ನೀರಿನ ಸಮಸ್ಯೆ ತಡೆಗೆ ಸೂಚನೆ


Team Udayavani, Mar 26, 2021, 3:57 PM IST

ನೀರಿನ ಸಮಸ್ಯೆ ತಡೆಗೆ ಸೂಚನೆ

ಮಂಡ್ಯ: ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುವ ಮುನ್ನವೇ ಮುಂಜಾಗ್ರತೆ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾ ವಿಪತ್ತು ನಿರ್ವಹಣಾ ಅಧ್ಯಕ್ಷ ಹಾಗೂ ಜಿಲ್ಲಾಧಿಕಾರಿ ಎಸ್‌.ಅಶ್ವಥಿ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷ ಬೇಸಿಗೆ ಕಾಲದಲ್ಲಿ ಜಿಲ್ಲೆಯ ಯಾವ ಹಳ್ಳಿಗಳಲ್ಲಿನೀರಿನ ಸಮಸ್ಯೆ ಇದೆ ಎಂದು ಗುರುತಿಸಿಸಮಸ್ಯೆಗಳಿಗೆ ಮುಂಚಿತವಾಗಿಯೇಪರಿಹಾರ ಕಂಡುಕೊಳ್ಳಬೇಕು ಎಂದರು.

ಹೈರಿಂಗ್‌ ವ್ಯವಸ್ಥೆ: ಖಾಸಗಿ ಬೋರ್‌ವೆಲ್‌ಗಳ ಬದಲಾಗಿ ಡಿಪೆನಿಂಗ್‌ ಅಥವಾ ಹೈರಿಂಗ್‌ಗಳತ್ತ ಗಮನ ಹರಿಸಬೇಕು. ಈ ವಿಧಾನಗಳುಸಾಧ್ಯವಾಗದಿದ್ದಲ್ಲಿ ಕನಿಷ್ಠ ಟ್ಯಾಂಕರ್‌ ವ್ಯವಸ್ಥೆಯನ್ನಾದರೂ ಮಾಡಬೇಕು. ರೈತರ ಜತೆ ಚರ್ಚಿಸಿ ಹೈರಿಂಗ್‌ ವ್ಯವಸ್ಥೆ ಮಾಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಜಿಪಿಎಸ್‌ ಅಳವಡಿಸಬೇಕು: ಸರ್ಕಾರದಸುತ್ತೋಲೆಯಲ್ಲಿರುವಂತೆ ಟ್ಯಾಂಕರ್‌ ನಿರ್ಮಾಣ ಮಾಡಬೇಕಾದರೆ ಕಡ್ಡಾಯವಾಗಿ ಜಿಪಿಎಸ್‌ ಅಳವಡಿಸಬೇಕು. ನಿಗದಿತವೇಳೆಯಲ್ಲಿ ಕೆಲಸ ನಿರ್ವಹಿಸುವಕಾರ್ಮಿಕರಿಗೆ ಸರಿಯಾದ ರೀತಿಯಲ್ಲಿವೇತನ ನೀಡಬೇಕು. ವೇತನ ನೀಡುವಲ್ಲಿಯಾವುದೇ ಸಮಸ್ಯೆ ಬಾರದಂತೆ ಕ್ರಮ ವಹಿಸಬೇಕು ಎಂದರು.

ಶಾಶ್ವತ ಪರಿಹಾರ: ಜಿಪಂಗೆ ಪ್ರತಿ ಗ್ರಾಮದನೀರಿನ ಸಮಸ್ಯೆಗಳ ಬಗ್ಗೆ ಹೆಚ್ಚಿನಅರಿವಿರುವುದರಿಂದ ಎಲ್ಲ ರೀತಿಯಸಮಸ್ಯೆಗಳನ್ನು ಗುರುತಿಸಿ ಶಾಶ್ವತ ಪರಿಹಾರಒದಗಿಸಬೇಕು. ಕೆ.ಆರ್‌.ಪೇಟೆ ತಾಲೂಕಿನಲ್ಲಿ 2 ವರ್ಷಗಳಿಂದ ನೀರಿನ ಸಮಸ್ಯೆ ಇದ್ದು, ಬೋರ್‌ವೆಲ್‌ಗ‌ಳಿಂದ ನೀರಿನ ಪೂರೈಕೆ ಮಾಡಲಾಗುತ್ತಿದೆ. ಅದಕ್ಕೆ ಶಾಶ್ವತ ಪರಿಹಾರ ಒದಗಿಸಲು ಗಮನಹರಿಸಬೇಕು ಎಂದು ತಿಳಿಸಿದರು.

