ರೌಡಿ ಶೀಟರ್ ಅಶೋಕ್ ಪೈ ಕೊಲೆ ಯತ್ನ:20 ಮಂದಿ ತಂಡದ ದಾಳಿ
Team Udayavani, Feb 7, 2017, 12:09 PM IST
ಮಂಡ್ಯ : ಜಿಲ್ಲೆಯ ಮದ್ದೂರು ತಾಲೂಕಿನ ಮಾದರಹಳ್ಳಿಯ ರೌಡಿ ಶೀಟರ್ ಅಶೋಕ್ ಪೈ ಮೇಲೆ ಸೋಮವಾರ ತಡ ರಾತ್ರಿ 20 ಕ್ಕೂ ಹೆಚ್ಚು ದುಷ್ಕರ್ಮಿಗಳು ದಾಳಿ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ನಡೆದಿದೆ.
ದಾಳಿಯ ವೇಳೆ ಅಶೋಕ್ ಪೈ ಅರ್ಧಗಂಟೆಗಳ ಕಾಲ ಸೆಣಸಾಡಿ ಪಾರಾಗಿರುವುದಾಗಿ ಹೇಳಿಕೊಂಡಿರುವುದಾಗಿ ವರದಿಯಾಗಿದೆ.
ಜಡೇಜಾ ರವಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಪೈ ಕೆಲದಿನಗಳ ಹಿಂದಷ್ಟೆ ಜೈಲಿನಿಂದ ಬಿಡುಗಡೆಯಾಗಿದ್ದು, ಹಳೆ ದ್ವೇಷದ ಹಿನ್ನಲೆಯಲ್ಲಿ ದಾಳಿ ನಡೆಸಲಾಗಿದೆ ಎಂದು ಹೇಳಲಾಗಿದೆ.
ಕೆ.ಎಂ.ದೊಡ್ಡಿ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.