Udayavni Special

ರೇಷ್ಮೆ ಮಾರುಕಟ್ಟೆ ನಿರ್ಮಾಣಕ್ಕೆ ಯೋಜನೆ


Team Udayavani, Nov 2, 2020, 1:54 PM IST

mandya-tdy-1

ಮಂಡ್ಯ: ರಾಮನಗರ ಹಾಗೂ ಚನ್ನಪಟ್ಟಣ ಮಧ್ಯೆ 300 ಕೋಟಿ ರೂ. ವೆಚ್ಚದಲ್ಲಿ ಅಂತಾರಾಷ್ಟ್ರೀಯ ರೇಷ್ಟೆ ಮಾರುಕಟ್ಟೆ ನಿರ್ಮಿಸಲು ಯೋಜನೆ ರೂಪಿಸಲಾಗಿದ್ದು, ಸರ್ಕಾರದ ಮಟ್ಟದಲ್ಲಿ ಅನುಮೋದನೆ ದೊರೆಯಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಅಂಬೇಡ್ಕರ್‌ ಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಪತ್ರಕರ್ತರ ಸಮ್ಮೇಳನ, ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ, ಅಭಿನಂದನೆ, ಉಸ್ತುವಾರಿ ಸಚಿವರೊಂದಿಗೆ ಸಂವಾದ ಹಾಗೂ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರೇಷ್ಮೆ ಉದ್ಯಮಕ್ಕೆ ಹೆಚ್ಚಿನ ಒತ್ತು ನೀಡುವ ಸಲುವಾಗಿ ರಾಮನಗರ-ಚನ್ನಪಟ್ಟಣ ಮಧ್ಯೆ ಅಂತಾರಾಷ್ಟ್ರೀಯ ರೇಷ್ಟೆ ಮಾರುಕಟ್ಟೆ ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ಕೋವಿಡ್‌ನಿಂದ ಸಂಕಷ್ಟ: ಕೋವಿಡ್‌-19 ಹಿನ್ನೆಲೆಯಲ್ಲಿ ಲಾಕ್‌ಡೌನ್‌ನಿಂದಾಗಿ ರೈತರು ಸೇರಿದಂತೆ ಎಲ್ಲ ವರ್ಗದ ಜನತೆ ಸಂಕಷ್ಟ ಅನುಭವಿಸಿದರು. ತರಕಾರಿ ಬೆಳೆಗಾರರು ಸಹ ತಾವು ಬೆಳೆದ ಉತ್ಪನ್ನಗಳನ್ನು ಮಾರಾಟ ಮಾಡಲಾಗದೆ ತೊಂದರೆ ಅನುಭವಿಸಿದರು. ಇದನ್ನು ಮನಗಂಡು ತರಕಾರಿಗಳನ್ನು ರಫ್ತು ಮಾಡಲು ಯೋಜನೆ ರೂಪಿ  ಸಲಾಯಿತು. ಅಂದು ಶೇ.5.5ರಷ್ಟು ತರಕಾರಿಗಳನ್ನು ಹೊರಗೆ ಕಳುಹಿಸಲಾಗುತ್ತಿತ್ತು. ಇದು ಮಾಧ್ಯಮಗಳಿಂದ ಸಾಧ್ಯವಾಯಿತು ಎಂದರು.

ರೇಷ್ಮೆಗೆ ಹೆಚ್ಚಿನ ಉತ್ತೇಜನ: ಇದೇ ಮಾದರಿಯಲ್ಲಿ ರೇಷ್ಮೆ ಬೆಳೆಗಾರರು ತೊಂದರೆ ಅನುಭವಿಸುತ್ತಿರುವುದನ್ನು ಕಂಡು ರೇಷ್ಮೆಗೂ ಹೆಚ್ಚಿನ ಉತ್ತೇಜನ ನೀಡುವ ಸಲುವಾಗಿ ಯೋಜನೆ ರೂಪಿಸಲಾಗಿದೆ. ಮೈಸೂರು ರೇಷ್ಮೆ ಸೀರೆಗೆ ಹೆಚ್ಚಿನ ಬೇಡಿಕೆ ಇದೆ. ಈ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆ ನಿರ್ಮಿಸಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.

