ಸಕ್ಕರೆ ಸೀಮೆಯಲ್ಲಿ ತೆಂಗು ಬೆಳೆಗೆ ಹೊಸ ಚೈತನ್ಯ


Team Udayavani, Jun 26, 2018, 6:10 AM IST

ban26061807medn.jpg

ಮಂಡ್ಯ: ಕಾವೇರಿ ನೀರು ಹಂಚಿಕೆ ವಿವಾದಗಳಿಂದ ಸೊರಗಿರುವ ಸಕ್ಕರೆ ಸೀಮೆಯೊಳಗೆ ತೆಂಗು ಬೆಳೆಗೆ ಹೊಸ
ಚೈತನ್ಯ ತುಂಬುವ ಕೆಲಸ ಸದ್ದಿಲ್ಲದೆ ಆರಂಭಗೊಂಡಿದೆ. ಜಿಲ್ಲೆಯ ಸಾಂಪ್ರದಾಯಿಕ ಬೆಳೆ ಭತ್ತ ಮತ್ತು ಕಬ್ಬಿಗೆ
ನೀರು ಹವಣಿಸಲಾಗದೆ, ರೈತರು ತೆಂಗು ಬೆಳೆಯತ್ತ ಒಲವು ತೋರುತ್ತಿದ್ದಾರೆ. 

ತೋಟಗಾರಿಕಾ ಇಲಾಖೆಯೂ ಇದಕ್ಕೆ ಉತ್ತೇಜನ ನೀಡಲು ತೆಂಗು ಸಸಿಗಳನ್ನು ಕಡಿಮೆ ಬೆಲೆಯಲ್ಲಿ ನೀಡಲು ಮುಂದಾಗಿದೆ. ತೆಂಗು ಬೆಳೆಗೆ ಬೇಡಿಕೆ ಹೆಚ್ಚಿರುವುದನ್ನುಮನಗಂಡ ತೋಟಗಾರಿಕೆ ಇಲಾಖೆ ಪ್ರಸ್ತುತ ವಿವಿಧ ಫಾರಂಗಳಲ್ಲಿ 2.50 ಲಕ್ಷ ದಿಂದ 3 ಲಕ್ಷದವರೆಗೆ ತೆಂಗು ಬಿತ್ತನೆ ನಡೆಸಿದೆ. ಇದರಲ್ಲಿ 1 ಲಕ್ಷ ಸಸಿಗಳನ್ನು ಮಾರಾಟ ಮಾಡಲಾಗಿದ್ದು, ಇನ್ನೂ 1.75 ಲಕ್ಷ ಸಸಿಗಳು ಮಾರಾಟಕ್ಕಿವೆ.

ರಿಯಾಯಿತಿ ದರ: ಜಿಲ್ಲೆಯ ವಿವಿಧೆಡೆ ಇರುವ ತೋಟಗಾರಿಕೆ ಇಲಾಖೆಯ ವಿವಿಧ ಸಸಿ ಉತ್ಪಾದನಾ ಕೇಂದ್ರಗಳಲ್ಲಿ
ತೆಂಗಿನ ಸಸಿಗಳನ್ನು ಬೆಳೆಸಿದ್ದು, ಅವುಗಳನ್ನು ಶೇ. 40 ರಿಂದ 100 ರಿಯಾಯ್ತಿ ದರದಲ್ಲಿ ರೈತರಿಗೆ ವಿತರಿಸಲಾಗು ತ್ತಿದೆ. ನಾಟಿ ತಳಿ ಮತ್ತು ಹೈಬ್ರೀಡ್ ತಳಿಗಳ ಸಸಿಗಳು ಮಾರಾಟಕ್ಕೆ ಲಭ್ಯವಿದ್ದು, ಅವುಗಳನ್ನು ರೈತರು ತೆಗೆದುಕೊ ಳ್ಳಬಹುದು. ನಾಟಿ ತಳಿಯ ಸಸಿಗಳಿಗೆ ಪ್ರತಿಯೊಂದಕ್ಕೆ 50 ರೂ., ಅದನ್ನು ಪಹಣಿ ಮತ್ತಿತರ ದಾಖಲೆಗಳನ್ನು ನೀಡಿ ದಲ್ಲಿ 52 ರೂ.ಗಳನ್ನು ಹಿಂದಿರುಗಿಸಲಾಗುವುದು. ಅದೇ ರೀತಿ ಹೈಬ್ರಿàಡ್‌ ತಳಿಯ ಸಸಿಗಳು 150 ರೂ. ದರದಲ್ಲಿ ದೊರೆಯಲಿದ್ದು, ಶೇ. 40ರಷ್ಟು ರಿಯಾಯಿತಿ ಇದೆ.

ಹೈಬ್ರೀಡ್  4 ವರ್ಷಕ್ಕೆ ಫ‌ಲ: ನಾಟಿ ತಳಿಯ ಸಸಿಗಳು 6 ರಿಂದ 7 ವರ್ಷಗಳಲ್ಲಿ ಫ‌ಲ ನೀಡಿದರೆ, ಹೈಬ್ರೀಡ್  ತಳಿ
ಸಸಿಗಳು ಕೇವಲ 4 ವರ್ಷಗಳಲ್ಲಿ ಫ‌ಲ ನೀಡುತ್ತವೆ. ಸಾಂಪ್ರದಾಯಿಕ ತಿಪಟೂರು ಮತ್ತು ಹೈಬ್ರೀಡ್  ಮಾದರಿಯ ತಳಿಗಳನ್ನು ಸಸಿ ಮಾಡಿ ಹೈಬ್ರೀಡ್  ಸಸಿಗಳನ್ನು ಬೆಳೆಸಲಾಗಿದೆ. ಇಲಾಖೆಯ ಪರಿಣಿತರು ಮತ್ತು ವಿ.ಸಿ. ಫಾರಂನ ತೋಟಗಾರಿಕೆ ವಿಜ್ಞಾನಿಗಳು ಕಾಯಿಗಳನ್ನು ಆಯ್ಕೆ ಮಾಡುತ್ತಾರೆ. ಪರಿಣಿತರ ಸಹಾಯದಿಂದ ಪ್ರಗತಿಪರ ರೈತರ ತೋಟಗಳಿಂದಲೂ ಸಸಿಗಳನ್ನು ಉತ್ಪಾದಿಸುವ ಕಾರ್ಯ ನಡೆದಿದೆ.

