Udayavni Special

ಮಾ.5ರ ಸಹಸ್ರ ಕಳಶಾಭಿಷೇಕಕ್ಕೆ ಸಿದ್ಧತೆ


Team Udayavani, Feb 23, 2021, 3:01 PM IST

ಮಾ.5ರ ಸಹಸ್ರ ಕಳಶಾಭಿಷೇಕಕ್ಕೆ ಸಿದ್ಧತೆ

ಮೇಲುಕೋಟೆ: ಶ್ರೀವೈಷ್ಣವ ಕ್ಷೇತ್ರ ಮೇಲುಕೋಟೆ ಶ್ರೀಚೆಲುವನಾರಾಯಣ ಸ್ವಾಮಿ ದೇವಾಲಯದಲ್ಲಿ ಐತಿಹಾಸಿಕ ಮಹತ್ವದ “ಸಹಸ್ರ ಕಳಶಾಭಿಷೇಕ’ ಮಾ.5ರಂದು ನಡೆಯಲಿದೆ.

2020ನೇ ವರ್ಷದ ವೈರಮುಡಿ ಬ್ರಹ್ಮೋತ್ಸವ ರದ್ದಾದ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ಅನುಸರಿಸುತ್ತಾ ಬಂದಿರುವ ಪೂಜಾಕೈಂಕರ್ಯ ಪದ್ಧತಿಯ ಕೈಪಿಡಿ ಈಶ್ವರ ಸಂಹಿತೆಯ ಪ್ರಕಾರ ಪ್ರಾಯಶ್ಚಿತ್ತ ಪೂರ್ವಕವಾಗಿ ಸಹಸ್ರ ಕಳಶಾಭಿಷೇಕ ಹಮ್ಮಿಕೊಳ್ಳಲಾಗಿದೆ. 4 ದಿನಗಳ ಈ ಮಹತ್ವಪೂರ್ಣ ಧಾರ್ಮಿಕ ಕಾರ್ಯಕ್ರಮ ಇತಿಹಾಸ ಸೃಷ್ಟಿಸಲಿದೆ.

ಸಹಸ್ರ ಕಳಶಾಭಿಷೇಕ ನಡೆದಿಲ್ಲ: ಭಗವದ್ರಾ ಮಾನಜರ ಕಾಲದಿಂದಲೂ ಚೆಲುವನಾರಾಯಣ ಸ್ವಾಮಿಗೆ ಸಹಸ್ರ ಕಳಶಾಭಿಷೇಕ ನಡೆ ದಿಲ್ಲ. ಕೋವಿಡ್ ಮಹಾಮಾರಿ ದೇವಾಲಯದಲ್ಲಿ ಐತಿಹಾಸಿಕ ಮಹೋತ್ಸವ ನಿಗದಿಯಾಗುವಂತೆ ಮಾಡಿದೆ. ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ಪಾಂಚಾರಾತ್ರಾಗಮ ಪಂಡಿತ ವಿಜಯಕುಮಾರ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದಿನಾಂಕ ನಿಗದಿ ಮಾಡಲಾಗಿದ್ದು, ಆಹ್ವಾನ ಪತ್ರಿಕೆಯನ್ನೂ ಬಿಡುಗಡೆಮಾಡಲಾಗಿದೆ.

4 ದಿನಗಳ ಕಾರ್ಯಕ್ರಮ: ಮಾ.3ರಿಂದ 6ರವರೆಗೆ 4 ದಿನಗಳ ಕಾಲ ವಿವಿಧ ಧಾರ್ಮಿಕ ಕೈಂಕರ್ಯಗಳು ನೆರವೇರಲಿದೆ. ಮಾ.3ರಂದು ಅಂಕುರಾರ್ಪಣ, 4ರಂದು ಕಳಶಪ್ರತಿಷ್ಠೆ, 5ರಂದು ಸಹಸ್ರ ಕಳಶಾಭಿಷೇಕ,6 ರಂದು ಅನ್ನಕೋಟಿ ಕಾರ್ಯಕ್ರಮ ನಿಗದಿಯಾಗಿದೆ. ಜಿಲ್ಲಾಧಿಕಾರಿ ಎಸ್‌.ಅಶ್ವಥಿ ಅವರ ಆದೇಶದಂತೆ ರಾಮಾನುಜರ ಸನ್ನಿಧಿಯ ಅರ್ಚಕ ವಿದ್ವಾನ್‌ ಬಿ.ವಿ.ಆನಂದಾಳ್ವಾರ್‌ ಸಹಸ್ರ ಕಳಶಾಭಿಷೇಕಕ್ಕೆ ಸಂಪೂರ್ಣಉಚಿತವಾಗಿ ವ್ಯವಸ್ಥೆ ಮಾಡಿಕೊಡಲಿದ್ದಾರೆ