ಪತ್ರಕರ್ತರಿಗೆ ವಿಮೆ: ಕೋವಿಡ್‌-19 ಸಂಕಷ್ಟ ಸೇರಿದಂತೆ ಹಲವಾರು ಸಮಸ್ಯೆಗಳು ಬಂದರು ದಿಟ್ಟತನದಿಂದ ಪತ್ರಕರ್ತರು ಕೆಲಸ ಮಾಡುತ್ತಾರೆ. ಪತ್ರಕರ್ತರಿಗೆ ರಾಷ್ಟ್ರೀಯ ವಿಮಾ ಯೋಜನೆ ರೂಪಿಸಲು ಸರ್ಕಾರದ ಜೊತೆ ಚರ್ಚೆ ನಡೆಸಲಾ ಗುವುದು. ಈ ಯೋಜನೆಯಿಂದ ಪತ್ರಕರ್ತರ ಕುಟುಂಬಕ್ಕೂ ಶಕ್ತಿ ದೊರೆಯುತ್ತದೆ. ಜೊತೆಗೆ ಅಂತಹ ಕುಟುಂಬಗಳಿಗೆ ಸರ್ಕಾರಿ ಕೆಲಸ ಇಲ್ಲವೇ ಬೇರೆ ವ್ಯವಸ್ಥೆ ಮಾಡುವ ಬಗ್ಗೆಯೂ ಚರ್ಚಿಸಲಾ ಗುವುದು ಎಂದು ಹೇಳಿದರು.

ಮೂರು ಬಾರಿ ಶಾಸಕನಾಗಿ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿದ್ದೇನೆ. ನನ್ನ ಸಮಾಜ ಸೇವೆಯನ್ನು ಗಮನಿಸಿ ಮಹಾರಾಷ್ಟ್ರದಲ್ಲೂ ನನಗೆ ದೊಡ್ಡ ಸ್ಥಾನ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಂತರ ಪತ್ರಕರ್ತರೊಂದಿಗೆ ಸಂವಾದ ನಡೆಸಿದರು. ಇದರ ಜೊತೆಗೆ ಸಮಾರಂಭದಲ್ಲಿ ಮೂರು ಗೋಷ್ಠಿಗಳು ನಡೆದವು. ಸಂಘದ ಮಾಜಿ ಅಧ್ಯಕ್ಷರನ್ನು ಸನ್ಮಾನಿಸಲಾಯಿತು. ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಉಪಾಧ್ಯಕ್ಷ ಮತ್ತೀಕೆರೆ ಜಯರಾಂ, ಮುಡಾ ಅಧ್ಯಕ್ಷ ಕೆ.ಶ್ರೀನಿವಾಸ್‌, ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್‌, ಜಿಲ್ಲಾ ಪೊಲೀಸ್‌ ಅಧೀಕ್ಷಕ ಕೆ.ಪರಶುರಾಮ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಟಿ.ಕೆ.ಹರೀಶ್‌, ಪತ್ರಕರ್ತರಾದ ಅಣ್ಣೂರು ಲಕ್ಷ್ಮಣ್‌, ಪಿ.ಜೆ. ಚೈತನ್ಯಕುಮಾರ್‌, ಕೆ.ಎನ್‌. ರವಿ, ಕೃಷ್ಣ ಸ್ವರ್ಣಸಂದ್ರ, ಸೋಮಶೇಖರ್‌ ಕೆರಗೋಡು, ಲಿಂಗರಾಜು ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕೇರಳ ಟಿ20 ಮೂಲಕ ಶ್ರೀಶಾಂತ್‌ ಮತ್ತೆ ಕ್ರಿಕೆಟ್‌ಗೆ

