ಕುಡಿಯುವ ನೀರಿಗೂ ಗ್ರಾಮೀಣರ ಪರದಾಟ

ವಿದ್ಯುತ್‌ ಸಮಸ್ಯೆಯಿಂದ ಸರಬರಾಜಾಗದ ನೀರು, ತಾಲೂಕು ಆಡಳಿತದ ವಿರುದ್ಧ ಗ್ರಾಮೀಣರ ಆಕ್ರೋಶ

Team Udayavani, Apr 7, 2021, 1:30 PM IST

ಕುಡಿಯುವ ನೀರಿಗೂ ಗ್ರಾಮೀಣರ ಪರದಾಟ

ಮದ್ದೂರು: ಬಿಸಿಲಿನ ತಾಪ ಹೆಚ್ಚಾದಂತೆ ತಾಲೂಕಿನಾದ್ಯಂತ ಕುಡಿವ ನೀರಿನ ಸಮಸ್ಯೆ ತಲೆದೋರಿದ್ದು ಜಿಲ್ಲಾಹಾಗೂ ತಾಲೂಕು ಆಡಳಿತ ಅಗತ್ಯ ಕ್ರಮ ವಹಿಸಲು ಮುಂದಾಗಬೇಕಿದೆ.

ಅನಿವಾರ್ಯತೆ: ತಾಲೂಕಿನಾದ್ಯಂತ ಕುಡಿಯುವನೀರಿನ ಸಮಸ್ಯೆ ತೀವ್ರಗೊಂಡಿದ್ದು ಜನ ಜಾನುವಾರುಗಳಿಗೂ ನೀರಿಲ್ಲದ ಪರಿಸ್ಥಿತಿಯಿದೆ. ಸ್ಥಳೀಯಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳುಸಮರ್ಪಕ ನೀರು ಪೂರೈಕೆಗೆ ಯುಧ್ದೋಪಾದಿಯಲ್ಲಿಕ್ರಮವಹಿಸಬೇಕಾದ ಅನಿವಾರ್ಯತೆ ಬಂದೊದಗಿದೆ.

ತಾಲೂಕಿನ ಆತಗೂರು ಹೋಬಳಿ ಮಲ್ಲನಕುಪ್ಪೆ ಗ್ರಾಪಂವ್ಯಾಪ್ತಿಯ ಮಲ್ಲನಾಯಕನಹಳ್ಳಿ,ಕುಂದನಕುಪ್ಪೆ, ಸಿದ್ದೇ ಗೌಡನ ದೊಡ್ಡಿ, ದುಂಡನಹಳ್ಳಿ, ನವಿಲೆ, ಅರಕನಹಳ್ಳಿ, ಛತ್ರಲಿಂಗನದೊಡ್ಡಿ, ಹೂತಗೆರೆ, ಕೆ.ಹೊನ್ನಲಗೆರೆ,ಕೂಳಗೆರೆ ಗ್ರಾಪಂ ವ್ಯಾಪ್ತಿಯ ಗ್ರಾಮಗಳೂ ಸೇರಿನಾಗಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೊಪ್ಪ,ಕೌಡ್ಲೆ, ಬಿದರಕೋಟೆ ಇನ್ನಿತರೆ ಗ್ರಾಮಗಳಲ್ಲಿಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು ಸ್ಥಳೀಯನಿವಾಸಿಗಳು ಪ್ರತಿನಿತ್ಯ ಪರದಾಡುವ ಸ್ಥಿತಿ ಬಂದೊದಗಿದೆ.

ಆದ್ಯತೆ ನೀಡಿ: ಅನಿಯಮಿತ ವಿದ್ಯುತ್‌ ಸರಬರಾಜು,ಅಂತರ್ಜಲ ಕುಸಿತ ಮತ್ತು ಸೂಕ್ತ ನಿರ್ವಹಣೆ ಇಲ್ಲದಕಾರಣ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನಸಮಸ್ಯೆ ತಲೆದೋರಿದೆ. ಅಲ್ಲದೇ, ಈಗಷ್ಟೇ ಗ್ರಾಪಂಚುನಾವಣೆಗಳಲ್ಲಿ ಸ್ಪರ್ಧಿಸಿ ಅಧಿಕಾರದ ಗದ್ದುಗೆಹಿಡಿದಿರುವ ಚುನಾಯಿತ ಪ್ರತಿನಿಧಿಗಳು ಸಮರ್ಪಕನೀರು ಪೂರೈಕೆಗೆ ಆದ್ಯತೆ ನೀಡಬೇಕಾಗಿದೆ.

