ಮೈಷುಗರ್ ಆರಂಭಿಸುವಂತೆ ಸಂಸದೆ ಸುಮಲತಾ ಮನವಿ
Team Udayavani, Mar 5, 2021, 7:54 PM IST
ಮಂಡ್ಯ: ಮೈಷುಗರ್ ಕಾರ್ಖಾನೆಯನ್ನುಆರಂಭಿ ಸುವಂತೆ ಒತ್ತಾಯಿಸಿ, ಸಂಸದೆ ಸುಮಲತಾ ಸಕ್ಕರೆ ಸಚಿವ ಎಂ.ಟಿ.ಬಿ.ನಾಗರಾಜು ಅವರಿಗೆ ಮನವಿ ಸಲ್ಲಿಸಿದರು.
ಬೆಂಗಳೂರಿನ ವಿಧಾನಸೌಧದಲ್ಲಿ ಭೇಟಿಮಾಡಿದ ಅವರು, ಮೈಷುಗರ್ ಸಕ್ಕರೆ ಕಾರ್ಖಾನೆ ಪುನರಾರಂಭ ಕುರಿತು ಚರ್ಚಿಸಿದರು. ಜಿಲ್ಲೆಯ ಕಬ್ಬು ಬೆಳೆಗಾರರ ಸಂಕಷ್ಟಗಳನ್ನು ವಿವರಿಸಿ, ಸಕ್ಕರೆ ಕಾರ್ಖಾನೆ ಪುನರಾರಂಭದಿಂದ ರೈತರಿಗೆ ಅನುಕೂಲವಾಗುವ ಧನಾತ್ಮಕ ವಿಚಾರಗಳನ್ನು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಪ್ರಸ್ತಾ ಪಿಸಿ, ಅಧಿಕಾರಿಗಳಿಂದ ಕಾರ್ಖಾನೆ ಪುನಶ್ಚೇತನ ಕುರಿತು ಸಂಪೂರ್ಣ ಮಾಹಿತಿಯನ್ನುನೀಡಿದರು.
ಮೈಷುಗರ್ ಸಕ್ಕರೆ ಕಾರ್ಖಾನೆ ಪುನರಾರಂಭ ಕುರಿತು ಈಗಾಗಲೇ ಸಚಿವ ಸಂಪುಟದಿಂದ ಅನುಮೋದನೆಗೊಂಡಿದೆ. ನಂತರದ ಬೆಳವಣಿಗೆಯಲ್ಲಿ ಈ ಸಂಬಂಧ ಟೆಂಡರ್ ಪ್ರಕ್ರಿಯೆಗೆ ರೂಪುರೇಷೆಗಳು ಸಿದ್ಧವಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು. ಜಿಲ್ಲೆಯಲ್ಲಿ ಕಟಾವಿಗೆ ಬಂದಿರುವ ಕಬ್ಬಿನ ಬೆಳೆಯನ್ನು ಈ ಸಾಲಿನಲ್ಲಿ ಮೈಷುಗರ್ ಸಕ್ಕರೆ ಕಾರ್ಖಾನೆಯೇ ಖರೀದಿಸಲು ಅತಿ ಶೀಘ್ರದಲ್ಲಿ ಅಂದರೆ2021-22ನೇ ಸಾಲಿನ ಜೂನ್-ಜುಲೈ ಮಾಹೆಗೆಮುಂಚಿತವಾಗಿಯೇ ಆರಂಭಿಸಲಾಗುವುದುಎಂದು ಸಚಿವರು ಭರವಸೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೆಚ್ಚುತ್ತಿರುವ ಕೋವಿಡ್ ಎರಡನೇ ಅಲೆ : ಜಿ.ಪಂ., ತಾ.ಪಂ. ಚುನಾವಣೆ ಮುಂದೂಡಿಕೆ?
ಕರಾವಳಿ ಭಾಗದಲ್ಲಿ ಸಿಡಿಲು ಸಹಿತ ಮಳೆ, ಕೆಲವೆಡೆ ಹಾನಿ
ರೋಗ ಪತ್ತೆ ಹಚ್ಚುವ ವಿಚಾರದಲ್ಲಿ ಸರ್ಕಾರ ಜನರ ಜೊತೆ ಚೆಲ್ಲಾಟವಾಡುತ್ತಿದೆ : ಡಿ.ಕೆ.ಸುರೇಶ್
ಅಧಿಕ ಬೆಲೆಗೆ ರೆಮ್ಡಿಸಿವಿಯರ್ ಮಾರಾಟ: ಸಿಸಿಬಿಯಿಂದ ಮೂವರ ಬಂಧನ
ಕೋವಿಡ್ 2ನೇ ಅಲೆ ಅಬ್ಬರ : ರಾಷ್ಟ್ರೀಯ ವಿಪತ್ತು ಘೋಷಣೆಗೆ ಈಶ್ವರ್ ಖಂಡ್ರೆ ಆಗ್ರಹ
MUST WATCH
ಹೊಸ ಸೇರ್ಪಡೆ
ಹೆಚ್ಚುತ್ತಿರುವ ಕೋವಿಡ್ ಎರಡನೇ ಅಲೆ : ಜಿ.ಪಂ., ತಾ.ಪಂ. ಚುನಾವಣೆ ಮುಂದೂಡಿಕೆ?
ಕರಾವಳಿ ಭಾಗದಲ್ಲಿ ಸಿಡಿಲು ಸಹಿತ ಮಳೆ, ಕೆಲವೆಡೆ ಹಾನಿ
ಪಂಜಾಬ್ ಕಿಂಗ್ಸ್ ಮೇಲೆ ಡೆಲ್ಲಿ ಸವಾರಿ : ಪಂಜಾಬ್ ವಿರುದ್ಧ ಡೆಲ್ಲಿಗೆ 6 ವಿಕೆಟ್ ಗಳ ಜಯ
ಏಶ್ಯನ್ ಕುಸ್ತಿ ಚಾಂಪಿಯನ್ಶಿಪ್ : ರಜತ ಪದಕ ಗೆದ್ದ ದೀಪಕ್ ಪೂನಿಯ
ರೋಗ ಪತ್ತೆ ಹಚ್ಚುವ ವಿಚಾರದಲ್ಲಿ ಸರ್ಕಾರ ಜನರ ಜೊತೆ ಚೆಲ್ಲಾಟವಾಡುತ್ತಿದೆ : ಡಿ.ಕೆ.ಸುರೇಶ್