ಆಧಾರ್‌ ಕಾರ್ಡ್‌ಗೆ ಗ್ರಾಮೀಣರ ಪರದಾಟ

ಬ್ಯಾಂಕುಗಳಿಗೆ ನಿತ್ಯವೂ ಹಳ್ಳಿಗರ ಅಲೆದಾಟ • ಆಧಾರ್‌ ಕೇಂದ್ರಗಳಾಗದ ಗ್ರಾಪಂ ಕೇಂದ್ರಗಳು

Team Udayavani, Jun 7, 2019, 7:54 AM IST

ಮಂಡ್ಯ ನಗರದ ಸಕ್ಕರೆ ವೃತ್ತದ ಐಸಿಐಸಿಐ ಬ್ಯಾಂಕ್‌ ಮುಂದೆ ಜಿಲ್ಲೆಯ ವಿವಿಧ ಭಾಗಗಳಿಂದ ಆಧಾರ್‌ ಕಾರ್ಡ್‌ ಹಾಗೂ ತಿದ್ದುಪಡಿಗೆ ಆಗಮಿಸಿ ಕಾದು ಕುಳಿತಿರುವ ಜನಸಾಮಾನ್ಯರು.

ಮಂಡ್ಯ: ಹೊಸದಾಗಿ ಆಧಾರ್‌ ಕಾರ್ಡ್‌ ಮಾಡಿಸಲು ಹಾಗೂ ಅವುಗಳ ತಿದ್ದುಪಡಿಗೆ ಜನರು ಪರದಾಡುತ್ತಿರುವ ಸ್ಥಿತಿ ಹೇಳತೀರದಾಗಿದೆ. ನಿತ್ಯವೂ ಗ್ರಾಮೀಣ ಪ್ರದೇಶದಿಂದ ನೂರಾರು ಜನರು ಬ್ಯಾಂಕುಗಳಿಗೆ ಅಲೆದಾಡುವಂತಹ ಪರಿಸ್ಥಿತಿ ಸೃಷ್ಟಿಯಾಗಿದೆ. ಹಳ್ಳಿಗಾಡಿನ ಜನರಿಗೆ ಅನುಕೂಲವಾಗಲೆಂಬ ಕಾರಣಕ್ಕೆ ಗ್ರಾಮ ಪಂಚಾಯಿತಿ ಕಚೇರಿಗಳಲ್ಲೇ ಆಧಾರ್‌ ಕೇಂದ್ರ ತೆರೆಯಬೇಕೆಂಬ ಸರ್ಕಾರಿ ಆದೇಶ ಕಾಗದಕ್ಕೆ ಸೀಮಿತವಾಗಿದೆ. ಅದಕ್ಕೆ ಅಧಿಕಾರಿಗಳು ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಇದರಿಂದ ಆಧಾರ್‌ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ.

20 ಟೋಕನ್‌ ಮಾತ್ರ: ದಿನವೂ ಸೂರ್ಯ ಉದಯಿಸುವ ಮುನ್ನವೇ ಗ್ರಾಮೀಣ ಪ್ರದೇಶಗಳಿಂದ ಬರುವ ಜನರು ಟೋಕನ್‌ಗಳನ್ನು ಪಡೆಯಲು ಬ್ಯಾಂಕುಗಳ ಬಾಗಿಲ ಬಳಿ ಬಂದು ನಿಲ್ಲುತ್ತಿದ್ದಾರೆ. ಬೆಳಗ್ಗೆ 10.30ಕ್ಕೆ ಬ್ಯಾಂಕುಗಳು ಬಾಗಿಲು ತೆರೆಯುವುದನ್ನೇ ಕಾದು ಟೋಕನ್‌ ಪಡೆಯುತ್ತಿದ್ದಾರೆ. ಬ್ಯಾಂಕುಗಳಲ್ಲಿ ಪ್ರತಿದಿನ ಜನರಿಗೆ 20 ಟೋಕನ್‌ ಮಾತ್ರ ವಿತರಣೆ ಮಾಡುತ್ತಿದೆ. ಇದರಿಂದ ಹೊಸದಾಗಿ ಆಧಾರ್‌ ಕಾರ್ಡ್‌ ಮಾಡಿಸುವವರಿಗೆ ಹಾಗೂ ಕಾರ್ಡ್‌ ತಿದ್ದುಪಡಿ ಮಾಡಿಸುವವರಿಗೆ ತೀವ್ರ ತೊಂದರೆಯಾಗುತ್ತಿದೆ.

