Udayavni Special

ಮೈಷುಗರ್‌: ನಿಯಮ, ಮಾರ್ಗಸೂಚಿ ಬಿಡುಗಡೆಯಾಗಿಲ್ಲ

ಕಾರ್ಖಾನೆಯ ಸಮರ್ಪಕ ಆಸ್ತಿ ಗುರುತಿಸುವಲ್ಲಿ ವಿಫ‌ಲ

Team Udayavani, Nov 20, 2020, 1:50 PM IST

ಮೈಷುಗರ್‌: ನಿಯಮ, ಮಾರ್ಗಸೂಚಿ ಬಿಡುಗಡೆಯಾಗಿಲ್ಲ

ಸಾಂದರ್ಭಿಕ ಚಿತ್ರ

ಮಂಡ್ಯ: ಮೈಷುಗರ್‌ ಕಾರ್ಖಾನೆಯನ್ನು 40 ವರ್ಷಗಳ ಕಾಲ ಖಾಸಗಿಯವರಿಗೆ ಹೊರ ಗುತ್ತಿಗೆ ನೀಡಲು ಸಚಿವ ಸಂಪುಟ ನಿರ್ಧಾರ ಮಾಡಿದೆ. ಆದರೆ, ಯಾವುದೇ ನಿಯಮ ಹಾಗೂ ಮಾರ್ಗಸೂಚಿಗಳನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಬಹುಮುಖ್ಯವಾಗಿ ಕಾರ್ಖಾನೆಯಆಸ್ತಿ ನಿರ್ವಹಣೆಗೆ ಹೇಗೆ? ಎಂಬ ಪ್ರಶ್ನೆಯೂ ಎದ್ದಿದೆ.

ಸರ್ಕಾರ ನಡೆಸಿದರೆ ಪ್ರತಿ ವರ್ಷ 70 ಕೋಟಿ ರೂ. ನಷ್ಟ ಉಂಟಾಗಲಿದೆ ಎಂಬ ಕಾರಣ ನೀಡಿದ್ದು, ಪಾಂಡವಪರ ಸಹಕಾರ ಸಕ್ಕರೆ ಕಾರ್ಖಾನೆ (ಪಿಎಸ್‌ಎಸ್‌ಕೆ) ಮಾದರಿಯಲ್ಲಿ ಗುತ್ತಿಗೆ ನೀಡಲಾಗುವುದು ಎಂದು ಹೇಳಲಾಗುತ್ತಿದೆ. ಆದರೆ. ಕೋಟ್ಯಂತರ ರೂ. ಮೌಲ್ಯದ ಆಸ್ತಿಯ ನಿರ್ವಹಣೆ ಬಗ್ಗೆ ಎಲ್ಲಿಯೂ ಮಾಹಿತಿ ನೀಡಿಲ್ಲ.

