದುಪಡಿ ತರುತ್ತೇವೆ ಎಂದರೂ ಕೇಳುತ್ತಿಲ್ಲ. ಸಂಪೂರ್ಣ ಕಾಯ್ದೆ ರದ್ದು ಮಾಡುವಂತೆ
ಒತ್ತಾಯಿಸುತ್ತಿದ್ದಾರೆ. ಅಲ್ಲದೆ, ನಕ್ಸಲ್ ಪ್ರಕರಣಗಳಿರುವವರನ್ನು ಬಿಡುಗಡೆ ಮಾಡಬೇಕೆಂಬಒತ್ತಾಯವನ್ನೂ ಸೇರಿಸಿದ್ದಾರೆ. ಇದು ರಾಜಕೀಯಪ್ರೇರಿತವಾಗಿದೆ. ಇದನ್ನು ರೈತರ ಹೋರಾಟ ಎಂದುಹೇಗೆ ಹೇಳಲು ಸಾಧ್ಯ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ ಪ್ರಶ್ನಿಸಿದರು.
ಬಿಜೆಪಿ-ಜೆಡಿಎಸ್ ವಿಲೀನ ಚರ್ಚೆ ಇಲ್ಲ :
ಬಿಜೆಪಿ-ಜೆಡಿಎಸ್ ವಿಲೀನಗೊಳ್ಳಲಿವೆ ಎಂಬ ಸುದ್ದಿ ಗಳು ಸುಳ್ಳು. ಆ ರೀತಿಯ ಯಾವುದೇ ಚರ್ಚೆಗಳು ನಡೆದಿಲ್ಲ. ವಿಷಯಾಧಾರಿತ ಬೆಂಬಲ ನೀಡಲಾಗುವುದು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರ ಸ್ವಾಮಿ ಅವರೇ ಸ್ಪಷ್ಟಪಡಿಸಿದ್ದಾರೆ. ಇದು ಅನಗತ್ಯ ಎಂದು ಅಶ್ವತ್ಥನಾರಾಯಣಹೇಳಿದರು.
ಸಚಿವರನ್ನು ಕೇಳಿ: ಕೋವಿಡ್ ಸಂದರ್ಭದಲ್ಲಿ ರೇಷ್ಮೆ ಬೆಳೆಗಾರರಿಗೆಕೆ.ಜಿ. ರೇಷ್ಮೆಗೂಡಿಗೆ 50 ರೂ. ಪ್ರೋತ್ಸಾಹ ಧನ ನೀಡುತ್ತೇವೆ ಎಂದು ಹೇಳಿದ್ದರು. ಆದರೆ, ಇದುವರೆಗೂ ಜಿಲ್ಲೆಯ ಯಾವೊಬ್ಬ ರೈತರಿಗೂ ಹಣ ಬಂದಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದರ ಬಗ್ಗೆ ನನಗೆ ಮಾಹಿತಿ ಇಲ್ಲ. ನೀವು ರೇಷ್ಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವಕೆ .ಸಿ.ನಾರಾಯಣಗೌಡರನ್ನೇ ಕೇಳಬೇಕು ಎಂದು ಜಾರಿಕೊಂಡರು.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೆದ್ದಾರಿ ಕಾಮಗಾರಿಗೆ ಕಲ್ಲುಸ್ಫೋಟ : ರಸ್ತೆ ಅಕ್ಕಪಕ್ಕದ ಮನೆಗಳ ಗೋಡೆಗಳು ಬಿರುಕು, ಆಕ್ರೋಶ
ಕಲ್ಲು ಗಣಿಗಾರಿಕೆಯಿಂದ ಸರಕಾರಕ್ಕೆ 321ಕೋಟಿ ರಾಜಧನ ಬಾಕಿ : ಗಣಿ ಇಲಾಖೆ ಉಪನಿರ್ದೇಶಕಿ ಮಾಹಿತಿ
ಹುದ್ದೆ ನೇಮಕಾತಿಗೆ ವ್ಯಕ್ತಿಯಿಂದ ಹಣ ಸ್ವೀಕರಿಸುತ್ತಿದ್ದ ಮಹಿಳಾ ಅಧಿಕಾರಿ ಎಸಿಬಿ ಬಲೆಗೆ
ಬಾಲಕನಿಗೆ ಹಾವು ಕಡಿತ: ಔಷಧಿ ಇಲ್ಲವೆಂದ ವೈದ್ಯರು, ಬಾಲಕ ಸಾವು
ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಅದ್ಧೂರಿ ಅಂಗಮಣಿ ಉತ್ಸವ