ಗ್ರಾಪಂಗಳಲ್ಲಿ ಕೇಂದ್ರ ತೆರೆದಿಲ್ಲ: ಪುಟ್ಟ ಮಕ್ಕಳಿಗೂ ಆಧಾರ್‌ ಕಾರ್ಡ್‌ ಮಾಡಿಸಲು ಅವುಗಳೊಂದಿಗೆ ಜನರು ಬ್ಯಾಂಕುಗಳ ಬಳಿ ಬಂದು ನಿಲ್ಲುತ್ತಿದ್ದು, ತಿಂಡಿಯನ್ನೂ ತಿನ್ನದೆ ಹಸಿವಿನಿಂದ ಆಧಾರ್‌ ಕಾರ್ಡ್‌ಗಾಗಿ ಕಾದು ಕೂರುವ ಸನ್ನಿವೇಶ ಎಲ್ಲರ ಮನಕಲಕುತ್ತಿದೆ. ಹೊಸ ಆಧಾರ್‌ ಕಾರ್ಡ್‌ ಹಾಗೂ ತಿದ್ದುಪಡಿಗೆ ಜನರ ಅಲೆದಾಡುವುದನ್ನು ತಪ್ಪಿಸುವ ಉದ್ದೇಶದಿಂದ ಗ್ರಾಮ ಪಂಚಾಯಿತಿ ಕಚೇರಿಗಳಲ್ಲೇ ಆಧಾರ್‌ ಕೇಂದ್ರಗಳನ್ನು ತೆರೆಯುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಆದೇಶ ಹೊರಡಿಸಿದೆ. ಆದೇಶ ಹೊರಬಿದ್ದು ವರ್ಷವಾಗುತ್ತಿದೆ. ಅಧಿಕಾರಿಗಳು ಮಾತ್ರ ಆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿಲ್ಲ.

ಗ್ರಾಮೀಣರಿಗೆ ಅಲೆದಾಟ: ಸರ್ವರ್‌ ಸಮಸ್ಯೆಯ ನೆಪವೊಡ್ಡಿ ಪಂಚಾಯಿತಿ ಕಚೇರಿಗಳಲ್ಲಿ ಆಧಾರ್‌ ಕೇಂದ್ರಗಳನ್ನು ತೆರೆಯದೆ ಗ್ರಾಮೀಣರು ನಗರ ಹಾಗೂ ಪಟ್ಟಣ ಪ್ರದೇಶಗಳಿಗೆ ಅಲೆದಾಡುವಂತೆ ಮಾಡುತ್ತಿದ್ದಾರೆ. ಇದರಿಂದ ಹಳ್ಳಿಗಾಡಿನ ಜನರು ನಿತ್ಯ ತೊಂದರೆಗೆ ಸಿಲುಕಿದ್ದಾರೆ. ಬ್ಯಾಂಕುಗಳ ಎದುರು ನೂರಾರು ಸಂಖ್ಯೆಯಲ್ಲಿ ಜನರು ಜಮಾಯಿಸುತ್ತಿರುವುದರಿಂದ ಬ್ಯಾಂಕಿನ ಕಾರ್ಯಚಟುವಟಿಕೆಗಳೂ ಸುಗಮವಾಗಿ ನಡೆಯುವುದಕ್ಕೆ ಅಡ್ಡಿಯಾಗಿದೆ.

ತಿದ್ದುಪಡಿಗೂ ಅವಕಾಶ: ಈ ಹಿಂದೆ ತಾಲೂಕು ಕಚೇರಿ, ಅಂಚೆ ಕಚೇರಿ ಹಾಗೂ ಜಿಲ್ಲಾಡಳಿತದಿಂದ ಅನುಮತಿ ಪಡೆದ ಕೆಲವೊಂದು ಖಾಸಗಿ ಏಜೆನ್ಸಿಗಳು ಹೊಸ ಆಧಾರ್‌ ಕಾರ್ಡ್‌ ಹಾಗೂ ಆಧಾರ್‌ ತಿದ್ದುಪಡಿ ಮಾಡುವುದಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಆ ಸಮಯದಲ್ಲಿ ಹಳ್ಳಿಗಾಡಿನ ಜನರು ಸುಲಭವಾಗಿ ತಮ್ಮ ವಾಸಸ್ಥಳದ ದೃಢೀಕರಣ ಪತ್ರ ಸೇರಿದಂತೆ ಇನ್ನಿತರ ದಾಖಲಾತಿಗಳನ್ನು ನೀಡಿ ಸುಲಭವಾಗಿ ಹೊಸ ಕಾರ್ಡ್‌ ಮತ್ತು ಅದರಲ್ಲಿನ ತಿದ್ದುಪಡಿಯನ್ನು ಮಾಡಿಸಿಕೊಳ್ಳುತ್ತಿದ್ದರು. ಇದು ಒಂದು ರೀತಿಯಲ್ಲಿ ಜನರಿಗೆ ಅನುಕೂಲವಾಗಿತ್ತು.

