Udayavni Special

ಅತ್ಯಾಚಾರ ತಡೆಗೆ ಉ.ಪ್ರ ಸರ್ಕಾರ ವಿಫ‌ಲ


Team Udayavani, Oct 4, 2020, 1:31 PM IST

Mandya-tdy-1

ಮಳವಳ್ಳಿಯಲ್ಲಿ ವಿವಿಧ ಸಂಘಟನೆಗಳು ಉತ್ತರ ಪ್ರದೇಶದ ಮುಖ್ಯಮಂತ್ರಿಯೋಗಿ ಆದಿತ್ಯನಾಥ್‌ ಅವರ ಪ್ರತಿಕೃತಿದಹಿಸಿ ಪ್ರತಿಭಟನೆ ನಡೆಸಿದರು.

ಮಳವಳ್ಳಿ: ಉತ್ತರ ಪ್ರದೇಶದಲ್ಲಿ ಅತ್ಯಾಚಾರ, ಕೊಲೆ ಪ್ರಕರಣವನ್ನು ಹೆಚ್ಚಾಗುತ್ತಿದ್ದರೂ, ಇಂತಹಕೃತ್ಯವನ್ನುನಿಯಂತ್ರಿಸಲು ಸರ್ಕಾರ ವಿಫ‌ಲವಾಗಿದೆ. ಕೂಡಲೇ ಸರ್ಕಾರವನ್ನು ವಜಾ ಮಾಡಬೇಕು ಎಂದು ಆಗ್ರ ಹಿಸಿ, ವಿವಿಧ ಜನಪರ ಸಂಘಟನೆಯ ಸದಸ್ಯರು ಪ್ರತಿಭಟನೆ ನಡೆಸಿದರು.

ಪಟ್ಟಣದ ತಾಪಂ ಕಚೇರಿಯಿಂದ ಅಂಬೇಡ್ಕರ್‌ ವಿಚಾರ ವೇದಿಕೆ, ಬೌದ್ದಮಹಾಸಭಾ, ಗಂಗಾಮತ ಸಮಾಜಸೇರಿದಂತೆವಿವಿಧ ಸಂಘಟನೆಗಳ ಸದಸ್ಯರು ಮೆರವಣಿಗೆ ಮೂಲಕ ಅನಂತ್‌ ರಾಂ ಸರ್ಕಲ್‌ ಬಳಿ ಮಾನವ ಸರಪಳಿ ನಿರ್ಮಿಸಿ, ಯೋಗಿ ಆದಿತ್ಯನಾಥ್‌ ಅವರ ಪ್ರತಿಕೃತಿದಹಿಸಿ ನಂತರ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಉತ್ತರ ಪ್ರದೇಶದ ಸರ್ಕಾರವನ್ನು ಕೂಡಲೇ ವಜಾಗೊಳಿಸಿ ರಾಷ್ಟ್ರಪತಿ ಆಡಳಿತವನ್ನು ಜಾರಿಗೆ ತರ ಬೇಕು, ಸಾಕ್ಷ್ಯನಾಶ ಮಾಡಿರುವ ಜಿಲ್ಲಾಡಳಿತ ಮತ್ತು ಪೊಲೀಸ್‌ ಇಲಾಖೆಯನ್ನು ಹೊಣೆಯಾಗಿಸಿ, ಸಂಬಂಧಪಟ್ಟ ಅಧಿಕಾರಿಗಳನ್ನು ಸೇವೆಯಿಂದ ವಜಾ ಗೊಳಿಸಿ ಪ್ರಕರಣವನ್ನು ಉನ್ನತಮಟ್ಟದ ಅಧಿಕಾರಿಗಳಿಂದ ತನಿಖೆ ನಡೆಸಿ ಮೃತಪಟ್ಟ ಯುವತಿಯ ಕುಟುಂಬದವರಿಗೆ ನ್ಯಾಯ ದೊರಕಿಸಿ ಕೊಡಬೇ ಕೆಂದು ಆಗ್ರಹಿಸಿ ಕಂದಾಯಇಲಾಖೆಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ತಾಪಂ ಪ್ರಭಾರ ಅಧ್ಯಕ್ಷ ಸಿ. ಮಾಧು, ಪುರಸಭೆ ಮಾಜಿ ಸದಸ್ಯರಾದ ಮಹೇಶ್‌, ಗಂಗಾಧರ್‌, ಮೆಹಬೂಬಾಷ, ಜಿ.ಪ.ಮಾಜಿ ಜಯ ರಾಜ್‌, ಸಿಐಟಿಯುನ ಜಿ.ರಾಮಕೃಷ್ಣ, ಮುಖಂಡ ರಾದ ಎನ್‌.ಎಲ್‌.ಭರತ್‌ ರಾಜ್‌, ದುಗ್ಗನಹಳ್ಳಿ ನಾಗ ರಾಜು, ಆಟೋ ಮಂಜು ಮಹೇಶ್‌, ಕಾಂತರಾಜು, ನಟರಾಜ್‌, ಶಾಂತರಾಜ್‌, ಬಸವರಾಜು, ಶಿವ ಕುಮಾರ್‌, ಕಂಬರಾಜು, ಪ್ರಸಾದ್‌, ನಾಗರಾಜು, ಯತೀಶ್‌ ಇದ್ದರು.

