ಬೆಲ್ಲ ಕ್ವಿಂಟಾಲ್ಗೆ 4,600 ರೂ.ದಾಖಲೆ ಮಾರಾಟ
Team Udayavani, Mar 24, 2017, 3:45 AM IST
ಮಂಡ್ಯ: ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಬೆಲ್ಲ 4,600 ರೂ.ಬೆಲೆಗೆ ಮಾರಾಟವಾಗಿ ಬುಧವಾರ ಹೊಸ ದಾಖಲೆ ಸೃಷ್ಟಿಸಿದೆ. ಈ ಬೆಲೆಗೆ ಹಿಂದೆಂದೂ ಬೆಲ್ಲ ಮಾರಾಟವಾಗಿರಲಿಲ್ಲ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿಗಳು ತಿಳಿಸಿದ್ದಾರೆ.
ಬುಧವಾರ ಮಾರುಕಟ್ಟೆಯಲ್ಲಿ 325 ಕ್ವಿಂಟಾಲ್ ಅಚ್ಚು ಬೆಲ್ಲ ಮಾರಾಟವಾಗಿದ್ದು, ಕ್ವಿಂಟಾಲ್ಗೆ ಕನಿಷ್ಠ 4,000 ರೂ.ನಿಂದ ಗರಿಷ್ಠ 4,600 ರೂ.ಗೆ ಮಾರಾಟವಾಗಿದ್ದು, ಇದೊಂದು ದಾಖಲೆ ಎನ್ನಲಾಗಿದೆ. ಈ ಮಧ್ಯೆ, ಗುರುವಾರ ಅಚ್ಚು ಬೆಲ್ಲ 372 ಕ್ವಿಂಟಾಲ್ ಮಾರಾಟವಾಗಿದ್ದು, ಕ್ವಿಂಟಾಲ್ಗೆ ಕನಿಷ್ಠ 4200 ರೂ.ನಿಂದ ಗರಿಷ್ಠ 4560 ರೂ.ಹಾಗೂ ಮಾದರಿ 4300 ರೂ.ಗೆ ಮಾರಾಟವಾಗಿದೆ. ಬಾಕ್ಸ್ ಬೆಲ್ಲ 134 ಕ್ವಿಂಟಾಲ್ ಮಾರಾಟವಾಗಿದ್ದು, ಕ್ವಿಂಟಾಲ್ಗೆ ಕನಿಷ್ಠ 3900 ರೂ.ನಿಂದ ಗರಿಷ್ಠ 4100 ರೂ., ಮಾದರಿ 4000 ರೂ.ಗೆ ಮಾರಾಟವಾಗಿದೆ. ಕುರಿಕಾಲಚ್ಚು ಬೆಲ್ಲ 95 ಕ್ವಿಂಟಾಲ್ ಮಾರಾಟವಾಗಿದ್ದು, ಕ್ವಿಂಟಾಲ್ಗೆ ಕನಿಷ್ಠ 3750 ರೂ.ನಿಂದ ಗರಿಷ್ಠ 4000 ರೂ., ಮಾದರಿ 3900 ರೂ.ಗೆ ಮಾರಾಟವಾಗಿದೆ. ಬಕೆಟ್ ಬೆಲ್ಲ 393 ಕ್ವಿಂಟಾಲ್ ಮಾರಾಟವಾಗಿದೆ. ಕನಿಷ್ಠ 3850 ರೂ.ನಿಂದ ಗರಿಷ್ಠ 4200 ರೂ. ಹಾಗೂ ಮಾದರಿ ಬೆಲ್ಲ 3950 ರೂ.ವರೆಗೆ ಮಾರಾಟವಾಗಿದೆ.ಬೆಲ್ಲದ ಆವಕ ಕಡಿಮೆ ಇರುವುದರಿಂದ ಬೆಲ್ಲಕ್ಕೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದ್ದು, ಸಹಜವಾಗಿಯೇ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಬಂದಿದೆ ಎನ್ನುವುದು ಎಪಿಎಂಸಿ ಕಾರ್ಯದರ್ಶಿ ಪುಷ್ಪಲತಾ ಹೇಳುವ ಮಾತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು
Lok Sabha Election: ಕಾಂಗ್ರೆಸ್ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ
BJP ಯಿಂದ ನಿರ್ಲಕ್ಷ್ಯ… ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ
MUST WATCH
ಹೊಸ ಸೇರ್ಪಡೆ
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