ಕೈ ಕೊಟ್ಟ ಮಳೆ; ನೆಲಕಚ್ಚಿದ ರಾಗಿ, ಹುರುಳಿ ಬೆಳೆ


Team Udayavani, May 16, 2019, 11:29 AM IST

man-3

ಪಾಂಡವಪುರ: ತಾಲೂಕಿನ ಮಳೆಯಾಶ್ರಿತ ಪ್ರದೇಶದಲ್ಲಿ 2018-19ನೇ ಸಾಲಿನಲ್ಲಿ ಮುಂಗಾರು ಮತ್ತು ಹಿಂಗಾರುವಿನಲ್ಲಿ ನಿರೀಕ್ಷೆಯಷ್ಟು ಮಳೆಯಾಗದ ಹಿನ್ನೆಲೆಯಲ್ಲಿ ರಾಗಿ ಮತ್ತು ಹುರುಳಿ ಬೆಳೆಗಳು ನೆಲ ಕಚ್ಚಿದ್ದು ರೈತರು ದಿಕ್ಕು ತೋಚದೆ ಕಂಗಾಲಾಗಿದ್ದಾರೆ.

ಮುಂಗಾರು ಮಳೆಯಿಂದಾಗಿ ಸುಮಾರು 2250 ಹೆಕ್ಟೇರ್‌ನಲ್ಲಿ ರಾಗಿ ಬೆಳೆ ಒಣಗಿ ನಷ್ಟವಾದರೆ, ಹಿಂಗಾರು ಬೆಳೆಯಿಂದಾಗಿ ಸುಮಾರು 1945 ಹೆಕ್ಟೆರ್‌ನಲ್ಲಿ ಹುರುಳಿ ಬೆಳೆಗಳು ನಷ್ಟವಾಗಿವೆ.

ಸಾಲದ ಸುಳಿಗೆ: ತಾಲೂಕಿನ ಜಕ್ಕನಹಳ್ಳಿ ಹಾಗೂ ಚಿನಕುರಳಿ ಹೋಬಳಿಯ ಗ್ರಾಮಗಳು ಸಂಪೂರ್ಣ ವಾಗಿ ಮಳೆಯಾಶ್ರಿತ ಪ್ರದೇಶವಾಗಿದ್ದು ಈ ಭಾಗದ ರೈತರು ಮಳೆಯಾಶ್ರಿತ ಬೆಳೆಗಳಾದ ರಾಗಿ, ಹುರುಳಿ ಬೆಳೆ ಬಿತ್ತನೆ ಮಾಡಿ ಜೀವನ ನಡೆಸುತ್ತಾರೆ. ಆದರೆ, ಸೆಪ್ಟಂಬರ್‌ನಲ್ಲಿ ಅಲ್ಪ-ಸ್ವಲ್ಪ ಮಳೆಯಾದ ಹಿನ್ನೆಲೆಯಲ್ಲಿ ರಾಗಿ ಮತ್ತು ಹುರುಳಿ ಬೆಳೆಗಳನ್ನು ಬೆಳೆಯಲಾಗಿತ್ತು. ಆದರೆ, ಹಿಂಗಾರಿನಲ್ಲಿ ಮಳೆಯಾಗದೆ ಹುರುಳಿ ರಾಗಿ ಬೆಳೆಗಳು ನಷ್ಟವಾಗಿವೆ. ಇದರಿಂದ ಈ ಭಾಗದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದ್ದು ಮತ್ತೆ ಸಾಲದ ಸುಳಿಗೆ ಸಿಲುಕಿದ್ದಾರೆ.

ಪ್ರಸ್ತಾವನೆ ಕಳುಹಿಸಲಾಗಿದೆ: ರಾಗಿ-ಹುರುಳಿ ಬೆಳೆ ಪರಿಹಾರಕ್ಕಾಗಿ ತಾಲೂಕಿನ ಕೃಷಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಅಂತಿಮವಾಗಿ ಸರ್ವೆ ನಡೆಸಿ ಸುಮಾರು 2.85 ಕೋಟಿ ಪರಿಹಾರಕ್ಕಾಗಿ ಸ‌ರ್ಕಾರಕ್ಕೆ ಪ್ರಸ್ತಾವನೆ ಪಟ್ಟಿ ಸಲ್ಲಿಸಲಾಗಿದೆ ಎಂದು ಕೃಷಿ ಅಧಿಕಾರಿ ಎಚ್.ವಿ.ಜಗದೀಶ್‌ ತಿಳಿಸಿದ್ದಾರೆ.