ಬಿಎಸ್‌ಪಿಪಕ್ಷದ ತಾಲೂಕುಘಟಕದವತಿಯಿಂದ ಪ್ರತ್ಯೇಕವಾಗಿಪ್ರತಿಭಟನೆನಡೆಸಿಮನವಿಸಲ್ಲಿಸಿದರು. ಕುಮಾರ್‌, ಶಿವಮೂರ್ತಿ, ತಮ್ಮಯ್ಯ, ವೀರ ಭದ್ರಯ್ಯ, ಸತೀಶ್‌ ಹಾಜರಿದ್ದರು

 

ಅತ್ಯಾಚಾರ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿ :

ಶ್ರೀರಂಗಪಟ್ಟಣ: ಉತ್ತರ ಪ್ರದೇಶದಲ್ಲಿ ಅತ್ಯಾ ಚಾರವನ್ನು ಖಂಡಿಸಿ, ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡ ಬೇಕು ಎಂದು ಬಹುಜನ ಸಮಾಜವಾದಿ ಪಕ್ಷದ ಮುಖಂಡರು ತಹಶೀಲ್ದಾರ್‌ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಪಕ್ಷದ ತಾಲೂಕು ಅಧ್ಯಕ್ಷ ಗೋವಿಂದರಾಜು ನೇತೃತ್ವದಲ್ಲಿ ಆಗಮಿಸಿದ ಕಾರ್ಯರ್ತರು, ಉತ್ತರ ಪ್ರದೇಶ ಸರ್ಕಾರ ಹೆಣ್ಣು ಮಕ್ಕಳಿಗೆ ಗೌರವ ನೀಡುತ್ತಿಲ್ಲ. ಅಲ್ಲದೆ, ಅತ್ಯಾಚಾರ ಮತ್ತು ಕೊಲೆ ಹೆಚ್ಚಾ ಗುತ್ತಿ ದ್ದರೂ ಸರ್ಕಾರ ಕಾನೂನು ಕ್ರಮ ಕೈಗೊಂ ಡಿಲ್ಲ. ಅತ್ಯಾಚಾರ ತಡೆಗೆ ಅಲ್ಲಿನ ಪೊಲೀಸರು ವಿಫ‌ಲರಾಗಿದ್ದಾರೆ ಎಂದು ದೂರಿದರು.

ಪಕ್ಷದ ತಾಲೂಕು ಉಸ್ತುವಾರಿ ವಿ. ಸುರೇಶ್‌ ಮಾತನಾಡಿ, ಉತ್ತರ ಪ್ರದೇಶದಲ್ಲಿ ಅತ್ಯಾಚಾರ ಘಟನೆಗಳು ನಡೆಯುತ್ತಿದ್ದರೂ,ದೇಶದಲ್ಲಿಕಾನೂನುಇಲ್ಲವೇನೋಎಂಬ ಪ್ರಶ್ನೆಯಾಗಿದೆ. ಇದರಿಂದ ರಾಷ್ಟ್ರಪತಿಗಳು  ಮಧ್ಯ ಪ್ರವೇಶಿಸಿ, ಉತ್ತರ ಪ್ರದೇಶದ ಸರ್ಕಾರವನ್ನು ವಜಾಗೊಳಿಸ ಬೇಕು. ಉತ್ತಮ ಸಮಾಜ ನಿರ್ಮಾಣ ವಾಗಬೇಕು. ಪೊಲೀಸರಿಂದ ಅವರಿಗೆ ನ್ಯಾಯ ಕಲ್ಪಿಸ ಬೇಕು ಎಂದು ಹೇಳಿದರು. ಉಪ ತಹಶೀಲ್ದಾರ್‌ ಪುಟ್ಟ ಸ್ವಾಮಿಗೌಡ ಅವರಿಗೆ ಮನವಿ ಸಲ್ಲಿಸಲಾಯಿತು. ಸಂಘಟನೆ ಕಾರ್ಯದರ್ಶಿ ಚುಂನಚಯ್ಯ, ಶಿವಯ್ಯ, ರವಿಕುಮಾರ ಸೇರಿದಂತೆ ಮುಖಂಡರು ಹಾಜರಿದ್ದರು.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಸಿ.ಎಂ ಬದಲಾವಣೆ ಚರ್ಚೆಯಿಂದ ಮುಜುಗುರ! ಯತ್ನಾಳ ಹೇಳಿಕೆಗೆ ಸಚಿವೆ ಶಶಿಕಲಾ ಜೊಲ್ಲೇ ಆಕ್ಷೇಪ