ಆಸ್ತಿ ವಿವರ ಅಸ್ಪಷ್ಟ: ಕೃಷಿ ಭೂಮಿ 50 ಎಕರೆ, ಬೆಂಗಳೂರು ಕಚೇರಿ 1.10 ಎಕರೆ, ಮಂಡ್ಯ ನಗರದ ರಾಜ್‌ಕುಮಾರ್‌ ಬಡಾವಣೆಯಲ್ಲಿ 3 ಎಕರೆ, ಮೈಷುಗರ್‌ಕಾರ್ಖಾನೆ ಪ್ರದೇಶ106 ಎಕರೆ, ಮಂಡ್ಯ ಹೊರವಲಯದ ಶ್ರೀನಿವಾಸಪುರ ಗೇಟ್‌ ಬಳಿ 41.06 ಎಕರೆ, ಮಂಡ್ಯ ಗುತ್ತಲು ರಸ್ತೆಯಲ್ಲಿ 0.17 ಎಕರೆ, ನಗರದಕಾಳಿಕಾಂಬ ದೇವಾಲಯ ಮುಂಭಾಗ1.20 ಎಕರೆ ಸೇರಿದಂತೆ ಒಟ್ಟು202.53 ಎಕರೆ ಇದ್ದು, ಇದರ ಅಂದಾಜು ಮೌಲ್ಯ 280 ಕೋಟಿ ರೂ. ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಾವಿರಾರು ಕೋಟಿ ಮೌಲ್ಯದ ಆಸ್ತಿ: ರೈತ ಮುಖಂಡರು ಹೊರ ತಂದಿರುವ ಮೈಷುಗರ್‌ ಕಾರ್ಖಾನೆಯ ಅಧ್ಯಯನ ವರದಿಯಲ್ಲಿ 235 ಎಕರೆ ಎಂದು ನಮೂದಿಸಿದ್ದಾರೆ. ಕಂಪನಿಯ ಕಲ್ಯಾಣಮಂಟಪ 3 ಎಕರೆ, ಶ್ರೀರಂಗಪಟ್ಟಣದ ಬಳಿ 2.4 ಎಕರೆ, ಮೈಷುಗರ್‌ ಪ್ರೌಢಶಾಲೆ ಹಾಗೂ ಐಟಿಐ ಕಾಲೇಜು 14.18 ಎಕರೆ, ಜೈಭಾರತ ಶಾಲೆಗೆ 7.10 ಎಕರೆ, ಕಬ್ಬಿನ ತಳಿ ವ್ಯವಸಾಯಕ್ಕಾಗಿ ಸಾತನೂರು ಬಳಿ 50 ಎಕರೆ, ಪಕ್ಕದಲ್ಲಿಯೇ ಫಾರಂ, ವಸತಿ ಗೃಹಗಳು, ಕಚೇರಿಯ 6.18 ಎಕರೆ, ಎಚ್‌.ಕೋಡಿಹಳ್ಳಿ ಬಳಿ 0.24 ಗುಂಟೆ, ಹನಕೆರೆ ಬಳಿ ಕಬ್ಬುವಿಭಾಗದ ಸೂಪರ್‌ವೈಸರ್‌ಕಚೇರಿ 15 ಗುಂಟೆ, ಕೆರಗೋಡು ಗ್ರಾಮದ ಬಳಿ ಕಲ್ಯಾಣ ಮಂಟಪ 1.15 ಎಕರೆ, ಕಬ್ಬಿನ ಗಾಡಿಗಳ ಸಂಚಾರಕ್ಕೆ ರಸ್ತೆ 23 ಗುಂಟೆ ಜಮೀನುಗಳನ್ನು ಅಧಿಕಾರಿಗಳು ವರದಿಯಲ್ಲಿ ನಮೂದಿಸಿಲ್ಲ. ಆದರೆ, ಇನ್ನೂ ಹೆಚ್ಚಿನ ಆಸ್ತಿ ಇದ್ದು, ಸಾವಿರಾರು ಕೋಟಿ ರೂ. ಮೌಲ್ಯವಿದೆ ಎನ್ನಲಾಗುತ್ತಿದೆ.

ಕೋಟ್ಯಂತರ ರೂ. ಮೌಲ್ಯದ ಯಂತ್ರಗಳು: ಕಾರ್ಖಾನೆಗೆ ಅಳವಡಿಸಿರುವ ಯಂತ್ರಗಳು ಕೋಟ್ಯಂತರ ರೂ. ಮೌಲ್ಯ ಹೊಂದಿವೆ. ಎಲ್ಲ ಯಂತ್ರಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದು ಅಧಿಕಾರಿಗಳು ವರದಿ ನೀಡಿದ್ದಾರೆ. ಜೊತೆಗೆ 30 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನಾ ಘಟಕವನ್ನು 30 ಲಕ್ಷ ರೂ. ವೆಚ್ಚದಲ್ಲಿಸ್ಥಾಪಿಸಲಾಗಿದ್ದು, ಸ್ಥಗಿತಗೊಂಡಿದೆ.

ಅನುಪಯುಕ್ತ ವಸ್ತುಗಳ ಮೌಲ್ಯವೇ 23 ಕೋಟಿ ರೂ.: ಕಾರ್ಖಾನೆಯಲ್ಲಿ ಅನುಪಯುಕ್ತ ವಸ್ತುಗಳ ಮೌಲ್ಯವೇ 23ಕೋಟಿ ರೂ. ಇದೆ. ಎಂ.ಎಸ್‌.ಸ್ಕ್ರಾಪ್ ಗಳು‌, ಅಲ್ಯೂಮಿನಿಯಮ್‌, ಹಳೇ ಮಿಲ್‌, ಬಾಯ್ಲಿಂಗ್‌ಹೌಸ್‌ ಸ್ಕ್ರಾಪ್ ಗಳು ಸೇರಿವೆ. ಇವುಗಳ ಮಾರಾಟಕ್ಕೆ 2019ರಲ್ಲಿಯೇ ಸರ್ಕಾರದಿಂದ ಅನುಮತಿ ಪಡೆಯಲಾಗಿದೆ.

