ಗಣಕೀಕೃತ ಆರ್‌ಟಿಸಿಗೆ ಪೂರಕ ದಾಖಲೆ ಕೊಡಿ

10 ದಿನ ದಾಖಲೆ ಸಂಗ್ರಹಿಸಲು ಡೀಸಿ ಮಂಜುಶ್ರೀ ಸೂಚನೆ

Team Udayavani, Jul 20, 2019, 1:50 PM IST

ಮಂಡ್ಯ ತಾಲೂಕಿನ ಹೊನಗಳ್ಳಿಮಠ ಗ್ರಾಮದಲ್ಲಿ ನಡೆದ ಪಹಣಿ ಗಣಕೀಕೃತ ಆರ್‌ಟಿಸಿ ತಿದ್ದುಪಡಿ ಆಂದೋಲನ ಕಂದಾಯ ಅದಾಲತ್‌ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಮಂಜುಶ್ರೀ ಉದ್ಘಾಟಿಸಿದರು.

ಮಂಡ್ಯ: ತಾಲೂಕಿನ ಕೆರೆಗೋಡು ಹೋಬಳಿ ಆಲಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಹೊನಗಳ್ಳಿಮಠ ಇನಾಂ ಗ್ರಾಮವಾಗಿದ್ದು, ಇದುವರೆಗೂ ಗಣಕೀಕೃತ ಆರ್‌ಟಿಸಿ ಆಗದೇ ಇರುವುದರಿಂದ ರೈತರು ಆರ್‌ಟಿಸಿ ಪಡೆಯಲು ತಮ್ಮಲ್ಲಿರುವ ಅಗತ್ಯ ದಾಖಲೆಗಳನ್ನು ನೀಡಿ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಮಂಜುಶ್ರೀ ಮನವಿ ಮಾಡಿದರು.

ತಾಲೂಕಿನ ಹೊನಗಳ್ಳಿಮಠ ಗ್ರಾಮದಲ್ಲಿ ನಡೆದ ಪಹಣಿ ಗಣಕೀಕೃತ ಆರ್‌ಟಿಸಿ ತಿದ್ದುಪಡಿ ಆಂದೋಲನ ಕಂದಾಯ ಅದಾಲತ್‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹೊನಗಳ್ಳಿಮಠ ಗ್ರಾಮದ ಕೆಲವು ಕೈ ಬರಹ ಪಹಣಿಯನ್ನು ಆಕಾರ್‌ ಬಂದ್‌ನಂತೆ ಗಣಕೀಕೃತ ಆರ್‌ಟಿಸಿಗೆ ತಾಳೆ ಮಾಡಲಾಗಿದ್ದು, ಇನ್ನು ಕೆಲವು ಬಾಕಿ ಇರುವ ಪಹಣಿಗಳನ್ನು ತಾಳೆ ಮಾಡಬೇಕಾಗಿದೆ. ಈ ಪಹಣಿಗಳನ್ನು ತಾಳೆ ಮಾಡಲು ದಾಖಲೆಗಳು ಅವಶ್ಯವಾಗಿರುತ್ತದೆ ಎಂದು ತಿಳಿಸಿದರು.

ದಾಖಲೆ ನೀಡಿ ಸಹಕರಿಸಿ: ಹಿಂದುಳಿದ ಜಿಲ್ಲೆ ರಾಯಚೂರಿನ ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾಗ ಅಲ್ಲಿ ಯಾವ ಗ್ರಾಮಕ್ಕೂ ಆರ್‌ಟಿಸಿ ಇಲ್ಲದೆ ಇರಲಿಲ್ಲ. ಆದರೆ, ಇಲ್ಲಿ ಹೊನಗಹಳ್ಳಿಮಠ ಗ್ರಾಮಕ್ಕೆ ಆರ್‌ಟಿಸಿ ಇಲ್ಲ. ಕೂಡಲೇ ಆರ್‌ಟಿಸಿ ನೀಡಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದ್ದರಿಂದ ರೈತರು ಸಹ ತಮ್ಮಲ್ಲಿರುವ ದಾಖಲಾತಿಗಳನ್ನು ಅಧಿಕಾರಿಗಳಿಗೆ ನೀಡಿ ಸಹಕಾರ ನೀಡಬೇಕು ಎಂದು ಹೇಳಿದರು.

ಈ ಗ್ರಾಮದ ವ್ಯಾಪ್ತಿಗೆ ಬರುವ ಗ್ರಾಮ ಲೆಕ್ಕಾಧಿಕಾರಿಗಳು 10 ದಿನ ಬೆಳಿಗ್ಗೆ 9 ರಿಂದ 11 ಗಂಟೆವರೆಗೂ ಗ್ರಾಮದಲ್ಲಿದ್ದು, ರೈತರಿಂದ ಎಲ್ಲ ರೀತಿಯ ದಾಖಲೆಗಳನ್ನು ಪಡೆದುಕೊಳ್ಳುವಂತೆ ತಿಳಿಸಿದ ಜಿಲ್ಲಾಧಿಕಾರಿ ಗಳು, ಏನಾದರೂ ವ್ಯತ್ಯಾಸವಾಗಿದ್ದಲ್ಲಿ ರೈತರು ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಸರಿಪಡಿಸಿಕೊಳ್ಳಿ ಎಂದು ಹೇಳಿದರು.