ಹಲವು ಗ್ರಾಮಗಳಲ್ಲಿ ಶುದ್ಧ ನೀರನ್ನು ಪೂರೈಕೆಮಾಡುವ ಸದುದ್ದೇಶದಿಂದ ಘಟಕಗಳನ್ನು ನಿರ್ಮಿಸಿದ್ದು ಕೆಲ ಗ್ರಾಮಗಳಲ್ಲಿ ದುರಸ್ಥಿಯಲ್ಲಿರುವಕಾರಣ ಘಟಕಗಳು ಅದ್ವಾನಗೊಂಡಿವೆ. ಇದರಿಂದಾಗಿ ಶುದ್ಧನೀರು ಸ್ಥಳೀಯರಿಗೆ ಸಿಗದಂತಾಗಿದ್ದು ಸಂಬಂಧಿಸಿದಅಧಿಕಾರಿಗಳು ದುರಸ್ಥಿಗೊಳಿಸುವ ಕಾರ್ಯಕ್ಕೆ ಮುಂದಾಗದೆ ಮೌನಕ್ಕೆ ಶರಣಾಗಿದ್ದಾರೆ.

ಕಂಗಾಲು: ತಾಲೂಕಿನಾದ್ಯಂತ ಈ ಹಿಂದೆ ಕುಡಿವನೀರಿಗಾಗಿ ಕೊರೆಸಿದ್ದ ಕೊಳವೆ ಬಾವಿಗಳು ಅಂತರ್ಜಲ ಕೊರತೆಯಿಂದಾಗಿ ಬರಿದಾಗಿದ್ದು ತೇವಾಂಶವೂಇಲ್ಲದಷ್ಟು ನೀರಿನ ಭವಣೆ ದುಪ್ಪಟ್ಟಾಗಿದೆ.ಅಧಿಕಾರಿಗಳು ಅಗತ್ಯವಿರುವ ಕಡೆ ಕೊಳವೆ ಬಾವಿಕೊರೆಸಿ ಕ್ರಮವಹಿಸಿದ್ದರೂ ಕೆಲ ಗ್ರಾಮಗಳಲ್ಲಿ 700ರಿಂದ 800 ಅಡಿವರೆಗೆ ಕೊರೆಸಿದರೂ ನೀರು ಬಾರದಹಿನ್ನೆಲೆ ಸ್ಥಳೀಯರು ಕಂಗಾಲಾಗಿದ್ದಾರೆ.

ಅಂತರ್ಜಲ ವೃದ್ಧಿಗೆ ಮುಂದಾಗಿ: ದೇಶಹಳ್ಳಿ ಕೆರೆಯಿಂದ ಪ್ರತಿ ಮನೆಗಳಿಗೆ ನೀರು ಪೂರೈಕೆ ಮಾಡುವ ಸದುದ್ದೇಶದಿಂದ ಶಾಸಕ ಡಿ.ಸಿ. ತಮ್ಮಣ್ಣ 45 ಕೋಟಿ ರೂ.ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋ ಜನೆ ಕೈಗೊಂಡಿದ್ದು ಹಾಗೂ ಬನ್ನಹಳ್ಳಿ ಏತ ನೀರಾವರಿ ಪುನಶ್ಚೇತನಗೊಳಿಸಿ ನೂರಾರು ಗ್ರಾಮಗಳಿಗೆ ನೀರುಪೂರೈಕೆ ಮಾಡಲು ಅಗತ್ಯ ಯೋಜನೆ ರೂಪಿಸಿದ್ದಾರೆ. ಟಾಸ್ಕ್ ಪೋರ್ಸ್‌ ಸಮಿತಿ ಅಧ್ಯಕ್ಷರಾಗಿರುವ ಶಾಸಕಡಿ.ಸಿ.ತಮ್ಮಣ್ಣ ಆತಗೂರು ಹೋಬಳಿ ವ್ಯಾಪ್ತಿಯಲ್ಲಿ ಕುಡಿವ ನೀರಿನ ಸಮಸ್ಯೆ ನೀಗಿಸಲು ಈಗಾಗಲೇ ಕೋಟ್ಯಂತರ ರೂ. ವೆಚ್ಚದಲ್ಲಿ ಕೆರೆಗಳಿಗೆ ನೀರು ತುಂಬಿ ಸುವ ಕಾರ್ಯಕ್ಕೆ ಮುಂದಾ ಗಿದ್ದಾರೆ. ಜತೆಗೆ ಕೊಳವೆ ಬಾವಿಗಳ ಅಂತರ್ಜಲವೃದ್ಧಿಗೆ ಮುಂದಾಗಿರುವುದು ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ.