ಈಶ್ವರ ಸಂಹಿತೆಯಂತೆ ಸಹಸ್ರ ಕಳಶಾಭಿಷೇಕ :

ಸಹಸ್ರ ಕಳಶಾಭಿಷೇಕದಲ್ಲಿ ನಿಗದಿಯಾದದಿನಗಳಂದು ಪೂಜಾ ಕೈಂಕರ್ಯಗಳು ಹೇಗಿರಬೇಕು. ಯಾವ ರೀತಿ ಕಳಶಾಭಿಷೇಕ ಮಾಡಬೇಕು. ಕಳಶಗಳನ್ನು ಯಾವ ಸ್ಥಳದಲ್ಲಿ ಸ್ಥಾಪಿಸಬೇಕು ಎಂಬುದನ್ನು ಈಶ್ವರ ಸಂಹಿತೆಯ ಆಧಾರದಲ್ಲಿ ಪಾಂಚರಾತ್ರಾಗಮ ಪಂಡಿತರೊಂದಿಗೆ ಚರ್ಚಿಸಿ, ಧಾರ್ಮಿಕದತ್ತಿ ಇಲಾಖೆಯ ಆಯುಕ್ತರ ಕಚೇರಿಯಿಂದ ರೂಪುರೇಷೆ ಸಿದ್ಧ ಮಾಡಲಾಗುತ್ತದೆ ಎಂದು ಧಾರ್ಮಿಕದತ್ತಿ ಇಲಾಖೆಯ ಆಗಮ ಪಂಡಿತ ವಿಜಯಕುಮಾರ್‌ ತಿಳಿಸಿದ್ದಾರೆ.

ಮೇಲುಕೋಟೆಯಲ್ಲಿ ನಡೆಸಿದ ಸಭೆಯಲ್ಲಿ ಮಹೋತ್ಸವಕ್ಕೆ ದಿನಾಂಕ ನಿಗದಿ ಮಾಡಿ ಧಾರ್ಮಿಕ ಪರಂಪರೆಗೆ ಚ್ಯುತಿ ಬರದಂತೆ ಮಹೋತ್ಸವಗಳನ್ನು ನಡೆಸಬೇಕು ಎಂದು ತೀರ್ಮಾನಿಸಲಾಗಿತ್ತು. ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ದಾನಿಗಳನ್ನು ಗುರುತಿಸಲಾಗಿತ್ತು. ಮಹೋತ್ಸವದ ಕಾರ್ಯಕ್ರಮಗಳ ರೂಪುರೇಷೆ ಸಿದ್ಧ ಮಾಡಿರಲಿಲ್ಲ.

ಹೀಗಾಗಿ ಒಂದೆರಡು ದಿನಗಳಲ್ಲಿ ಪಾಂಚಾರಾತ್ರಗಮದ ಪ್ರಖ್ಯಾತ ಪಂಡಿತರೊಂದಿಗೆ ಚರ್ಚಿಸಿ, ಈಶ್ವರ ಸಂಹಿತೆಯಲ್ಲಿ ಉಲ್ಲೇಖೀಸಿದ ಆಧಾರ ಪರಾಮರ್ಶಿಸಿ ಮಹೋತ್ಸವದಲ್ಲಿ ಕೈಗೊಳ್ಳಬೇಕಾದ ವಿಧಿ  ವಿಧಾನ ನಿರ್ಧರಿಸಲಾಗುತ್ತದೆ. ಸಹಸ್ರ ಕಳಶಾಭಿಷೇಕ ಮಾ.5ರಂದು ವಿದ್ಯುಕ್ತವಾಗಿ ನಡೆಯಲಿದೆ ಎಂದು ತಿಳಿಸಿದ್ದಾರೆ.