ಜಾಗೃತಿ ಮೂಡಿಸಿ: ಜಿಲ್ಲೆಯ ನಗರ ಪ್ರದೇಶ, ಪುರಸಭೆ, ನಗರ ಸಭೆಗಳಂಥ ಪ್ರದೇಶಗಳಲ್ಲಿನೀರಿನ ಸಮಸ್ಯೆ ಕಡಿಮೆಯಿದೆ ಎಂದುಕಡೆಗಣಿಸುವಂತಿಲ್ಲ. ತಾಪಮಾನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಎಲ್ಲಿಯೂ ನೀರಿನ ಸಮಸ್ಯೆ ಬಾರದಂತೆ ಹಾಗೂ ನೀರಿನಮಿತಬಳಕೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಎಂದು ಹೇಳಿದರು.

ಅಪರ ಜಿಲ್ಲಾಧಿಕಾರಿ ವಿ.ಆರ್‌.ಶೈಲಜಾ, ಜಿಪಂ ಉಪಕಾರ್ಯದರ್ಶಿ ಎನ್‌.ಡಿ.ಪ್ರಕಾಶ್‌, ಗ್ರಾಮೀಣ ಕುಡಿಯುವ ನೀರುಸರಬರಾಜು ಹಾಗೂ ನೈರ್ಮಲ್ಯ ವಿಭಾಗದಕಾರ್ಯಪಾಲಕ ಅಭಿಯಂತರ ಕುಮಾರ್‌,ಕೃಷಿ ಇಲಾಖೆಯ ಜಂಟಿ ನಿರ್ದೇಶಕಚಂದ್ರಶೇಖರ್‌, ಜಿಲ್ಲಾ ನಗರಾಭಿವೃದ್ಧಿಕೋಶದ ಆರ್‌.ಪ್ರತಾಪ್‌, ಜಿಲ್ಲಾಆರೋಗ್ಯಾ ಧಿಕಾರಿ ಡಾ.ಎಚ್‌.ಪಿ.ಮಂಚೇಗೌಡ, ತಾಲೂಕು ಮಟ್ಟದ ಅಧಿ ಕಾರಿಗಳು ಸೇರಿದಂತೆ ಮತ್ತಿತರರಿದ್ದರು.

ಬೇಸಿಗೆ ಸಂಭವಿಸುತ್ತಿರುವುದರಿಂದ ಜಿಲ್ಲೆಯಲ್ಲಿ ಕುಡಿಯುವ ನೀರಿಗೆಸಮಸ್ಯೆಯಾಗದಂತೆ ಮುಂಜಾಗ್ರತೆಕ್ರಮ ಕೈಗೊಳ್ಳಬೇಕು. ಸಮಸ್ಯೆಉಂಟಾಗುವ ಗ್ರಾಮಗಳಲ್ಲಿಟ್ಯಾಂಕರ್‌ ಅಥವಾ ಖಾಸಗಿಬೋರ್‌ವೆಲ್‌ಗ‌ಳಿಂದ ನೀರುಸರಬರಾಜು ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ಎಸ್‌.ಅಶ್ವಥಿ, ಜಿಲ್ಲಾಧಿಕಾರಿ, ಮಂಡ್ಯ

ಟಾಪ್ ನ್ಯೂಸ್

1-asddasda

ನವಜೋತ್ ಸಿಂಗ್ ಸಿಧುಗೆ 1 ವರ್ಷ ಜೈಲು ಶಿಕ್ಷೆ ವಿಧಿಸಿದ ಸುಪ್ರೀಂ : ಪ್ರಕರಣವೇನು?