ಆರ್‌ಟಿಸಿಗೆ ವಂಶವೃಕ್ಷ ಕಡ್ಡಾಯ: ಆರ್‌ಟಿಸಿ ಪಡೆಯಲು ವಂಶವೃಕ್ಷ ಕಡ್ಡಾಯವಾಗಿರುತ್ತದೆ. ಆದ್ದರಿಂದ ರೋಟರಿ ಮೂಲಕ ತಮ್ಮ ವಂಶವೃಕ್ಷವನ್ನು ದೃಢೀಕರಿಸಿಕೊಂಡು ನಂತರ ನಾಡಕಚೇರಿ ಅಧಿಕಾರಿಗಳಿಗೆ ಕೊಟ್ಟರೆ ಅವರು ವಾರದೊಳಗೆ ನಿಮಗೆ ವಂಶವೃಕ್ಷ ನೀಡುತ್ತಾರೆ ಎಂದು ತಿಳಿಸಿದರು.

ಆರ್‌ಟಿಸಿಯಲ್ಲಿ ಯಾವುದೇ ರೀತಿಯ ತಂಟೆ ತಕರಾರು ಬಂದರೆ ಅವುಗಳನ್ನು ಸರಿಪಡಿಸಲು ಹಾಗೂ ಅವರೊಂದಿಗೆ ಚರ್ಚೆ ನಡೆಸಲು ಪ್ರತಿ ಮಂಗಳವಾರ ವಿಶೇಷ ದಿನ ಎಂದು ನಡೆಸಲು ತೀರ್ಮಾನಿಸಲಾಗಿದೆ. ಅಂದು ಬಂದು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಂಡ್ಯ ಉಪ ವಿಭಾಗಧಿಕಾರಿಗಳಾದ ಹೋಟೆಲ್ ಶಿವಪ್ಪ, ಭೂ ದಾಖಲೆಗಳ ಸಹಾಯಕ ನಿರ್ದೇಶಕ ನಿರಂಜನ್‌, ಮಂಡ್ಯ ತಹಶೀಲ್ದಾರ್‌ ಎಲ್. ನಾಗೇಶ್‌ ಮತ್ತಿತರರು ಉಪಸ್ಥಿತರಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಪಾಂಡವಪುರ: ತಾಲೂಕಿನ ಚಿಕ್ಕಾಡೆ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯಿಂದ ನಡೆಸಲಾಗುತ್ತಿರುವ ಚರಂಡಿ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿ ಅವೈಜ್ಞಾನಿಕವಾಗಿದ್ದು,...

  • ಮದ್ದೂರು: ತಾಲೂಕು ಕಚೇರಿಯಲ್ಲಿ ಸಮರ್ಪಕವಾದ ಕೆಲಸ ಕಾರ್ಯಗಳಾಗದೆ ಸಾರ್ವಜನಿಕರು ಪ್ರತಿನಿತ್ಯ ಅಲೆದಾಡುವ ಪ್ರವೃತ್ತಿ ಮುಂದುವರಿದಿದ್ದರೂ ಸಂಬಂಧಿಸಿದ ಅಧಿಕಾರಿಗಳು,...

  • ಭಾರತೀನಗರ : ನಾಲೆಗೆ ಬಸ್‌ ಬಿದ್ದು ಅಮೂಲ್ಯ ಜೀವಗಳು ಬಲಿಯಾದಾಗ ಕಣ್ತೆರೆಯುವ ಆಡಳಿತ ಕೂಡಲೇ ತಡೆಗೋಡೆ ನಿರ್ಮಿಸುವ ಭರವಸೆ ನೀಡಿದ್ದು, ಮತ್ತೂಂದು ಅವಘಡ ಸಂಭವಿಸಿದಾಗಲೇ...

  • ಶ್ರೀರಂಗಪಟ್ಟಣ: ಭಾರತ ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್‌ ಅವರ ಪಾತ್ರ ನಗಣ್ಯ ಎಂಬಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಬಿಂಬಿಸಲು ಯತ್ನಿಸು ತ್ತಿದ್ದು, ನೈತಿಕ ಹೊಣೆ...

  • ಮದ್ದೂರು: ಕುಡಿವ ನೀರು, ಶೌಚಾಲಯ, ಆಸನದ  ವ್ಯವಸ್ಥೆ ಇಲ್ಲದೆ ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಕೂಡಲೇ ತಾಲೂಕು ಕಚೇರಿಗೆ ಅಗತ್ಯ ಕ್ರಮವಹಿಸುವಂತೆ...

ಹೊಸ ಸೇರ್ಪಡೆ