ಟಾಪ್ ನ್ಯೂಸ್

ಹಾಲಾಡಿ ಸೇತುವೆಗೆ ಬೈಕ್ ಡಿಕ್ಕಿ : ಗಂಭೀರ ಗಾಯ

ಹಾಲಾಡಿ ಸೇತುವೆಗೆ ಬೈಕ್ ಡಿಕ್ಕಿ : ಗಂಭೀರ ಗಾಯ

ಉದಯವಾಣಿ ಕಚೇರಿಗೆ ಖ್ಯಾತ ಚಿತ್ರಸಾಹಿತಿ ವಿ.ನಾಗೇಂದ್ರ ಪ್ರಸಾದ್ ಭೇಟಿ

ಉದಯವಾಣಿ ಕಚೇರಿಗೆ ಖ್ಯಾತ ಚಿತ್ರಸಾಹಿತಿ ವಿ.ನಾಗೇಂದ್ರ ಪ್ರಸಾದ್ ಭೇಟಿ

ನಾಲ್ಕು ದಿನದ ಹಿಂದೆ ಮನೆಬಿಟ್ಟು ಓಡಿಹೋದ ಪ್ರೇಮಿಗಳಿಬ್ಬರ ಮೃತದೇಹ ಕಾಡಿನಲ್ಲಿ ಪತ್ತೆ!

ನಾಲ್ಕು ದಿನದ ಹಿಂದೆ ಮನೆಬಿಟ್ಟು ಓಡಿಹೋದ ಪ್ರೇಮಿಗಳಿಬ್ಬರ ಮೃತದೇಹ ಕಾಡಿನಲ್ಲಿ ಪತ್ತೆ!

ಕೇರಳದಲ್ಲಿ ತೋತಾಪುರಿ ಶೂಟಿಂಗ್

ಕೇರಳದಲ್ಲಿ ತೋತಾಪುರಿ ಶೂಟಿಂಗ್

Ram Mandira

ರಾಮಮಂದಿರ ನಿರ್ಮಾಣಕ್ಕೆ ತಳುಕಿನ ಎಂಜಿನಿಯರ್‌ ಸೀತಾರಾಮ್‌ ಸಾಥ್‌

ಯೋಗೀಶ್ವರ್ ಮರ್ಕಟ ಮನಸ್ಥಿತಿಯ ‘ರಾಜಕೀಯ ಜೋಕರ್’: ಎಸ್.ಎಲ್. ಭೋಜೇಗೌಡ ಟೀಕೆ

ಯೋಗೀಶ್ವರ್ ಮರ್ಕಟ ಮನಸ್ಥಿತಿಯ ‘ರಾಜಕೀಯ ಜೋಕರ್’: ಎಸ್.ಎಲ್. ಭೋಜೇಗೌಡ ಟೀಕೆ

salar movie

‘ಸಲಾರ್’ ರಿಲೀಸ್‍ಗೆ ಮುಹೂರ್ತ ಫಿಕ್ಸ್…!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜಿಲ್ಲೆಯಲ್ಲಿ ಮಹಿಳಾ ಅಧಿಕಾರಿಗಳದ್ದೇ ಮೇಲುಗೈ