50 ಸಾವಿರ ತೆಂಗಿನ ಮರಗಳು ಬಲಿ: ಭೀಕರ ಬರಗಾಲದ ಪರಿಣಾಮ ಕಳೆದ 6 ವರ್ಷಗಳಲ್ಲಿ ಸುಮಾರು 50
ಸಾವಿರಕ್ಕೂ ಹೆಚ್ಚು ತೆಂಗಿನ ಮರಗಳು ಜಿಲ್ಲೆಯಲ್ಲಿ ಬಲಿ ತೆಗೆದುಕೊಂಡಿದೆ. ಮತ್ತೂಂದೆಡೆ ಜಿಲ್ಲೆಯಲ್ಲಿ ಶೇ.30ಕ್ಕೂ
ತೆಂಗಿನ ಮರಗಳು ವಯಸ್ಸಾಗಿವೆ. ಇನ್ನೊಂದೆಡೆ ಪೆನ್ಸಿಲ್‌ ಕಟ್‌ ಇತರ ರೋಗಬಾಧೆಯೂ ಕಾಡುತ್ತಿದೆ.

ಬೆಳೆ ಪದ್ಧತಿ ಬದಲಾವಣೆ: ನಾಲ್ಕು ವರ್ಷಗಳಿಂದ ಮುಂಗಾರು ಕಣ್ಣಾಮುಚ್ಚಾಲೆ, 2014ರ ನಂತರ ಕೆರೆ,
ತೊರೆಗಳಲ್ಲಿ ನೀರಿಲ್ಲದಿರುವುದು, ಮಳೆ ಕೊರತೆ, ಕಾವೇರಿ ವಿವಾದದಿಂದ ರೈತರು ಬೇಸಿಗೆ ಬೆಳೆ ಬೆಳದಿಲ್ಲ. ಭತ್ತ,ಕಬ್ಬಿಗೆ ಹೆಚ್ಚು ನೀರು ಬೇಕಾಗುವುದರಿಂದ ನೀರಿಗೂ ತೊಂದರೆಯಾಗಿದೆ. ಅಲ್ಲದೆ ಏಷ್ಯಾದಲ್ಲಿಯೇ ಮಂಡ್ಯದ ಎಳನೀರಿಗೆ ಉತ್ತಮ ಮಾರುಕಟ್ಟೆಯಿರುವುದರಿಂದ ತೆಂಗು ಕೃಷಿಗೆ ತೋಟಗಾರಿಕಾ ಇಲಾಖೆ ಸಹಾಯಹಸ್ತ ನೀಡಿದೆ.

ಸಸಿಗಳು ಎಲ್ಲೆಲ್ಲಿ ಲಭ್ಯ ಮಂಡ್ಯ ಫಾರಂ (13,662 ಸಸಿಗಳು), ಪುರ (32,367),ದುದ್ದ (11,939), ಪೂರಿಗಾಲಿ (16,500), ಮದ್ದೂರು(6,735), ಮಲ್ಲಸಂದ್ರ ಕಾವಲ್‌ (10,494), ಜವರನಹಳ್ಳಿ (13,959),ಹಳೇಬೀಡು (8,403), ಶ್ರೀರಂಗಪಟ್ಟಣ (3,678), ಗಾಮನಹಳ್ಳಿ (10,050) ಮುರುಕನಹಳ್ಳಿ ಫಾರಂ (11,550 ಸಸಿಗಳು). ಈ ಸ್ಥಳಗಳಲ್ಲಿರುವ ನರ್ಸರಿಗಳಲ್ಲಿ ಸಸಿಗಳು ಲಭ್ಯವಿದೆ.

ಜಿಲ್ಲೆಯ ರೈತರು ತೆಂಗು ಬೆಳೆಯುತ್ತ ಆಕರ್ಷಿತರಾಗುತ್ತಿರುವುದು ನಿಜ. ಈಗಾಗಲೇ 1 ಲಕ್ಷ ಸಸಿಗಳನ್ನು ಮಾರಾಟ ಮಾಡಿದ್ದು, ಇನ್ನೂ 1.50  ಲಕ್ಷ ಸಸಿಗಳು ನಮ್ಮಲ್ಲಿವೆ. ವಾಣಿಜ್ಯ ಬೆಳೆ ತೆಂಗಿಗೆ ಹೆಚ್ಚಿನ ಉತ್ತೇಜನ ನೀಡುತ್ತಿದ್ದೇವೆ. ರೈತರೂ ಆದ್ಯತೆ ನೀಡುತ್ತಿದ್ದಾರೆ.
– ರಾಜು, ಉಪ ನಿರ್ದೇಶಕ, ತೋಟಗಾರಿಕೆ ಇಲಾಖೆ

ಮಂಡ್ಯ ಮಂಜುನಾಥ್‌

ಟಾಪ್ ನ್ಯೂಸ್

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

18

Bombay High Court: ಆರತಕ್ಷತೆ ಮದುವೆಯ ಭಾಗ ಎಂದು ಪರಿಗಣಿಸಲಾಗದು: ಬಾಂಬೆ ಹೈಕೋರ್ಟ್‌

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.