ಶೀಘ್ರದಲ್ಲೇ ನೀರಾವರಿ ಕಾಮಗಾರಿ ಪೂರ್ಣ


Team Udayavani, Jul 7, 2020, 5:52 AM IST

bharavase

ಮಂಡ್ಯ/ಮದ್ದೂರು: ಜಿಲ್ಲೆಯಲ್ಲಿ ಜಾರಿ ಹಂತದಲ್ಲಿರುವ 15 ನೀರಾವರಿ ಕಾಮಗಾರಿಗಳು ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ. ವಿಶ್ವೇಶ್ವರಯ್ಯ ನಾಲೆಯ ದುರಸ್ತಿ ಕಾರ್ಯಕ್ಕೆ ಕ್ರಮ ಕೈಗೊಳ್ಳಲಾ ಗುವುದು ಎಂದು ಡಿಸಿಎಂ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಭರವಸೆ ನೀಡಿದರು.  ಮಂಡ್ಯ ತಾಲೂಕಿನ ತೂಬಿನಕೆರೆ ಹೆಲಿಪ್ಯಾಡ್‌ ಆವರಣದಲ್ಲಿ ಕಾವೇರಿ ನೀರಾವರಿ ನಿಗಮದಿಂದ ಕೊತ್ತತ್ತಿ ಹೋಬಳಿಯ 28 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಹಾಗೂ 5 ಕೆರೆಗಳಿಗೆ  ನೀರು ತುಂಬಿಸುವ 18.5 ಕೋಟಿ ರೂ. ವೆಚ್ಚದ ಏತ ನೀರಾವರಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.

ಯೋಜನೆಗಳು ಕಾಲಮಿತಿಯೊಳಗೆ ಪೂರ್ಣ ಗೊಳಿಸಲಾಗುವುದು. ವ್ಯವಸಾಯ ಮತ್ತು ಗೃಹ ಬಳಕೆಗೆ ನೀರು ಕಲ್ಪಿಸುವುದು ಪ್ರತಿ  ಸರ್ಕಾರದ ಕರ್ತವ್ಯ. ಇದನ್ನು ಯಡಿಯೂರಪ್ಪ ಅವರ ಸರ್ಕಾರ ಅರ್ಥ ಮಾಡಿಕೊಂಡಿದೆ. ಮಂಡ್ಯ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದಟಛಿವಾಗಿದೆ. ಅದರಲ್ಲಿ ನೀರಾವರಿ ಯೋಜನೆಗೆ ಆದ್ಯತೆ ನೀಡಲಾಗುತ್ತಿದೆ ಎಂದರು.

ಯೋಜನೆ ಅತ್ಯಂತ ಉಪಯುಕ್ತ: ಈ ಯೋಜನೆಯನ್ನು ಜನರಿಗೆ ಅರ್ಪಿಸುತ್ತಿ ರುವುದು ಸಂತೋಷ ಉಂಟು ಮಾಡಿದೆ. ಕೆರೆಗಳಿಗೆ ನೀರು ತುಂಬಿಸುವ ಮೂಲಕ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ವೃದ್ಧಿಯಾಗಲಿದೆ.  ಎಲ್ಲೆಡೆ ಹಸಿರು ಮೂಡಿ ಜನ ಜಾನುವಾರುಗಳಿಗೆ ಅನುಕೂಲ ವಾಗುತ್ತದೆ. ಹೀಗಾಗಿ ಈ ಯೋಜನೆ ಅತ್ಯಂತ ಉಪಯುಕ್ತ. ಲೋಕಪಾವನಿ ನದಿಯಿಂದ ಎಲೆಚಾಕನಹಳ್ಳಿ, ರಾಗಿಮುದ್ದನಹಳ್ಳಿ, ಕಾಳೇನಹಳ್ಳಿ, ಉರಮಾರಕಸಲಗೆರೆ,  ಜಕ್ಕನಹಳ್ಳಿ, ಅಲಗೂಡು ಕೆರೆಗಳಿಗೆ ಇವತ್ತು ನೀರು ತುಂಬಿಸುವ ಮಹತ್ಕಾರ್ಯಕ್ಕೆ ಚಾಲನೆ ನೀಡಿದ್ದೇನೆ ಎಂದು ಹೇಳಿದರು.

ಮೊದಲ ಅಭಿವೃದ್ಧಿ ಕಾರ್ಯಕ್ರಮ: ಬಿಜೆಪಿ ಸರ್ಕಾರ ಬಂದ ಮೇಲೆ ಜಿಲ್ಲೆಯಲ್ಲಿ ನಡೆಯುತ್ತಿರುವ ಮೊದಲ ಅಭಿವೃದ್ಧಿ ಕಾರ್ಯಕ್ರಮ ಇದಾಗಿದೆ. ಜಿಲ್ಲೆಯ ಅಭಿವೃದ್ಧಿ ಪರ್ವ ಆರಂಭವಾಗಿದೆ. ಹಿಂದಿನ ಡೀಸಿ ಮಂಜುಶ್ರೀ ಶ್ರಮ ವಹಿಸಿ ಭೂ  ಸ್ವಾಧೀನ ಮತ್ತಿತರೆ ಕೆಲಸಗಳನ್ನು ಮಾಡಿದ್ದಾರೆ. ಅವರನ್ನು ನಾವಿಲ್ಲಿ ಸ್ಮರಿಸಲೇಬೇಕು ಎಂದರು.