ಪ್ರಾಧಾನ್ಯತೆ ನೀಡುತ್ತಿಲ್ಲ: ಇದೀಗ ಹೊಸದಾಗಿ ಆಧಾರ್‌ ಕಾರ್ಡ್‌ ಮಾಡುವುದು ಹಾಗೂ ತಿದ್ದುಪಡಿ ಮಾಡುವ ಜವಾಬ್ದಾರಿಯನ್ನು ಖಾಸಗಿ ಏಜೆನ್ಸಿಗಳಿಂದ ಹಿಂಪಡೆದು ಬ್ಯಾಂಕುಗಳಿಗೆ ಮಾತ್ರ ವಹಿಸಲಾಗಿದೆ. ಬ್ಯಾಂಕಿನವರು ಆಧಾರ್‌ ಕಾರ್ಡ್‌ ಮಾಡುವ ಪ್ರಕ್ರಿಯೆಗೆ ಅಷ್ಟೊಂದು ಪ್ರಾಧಾನ್ಯತೆ ನೀಡುತ್ತಿಲ್ಲ. ಬ್ಯಾಂಕಿನ ಕೆಲಸ ಕಾರ್ಯಗಳೇ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹಲವು ಬ್ಯಾಂಕುಗಳು ಆಧಾರ್‌ ಕಾರ್ಡ್‌, ತಿದ್ದುಪಡಿ ಮಾಡಲಾಗುವುದಿಲ್ಲವೆಂದು ನೇರವಾಗಿ ಹೇಳಿ ವಾಪಸ್‌ ಕಳುಹಿಸುತ್ತಿದ್ದಾರೆ. ಕೆಲವೊಂದು ಬ್ಯಾಂಕುಗಳು ಸರ್ವರ್‌ ಸಿಗುತ್ತಿಲ್ಲವೆಂಬ ನೆಪ ಹೇಳಿ ಗ್ರಾಮೀಣ ಜನರನ್ನು ಅಲೆಯುವಂತೆ ಮಾಡುತ್ತಿದ್ದಾರೆ.

ಈಗ ಆಧಾರ್‌ ಕಾರ್ಡ್‌ ಪುಟ್ಟ ಮಕ್ಕಳಿಂದ ಆರಂಭವಾಗಿ ದೊಡ್ಡವರವರೆಗೂ ಅವಶ್ಯಕವಾಗಿ ಬೇಕಿದೆ. ಅದಕ್ಕಾಗಿ ಎಲ್ಲರೂ ಬ್ಯಾಂಕುಗಳಿಗೆ ಎಡತಾಕುತ್ತಿದ್ದಾರೆ. ಬ್ಯಾಂಕುಗಳನ್ನು ಹೊರತುಪಡಿಸಿ ಮತ್ತೆಲ್ಲಿಯೂ ಆಧಾರ್‌ ಕಾರ್ಡ್‌ ಹಾಗೂ ತಿದ್ದುಪಡಿಗೆ ಅವಕಾಶ ಮಾಡಿಕೊಟ್ಟಿಲ್ಲ. ಇದರಿಂದ ನಿತ್ಯವೂ ಬ್ಯಾಂಕುಗಳೆದುರು ಗಂಟೆಗಟ್ಟಲೆ ಕಾದು ಕೂರುವುದು ಸಾಮಾನ್ಯವಾಗಿದೆ.

ಗ್ರಾಮ ಪಂಚಾಯಿತಿ ಕೇಂದ್ರಗಳ ಬೇಜವಾಬ್ದಾರಿ ತನದಿಂದಾಗಿ ಗ್ರಾಮೀಣ ಜನತೆ ತೊಂದರೆ ಎದುರಿಸುತ್ತಿದ್ದಾರೆ. ಆಧಾರ್‌ ಕೇಂದ್ರ ಆರಂಭಿಸುವ ಸತ್ಯವನ್ನು ಮರೆ ಮಾಚಿ ಕೇವಲ ಪಂಚಾಯಿತಿ ಕೆಲಸಗಳಿಗಷ್ಟೇ ತಮ್ಮ ಕಾರ್ಯ ಸೀಮಿತಗೊಳಿಸಿ ಕೊಂಡು ಗ್ರಾಮ ಪಂಚಾಯಿತಿಗಳು ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ ನಡೆಸಿವೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಮಳವಳ್ಳಿ: ತಾಲೂಕು ಮಡಿವಾಳ ಮಾಚಿದೇವರ ಸಂಘದ ವತಿಯಿಂದ ಮಡಿವಾಳ ಮಾಚಿದೇವರ ಜಯಂತ್ಯುತ್ಸವ ಕಾರ್ಯಕ್ರಮವು ಫೆ.25ರಂದು ಬೆಳಗ್ಗೆ 10 ಗಂಟೆಗೆ ಪಟ್ಟಣದ ಅಂಬೇಡ್ಕರ್‌ ಭವನದಲ್ಲಿ...