ನಾವು ಎಲ್ಲ ರೀತಿಯಿಂದಲೂ ಕಾರ್ಖಾನೆ ಆಸ್ತಿಯ ಬಗ್ಗೆ ಶೋಧಿಸಿ, ಹಿಂದೆ ಇದ್ದ ಅಧಿಕಾರಿಗಳ ಬಳಿ ಮಾಹಿತಿ ತೆಗೆದುಕೊಂಡು ಅಧ್ಯಯನ ವರದಿಯ ಪುಸ್ತಕ ಪ್ರಕಟಿಸಿದ್ದೇವೆ. ಅಧಿಕಾರಿಗಳು ನೀಡಿರುವ ವರದಿಯಲ್ಲಿ ಸಾಕಷ್ಟು ಆಸ್ತಿಗಳನ್ನು ಸೇರಿಸದೆಕೈಬಿಟ್ಟಿದ್ದಾರೆ.ಯಾಕೆ ಕೈಬಿಟ್ಟಿದ್ದಾರೆ ಎಂಬುದನ್ನು ಅಧಿಕಾರಿಗಳೇ ಉತ್ತರಕೊಡಬೇಕು. ಸುನಂದ ಜಯರಾಂ, ರೈತ ನಾಯಕಿ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

02

ಯೋಗೀಶ್ ಗೌಡ ಹತ್ಯೆ ಪ್ರಕರಣ : ಮತ್ತೆ ವಿನಯ್ ಜಾಮೀನು ಅರ್ಜಿ ಸಲ್ಲಿಕೆ

“ಜಾತಿ ಗಣತಿ” ವರದಿಗೆ ತಾರ್ಕಿಕ ಅಂತ್ಯ: ಜಯಪ್ರಕಾಶ್‌ ಹೆಗ್ಡೆ ವಿಶ್ವಾಸ

“ಜಾತಿ ಗಣತಿ” ವರದಿಗೆ ತಾರ್ಕಿಕ ಅಂತ್ಯ: ಜಯಪ್ರಕಾಶ್‌ ಹೆಗ್ಡೆ ವಿಶ್ವಾಸ

ನೀಲಿ ಬಣ್ಣದ ಹೊಳೆಯುವ ಅಲೆಗಳಿಗೆ ಸಾಕ್ಷಿಯಾಗುತ್ತಿರುವ ಮಹಾರಾಷ್ಟ್ರದ ಕಡಲ ತೀರಗಳು

ನೀಲಿ ಬಣ್ಣದ ಹೊಳೆಯುವ ಅಲೆಗಳಿಗೆ ಸಾಕ್ಷಿಯಾಗುತ್ತಿರುವ ಮಹಾರಾಷ್ಟ್ರದ ಕಡಲ ತೀರಗಳು

ಸಿಹಿ ಸುದ್ದಿ: ಆಗಸ್ಟ್ ನಿಂದ ನವೆಂಬರ್ ವರೆಗೆ ಚಿನ್ನದ ಬೆಲೆಯಲ್ಲಿ ಎಷ್ಟು ಇಳಿಕೆಯಾಗಿದೆ?

ಸಿಹಿ ಸುದ್ದಿ:2020ರ ಆಗಸ್ಟ್ ನಿಂದ ನವೆಂಬರ್ ವರೆಗೆ ಚಿನ್ನದ ಬೆಲೆಯಲ್ಲಿ ಎಷ್ಟು ಇಳಿಕೆಯಾಗಿದೆ?

ಒಸ್ಮಾನಿಯಾ ವಿವಿ ಅತಿಕ್ರಮ ಪ್ರವೇಶ ಆರೋಪ; ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕೇಸ್

ಒಸ್ಮಾನಿಯಾ ವಿವಿ ಅತಿಕ್ರಮ ಪ್ರವೇಶ ಆರೋಪ; ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕೇಸ್

ಸಪ್ತಪದಿ ಕಾರ್ಯಕ್ರಮ ಶೀಘ್ರ ಪ್ರಾರಂಭ, ದೇವಾಲಯದ ಅರ್ಚಕರಿಗೆ ವಿಮೆ ಸೌಲಭ್ಯ :ಕೋಟ

ಸ್ಥಗಿತಗೊಂಡ ಸಪ್ತಪದಿ ಕಾರ್ಯಕ್ರಮ ಶೀಘ್ರ ಪ್ರಾರಂಭ, ದೇವಾಲಯದ ಅರ್ಚಕರಿಗೆ ವಿಮೆ ಸೌಲಭ್ಯ :ಕೋಟ

ದುರಂತ ಅಂತ್ಯ ಕಂಡ ಫಿಲಿಪ್‌ ಹ್ಯೂಸ್‌ಗೆ 63 ಸೆಕೆಂಡ್‌ಗಳ ಗೌರವ

ದುರಂತ ಅಂತ್ಯ ಕಂಡ “ಫಿಲಿಪ್‌ ಹ್ಯೂಸ್‌”ಗೆ 63 ಸೆಕೆಂಡ್‌ಗಳ ಗೌರವ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಕ್ಕಳ ಸುಧಾರಣೆಗೆ ಬಾಲನ್ಯಾಯ ಕಾಯ್ದೆ ತಿದ್ದುಪಡಿ

