Udayavni Special

ಸಾಮರ್ಥ್ಯ ಸೌಧ ಸೇವೆಯಿಂದ ದೂರ

ಭೂತ ಬಂಗಲೆಯಂತಾದ ಕಟ್ಟಡ • ಅಗತ್ಯ ಕಾಯಕಲ್ಪಕ್ಕೆ ಇಚ್ಛಾಶಕ್ತಿ ಕೊರತೆ

Team Udayavani, Jul 8, 2019, 1:02 PM IST

mandya-tdy-1..

ಮದ್ದೂರು ಪಟ್ಟಣದಲ್ಲಿ ನಿರ್ಮಿಸಿರುವ ಸಾಮರ್ಥ್ಯ ಸೌಧದ ಹೊರನೋಟ.

ಮದ್ದೂರು: ತಾಲೂಕು ಕೇಂದ್ರದಲ್ಲಿ ಬಹು ನಿರೀಕ್ಷೆಯೊಂದಿಗೆ ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಾಣ ಗೊಂಡ ಸಾಮರ್ಥ್ಯ ಸೌಧವು ಸದ್ಬಳಕೆಯಾಗದೆ ಸೇವೆಯಿಂದ ದೂರವೇ ಉಳಿದಿದೆ.

ಜಿಪಂ ಅನುದಾನದ 20 ಲಕ್ಷ ರೂ. ಗಳಿಗೂ ಅಧಿಕ ವೆಚ್ಚ ಬರಿಸಿ ಒಂದು ದಶಕಗಳ ಹಿಂದೆ ಹತ್ತು, ಹಲವು ನಿರೀಕ್ಷೆಗಳ ನಡುವೆ ತಲೆಎತ್ತಿದ ಸಾಮರ್ಥ್ಯಸೌಧ ಕಟ್ಟಡದಲ್ಲೀಗ ಯಾವುದೇ ಚಟುವಟಿಕೆಗಳು ಕಂಡು ಬರದೆ ಭೂತ ಬಂಗಲೆಯಂತಹ ಸ್ಥಿತಿ ನಿರ್ಮಾಣಗೊಂಡಿದೆ.

ಮದ್ದೂರು ಸೇರಿದಂತೆ ನಾಗಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿದ 27 ತಾಪಂ ಸದಸ್ಯರನ್ನು ಹೊಂದಿರುವ ಇಲ್ಲಿ ಸಾಮರ್ಥ್ಯ ಸೌಧದ ನಿಷ್ಕ್ರಿಯೆ ಕುರಿತಾಗಿ ಯಾವೊಬ್ಬ ಸದಸ್ಯರೂ ಇದುವರೆವಿಗೂ ಧನಿ ಎತ್ತದಿರುವುದು ಇಚ್ಚಾಶಕ್ತಿ ಕೊರತೆಯ ಉದಾಹರಣೆಯಾಗಿದೆ.

ಮೈಸೂರು, ಬೆಂಗಳೂರು ಹೆದ್ದಾರಿ ಬದಿಯ ತಾಲೂಕು ಕಚೇರಿ ಕೂಗಳತೆ ದೂರದಲ್ಲಿರುವ ಸೌಧ ಉದ್ಘಾಟನೆಗೊಂಡ ದಿನದಿಂದಲೂ ಈವರೆವಿಗೂ ಕಾರ್ಯ ಚಟುವಟಿಕೆಗಳ ಹೊರತಾಗಿದ್ದು ತಾಪಂ ಸಭೆ ವೇಳೆ ಆಗೊಮ್ಮೆ ಇಗೊಮ್ಮೆ ನಡೆಯುವ ಊಟೋಪಚಾರಕಷ್ಟೇ ಸೀಮಿತವಾಗಿರುವುದು ದುರಂತ

ಎಲ್ಲಾ ಸರಕಾರಿ ಕಟ್ಟಡಗಳಲ್ಲಿರುವಂತೆ ಈ ಕಟ್ಟಡಲ್ಲಿಯೂ ಚಿಕ್ಕದಾದ ಸಭಾಂಗಣ, ಪ್ರತ್ಯೇಕ ಮೂರು ಕೊಠಡಿಗಳು, ವಿಶಾಲವಾದ ಪಾರ್ಕಿಂಗ್‌ ವ್ಯವಸ್ಥೆ, ಶೌಚಾಲಯ, ನೀರು ಮತ್ತು ಕಟ್ಟಡದ ಸುತ್ತಲೂ ಅಗತ್ಯ ಕಾಂಪೌಂಡ್‌ ನಿರ್ಮಿಸಿದ್ದು ಇದುವರೆವಿಗೂ ಯಾವುದೇ ಪ್ರಕ್ರಿಯೆಗಳು ತಾಪಂ ಆಡಳಿತದ ವತಿಯಿಂದ ನಡೆದೇ ಇಲ್ಲ. ಕಾರ್ಯಚಟುವಟಿಕೆಗಳಿಂದ ಹೊರತಾಗಿರುವ ಸೌಧದ ನಿರ್ವಹಣೆ ಕೊರತೆ ಎದ್ದು ಕಾಣುತ್ತಿದ್ದು ಕಟ್ಟಡದ ಸುತ್ತೇಲ್ಲ ಗಿಡಗಂಟಿಗಳು ಬೆಳೆದಿದ್ದು, ತ್ಯಾಜ್ಯಗಳ ಶೇಖರಣೆಯಾಗುತ್ತಿದೆ. ಅಲ್ಲದೆ ಇಲ್ಲಿ ಅನೈತಿಕ ಚಟುವಟಿಕೆಗಳ ತಾಣವಾಗಿ ನಿರ್ಮಾಣವಾಗುತ್ತಿದೆ.