ಕೋವಿಡ್‌ 19 ಸಮಸ್ಯೆ ಇಲ್ಲ: ಸೋಂಕಿತರ ಚಿಕಿತ್ಸೆಗಾಗಿ ಎಲ್ಲ ವ್ಯವಸ್ಥೆಗಳನ್ನು ಸರ್ಕಾರ ಮಾಡಿದೆ. ಅಗತ್ಯ ಬೆಡ್‌ಗಳು ಲಭ್ಯವಿದ್ದು, ಸೂಕ್ತ ಔಷಧ ಸಿಗುತ್ತಿದೆ. ಪರೀಕ್ಷಾ ಕೇಂದ್ರಗಳು, ವೈದ್ಯರು, ನರ್ಸ್‌ಗಳು ಕೊರತೆ ಇಲ್ಲ. ಯಾರೂ ಆತಂಕಪಡಬಾರದು ಎಂದು ಹೇಳಿದರು.  ಸಚಿವ ಡಾ.ಕೆ.ಸಿ.ನಾರಾಯಣಗೌಡ, ಶಾಸಕ ರವೀಂದ್ರ ಶ್ರೀಕಂಠಯ್ಯ, ಪರಿಷತ್‌ ಸದಸ್ಯರಾದ ಕೆ.ಟಿ.ಶ್ರೀಕಂಠೇಗೌಡ, ಅಪ್ಪಾಜಿಗೌಡ, ಜಿಪಂ ಸದಸ್ಯ ರಾಮಲಿಂಗಯ್ಯ, ತೂಬಿನಕೆರೆ ಗ್ರಾಪಂ ಅಧ್ಯಕ್ಷ  ಅಶೋಕಗೌಡ ಪಾಟೀಲ, ಡೀಸಿ ಡಾ.ಎಂ.ವಿ.ವೆಂಕಟೇಶ್‌, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಶೋಭಾರಾಣಿ, ಕಾವೇರಿ ನೀರಾವರಿ ನಿಗಮದ ಮುಖ್ಯ ಅಭಿಯಂತರ ಶಂಕರೇಗೌಡ ಹಾಜರಿದ್ದರು.

ಟಾಪ್ ನ್ಯೂಸ್

ಕೋವಿಡ್19: ನಮ್ಮ ದೇಶ ಕರ್ತವ್ಯ ಪಾಲಿಸಿದೆ, ಭಾರತೀಯರಲ್ಲಿ ಹೊಸ ಭರವಸೆ ಮೂಡಿಸಿದೆ: ಮೋದಿ

ಕೋವಿಡ್19: ನಮ್ಮ ದೇಶ ಕರ್ತವ್ಯ ಪಾಲಿಸಿದೆ, ಭಾರತೀಯರಲ್ಲಿ ಹೊಸ ಭರವಸೆ ಮೂಡಿಸಿದೆ: ಮೋದಿ

ಐಪಿಎಲ್‌ ಪ್ರಸಾರಕ್ಕೆ 36,000 ಕೋಟಿ ಮೌಲ್ಯ! ಇತಿಹಾಸದಲ್ಲೇ ಗರಿಷ್ಠ ಮೊತ್ತ ಸಿಗುವ ನಿರೀಕ್ಷೆ

ಐಪಿಎಲ್‌ ಪ್ರಸಾರಕ್ಕೆ 36,000 ಕೋಟಿ ಮೌಲ್ಯ! ಇತಿಹಾಸದಲ್ಲೇ ಗರಿಷ್ಠ ಮೊತ್ತ ಸಿಗುವ ನಿರೀಕ್ಷೆ

siddaramaiah

ಯಾವ ಸಾಧನೆಗೆ 100 ಕೋಟಿ ಲಸಿಕೆ ಸಂಭ್ರಮ? ‘ವೈಫಲ್ಯದ ವಿಶ್ವಗುರು’ ಕುಖ್ಯಾತಿಗಾಗಿಯೇ?

ಮೈಸೂರಿನಲ್ಲಿ ಜೋಡಿ ಕೊಲೆ: ಮಗನಿಂದಲೇ ತಂದೆ, ತಂದೆಯ ಪ್ರೇಯಸಿಯ ಬರ್ಬರ ಕೊಲೆ

ಮೈಸೂರಿನಲ್ಲಿ ಜೋಡಿ ಕೊಲೆ: ಮಗನಿಂದಲೇ ತಂದೆ, ತಂದೆಯ ಪ್ರೇಯಸಿಯ ಬರ್ಬರ ಕೊಲೆ

ಟಿ20 ವಿಶ್ವಕಪ್‌ ಕ್ರಿಕೆಟ್‌: ಸೂಪರ್‌-12 ಹಂತಕ್ಕೆ ನೆಗೆದ ಲಂಕಾ, ಬಾಂಗ್ಲಾ

ಟಿ20 ವಿಶ್ವಕಪ್‌ ಕ್ರಿಕೆಟ್‌: ಸೂಪರ್‌-12 ಹಂತಕ್ಕೆ ನೆಗೆದ ಲಂಕಾ, ಬಾಂಗ್ಲಾ

PM Narendra Modi to address nation at 10 am today

ಬೆಳಗ್ಗೆ 10 ಗಂಟೆಗೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ಪ್ರಧಾನಿ ಮೋದಿ