ಸಿ.ಎಂ ಬದಲಾವಣೆ ಚರ್ಚೆಯಿಂದ ಮುಜುಗುರ! ಯತ್ನಾಳ ಹೇಳಿಕೆಗೆ ಸಚಿವೆ ಶಶಿಕಲಾ ಜೊಲ್ಲೇ ಆಕ್ಷೇಪ

ಬಿಹಾರ ಚುನಾವಣೆ 2020: ಮೊದಲ ಹಂತದಲ್ಲಿ ಶೇ.31ರಷ್ಟು ಕ್ರಿಮಿನಲ್ ಹಿನ್ನೆಲೆ ಅಭ್ಯರ್ಥಿಗಳು

ಬಿಹಾರ ಚುನಾವಣೆ 2020: ಮೊದಲ ಹಂತದಲ್ಲಿ ಶೇ.31ರಷ್ಟು ಕ್ರಿಮಿನಲ್ ಹಿನ್ನೆಲೆ ಅಭ್ಯರ್ಥಿಗಳು!

ಆಸೀಸ್ ಟೆಸ್ಟ್ ಸರಣಿ: ಇಶಾಂತ್ ಜಾಗಕ್ಕೆ ಶಾರ್ದೂಲ್‌-ಸಿರಾಜ್‌ ನಡುವೆ ಪೈಪೋಟಿ

ಆಸೀಸ್ ಟೆಸ್ಟ್ ಸರಣಿ: ಇಶಾಂತ್ ಜಾಗಕ್ಕೆ ಶಾರ್ದೂಲ್‌-ಸಿರಾಜ್‌ ನಡುವೆ ಪೈಪೋಟಿ

Good News:ಕೇಂದ್ರ ಸರ್ಕಾರಿ ನೌಕರರಿಗೆ ಬೋನಸ್ ಘೋಷಣೆ, 30 ಲಕ್ಷ ಉದ್ಯೋಗಿಗಳಿಗೆ ದಸರಾ ಗಿಫ್ಟ್

Good News:ಕೇಂದ್ರ ಸರ್ಕಾರಿ ನೌಕರರಿಗೆ ಬೋನಸ್ ಘೋಷಣೆ, 30 ಲಕ್ಷ ಉದ್ಯೋಗಿಗಳಿಗೆ ದಸರಾ ಗಿಫ್ಟ್

ಯತ್ನಾಳ್ ಅವರ ಅನಿಸಿಕೆ ಬಿಜೆಪಿಯ ಅನಿಸಿಕೆಯಲ್ಲ: ಸಿಎಂ ಬದಲಾವಣೆಯಿಲ್ಲ: ಎಚ್.ವಿಶ್ವನಾಥ್

ಯತ್ನಾಳ್ ಅವರ ಅನಿಸಿಕೆ ಬಿಜೆಪಿಯ ಅನಿಸಿಕೆಯಲ್ಲ: ಸಿಎಂ ಬದಲಾವಣೆಯಿಲ್ಲ: ಎಚ್.ವಿಶ್ವನಾಥ್

ಕೋವಿಡ್ ಎಫೆಕ್ಟ್:ಆಂಧ್ರಪ್ರದೇಶದಲ್ಲಿ 27 ವಿದ್ಯಾರ್ಥಿಗಳಿಗೆ ಸೋಂಕು ದೃಢ, 4 ಶಾಲೆ ಮತ್ತೆ ಬಂದ್

ಕೋವಿಡ್ ಎಫೆಕ್ಟ್:ಆಂಧ್ರಪ್ರದೇಶದಲ್ಲಿ 27 ವಿದ್ಯಾರ್ಥಿಗಳಿಗೆ ಸೋಂಕು ದೃಢ, 4 ಶಾಲೆ ಮತ್ತೆ ಬಂದ್

ಸಿಎಂ ವಿರುದ್ಧ ಹೇಳಿಕೆ : ಯತ್ನಾಳರನ್ನ ಪಕ್ಷದಿಂದ ಹೊರಹಾಕುವಂತೆ ಪ್ರಾರ್ಥಿಸುವೆ : ಈಶ್ವರಪ್ಪ

ಸಿಎಂ ವಿರುದ್ಧ ಹೇಳಿಕೆ : ಯತ್ನಾಳರನ್ನ ಪಕ್ಷದಿಂದ ಹೊರಹಾಕುವಂತೆ ಪ್ರಾರ್ಥಿಸುವೆ : ಈಶ್ವರಪ್ಪ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