ತಾಲೂಕುಮಟ್ಟದ ಅಧಿಕಾರಿಗಳ ಸಭೆ ನಡೆಸಿ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಉಂಟಾಗದಂತೆ ಮುನ್ನೆಚ್ಚರಿಕೆ ಕ್ರಮ ಅನುಸರಿಸಿ ಸಿದ್ಧತೆಕೈಗೊಂಡು ನೀರಿನ ಬವಣೆ ನೀಗಿಸಿ ಅಗತ್ಯವಿರುವೆಡೆ ಕೊಳವೆ ಬಾವಿ ಕೊರೆಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ನಾಗಮಂಗಲ ವಿಧಾನಸಭಾ ಕ್ಷೇತ್ರದ ಕೊಪ್ಪ ಜಿಪಂ ವ್ಯಾಪ್ತಿಯ ಗ್ರಾಮಗಳಿಗೆ ಸಮ ರ್ಪಕವಾಗಿ ನೀರು ಪೂರೈಕೆ ಮಾಡುವ ಹಿನ್ನೆಲೆಯಲ್ಲಿ 45 ಕೋಟಿ ರೂ.ವೆಚ್ಚದಲ್ಲಿ ಕೊಪ್ಪ ಕೆರೆಯಿಂದ ಪ್ರತಿ ಮನೆಗಳಿಗೆ ಶುದ್ಧಕುಡಿಯುವ ನೀರು ಪೂರೈಕೆ ಮಾಡುವ ಕಾಮಗಾರಿಪ್ರಗತಿ ಹಂತದಲ್ಲಿದ್ದು ಯೋಜನೆಯಿಂದಾಗಿ ಸ್ಥಳೀಯ ನಿವಾಸಿಗಳ ಬಹುದಿನದ ಕನಸು ಈಡೇರಲಿದೆ.

ಎಂಟು ಗ್ರಾಪಂನಲ್ಲಿ ಅಂತರ್ಜಲ ಕುಸಿತ :

ಖಾಸಗಿ ವ್ಯಕ್ತಿಗಳ ಪಂಪ್‌ಸೆಟ್‌ ಮೂಲಕ ಸ್ಥಳೀಯ ನಿವಾಸಿಗಳು ನೀರು ತರುವಪರಿಸ್ಥಿತಿಯಿದ್ದು ಸಮರ್ಪಕವಾಗಿ ವಿದ್ಯುತ್‌ ಪೂರೈಕೆ ಹಾಗೂ ಹಲವು ಗ್ರಾಮಗಳಲ್ಲಿ ಕೆಟ್ಟುನಿಂತ ಟ್ರಾನ್ಸ್‌ಫಾರ್ಮರ್‌ಗಳಿಂದ ನೀರಿಗೆ ತೊಂದರೆ ಉಂಟಾಗಿದೆ. ಪ್ರತಿನಿತ್ಯ ಸ್ಥಳೀಯ ನಿವಾಸಿಗಳು ದಿನನಿತ್ಯದಕಾರ್ಯಚಟುವಟಿಕೆಗಳನ್ನು ಬದಿಗೊತ್ತಿ ನೀರಿಗಾಗಿ ಕಾಯಬೇಕಾದ ಅನಿವಾರ್ಯತೆ ಎದುರಾಗಿದೆ.ತಾಲೂಕಿನ 42 ಗ್ರಾಪಂ ವ್ಯಾಪ್ತಿಯ 8 ಗ್ರಾಪಂಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದು ನೀರಿನ ಹಾಹಾಕಾರಉಂಟಾಗಿದೆ. ಸ್ಥಳೀಯ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಅಂತರ್ಜಲ ವೃದ್ಧಿಗೆ ಹತ್ತು ಹಲವು ಕಾರ್ಯ ಕೈಗೊಂಡಿದ್ದರೂ ಸಮಸ್ಯೆ ನೀಗಿಸದಿರುವುದು ವಿಪರ್ಯಾಸ.

