Udayavni Special

ಭೀಮಾ ಏತ ನೀರಾವರಿ ಕಾಮಗಾರಿ ವಿಳಂಬಕ್ಕೆ ಆಕ್ರೋಶ


Team Udayavani, Sep 29, 2019, 2:44 PM IST

mandya-tdy-1

ಮಳವಳ್ಳಿ: ಭೀಮಾ ಜಲಾಶಯದಿಂದ ನಂದಿಪುರ ಕೆರೆ ಹಾಗೂ ಇತರೆ 24 ಕೆರೆ ಕಟ್ಟೆಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆ ಕಾಮಗಾರಿ ನಡೆಯುತ್ತಿರುವ ಪ್ರದೇಶಕ್ಕೆ ರೈತಸಂಘ ಸೇರಿ ಹಲವು ರೈತರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಯೋಜನೆ ವಿಳಂಬ: ಭೀಮಾ ಜಲಾಶಯದ ಏತ ನೀರಾವರಿ ಕಾಮಗಾರಿ ಸ್ಥಿತಿ-ಗತಿ, ಕೆರೆ-ಕಟ್ಟೆಗಳ ವಾಸ್ತವ ಪರಿಸ್ಥಿತಿ ವೀಕ್ಷಣೆ ನಡೆಸಿ ರೈತರ ಅಭಿಪ್ರಾಯ ಪಡೆದ ಪ್ರಾಂತ ರೈತಸಂಘದ ತಾಲೂಕು ಅಧ್ಯಕ್ಷ ಎನ್‌.ಎಲ್‌.ಭರತ್‌ರಾಜ್‌, ಈ ಯೋಜನೆ 2013ರಲ್ಲಿ ಕಾರ್ಯಾರಂಭವಾದರೂ ಅಧಿಕಾರಿಗಳು, ಶಾಸಕರ ಬೇಜವಾಬ್ದಾರಿತನದಿಂದ ವಿಳಂಬವಾಗಿದೆ. ಯೋಜನೆಯನ್ನು ಚುನಾವಣೆ ಸಂದರ್ಭದಲ್ಲಿ ಉಭಯ ಪಕ್ಷಗಳು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡು ರೈತರನ್ನು ವಂಚಿಸಿವೆ. ಒಂದೆರಡು ರೈತರು ಕಾಮಗಾರಿಗೆ ಅಡ್ಡಿ ಪಡಿಸಿದರೆಂಬ ನೆಪ ಮುಂದಿಟ್ಟುಕೊಂಡು ರಾಜಕೀಯ ಮೇಲಾಟ ನಡೆಸಿವೆ ಎಂದು ಆರೋಪಿಸಿದರು.

ರೈತರ ಭೂಮಿಗೆ ನ್ಯಾಯಯುತ ಪರಿಹಾರ ನೀಡಲು ಕ್ರಮ ವಹಿಸಬೇಕಿತ್ತು. ಅಧಿಕಾರಿಗಳು, ಶಾಸಕರು, ಗುತ್ತಿಗೆದಾರರು ನಿರ್ಲಕ್ಷಸಿದ್ದಾರೆ. ಇನ್ನೂ ಹಣವೂ ಇಲ್ಲ , ನೀರೂ ಇಲ್ಲ. ಕೊನೆಗೆ ಭೂಮಿಯೂ ನಮಗಿಲ್ಲ ಎಂದು ರೈತರು ಅಳಲು ತೋಡಿಕೊಂಡರು.

ಅನುಕೂಲವಾಗಿಲ್ಲ: ಈ ಯೋಜನೆಯಲ್ಲಿ ಹೊನಗಳ್ಳಿ ಕೆರೆ 583 ಹೆಕ್ಟೇರ್‌, ನಂದಿಪುರ ಕೆರೆ 48.33 ಹೆಕ್ಟೇರ್‌ ಅಚ್ಚುಕಟ್ಟು ಹೊಂದಿದೆ. ಜೊತೆಗೆ 24 ಕೆರೆ-ಕಟ್ಟೆಗಳನ್ನು ತುಂಬಿಸಿ ಅಂತರ್ಜಲ ಹೆಚ್ಚಿಸಲು ಶಿಂಷಾ ನದಿಯಿಂದಲೂ 11.47 ಕ್ಯೂಸೆಕ್‌ನೀರು ಹರಿಸಲು ಯೋಜಿಸಲಾಗಿದೆ. ಇದಕ್ಕಾಗಿ 225 ಕೆ.ವಿ.ಸಾಮರ್ಥ್ಯದ 3 ಪಂಪ್‌ ಅಳವಡಿಸಲಾಗಿದೆ. ಏರು ಕೊಳವೆ ಮೇಲ್ಮಟ್ಟದ ತೊಟ್ಟಿಯಿಂದ ಮತ್ತು ತೆರೆದ ಕಾಲುವೆಗಳಿಂದ 11ಕಿ.ಮೀ ದೂರದ ವ್ಯಾಪ್ತಿಯ ಜಮೀನುಗಳಿಗೆ ಮುಂಗಾರಿನಲ್ಲಿ 123 ದಿನ ನೀರು ಹರಿಸುವ ಉದ್ದೇಶಕ್ಕಾಗಿ 2013ರಲ್ಲಿ ತಾಂತ್ರಿಕ ಮಂಜೂರಾತಿ ನೀಡಲಾಗಿದೆ. ಇದಕ್ಕಾಗಿ 10.15 ಕೋಟಿ ರೂ. ಹಣ ನೀಡಿದ್ದರೂ ರೈತರಿಗೆ ಅನುಕೂಲವಾಗಿಲ್ಲ ಎಂದು ತಿಳಿಸಿದರು.