ಮಕ್ಕಳ ಸುಧಾರಣೆಗೆ ಬಾಲನ್ಯಾಯ ಕಾಯ್ದೆ ತಿದ್ದುಪಡಿ

ಸೊಳ್ಳೆಪುರ ಗ್ರಾಮಕ್ಕೆ ಅಭಿವೃದ್ಧಿ ಮರೀಚಿಕೆ

ಸೊಳ್ಳೆಪುರ ಗ್ರಾಮಕ್ಕೆ ಅಭಿವೃದ್ಧಿ ಮರೀಚಿಕೆ

farming-life

ದಂಪತಿಗೆ ಸಮಗ್ರ ಕೃಷಿಯೇ ಜೀವನ

mahadevapura

ಅಪಾಯದಲಿದೆ ಮಹದೇವಪುರ ಸಂಪರ್ಕ ಸೇತುವೆ

ನಿವೇಶನ ಮಂಜೂರು ಮಾಡಿ

ನಿವೇಶನ ಮಂಜೂರು ಮಾಡಿ

MUST WATCH

udayavani youtube

ಮಂಗಳೂರು ವಿಮಾನನಿಲ್ದಾಣಕ್ಕೆ ಮಧ್ವಶಂಕರ ಹೆಸರು: ಪುತ್ತಿಗೆ ಶ್ರೀ ಒಲವು

udayavani youtube

ಶತಮಾನಗಳಿಂದಲೂ ನಡೆಯುತ್ತಿರುವ ತುಳುವರ ಭೂಮಿಪೂಜೆ ಗದ್ದೆಕೋರಿ ಈಗಲೂ ಇಲ್ಲಿ ಜೀವಂತ

udayavani youtube

ಮಂಗಳೂರು: ಉಪ್ಪುನೀರು ತಡೆ ಅಣೆಕಟ್ಟು ಕಾಮಗಾರಿ ವೀಕ್ಷಿಸಿದ ಸಚಿವ ಮಾಧುಸ್ವಾಮಿ

udayavani youtube

ಕರಾವಳಿಯಲ್ಲೂ ಪರಿಚಯವಾಯಿತು ಜಪಾನಿನ ಕೊಕೆಡಾಮ ಕಲೆ

udayavani youtube

ಕೊರೊನಾ ಪರಿಣಾಮ ಅಧ್ಯಯನಕ್ಕಾಗಿ ರೋಡ್ ಆಶ್ರಮ್ ಅಭಿಯಾನ

ಹೊಸ ಸೇರ್ಪಡೆ

02

ಯೋಗೀಶ್ ಗೌಡ ಹತ್ಯೆ ಪ್ರಕರಣ : ಮತ್ತೆ ವಿನಯ್ ಜಾಮೀನು ಅರ್ಜಿ ಸಲ್ಲಿಕೆ

ಭಾರತ್‌ ಬ್ಯಾಂಕ್‌ ಗ್ರಾಹಕರ ಆಶಾಕಿರಣ: ಉಪೂರು ಶಿವಾಜಿ ಪೂಜಾರಿ

ಭಾರತ್‌ ಬ್ಯಾಂಕ್‌ ಗ್ರಾಹಕರ ಆಶಾಕಿರಣ: ಉಪೂರು ಶಿವಾಜಿ ಪೂಜಾರಿ

“ಜಾತಿ ಗಣತಿ” ವರದಿಗೆ ತಾರ್ಕಿಕ ಅಂತ್ಯ: ಜಯಪ್ರಕಾಶ್‌ ಹೆಗ್ಡೆ ವಿಶ್ವಾಸ

“ಜಾತಿ ಗಣತಿ” ವರದಿಗೆ ತಾರ್ಕಿಕ ಅಂತ್ಯ: ಜಯಪ್ರಕಾಶ್‌ ಹೆಗ್ಡೆ ವಿಶ್ವಾಸ

ರಾಣಿಬೆನ್ನೂರು ಬೈಂದೂರು ಹೆದ್ದಾರಿ ಅಭಿವೃದ್ಧಿಗೆ 325 ಕೋಟಿ

ರಾಣಿಬೆನ್ನೂರು ಬೈಂದೂರು ಹೆದ್ದಾರಿ ಅಭಿವೃದ್ಧಿಗೆ 325 ಕೋಟಿ

ನೀಲಿ ಬಣ್ಣದ ಹೊಳೆಯುವ ಅಲೆಗಳಿಗೆ ಸಾಕ್ಷಿಯಾಗುತ್ತಿರುವ ಮಹಾರಾಷ್ಟ್ರದ ಕಡಲ ತೀರಗಳು

ನೀಲಿ ಬಣ್ಣದ ಹೊಳೆಯುವ ಅಲೆಗಳಿಗೆ ಸಾಕ್ಷಿಯಾಗುತ್ತಿರುವ ಮಹಾರಾಷ್ಟ್ರದ ಕಡಲ ತೀರಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.