ಕುಡಿಯುವ ನೀರಿನಸಮಸ್ಯೆ ನೀಗಿಸಲುಜಿಲ್ಲಾಧಿಕಾರಿಗಳಅಧ್ಯಕ್ಷತೆಯಲ್ಲಿಅಧಿಕಾರಿಗಳ ಸಭೆನಡೆಸಲಾಗಿದೆ. ಕೆಲಗ್ರಾಮಗಳಲ್ಲಿ ಖಾಸಗಿ ವ್ಯಕ್ತಿಗಳ ಬೋರ್‌ವೆಲ್‌,ಅಗತ್ಯವಿರುವೆಡೆ ಟ್ಯಾಂಕರ್‌ ಮೂಲಕ ನೀರುಪೂರೈಕೆ ಹಾಗೂ ಕೊಳವೆ ಬಾವಿಗಳಪುನಶ್ಚೇತನಕ್ಕೆ ಹೆಚ್ಚಿನ ಒತ್ತು ನೀಡುವಂತೆ ಪಿಡಿಒಗಳಿಗೆ ಸೂಚಿಸಲಾಗಿದೆ. ● ಎಚ್‌.ಬಿ.ವಿಜಯಕುಮಾರ್‌, ತಹಶೀಲ್ದಾರ್‌, ಮದ್ದೂರು

ಆತಗೂರುಹೋಬಳಿ ಹಾಗೂಕೊಕ್ಕರೆ ಬೆಳ್ಳೂರು ಗ್ರಾಪಂವ್ಯಾಪ್ತಿಯಲ್ಲಿ ಕುಡಿಯುವನೀರಿನ ಸಮಸ್ಯೆ ತಲೆದೋರಿದೆ. ಸರ್ಕಾರ,ಜಿಲ್ಲಾ ಹಾಗೂ ತಾಲೂಕು ಆಡಳಿತ ಹೆಚ್ಚಿನಅನುದಾನ ಬಿಡುಗಡೆಗೊಳಿಸಿ ಪ್ರತಿಗ್ರಾಮಗಳಿಗೂ ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು   ● ವಿ.ಎಸ್‌.ಪ್ರಭು, ವೈದ್ಯನಾಥಪುರ

 

ಎಸ್‌.ಪುಟ್ಟಸ್ವಾಮಿ

ಟಾಪ್ ನ್ಯೂಸ್

Pushpa 2: ದಾಖಲೆ ಬೆಲೆಗೆ ʼಪುಷ್ಪ-2ʼ ಡಿಜಿಟಲ್‌ ಹಕ್ಕನ್ನು ಖರೀದಿಸಿದ ನೆಟ್‌ಫ್ಲಿಕ್ಸ್

Pushpa 2: ದಾಖಲೆ ಬೆಲೆಗೆ ʼಪುಷ್ಪ-2ʼ ಡಿಜಿಟಲ್‌ ಹಕ್ಕನ್ನು ಖರೀದಿಸಿದ ನೆಟ್‌ಫ್ಲಿಕ್ಸ್

Rohit Sharma spoke about team selection for T20 World Cup

T20 WC; ‘ಎಲ್ಲವೂ ಸುಳ್ಳು…’: ತಂಡದ ಆಯ್ಕೆ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ರೋಹಿತ್ ಶರ್ಮಾ