ಕೆಲವು ಸರಕಾರಿ ಕಚೇರಿಗಳು ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಖಾಸಗಿ ಕಟ್ಟಡಗಳಲ್ಲಿ ಮಾಸಿಕ ಬಾಡಿಗೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಅಂತಹ ಇಲಾಖೆಗಳಲ್ಲಿಯೂ ಸಾಮಾರ್ಥ್ಯ ಸೌಧಕ್ಕೆ ಸ್ಥಳಾಂತರಿಸಬಹುದಾದ ಅವಕಾಶವಿದ್ದಾಗ್ಯೂ ಕಂಡು ಕಾಣದಂತಿರುವ ಕ್ರಮ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಜಿಪಂ ಅಧಿಕಾರಿಗಳು, ಸ್ಥಳೀಯ ಜಿಪಂ ಸದಸ್ಯರು ಮದ್ದೂರು ತಾಪಂ ಸದಸ್ಯರು ಹಾಗೂ ಸ್ಥಳೀಯ ಚುನಾಯಿತ ಪ್ರತಿನಿಧಿಗಳ ನಿರ್ಲಕ್ಷ್ಯ ನಿರಂತರವಾಗಿ ಮುಂದುವರೆದಿದ್ದು ಸಾರ್ವಜನಿಕ ತೆರಿಗೆ ಹಣದಲ್ಲಿ ನಿರ್ಮಿಸಲ್ಪಟ್ಟ ಕಟ್ಟಡ ಮುಂದಿನ ದಿನಗಳಲ್ಲಾದರೂ ಸದುಪಯೋಗ ಆಗಬೇಕೆಂಬುದೇ ಸ್ಥಳೀಯರ ಅಭಿಪ್ರಾಯವಾಗಿದೆ.

 