ಉಡುಪಿ: ಬೆಳಗ್ಗೆ 4 ಗಂಟೆಗೆ ಎದ್ದು ಫಿಶಿಂಗ್ ಕೆಲಸಕ್ಕೆ ಹೋದ ವಿದ್ಯಾರ್ಥಿಗೆ 625 ಅಂಕ

ಉಡುಪಿ: ಬೆಳಗ್ಗೆ 4 ಗಂಟೆಗೆ ಎದ್ದು ಫಿಶಿಂಗ್ ಕೆಲಸಕ್ಕೆ ಹೋಗುತ್ತಿದ್ದ ವಿದ್ಯಾರ್ಥಿಗೆ 625 ಅಂಕ

1-sdsadasd

ಪಂಜಾಬ್ ನ ಮಾಜಿ ಕಾಂಗ್ರೆಸ್ ನಾಯಕ ಸುನೀಲ್‌ ಜಾಖಡ್‌ ಬಿಜೆಪಿ ಸೇರ್ಪಡೆ

sunil kumar

ನಾರಾಯಣ ಗುರು, ಭಗತ್ ಸಿಂಗ್ ಪಠ್ಯ ತೆಗೆದಿಲ್ಲ: ಸಚಿವ ಸುನಿಲ್ ಸ್ಪಷನೆ

1-dsa-dasd

ಶಿವನಿಗೆ ದೇಗುಲ ರಚನೆಯ ಅಗತ್ಯವಿಲ್ಲ, ಅವನು ಪ್ರತಿ ಕಣದಲ್ಲೂ ನೆಲೆಸಿದ್ದಾನೆ: ಕಂಗನಾ ರಣಾವತ್

halappa-achar

ಆರ್ ಎಸ್ಎಸ್ ಬಗ್ಗೆ ಮಾತಾಡದಿದ್ದರೆ ಕಾಂಗ್ರೆಸ್ ಗೆ ನಿದ್ದೆ ಬರಲ್ಲ: ಹಾಲಪ್ಪ ಆಚಾರ್

ನಾನು ರಾಜ್ಯ ರಾಜಕಾರಣಕ್ಕೆ ಮರಳುತ್ತಿಲ್ಲ: ಶೋಭಾ ಕರಂದ್ಲಾಜೆ ಸ್ಪಷ್ಟನೆ

ನಾನು ರಾಜ್ಯ ರಾಜಕಾರಣಕ್ಕೆ ಮರಳುತ್ತಿಲ್ಲ: ಶೋಭಾ ಕರಂದ್ಲಾಜೆ ಸ್ಪಷ್ಟನೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೆ.ಆರ್‌.ಪೇಟೆ: ಮಗಳ ಪ್ರಾಯದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ; ಆರೋಪಿ ಶಿಕ್ಷಕ ವಶಕ್ಕೆ

ಕೆ.ಆರ್‌.ಪೇಟೆ: ಮಗಳ ಪ್ರಾಯದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ; ಆರೋಪಿ ಶಿಕ್ಷಕ ವಶಕ್ಕೆ