ಜಿಲ್ಲೆಯಲ್ಲಿ ಮಹಿಳಾ ಅಧಿಕಾರಿಗಳದ್ದೇ ಮೇಲುಗೈ

ಕೊಂಡೋತ್ಸವದೊಂದಿಗೆ ಸಿಡಿ ಹಬ್ಬ ಸಂಪನ್ನ

ಕೊಂಡೋತ್ಸವದೊಂದಿಗೆ ಸಿಡಿ ಹಬ್ಬ ಸಂಪನ್ನ

ಚಿಕಿತ್ಸೆಗೆ ಪರದಾಡುವ ಗಡಿಯಂಚಿನ ಗ್ರಾಮಸ್ಥರು

ಚಿಕಿತ್ಸೆಗೆ ಪರದಾಡುವ ಗಡಿಯಂಚಿನ ಗ್ರಾಮಸ್ಥರು

ಕಾಮಗಾರಿ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಆಕ್ರೋಶ

ಕಾಮಗಾರಿ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಆಕ್ರೋಶ

ಮಳವಳ್ಳಿ: ಸರಳ ಸಿಡಿಹಬ್ಬಕ್ಕೆ ವಿದ್ಯುಕ್ತ ಚಾಲನೆ

ಮಳವಳ್ಳಿ: ಸರಳ ಸಿಡಿಹಬ್ಬಕ್ಕೆ ವಿದ್ಯುಕ್ತ ಚಾಲನೆ

MUST WATCH

udayavani youtube

ದರೋಡೆಕೋರರನ್ನು ಅಟ್ಟಾಡಿಸಿದ ಜನರು.. ಯಾವ ಸಿನಿಮಾಗೂ ಕಡಿಮೆಯಿಲ್ಲ ಚೇಸಿಂಗ್ ದೃಶ್ಯ

udayavani youtube

ಕುಮಾರಸ್ವಾಮಿಯನ್ನು ನಂಬಬೇಡಿ, ಅವರೊಂದಿಗೆ ಹೊಂದಾಣಿಕೆ ಬೇಡ: ಬಿಜೆಪಿ ವರಿಷ್ಠರಿಗೆ ಯೋಗೀಶ್ವರ್

udayavani youtube

CoWin App ಸಮಸ್ಯೆ ! ಎರಡು ದಿನ ಲಸಿಕೆ ಹಂಚಿಕೆ ಇಲ್ಲ ! | Udayavani

udayavani youtube

ದಾನದ ಪರಿಕಲ್ಪನೆಯ ಕುರಿತು Dr. Gururaj Karajagi ಹೇಳಿದ ಕತೆ ಕೇಳಿ.. Part-3

udayavani youtube

ಕಾಯಕದಲ್ಲಿ ಕಟ್ಟಡ ಕಟ್ಟುವ ಮೇಸ್ತ್ರಿ; ಬಿಡುವಿನಲ್ಲಿ ಹಾಳೆ ಮುಟ್ಟಾಳೆ ತಯಾರಕರು

ಹೊಸ ಸೇರ್ಪಡೆ

ಹಾಲಾಡಿ ಸೇತುವೆಗೆ ಬೈಕ್ ಡಿಕ್ಕಿ : ಗಂಭೀರ ಗಾಯ

ಹಾಲಾಡಿ ಸೇತುವೆಗೆ ಬೈಕ್ ಡಿಕ್ಕಿ : ಗಂಭೀರ ಗಾಯ

ಎಂಡೊಮೆಟ್ರಿಯೋಸಿಸ್‌

ಎಂಡೊಮೆಟ್ರಿಯೋಸಿಸ್‌

ಉದಯವಾಣಿ ಕಚೇರಿಗೆ ಖ್ಯಾತ ಚಿತ್ರಸಾಹಿತಿ ವಿ.ನಾಗೇಂದ್ರ ಪ್ರಸಾದ್ ಭೇಟಿ

ಉದಯವಾಣಿ ಕಚೇರಿಗೆ ಖ್ಯಾತ ಚಿತ್ರಸಾಹಿತಿ ವಿ.ನಾಗೇಂದ್ರ ಪ್ರಸಾದ್ ಭೇಟಿ

ಆತ್ಮನಿರ್ಭರ ಯೋಜನೆ ಸದುಪಯೋಗಕ್ಕೆ ಸಲಹೆ

ಆತ್ಮನಿರ್ಭರ ಯೋಜನೆ ಸದುಪಯೋಗಕ್ಕೆ ಸಲಹೆ

ಪರಿಸರವಾದಿಗಳ ವಿರುದ್ಧ ಆಕ್ರೋಶ

ಪರಿಸರವಾದಿಗಳ ವಿರುದ್ಧ ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.