  • ಮೇಲುಕೋಟೆ: ಇಲ್ಲಿನ ಶ್ರೀ ಚೆಲುವನಾರಾಯಣ ಸ್ವಾಮಿ ವಾಹನೋತ್ಸವ ಮಂಟಪದಲ್ಲಿ ಕಸದರಾಶಿ ತುಂಬಿದ್ದು, ಭಾರತ ಸರ್ಕಾರದ ಸ್ವಚ್ಛಭಾರತ್‌, ಮುಜರಾಯಿ ಇಲಾಖೆಯ ಸ್ವಚ್ಛದೇಗುಲ...

  • ಮಂಡ್ಯ: ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಜಿಲ್ಲೆಯ ಎಲ್ಲಾ ಶಿವಾಲಯಗಳಲ್ಲಿ ವಿಶೇಷ ಪೂಜೆ, ಅಭಿಷೇಕ, ರುದ್ರಾಭಿಷೇಕ, ಹೋಮ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಶ್ರದ್ಧಾ ಭಕ್ತಿಯಿಂದ...

  • ಮಂಡ್ಯ: ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ನಡೆದ ಉಗ್ರರ ದಾಳಿಯಲ್ಲಿ ವೀರಮರಣವನ್ನಪ್ಪಿದ ಮದ್ದೂರು ತಾಲೂಕಿನ ಗುಡಿಗೆರೆ ಗ್ರಾಮದ ಹೆಚ್‌. ಗುರು...

  • ಮೇಲುಕೋಟೆ: ವಿಭಿನ್ನ ಸಂಸ್ಕೃತಿ, ಭಾಷೆ, ಆಚಾರ-ವಿಚಾರ, ಉಡುಗೆ-ತೊಡುಗೆ ಹೊಂದಿರುವ ಭಾರತದ ಯುವಜನರಲ್ಲಿ ರಾಷ್ಟ್ರೀಯ ಭಾವೈಕ್ಯತೆ ಮೂಡಿಸುವ ಉದ್ದೇಶದಿಂದ ಏಕ್‌ ಭಾರತ್‌...

ಹೊಸ ಸೇರ್ಪಡೆ

  • ಅಮೆರಿಕ ವಿಶ್ವದ ಶ್ರೀಮಂತ, ಬಲಿಷ್ಠ, ಭವ್ಯ ರಾಷ್ಟ್ರ. ಇದೀಗ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಫೆ. 24 ಮತ್ತು 25 ರಂದು ಭಾರತದ ಪ್ರವಾಸ ಕೈಗೊಳ್ಳಲಿದ್ದಾರೆ....

  • ಕುಂಬಳೆ: ಕಾಸರಗೋಡು ಜಿಲ್ಲೆಯ ಪುತ್ತಿಗೆ ಗ್ರಾಮ ಪಂಚಾಯತಿನ ಬಾಡೂರು ಹೊಸಗದ್ದೆ ಮನೆಯ ದೀಲಿಪ್‌ ಕುಮಾರ್‌ ವತ್ಸಲಾ ದಂಪತಿ ಪುತ್ರ ಹೃದಯ್‌ ಹುಟ್ಟಿನಿಂದಲೇ ತೀವ್ರತರವಾದ...

  • ಮಂಗಳೂರು/ಉಡುಪಿ: ರಾಜ್ಯಾದ್ಯಂತ ಎ. 26ರಂದು ನಡೆಯಲಿರುವ "ಸಪ್ತಪದಿ' ಸಾಮೂಹಿಕ ಸರಳ ವಿವಾಹ ಯೋಜನೆಯನ್ನು ಬಡವರಿಗಾಗಿ ರೂಪಿಸಿದ್ದರೂ ಶ್ರೀಮಂತರು ಕೂಡ ಇಲ್ಲಿ ಸರಳ ವಿವಾಹವಾಗುವ...

  • ಜಮ್ಮು: ಕರ್ನಾಟಕ ತಂಡ ರಣಜಿ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಪರಿಸ್ಥಿತಿಯ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತಲ್ಲದೆ ಅನನುಭವಿ ತಂಡವೊಂದರ ವಿರುದ್ಧ ಹಿನ್ನಡೆ...

  • ಜಾಗತಿಕ ತಾಪಮಾನ ಏರಿಕೆ 2050ರ ವೇಳೆಗೆ ಭಾರತದ ಜಿಡಿಪಿ ಬೆಳವಣಿ ಗೆಯ ಮೇಲೆ ಸಾಕಷ್ಟು ಪ್ರತಿಕೂಲ ಪರಿಣಾಮಗಳನ್ನು ಬೀರಲಿದೆ ಎಂದು ಮೆಕಿನ್ಸೆ ಗ್ಲೋಬಲ್‌ ಇನ್‌ಸ್ಟಿಟ್ಯೂಟ್‌...