ತಮಿಳುನಾಡಿಗೆ ನೀರು: ಶಿಂಷಾ, ಕಾವೇರಿ ನದಿ ತುಂಬಿ ಅಪಾಯದ ಮಟ್ಟ ಮೀರಿ ತಮಿಳುನಾಡಿಗೆ ಹರಿಯುತ್ತಿದ್ದರೂ ಹಲಗೂರು ಹೋಬಳಿ ಹೊನಗಳ್ಳಿ ಕೆರೆ, ನಿಟ್ಟೂರು, ಹಲಗೂರು. ಬ್ಯಾಡರಹಳ್ಳಿ ಮುಂತಾದ ಕೆರೆ-ಕಟ್ಟೆ ನೀರಿಲ್ಲದೆ ಒಣ ಗುತ್ತಿವೆ. ಹಲಗೂರು ಹೋಬಳಿ ಭೀಮಾ ಜಲಾಶಯ ಗಾಣಾಳು, ನಂಜಾಪುರ, ನಿಟ್ಟೂರು ಏತ ನೀರಾವರಿಗಳನ್ನು ಶೀಘ್ರ ಹಾಗೂ ಸಮರ್ಪಕ ಜಾರಿಗೊಳಿಸದಿದ್ದರೆ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ನಿಯೋಗದಲ್ಲಿ ಮುಖಂಡರಾದ ಮಹದೇವು, ನಾಗೇಶ್‌, ಗೋಪಾಲ್‌, ಮಹೇಶ್‌, ಬಸವೇಗೌಡ, ಜಯಶಂಕರ್‌, ರಾಜು, ರವಿ, ಮೋಹನ್‌, ಬಸವರಾಜ್‌, ಮರಿದೇವರು ಇದ್ದರು.

ಟಾಪ್ ನ್ಯೂಸ್

ನಾವು ಮಾತು ತಪ್ಪುವವರಲ್ಲ, ಕಾಂಗ್ರೆಸ್ಸಿಗರು ಸುಳ್ಳು ಹೇಳಿ ಓಡಿ ಹೋಗುವವರು: ಸಿಎಂ

ನಾವು ಮಾತು ತಪ್ಪುವವರಲ್ಲ, ಕಾಂಗ್ರೆಸ್ಸಿಗರು ಸುಳ್ಳು ಹೇಳಿ ಓಡಿ ಹೋಗುವವರು: ಸಿಎಂ ಬೊಮ್ಮಾಯಿ

hgyuy

“ಗೋರ್ಖಾ” ಪೋಸ್ಟರ್‍ ನ  ತಪ್ಪು ತಿದ್ದಿದ ಮಾಜಿ ಯೋಧನಿಗೆ ಅಕ್ಷಯ್‌ ಧನ್ಯವಾದ

BCCI invites Job Applications for Team India mens team

ದ್ರಾವಿಡ್ ನೇಮಕ ಸುದ್ದಿಯ ನಡುವೆ ಟೀಂ ಇಂಡಿಯಾ ಕೋಚ್ ಹುದ್ದೆಗೆ ಅರ್ಜಿ ಆಹ್ವಾನಿಸಿದ ಬಿಸಿಸಿಐ

anjan

ಅಂಜನಾದ್ರಿಗೆ ಹರಿದು ಬಂದ ಪ್ರವಾಸಿಗರ ದಂಡು : ಬೆಟ್ಟ ಹತ್ತಲು ಕ್ಯೂ

talakaveri

ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ: ಕುಂಡಿಕೆಯಲ್ಲಿ ಸ್ನಾನಕ್ಕಿರಲಿಲ್ಲ ಅವಕಾಶ

fgftht

ಶೀಘ್ರವೇ ನಿಶ್ಚಿತಾರ್ಥ ಮಾಡಿಕೊಳ್ಳುತ್ತೇವೆ : ವಿಕ್ಕಿ ಕೌಶಲ್

ಮಹಾಮಳೆಗೆ ತತ್ತರಿಸಿದ ಕೇರಳ: 15 ಮಂದಿ ಸಾವು, ಹಲವರು ನಾಪತ್ತೆ! ನೆರವಿನ ಭರವಸೆ ನೀಡಿದ ಶಾ

ಮಹಾಮಳೆಗೆ ತತ್ತರಿಸಿದ ಕೇರಳ: 15 ಮಂದಿ ಸಾವು, ಹಲವರು ನಾಪತ್ತೆ! ನೆರವಿನ ಭರವಸೆ ನೀಡಿದ ಶಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಣ್ಣೂರಲ್ಲಿ ಗ್ರಾಮ ದೇವತೆಗಳ ಉತ್ಸವ