rwytju11111111111

ಶುಕ್ರವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12

ಫಸಲ್‌ ಬಿಮಾ ಯೋಜನೆ ಅನುಷ್ಠಾನ

4 feet of KRS filling

ಕೆಆರ್‌ಎಸ್‌ ಭರ್ತಿಗೆ 4 ಅಡಿ ಬಾಕಿ

Untitled-1

ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ವಾಹನ ಢಿಕ್ಕಿ: ಯುವಕ ಸಾವು

madya news

ಪ್ರವಾಸಿ ತಾಣಗಳಿಗೆ ಹರಿದು ಬಂದ ಜನಸಾಗರ

ಸರಕಾರಿ ಆಸ್ತಿ ಉಳಿಸದ ಅಧಿಕಾರಿ ವಿರುದ್ದ ಕ್ರಿಮಿನಲ್ ಮೊಕದ್ದಮೆ : ಶಾಸಕ ಎಚ್ಚರಿಕೆ

ಸರಕಾರಿ ಆಸ್ತಿ ಸಂರಕ್ಷಿಸದ ಅಧಿಕಾರಿ ವಿರುದ್ದ ಕ್ರಿಮಿನಲ್ ಮೊಕದ್ದಮೆ : ಶಾಸಕ ಎಚ್ಚರಿಕೆ

MUST WATCH

udayavani youtube

Video Viral : ಜಾನಪದ ಶೈಲಿಯ ಹಾಡಿನ ಮೂಲಕ ಒಡ್ಡೋಲಗದ ಆಮಂತ್ರಣ

udayavani youtube

ದುಬಾರಿ ಗಿಫ್ಟ್ ಗಳನ್ನು ಮಾರಿ ತಿಂದರೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ?

udayavani youtube

Brazilian Golden Spoon Cherry ಸುಲಭವಾಗಿ ಬೆಳೆಸಿ ಕೈತುಂಬಾ ಸಂಪಾದಿಸಿ

udayavani youtube

ಶ್ರೀರಂಗಪಟ್ಟಣ ಬಾರಿ ಮಳೆಗೆ ಕೊಚ್ಚಿ ಹೋದ ರೈತರ ಬದುಕು

udayavani youtube

ಅಬ್ಬಾ ಬದುಕಿದೆ ಬಡ ಜೀವ ! ಚಿರತೆ ಬಾಯಿಯಿಂದ ತಪ್ಪಿಸಿಕೊಂಡ ಶ್ವಾನದ ಕಥೆ

ಹೊಸ ಸೇರ್ಪಡೆ

4

200 ಕೋಟಿ ವೆಚ್ಚದಲ್ಲಿ ಕಲಾಗ್ರಾಮ ಸ್ಥಾಪನೆ ಯೋಜನೆ

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರಿಂದ ಪ್ರಶಸ್ತಿ ಪ್ರದಾನ

ಟಿವಿಎಸ್‌ ಮೋಟಾರ್ಸ್‌ಗೆ ಗ್ರೀನ್‌ ಎನರ್ಜಿ ಅವಾರ್ಡ್‌

ಕೋವಿಡ್19: ನಮ್ಮ ದೇಶ ಕರ್ತವ್ಯ ಪಾಲಿಸಿದೆ, ಭಾರತೀಯರಲ್ಲಿ ಹೊಸ ಭರವಸೆ ಮೂಡಿಸಿದೆ: ಮೋದಿ

ಕೋವಿಡ್19: ನಮ್ಮ ದೇಶ ಕರ್ತವ್ಯ ಪಾಲಿಸಿದೆ, ಭಾರತೀಯರಲ್ಲಿ ಹೊಸ ಭರವಸೆ ಮೂಡಿಸಿದೆ: ಮೋದಿ

3

ಪ್ರಚಾರದ ಗೀಳಿನಿಂದ ರಾಹುಲ್‌ ಬಗ್ಗೆ ಕಟೀಲ್‌ ಹೇಳಿಕೆ

ಐಪಿಎಲ್‌ ಪ್ರಸಾರಕ್ಕೆ 36,000 ಕೋಟಿ ಮೌಲ್ಯ! ಇತಿಹಾಸದಲ್ಲೇ ಗರಿಷ್ಠ ಮೊತ್ತ ಸಿಗುವ ನಿರೀಕ್ಷೆ

ಐಪಿಎಲ್‌ ಪ್ರಸಾರಕ್ಕೆ 36,000 ಕೋಟಿ ಮೌಲ್ಯ! ಇತಿಹಾಸದಲ್ಲೇ ಗರಿಷ್ಠ ಮೊತ್ತ ಸಿಗುವ ನಿರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.