ಮಳೆ ಕೊರತೆ: ಹಿಂಗಾರಿನಲ್ಲಿ ಅಕ್ಟೋಬರ್‌, ನವೆಂಬರ್‌ ಹಾಗೂ ಡಿಸೆಂಬರ್‌ ತಿಂಗಳಲ್ಲಿ ವಾಡಿಕೆಯಂತೆ 215.40 ಮಿ.ಮೀಟರ್‌ ಮಳೆ ಆಗಬೇಕಿತ್ತು . ಆದರೆ, 185.72 ಮೀ.ಮಿ. ಮಳೆ ಯಾಗಿದೆ. 29.68 ಮಿ.ಮೀಟರ್‌ ನಷ್ಟು ಮಳೆ ಕಡಿಮೆ ಯಾಗಿದ್ದು ಶೇ.13.77 ಮಳೆ ಕೊರತೆ ಯುಂಟಾಗಿದೆ. ಮುಂಗಾರಿನಲ್ಲೂ ಮಳೆ ಕೊರತೆ ಹೆಚ್ಚಾದ ಹಿನ್ನೆಲೆಯಲ್ಲಿ ರಾಗಿ ಬೆಳೆಯಲ್ಲಿ ನಷ್ಟ ಉಂಟಾ ಗಿದ್ದು, ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ಮಳೆಯಾಶ್ರಿತ ಪ್ರದೇಶದ ವ್ಯಾಪ್ತಿ ಹಳ್ಳಿಗಳಲ್ಲಿನ ಕೆರೆ-ಕಟ್ಟೆಗಳೂ ಭರ್ತಿಯಾಗಿಲ್ಲ. ಹೇಮಾವತಿ ನಾಲೆಯಿಂದ ನೀರು ಹರಿಸಿ ಅಲ್ಪ ಪ್ರಮಾಣದಲ್ಲಿ ಕೆರೆಗಳನ್ನು ಭರ್ತಿ ಮಾಡಲಾಗಿದೆಯೇ ಹೊರತು ಪೂರ್ಣ ಪ್ರಮಾಣದಲ್ಲಿ ಕೆರೆ-ಕಟ್ಟೆಗಳು ಭರ್ತಿಯಾಗಿಲ್ಲ. ಮುಂಜಾಗ್ರತಾ ಕ್ರಮವಾಗಿ ಕುಡಿಯುವ ನೀರಿಗೆ ಅಣೆಕಟ್ಟೆಗಳ ನೀರನ್ನು ಮೀಸಲಿರಿಸಿಕೊಳ್ಳಲಾಗಿದ್ದು ಮುಂದಿನ ದಿನಗಳ ಲ್ಲಾದರೂ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

ತಹಶೀಲ್ದಾರ್‌ ಖಾತೆಯಲ್ಲಿ ಹಣ

ಮುಂಗಾರು ಮಳೆಯಾಶ್ರಿತ ಪ್ರದೇಶದ ಒಟ್ಟು 9238 ರೈತರು ತಾವು ಬೆಳೆದ ಬೆಳೆಗಳಲ್ಲಿ ನಷ್ಟ ಅನುಭವಿಸಿರುವ ಬಗ್ಗೆ ಸರ್ವೆ ಕಾರ್ಯ ನಡೆಸಿ ಅರ್ಹ ಫ‌ಲಾನುಭವಿಗಳನ್ನು ಗುರುತಿಸಲಾಗಿದೆ. ಬೆಳೆ ನಷ್ಟದ ಹಣ ಸುಮಾರು 1.53ಕೋಟಿ ರೂ.ಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿತ್ತು. ಸರ್ಕಾರ ಈಗಾಗಲೇ ಅದರ ಹಣ ಬಿಡುಗಡೆ ಮಾಡಿ ತಹಶೀಲ್ದಾರ್‌ ಖಾತೆಯಲ್ಲಿ ಜಮೆ ಮಾಡಿದೆ. ಸದ್ಯದಲ್ಲಿಯೇ ಪರಿಹಾರದ ಹಣವನ್ನು ಅರ್ಹ ಫ‌ಲಾನುಭವಿ ರೈತರ ಖಾತೆಗೆ ಜಮೆ ಮಾಡಲಾಗುವುದು ಎಂದು ಕೃಷಿ ಅಧಿಕಾರಿ ಎಚ್.ವಿ.ಜಗದೀಶ್‌ ತಿಳಿಸಿದ್ದಾರೆ.