mandya-tdy-2

ಗಣಿಗಾರಿಕೆ ಸ್ಥಗಿತಕ್ಕಾಗಿ ಪ್ರತಿಭಟನೆ

ಮಳವಳ್ಳಿ: ಎಟಿಎಂ ಕೇಂದ್ರಕ್ಕೆ ನುಗ್ಗಿ ದರೋಡೆ

ಮಳವಳ್ಳಿ: ಎಟಿಎಂ ಕೇಂದ್ರಕ್ಕೆ ನುಗ್ಗಿ ದರೋಡೆ

MANDYA-TDY-1

ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆ

mandya

ಅಂತರ್ಜಾತಿ ಮದುವೆಯಾದ ಯುವತಿ ನಿಗೂಢ ನಾಪತ್ತೆ: 5 ವರ್ಷದ ಬಳಿಕ ಪೋಷಕರಿಂದ ದೂರು ದಾಖಲು

mandya-tdy-2

ಅರ್ಥಪೂರ್ಣ ಕನ್ನಡ ರಾಜೋತ್ಸವಕ್ಕೆ ನಿರ್ಧಾರ

MUST WATCH

udayavani youtube

ಸ್ವಾಮಿತ್ವ: ಹೊಸ ಯೋಜನೆಯಿಂದ ನಮಗೆ ಏನು ಲಾಭ ?

udayavani youtube

ಚಿಕ್ಕಮಗಳೂರು : ಪುಷ್ಪ ಸಮರ್ಪಣೆ ವೇಳೆ ಮಗಳನ್ನ ನೆನೆದು ಕಣ್ಣೀರಿಟ್ಟ ಮೃತ ಪೇದೆ ತಾಯಿ

udayavani youtube

ಮಂಗಳೂರು: ಡ್ರಗ್ಸ್ ಜಾಗೃತಿ ಬರಹದಿಂದ ಗಮನಸೆಳೆಯುತ್ತಿದೆ ಸಿಟಿ ಬಸ್

udayavani youtube

ನವರಾತ್ರಿ – Navratri ಹಬ್ಬದ ವೈಶಿಷ್ಟ್ಯವೇನು? | Udayavani

udayavani youtube

Mudipu‌ illegal quarrying allegations ವಿಚಾರ; ನನಗೆ ಯಾವುದೇ ಸಂಬಂದ ಇಲ್ಲ:Rajesh Naikಹೊಸ ಸೇರ್ಪಡೆ

ಕೋವಿಡ್‌; ಬೀದರ್‌ನಲ್ಲಿ ಪರಿಹಾರ ಮರೀಚಿಕೆ

ಕೋವಿಡ್‌; ಬೀದರ್‌ನಲ್ಲಿ ಪರಿಹಾರ ಮರೀಚಿಕೆ

rc-tdy-3

ಸೀತಾಫಲಕ್ಕೆ ಭಾರೀ ಡಿಮ್ಯಾಂಡ್‌

rc-tdy-2

ಮಳೆಗೆ ನೆಲಕ್ಕುರುಳಿದ ಭತ್ತ; ರೈತ ಕಂಗಾಲು

rc-tdy-1

ಅವಿರೋಧ ಹೇಳಿಕೆಗೆ ಭಾರೀ ವಿರೋಧ!

gb-tdy-3

15 ವಾರಿಯರ್ಸ್‌ ಸಾವು; ಮೂವರಿಗಷ್ಟೇ ಪರಿಹಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.