EVM VVPAT case:  ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ

EVM VVPAT case:  ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ

kejriwal 2

Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ

Devon Conway ruled out of IPL 2024

CSK; ಐಪಿಎಲ್ ನಿಂದ ಹೊರಬಿದ್ದ ಕಾನ್ವೆ; ಚೆನ್ನೈ ಪಾಳಯಕ್ಕೆ ಇಂಗ್ಲೆಂಡ್ ವೇಗಿ ಸೇರ್ಪಡೆ

1—-wewewqe

Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ

raj k shilpa

ED; ರಾಜ್ ಕುಂದ್ರಾ ಅವರ 97 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya Lok Sabha Constituency; ಸ್ಟಾರ್‌ ಚಂದ್ರು ಪರ ಇಂದು ನಟ ದರ್ಶನ್‌ ಪ್ರಚಾರ

Mandya Lok Sabha Constituency; ಸ್ಟಾರ್‌ ಚಂದ್ರು ಪರ ಇಂದು ನಟ ದರ್ಶನ್‌ ಪ್ರಚಾರ

ಚುನಾವಣ ಬಾಂಡ್‌ ವಿಶ್ವದ ಅತಿದೊಡ್ಡ ಹಗರಣ: ರಾಹುಲ್‌

ಚುನಾವಣ ಬಾಂಡ್‌ ವಿಶ್ವದ ಅತಿದೊಡ್ಡ ಹಗರಣ: ರಾಹುಲ್‌

raLok Sabha Elections; ಜಾತಿ ಗಣತಿ ಬಗ್ಗೆ ಮೋದಿ ನಿಲುವೇನು?: ರಾಹುಲ್‌ ಗಾಂಧಿ

Lok Sabha Elections; ಜಾತಿ ಗಣತಿ ಬಗ್ಗೆ ಮೋದಿ ನಿಲುವೇನು?: ರಾಹುಲ್‌ ಗಾಂಧಿ

Lok Sabha Elections: ಎಚ್‌ಡಿಕೆ ಆಯ್ಕೆಯಾದರೆ ಕಾವೇರಿ ವಿವಾದಕ್ಕೆ ಪರಿಹಾರ: ಅಶೋಕ್‌

Lok Sabha Elections: ಎಚ್‌ಡಿಕೆ ಆಯ್ಕೆಯಾದರೆ ಕಾವೇರಿ ವಿವಾದಕ್ಕೆ ಪರಿಹಾರ: ಅಶೋಕ್‌

ಡಿಕೆಶಿಗೆ ಸಿದ್ದರಾಮಯ್ಯ ಏಕೆ ಸಿಎಂ ಸ್ಥಾನ ಬಿಟ್ಟುಕೊಡಲಿಲ್ಲ: ಪ್ರತಾಪಸಿಂಹ ಪ್ರಶ್ನೆ

ಡಿಕೆಶಿಗೆ ಸಿದ್ದರಾಮಯ್ಯ ಏಕೆ ಸಿಎಂ ಸ್ಥಾನ ಬಿಟ್ಟುಕೊಡಲಿಲ್ಲ: ಪ್ರತಾಪಸಿಂಹ ಪ್ರಶ್ನೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

14

UV Fusion: ಅವನೊಂದಿಗೆ ನಡೆವಾಸೆ

13-fusion

UV Fusion: ಏರಿಯಾ 51

Pushpa 2: ದಾಖಲೆ ಬೆಲೆಗೆ ʼಪುಷ್ಪ-2ʼ ಡಿಜಿಟಲ್‌ ಹಕ್ಕನ್ನು ಖರೀದಿಸಿದ ನೆಟ್‌ಫ್ಲಿಕ್ಸ್

Pushpa 2: ದಾಖಲೆ ಬೆಲೆಗೆ ʼಪುಷ್ಪ-2ʼ ಡಿಜಿಟಲ್‌ ಹಕ್ಕನ್ನು ಖರೀದಿಸಿದ ನೆಟ್‌ಫ್ಲಿಕ್ಸ್

1-asasa

Delhi ; ಬಿಕಿನಿಯಲ್ಲೇ ಬಸ್ ಹತ್ತಿದ ಮಹಿಳೆ; ವಿಡಿಯೋ ವೈರಲ್

Rohit Sharma spoke about team selection for T20 World Cup

T20 WC; ‘ಎಲ್ಲವೂ ಸುಳ್ಳು…’: ತಂಡದ ಆಯ್ಕೆ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ರೋಹಿತ್ ಶರ್ಮಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.