ವಿವಿಧ ಗ್ರಾಪಂ ಉಪಚುನಾವಣೆ: ನಿಷೇಧಾಜ್ಞೆ ಜಾರಿ

ವಿವಿಧ ಗ್ರಾಪಂ ಉಪಚುನಾವಣೆ: ನಿಷೇಧಾಜ್ಞೆ ಜಾರಿ

CM ಯೋಗಿ ಆದೇಶದ ಬೆನ್ನಲ್ಲೇ 17,000 ಧಾರ್ಮಿಕ ಕೇಂದ್ರಗಳ ಲೌಡ್ ಸ್ಪೀಕರ್ ಶಬ್ದದ ಪ್ರಮಾಣ ಇಳಿಕೆ

ಹಿಜಾಬ್‌ ವಿವಾದ ಹಿಂದೆ ಕಾಂಗ್ರೆಸ್‌: ಸಿಎಂ ಬಸವರಾಜ ಬೊಮ್ಮಾಯಿ

ಚಲಿಸುತ್ತಿದ್ದ ಕಾರಿನ ಮೇಲೆ ಉರುಳಿ ಬಿದ್ದ ಮರ : ಶಿಕ್ಷಕರ ಸಂಘದ ಉಪಾಧ್ಯಕ್ಷ  ಪಾರು

ಮಂಡ್ಯ : ಚಲಿಸುತ್ತಿದ್ದ ಕಾರಿನ ಮೇಲೆ ಉರುಳಿ ಬಿದ್ದ ಮರ ; ಶಿಕ್ಷಕರ ಸಂಘದ ಉಪಾಧ್ಯಕ್ಷ ಪಾರು

ಈ ಶಾಲೆಗೆ ಸೇರಿದರೆ ಮಕ್ಕಳಿಗೆ ಬೆಳ್ಳಿ ನಾಣ್ಯ ಕೊಡುಗೆ:  ಹಾಜರಾತಿ ಹೆಚ್ಚಿಸಲು ವಿವಿಧ ಸೌಲಭ್ಯ

ಈ ಶಾಲೆಗೆ ಸೇರಿದರೆ ಮಕ್ಕಳಿಗೆ ಬೆಳ್ಳಿ ನಾಣ್ಯ ಕೊಡುಗೆ: ಹಾಜರಾತಿ ಹೆಚ್ಚಿಸಲು ವಿವಿಧ ಸೌಲಭ್ಯ

MUST WATCH

udayavani youtube

ಬಸ್ಸು ಚಲಾಯಿಸಿ ಚಾಲನೆ ನೀಡಿದ ಶಾಸಕ ಯು.ಟಿ. ಖಾದರ್

udayavani youtube

ಕಾರ್ಖಾನೆಯ ಗೋಡೆ ಕುಸಿದು 12 ಮಂದಿ ಕಾರ್ಮಿಕರ ಸಾವು

udayavani youtube

ಬೆಂಗಳೂರಿನಲ್ಲಿ ಹೈಸ್ಕೂಲ್ ವಿದ್ಯಾರ್ಥಿನಿಯರ ಮಾರಾಮಾರಿ ! ವಿಡಿಯೋ ವೈರಲ್ ..

udayavani youtube

ಕೊಪ್ಪಲಂಗಡಿ : ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಪಿಕಪ್

udayavani youtube

ಹೊರಟ್ಟಿ ಸೇರ್ಪಡೆಯಿಂದ ಪಕ್ಷಕ್ಕೆ ಬಲ : ಸಿಎಂ

ಹೊಸ ಸೇರ್ಪಡೆ

1-asddasda

ನವಜೋತ್ ಸಿಂಗ್ ಸಿಧುಗೆ 1 ವರ್ಷ ಜೈಲು ಶಿಕ್ಷೆ ವಿಧಿಸಿದ ಸುಪ್ರೀಂ : ಪ್ರಕರಣವೇನು?

10

ಪೂರ್ಣ ಅಸ್ತಿತ್ವ ಕಾಣದ ಹೊಸ ತಾಲೂಕು

ಉಡುಪಿ: ಬೆಳಗ್ಗೆ 4 ಗಂಟೆಗೆ ಎದ್ದು ಫಿಶಿಂಗ್ ಕೆಲಸಕ್ಕೆ ಹೋದ ವಿದ್ಯಾರ್ಥಿಗೆ 625 ಅಂಕ

ಉಡುಪಿ: ಬೆಳಗ್ಗೆ 4 ಗಂಟೆಗೆ ಎದ್ದು ಫಿಶಿಂಗ್ ಕೆಲಸಕ್ಕೆ ಹೋಗುತ್ತಿದ್ದ ವಿದ್ಯಾರ್ಥಿಗೆ 625 ಅಂಕ

damage

ವರುಣನ ಅಬ್ಬರಕ್ಕೆ ಅಪಾರ ಬೆಳೆ ಹಾನಿ

ಕಲರ್‌ ಫುಲ್‌ ಇವೆಂಟ್‌ನಲ್ಲಿ ‘ಗರುಡ’ ಪಯಣ; ಈ ವಾರ ತೆರೆಗೆ

ಕಲರ್‌ ಫುಲ್‌ ಇವೆಂಟ್‌ನಲ್ಲಿ ‘ಗರುಡ’ ಪಯಣ; ಈ ವಾರ ತೆರೆಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.