ಕೇರಳ ಟಿ20 ಮೂಲಕ ಶ್ರೀಶಾಂತ್‌ ಮತ್ತೆ ಕ್ರಿಕೆಟ್‌ಗೆ

34ನೇ ಜನ್ಮದಿನಕ್ಕೆ 34 ಸರಕಾರಿ ಶಾಲೆಗಳ ಅಭಿವೃದ್ಧಿ: ಸುರೇಶ್‌ ರೈನಾ ಸಂಕಲ್ಪ

34ನೇ ಜನ್ಮದಿನಕ್ಕೆ 34 ಸರಕಾರಿ ಶಾಲೆಗಳ ಅಭಿವೃದ್ಧಿ: ಸುರೇಶ್‌ ರೈನಾ ಸಂಕಲ್ಪ

ಬಳ್ಳಾರಿ: ಪಾಲಿಕೆ ಆಯುಕ್ತರಾದ ಪ್ರೀತಿ ಗೆಹ್ಲೋಟ್ ಅಧಿಕಾರ ವಹಿಸಿದ ಹತ್ತೇ ದಿನದಲ್ಲಿ ವರ್ಗಾವಣೆ

ಬಳ್ಳಾರಿ: ಪಾಲಿಕೆ ಆಯುಕ್ತರಾದ ಪ್ರೀತಿ ಗೆಹ್ಲೋಟ್ ಅಧಿಕಾರ ವಹಿಸಿದ ಹತ್ತೇ ದಿನದಲ್ಲಿ ವರ್ಗಾವಣೆ

ಬೈಡೆನ್‌ ಒಬ್ಬ ದುರ್ಬಲ ಅಧ್ಯಕ್ಷ: ಚೀನಾ ವ್ಯಾಖ್ಯಾನ

ಬೈಡೆನ್‌ ಒಬ್ಬ ದುರ್ಬಲ ಅಧ್ಯಕ್ಷರಾಗುವ ಸಾಧ್ಯತೆ ಇದೆ : ಚೀನಾ ವ್ಯಾಖ್ಯಾನ

ಬೆಳ್ತಂಗಡಿ : 2 ತಲೆ, 7 ಕಾಲು ಹೊಂದಿದ ವಿಸ್ಮಯಕಾರಿ ಕರುವಿನ ಜನನ !

ಪ್ರಕೃತಿ ವಿಸ್ಮಯ: ಬೆಳ್ತಂಗಡಿಯಲ್ಲಿ 2 ತಲೆ, 7 ಕಾಲು ಹೊಂದಿದ ಕರುವಿನ ಜನನ !

ಯುಎಇ: ಉದ್ಯಮ ಸ್ಥಾಪನೆ, ಹೂಡಿಕೆ ನಿಯಮದಲ್ಲಿ ಸಡಿಲಿಕೆ

ಯುಎಇ: ಉದ್ಯಮ ಸ್ಥಾಪನೆ, ಹೂಡಿಕೆ ನಿಯಮದಲ್ಲಿ ಸಡಿಲಿಕೆ

ಚುನಾವಣೆಯಲ್ಲಿ ಒವೈಸಿಗೆ ನೀಡುವ ಪ್ರತಿ ಮತವೂ ಭಾರತ ವಿರೋಧಿ ಮತವಾಗಿರುತ್ತದೆ : ತೇಜಸ್ವಿ

ಚುನಾವಣೆಯಲ್ಲಿ ಒವೈಸಿಗೆ ನೀಡುವ ಪ್ರತಿ ಮತವೂ ಭಾರತ ವಿರೋಧಿ ಮತವಾಗಿರಲಿದೆ : ತೇಜಸ್ವಿ





ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಾರದರ್ಶಕ ಚುನಾವಣೆಗೆ ಎಲ್ಲರೂ ಶ್ರಮಿಸಿ

ಪಾರದರ್ಶಕ ಚುನಾವಣೆಗೆ ಎಲ್ಲರೂ ಶ್ರಮಿಸಿ

ನೀರು ಕುಡಿಯಲು ಬಂದು ತೊಟ್ಟಿಯೊಳಗೆ ಬಿದ್ದ ಆನೆ ಮರಿ ರಕ್ಷಣೆ

ನೀರು ಕುಡಿಯಲು ಹೋಗಿ ತೊಟ್ಟಿಯೊಳಗೆ ಬಿದ್ದ ಕಾಡಾನೆ ಮರಿಯನ್ನು ರಕ್ಷಿಸಿದ ಅರಣ್ಯ ಇಲಾಖೆ

jodethu

ಮಂಡ್ಯದಲ್ಲಿ ಜೋಡೆತ್ತುಗಳ ಹವಾ: 14.55 ಟನ್ ಕಬ್ಬು ತುಂಬಿದ ಗಾಡಿ ಎಳೆದ ಎತ್ತುಗಳು !