● ಎಸ್‌.ಪುಟ್ಟಸ್ವಾಮಿ, ಮದ್ದೂರು

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

00

ಆರ್ ಸಿಬಿ ಬೊಂಬಾಟ್ ಬೌಲಿಂಗ್ ಗೆ ಕೆಕೆಆರ್ ಬ್ಯಾಟಿಂಗ್ ತತ್ತರ : 85 ರ ಸವಾಲು

ghorka

ಪ್ರಮುಖ ಬೆಳವಣಿಗೆ: ಎನ್ ಡಿಎ ಮೈತ್ರಿಕೂಟದಿಂದ ಹೊರಬಂದ ಗೂರ್ಖಾ ಜನಮುಕ್ತಿ ಮೋರ್ಚಾ

mandya

ಮಂಡ್ಯದಲ್ಲಿ 202 ಕೋವಿಡ್ ಹೊಸ ಪ್ರಕರಣ; 104 ಮಂದಿ ಚೇತರಿಕೆ

cricket

ಜಯದ ವಿಶ್ವಾಸದಲ್ಲಿ RCB-KKR: ಟಾಸ್ ಗೆದ್ದ ಮಾರ್ಗನ್ ಪಡೆ ಬ್ಯಾಟಿಂಗ್ ಆಯ್ಕೆ: ತಂಡ ಇಂತಿದೆ…

ಕಿಡಿಗೇಡಿಗಳಿಂದ ಅವಹೇಳನಕಾರಿ ಫ್ಲೆಕ್ಸ್ : ಕ್ರಮಕ್ಕೆ ಒತ್ತಾಯಿಸಿ ಪೊಲೀಸರಿಗೆ ದೂರು

ಕಿಡಿಗೇಡಿಗಳಿಂದ ಅವಹೇಳನಕಾರಿ ಫ್ಲೆಕ್ಸ್ : ಕ್ರಮಕ್ಕೆ ಒತ್ತಾಯಿಸಿ ಪೊಲೀಸರಿಗೆ ದೂರು

4 ಜಿಲ್ಲೆಗಳಿಗೆ ಸಿಎಂ ವೈಮಾನಿಕ ಸಮೀಕ್ಷೆ : ಹವಾಮಾನ ವೈಪರೀತ್ಯದಿಂದ ವಿಜಯಪುರ ಸಮೀಕ್ಷೆ ರದ್ದು

4 ಜಿಲ್ಲೆಗಳ ಸಿಎಂ ವೈಮಾನಿಕ ಸಮೀಕ್ಷೆ : ಹವಾಮಾನ ವೈಪರೀತ್ಯದಿಂದ ವಿಜಯಪುರ ಸಮೀಕ್ಷೆ ರದ್ದು

ವಿಜಯವಾಡ: ಆಂಧ್ರ ಸಿಎಂ ಜಗನ್ ಭೇಟಿಗೂ ಮುನ್ನ ಕನಕದುರ್ಗಾ ದೇವಾಲಯದ ಬಳಿ ಭೂ ಕುಸಿತ

ವಿಜಯವಾಡ: ಆಂಧ್ರ ಸಿಎಂ ಜಗನ್ ಭೇಟಿಗೂ ಮುನ್ನ ಕನಕದುರ್ಗಾ ದೇವಾಲಯದ ಬಳಿ ಭೂ ಕುಸಿತ





ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

mandya

ಮಂಡ್ಯದಲ್ಲಿ 202 ಕೋವಿಡ್ ಹೊಸ ಪ್ರಕರಣ; 104 ಮಂದಿ ಚೇತರಿಕೆ

mandya-tdy-2

ಗಣಿಗಾರಿಕೆ ಸ್ಥಗಿತಕ್ಕಾಗಿ ಪ್ರತಿಭಟನೆ

ಮಳವಳ್ಳಿ: ಎಟಿಎಂ ಕೇಂದ್ರಕ್ಕೆ ನುಗ್ಗಿ ದರೋಡೆ

ಮಳವಳ್ಳಿ: ಎಟಿಎಂ ಕೇಂದ್ರಕ್ಕೆ ನುಗ್ಗಿ ದರೋಡೆ

MANDYA-TDY-1

ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆ

mandya

ಅಂತರ್ಜಾತಿ ಮದುವೆಯಾದ ಯುವತಿ ನಿಗೂಢ ನಾಪತ್ತೆ: 5 ವರ್ಷದ ಬಳಿಕ ಪೋಷಕರಿಂದ ದೂರು ದಾಖಲು

MUST WATCH

udayavani youtube

ಮಲ್ಪೆ: ಬಲೆಗೆ ಬಿತ್ತು ಭಾರಿ ಗಾತ್ರದ ಎರಡು ಕೊಂಬು ತೊರಕೆ ಮೀನು

udayavani youtube

ಉಡುಪಿಯಲ್ಲಿ ಪ್ರಪ್ರಥಮ ಬಾರಿಗೆ ಪ್ರಾರಂಭವಾಗಿರುವ ದೇಶಿ ಉತ್ಪನ್ನಗಳ ಮಳಿಗೆ

udayavani youtube

ಸ್ವಾಮಿತ್ವ: ಹೊಸ ಯೋಜನೆಯಿಂದ ನಮಗೆ ಏನು ಲಾಭ ?

udayavani youtube

ಚಿಕ್ಕಮಗಳೂರು : ಪುಷ್ಪ ಸಮರ್ಪಣೆ ವೇಳೆ ಮಗಳನ್ನ ನೆನೆದು ಕಣ್ಣೀರಿಟ್ಟ ಮೃತ ಪೇದೆ ತಾಯಿ

udayavani youtube

ಮಂಗಳೂರು: ಡ್ರಗ್ಸ್ ಜಾಗೃತಿ ಬರಹದಿಂದ ಗಮನಸೆಳೆಯುತ್ತಿದೆ ಸಿಟಿ ಬಸ್



ಹೊಸ ಸೇರ್ಪಡೆ

00

ಆರ್ ಸಿಬಿ ಬೊಂಬಾಟ್ ಬೌಲಿಂಗ್ ಗೆ ಕೆಕೆಆರ್ ಬ್ಯಾಟಿಂಗ್ ತತ್ತರ : 85 ರ ಸವಾಲು

ghorka

ಪ್ರಮುಖ ಬೆಳವಣಿಗೆ: ಎನ್ ಡಿಎ ಮೈತ್ರಿಕೂಟದಿಂದ ಹೊರಬಂದ ಗೂರ್ಖಾ ಜನಮುಕ್ತಿ ಮೋರ್ಚಾ

avalu-tdy-2

ತೆಳ್ಳಗಾಗೋಕೆ ಸುಲಭದ ದಾರಿ ಯಾವುದು?

avalu-tdy-1

ಸೋಲಿಲ್ಲದೆ ಬಾಳುಂಟೇ?

mandya

ಮಂಡ್ಯದಲ್ಲಿ 202 ಕೋವಿಡ್ ಹೊಸ ಪ್ರಕರಣ; 104 ಮಂದಿ ಚೇತರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.