ಟಾಪ್ ನ್ಯೂಸ್

ವೇತನ ಮೂರ್‍ನಾಲ್ಕು ತಿಂಗಳು ವಿಳಂಬ; ಜೀವನಕ್ಕೆ ಪರದಾಡುವ ಸ್ಥಿತಿ

ವೇತನ ಮೂರ್‍ನಾಲ್ಕು ತಿಂಗಳು ವಿಳಂಬ; ಜೀವನಕ್ಕೆ ಪರದಾಡುವ ಸ್ಥಿತಿ

ಆತಂಕ ಬೇಡ; ಆದರೆ ಎಚ್ಚರಿಕೆಯಂತೂ ಬೇಕು

ಆತಂಕ ಬೇಡ; ಆದರೆ ಎಚ್ಚರಿಕೆಯಂತೂ ಬೇಕು

“ಫೈರಿಂಗ್‌ ರೇಂಜ್‌’ ಇಲ್ಲದೆ ಪೊಲೀಸರ ಪರದಾಟ

“ಫೈರಿಂಗ್‌ ರೇಂಜ್‌’ ಇಲ್ಲದೆ ಪೊಲೀಸರ ಪರದಾಟ

ಇಂದು ಉಪಚುನಾವಣೆಯ ಬಹಿರಂಗ ಪ್ರಚಾರ ಅಂತ್ಯ

ಇಂದು ಉಪಚುನಾವಣೆಯ ಬಹಿರಂಗ ಪ್ರಚಾರ ಅಂತ್ಯ

100 ಶಾಸಕರಿಗಿಲ್ಲ ಟಿಕೆಟ್‌? ಬಿಜೆಪಿಯಲ್ಲೂ ಆಮೂಲಾಗ್ರ ಬದಲಾವಣೆ ಸಾಧ್ಯತೆ

100 ಶಾಸಕರಿಗಿಲ್ಲ ಟಿಕೆಟ್‌? ಬಿಜೆಪಿಯಲ್ಲೂ ಆಮೂಲಾಗ್ರ ಬದಲಾವಣೆ ಸಾಧ್ಯತೆ

ಪ್ರಾಕೃತಿಕ ವಿಕೋಪಗಳ ಅತೀ ಅಪಾಯಕಾರಿ ವಲಯದಲ್ಲಿ ಕರ್ನಾಟಕ

ಪ್ರಾಕೃತಿಕ ವಿಕೋಪಗಳ ಅತೀ ಅಪಾಯಕಾರಿ ವಲಯದಲ್ಲಿ ಕರ್ನಾಟಕ

ಮಕ್ಕಳಿಗೆ ಲಸಿಕೆ ಸುರಕ್ಷಿತವೇ? ಅನುಮಾನಕ್ಕೆ ಪರಿಹಾರ

ಮಕ್ಕಳಿಗೆ ಲಸಿಕೆ ಸುರಕ್ಷಿತವೇ? ಅನುಮಾನಕ್ಕೆ ಪರಿಹಾರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಿಮ್ಸ್‌ನ ಹೆರಿಗೆ ವಾರ್ಡ್‌ನಲ್ಲಿ ಹಾಸಿಗೆ ಹೆಚ್ಚಳ