ಬಹುಬೆಳೆಯಿಂದ ಯುವ ರೈತನಿಗೆ ಆದಾಯ

ಬಹುಬೆಳೆಯಿಂದ ಯುವ ರೈತನಿಗೆ ಆದಾಯ

ಪ್ರೀತಿ ತೋರಿಸುವ ನೀವು ಚುನಾವಣೆಯಲ್ಲಿ ಕೈಬಿಟ್ರಿ: ಮಂಡ್ಯದಲ್ಲಿ ಕುಮಾರಸ್ವಾಮಿ ಭಾವುಕ

ಪ್ರೀತಿ ತೋರಿಸುವ ನೀವು ಚುನಾವಣೆಯಲ್ಲಿ ಕೈಬಿಟ್ರಿ: ಮಂಡ್ಯದಲ್ಲಿ ಕುಮಾರಸ್ವಾಮಿ ಭಾವುಕ ಭಾಷಣ

MUST WATCH

udayavani youtube

ಕೊರೊನಾ ಪರಿಣಾಮ ಅಧ್ಯಯನಕ್ಕಾಗಿ ರೋಡ್ ಆಶ್ರಮ್ ಅಭಿಯಾನ

udayavani youtube

Auto Rickshaw driver feeds stray dogs in Surathkal | Umesh Devadiga | Udayavani

udayavani youtube

ಸುರತ್ಕಲ್ ನ ಪ್ರಥಮ ರಿಕ್ಷಾ ಚಾಲಕಿ

udayavani youtube

ಭೂಲೋಕದ ಅಮೃತ ವಾದ ತುಪ್ಪವನ್ನು ಸರಿಯಾಗಿ ಬಳಸುವುದು ಹೇಗೆ ?

udayavani youtube

Nittur Swarna rice Brand ಶಾಲೆಯ ಮಕ್ಕಳು ಸಿದ್ಧಪಡಿಸಿದ ನಿಟ್ಟೂರು ಸ್ವರ್ಣ ಅಕ್ಕಿ ಬ್ರಾಂಡ್

ಹೊಸ ಸೇರ್ಪಡೆ

ಆಸೀಸ್‌ ಸರಣಿಗೆ ಸೂರ್ಯ ಕುಮಾರ್ ಬೇಕಿತ್ತು: ಬ್ರಿಯಾನ್‌ ಲಾರ

ಆಸೀಸ್‌ ಸರಣಿಗೆ ಸೂರ್ಯ ಕುಮಾರ್ ಬೇಕಿತ್ತು: ಬ್ರಿಯಾನ್‌ ಲಾರ

ಕೇರಳ ಟಿ20 ಮೂಲಕ ಶ್ರೀಶಾಂತ್‌ ಮತ್ತೆ ಕ್ರಿಕೆಟ್‌ಗೆ

ಕೇರಳ ಟಿ20 ಮೂಲಕ ಶ್ರೀಶಾಂತ್‌ ಮತ್ತೆ ಕ್ರಿಕೆಟ್‌ಗೆ

34ನೇ ಜನ್ಮದಿನಕ್ಕೆ 34 ಸರಕಾರಿ ಶಾಲೆಗಳ ಅಭಿವೃದ್ಧಿ: ಸುರೇಶ್‌ ರೈನಾ ಸಂಕಲ್ಪ

34ನೇ ಜನ್ಮದಿನಕ್ಕೆ 34 ಸರಕಾರಿ ಶಾಲೆಗಳ ಅಭಿವೃದ್ಧಿ: ಸುರೇಶ್‌ ರೈನಾ ಸಂಕಲ್ಪ

ಬಳ್ಳಾರಿ: ಪಾಲಿಕೆ ಆಯುಕ್ತರಾದ ಪ್ರೀತಿ ಗೆಹ್ಲೋಟ್ ಅಧಿಕಾರ ವಹಿಸಿದ ಹತ್ತೇ ದಿನದಲ್ಲಿ ವರ್ಗಾವಣೆ

ಬಳ್ಳಾರಿ: ಪಾಲಿಕೆ ಆಯುಕ್ತರಾದ ಪ್ರೀತಿ ಗೆಹ್ಲೋಟ್ ಅಧಿಕಾರ ವಹಿಸಿದ ಹತ್ತೇ ದಿನದಲ್ಲಿ ವರ್ಗಾವಣೆ

ಬೈಡೆನ್‌ ಒಬ್ಬ ದುರ್ಬಲ ಅಧ್ಯಕ್ಷ: ಚೀನಾ ವ್ಯಾಖ್ಯಾನ

ಬೈಡೆನ್‌ ಒಬ್ಬ ದುರ್ಬಲ ಅಧ್ಯಕ್ಷರಾಗುವ ಸಾಧ್ಯತೆ ಇದೆ : ಚೀನಾ ವ್ಯಾಖ್ಯಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.