ಪ್ರಕೃತಿ ನಮ್ಮ ಆಸ್ತಿ : ಆನಂದ್ ಹೆಗ್ಡೆ
Team Udayavani, Jun 6, 2021, 8:29 PM IST
ಮಂಡ್ಯ: ಪೂರ್ವಿಕರು ಉಳಿಸಿರುವ ಸ್ವಾಭಾವಿಕಸಂಪನ್ಮೂಲ ಗಳನ್ನು ಮುಂದುವರಿಸಿಕೊಂಡು ಹೋಗುವಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಕರ್ನಾಟಕಗ್ರಾಮೀಣ ಬ್ಯಾಂಕ್‌ನ ಪ್ರಾದೇಶಿಕ ವ್ಯವಸ್ಥಾಪಕ ಆನಂದ್‌ಸಿ.ಹೆಗಡೆ ತಿಳಿಸಿದರು.
ನಗರದ ವಿವೇಕಾನಂದ ಜೋಡಿ ರಸ್ತೆಯಲ್ಲಿ ಪರಿಸರರೂರಲ್ ಡೆವಲಪ್‌ಮೆಂಟ್ ಸೊಸೈಟಿ ವತಿಯಿಂದ ವಿಶ್ವಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ಕೆಚಾಲನೆ ನೀಡಿ ಮಾತನಾಡಿದ ಅವರು, ಸಮುದಾಯದಲ್ಲಿ ಆಸ್ತಿ ಗಳಿಕೆಯಿಂದ ಸಂಪನ್ಮೂಲ ಗಳಿಕೆಯ ಬಗ್ಗೆಆಸಕ್ತಿ ವಹಿಸಬೇಕಾಗಿದೆ.
ಪ್ರಕೃತಿ ಹೆಚ್ಚು ಗಳಿಕೆ ಕೊಟ್ಟಿದೆ.ಆದರೆ ಇಂದಿನ ಸ್ಥಿತಿಯಲ್ಲಿ ನಮ್ಮ ಪೂರ್ವಿಕರು ನಮಗೆಏನು ಆಸ್ತಿ ಕೊಟ್ಟಿದ್ದಾರೆ ಎನ್ನುವ ಬಗ್ಗೆ ಯೋಚಿಸುತ್ತಾರೆ.ಆಸ್ತಿಗಿಂತಲೂ ಪ್ರಕೃತಿ ದೊಡ್ಡದು. ಪ್ರಕೃತಿ ನಮ್ಮಆಸ್ತಿಯಾಗಬೇಕು ಎಂದರು.ಪರಿಸರ ಸಂಸ್ಥೆ ಅಧ್ಯಕ್ಷ ಮಂಗಲ ಯೋಗೀಶ್ ಪ್ರತಿಜಾnವಿ ಧಿ ಬೋಧನೆ ಮಾಡಿ ಮನುಸಂಕುಲ, ಪಕ್ಷಿಸಂಕುಲ ಗಳಉಳಿವಿಗಾಗಿ ಹಲವು ಕಾರ್ಯ ಯೋಜನೆ ಗಳನ್ನು ಹಮ್ಮಿಕೊಳ್ಳು ವುದು ಅವಶ್ಯ ವಾಗಿದೆ.
ಆಮ್ಲಜನಕಕ್ಕೆ ಕೋವಿಡ್-19ನಲ್ಲಿ ಎಷ್ಟು ಅವಶ್ಯಕತೆ ಇತ್ತು ಎಂಬುದು ತಿಳಿದಿದೆ.ಇದರಿಂದ ಏನೆಲ್ಲ ಅನಾಹುತಗಳಾಗಿದೆ ಎಂಬುದನ್ನುಕಂಡಿದ್ದೇವೆ. ಇದಕ್ಕೆ ಪರಿಹಾರ ಪ್ರಕೃತಿ. ಆಮ್ಲಜನಕವನ್ನುಕೊಡುವಂತಹ ಗಿಡ ನೆಡುವ ಆಸಕ್ತಿ ಬೆಳೆಸಲು ಈ ಕೆಲಸಮಾಡುತ್ತಾ ಬಂದಿದೆ ಎಂದು ತಿಳಿಸಿದರು.