ಅಣ್ಣೂರಲ್ಲಿ ಗ್ರಾಮ ದೇವತೆಗಳ ಉತ್ಸವ

ಮೇಕೆ ಕುರಿ ಮಾಂಸ ಮಾರಾಟ- ಕ್ರಮಕ್ಕೆ ಆಗ್ರಹ

ಸತ್ತ ಮೇಕೆ, ಕುರಿ ಮಾಂಸ ಮಾರಾಟ: ಕ್ರಮಕ್ಕೆ ಆಗ್ರಹ

ಅಂಕಪಟ್ಟಿ ಇಲ್ಲದೆ ವಿದ್ಯಾರ್ಥಿಗಳ ಪರದಾಟ

ಅಂಕಪಟ್ಟಿ ಇಲ್ಲದೆ ವಿದ್ಯಾರ್ಥಿಗಳ ಪರದಾಟ

ಪ್ರವಾಸಿಗರ ಉತ್ಸಾಹ ಹೆಚ್ಚಿಸಿದ ಜಲ ಕ್ರೀಡೆ

ಪ್ರವಾಸಿಗರ ಉತ್ಸಾಹ ಹೆಚ್ಚಿಸಿದ ಜಲ ಕ್ರೀಡೆ

ಚಿರತೆ ದಾಳಿ

ಚಿರತೆ ಪ್ರತ್ಯಕ್ಷ: ಗ್ರಾಮಸ್ಥರಲ್ಲಿ ಆತಂಕ

MUST WATCH

udayavani youtube

ಅರಕಲಗೂಡು: ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಪೊಲೀಸರ ದಾಳಿ

udayavani youtube

ಲಾರಿ ಹತ್ತಲು ಅಶ್ವತ್ಥಾಮ ಆನೆ ಹಿಂದೇಟು.

udayavani youtube

ಪರಸ್ಪರ ಮಜ್ಜಿಗೆ ಎರಚಿಕೊಂಡು ಗೌಳಿ ಬುಡಕಟ್ಟು ಸಮುದಾಯದಿಂದ ದಸರಾ ಆಚರಣೆ

udayavani youtube

ಟೀಂ ಇಂಡಿಯಾ ಮುಖ್ಯ ಕೋಚ್ ಸ್ಥಾನಕ್ಕೆ ದ್ರಾವಿಡ್ ನೇಮಕ

udayavani youtube

ಅಸಹಾಯಕ ಸ್ಥಿತಿಯಲ್ಲಿದ್ದ ವ್ಯಕ್ತಿ ಹಾಗೂ ಕೋತಿಯನ್ನು ರಕ್ಷಿಸಿ ಮಾದರಿಯಾದ ಯುವಕರು

ಹೊಸ ಸೇರ್ಪಡೆ

ನಾವು ಮಾತು ತಪ್ಪುವವರಲ್ಲ, ಕಾಂಗ್ರೆಸ್ಸಿಗರು ಸುಳ್ಳು ಹೇಳಿ ಓಡಿ ಹೋಗುವವರು: ಸಿಎಂ

ನಾವು ಮಾತು ತಪ್ಪುವವರಲ್ಲ, ಕಾಂಗ್ರೆಸ್ಸಿಗರು ಸುಳ್ಳು ಹೇಳಿ ಓಡಿ ಹೋಗುವವರು: ಸಿಎಂ ಬೊಮ್ಮಾಯಿ

ಗೋವಾ: ಬಿಜೆಪಿ ಸ್ಥಳೀಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ಸಿದ್ಧವಿದೆ: ಸದಾನಂದ ತಾನಾವಡೆ

ಗೋವಾ: ಬಿಜೆಪಿ ಸ್ಥಳೀಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ಸಿದ್ಧವಿದೆ: ಸದಾನಂದ ತಾನಾವಡೆ

hgyuy

“ಗೋರ್ಖಾ” ಪೋಸ್ಟರ್‍ ನ  ತಪ್ಪು ತಿದ್ದಿದ ಮಾಜಿ ಯೋಧನಿಗೆ ಅಕ್ಷಯ್‌ ಧನ್ಯವಾದ

BCCI invites Job Applications for Team India mens team

ದ್ರಾವಿಡ್ ನೇಮಕ ಸುದ್ದಿಯ ನಡುವೆ ಟೀಂ ಇಂಡಿಯಾ ಕೋಚ್ ಹುದ್ದೆಗೆ ಅರ್ಜಿ ಆಹ್ವಾನಿಸಿದ ಬಿಸಿಸಿಐ

anjan

ಅಂಜನಾದ್ರಿಗೆ ಹರಿದು ಬಂದ ಪ್ರವಾಸಿಗರ ದಂಡು : ಬೆಟ್ಟ ಹತ್ತಲು ಕ್ಯೂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.