ಮಿಮ್ಸ್‌ನ ಹೆರಿಗೆ ವಾರ್ಡ್‌ನಲ್ಲಿ ಹಾಸಿಗೆ ಹೆಚ್ಚಳ

ಗ್ರಾಮಸ್ಥರು

2 ಗ್ರಾಮಸ್ಥರಿಂದ ಪರಸ್ಪರ ಬಡಿದಾಟ

krs

ಕೆಆರ್‌ಎಸ್‌ ಜಲಾಶಯ ಭರ್ತಿಗೆ 3 ಅಡಿ ಬಾಕಿ

28

ಅಪಪ್ರಚಾರ ಮಾಡಿದವರ ಬಾಯಿ ಮುಚ್ಚಿಸಿದ್ದೇವೆ

ದೇಶಕ್ಕಾಗಿ ಪ್ರಾಣತೆತ್ತ ವೀರರನ್ನು ಸ್ಮರಿಸೋಣ

ದೇಶಕ್ಕಾಗಿ ಪ್ರಾಣತೆತ್ತ ವೀರರನ್ನು ಸ್ಮರಿಸೋಣ

MUST WATCH

udayavani youtube

ಆಧುನಿಕ ಪದ್ಧತಿಯೊಂದಿಗೆ ಬ್ಯಾಡಗಿ ಮೆಣಸಿನಕಾಯಿ ಕೃಷಿಗೆ ಮುಂದಾದ ಅಡಕೆ ಕೃಷಿಕ

udayavani youtube

ಬಸ್ ಕಂಡಕ್ಟರ್‌ನಿಂದ ಸೂಪರ್ ಸ್ಟಾರ್ ಆದ ರಜನಿಕಾಂತ್ ಕಥೆ

udayavani youtube

ಈ ಪ್ರೌಢ ಶಾಲೆಯಲ್ಲಿ ಒಂದಲ್ಲ, ಎರಡಲ್ಲ ಹಲವಾರು ಸಮಸ್ಯೆಗಳು!

udayavani youtube

ಪಾಕಿಸ್ಥಾನದ ವಿಜಯವನ್ನು ಸಂಭ್ರಮಿಸಿದ ರಾಜಸ್ಥಾನದ ಟೀಚರ್

udayavani youtube

ಸಾಮಾಜಿಕ ಸಂದೇಶ ಹೊತ್ತು 3500 ಕಿ.ಮೀ ಸೈಕಲ್ ಪ್ರಯಾಣ!

ಹೊಸ ಸೇರ್ಪಡೆ

ವೇತನ ಮೂರ್‍ನಾಲ್ಕು ತಿಂಗಳು ವಿಳಂಬ; ಜೀವನಕ್ಕೆ ಪರದಾಡುವ ಸ್ಥಿತಿ

ವೇತನ ಮೂರ್‍ನಾಲ್ಕು ತಿಂಗಳು ವಿಳಂಬ; ಜೀವನಕ್ಕೆ ಪರದಾಡುವ ಸ್ಥಿತಿ

ಆತಂಕ ಬೇಡ; ಆದರೆ ಎಚ್ಚರಿಕೆಯಂತೂ ಬೇಕು

ಆತಂಕ ಬೇಡ; ಆದರೆ ಎಚ್ಚರಿಕೆಯಂತೂ ಬೇಕು

ಬೈಕಲ್ಲಿ ಮಕ್ಕಳ ಬೆಲ್ಟ್ ಕಡ್ಡಾಯ? ಹೊಸ ನಿಯಮ ಸಾಧ್ಯತೆ

ಬೈಕಲ್ಲಿ ಮಕ್ಕಳ ಬೆಲ್ಟ್ ಕಡ್ಡಾಯ? ಹೊಸ ನಿಯಮ ಸಾಧ್ಯತೆ

“ಫೈರಿಂಗ್‌ ರೇಂಜ್‌’ ಇಲ್ಲದೆ ಪೊಲೀಸರ ಪರದಾಟ

“ಫೈರಿಂಗ್‌ ರೇಂಜ್‌’ ಇಲ್ಲದೆ ಪೊಲೀಸರ ಪರದಾಟ

ಮೊದಲ ಸ್ಟ್ಯಾಂಪ್ ಗೆ 62 ಕೋಟಿ ರೂ!

ಮೊದಲ ಸ್ಟ್ಯಾಂಪ್ ಗೆ 62 ಕೋಟಿ ರೂ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.