Udayavni Special

ಶ್ರೀ ಗಂಗಾಧರೇಶ್ವರಸ್ವಾಮಿ ರಥೋತ್ಸವದ ವೈಭವ


Team Udayavani, Mar 29, 2021, 2:05 PM IST

ಶ್ರೀ ಗಂಗಾಧರೇಶ್ವರಸ್ವಾಮಿ ರಥೋತ್ಸವದ ವೈಭವ

ನಾಗಮಂಗಲ: ಆದಿಚುಂಚನಗಿರಿ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಶ್ರೀಗಂಗಾಧರೇಶ್ವರಸ್ವಾಮಿ ರಥೋತ್ಸವ ಸಹಸ್ರಾರು ಭಕ್ತಾದಿಗಳ ನಡುವೆ ವೈಭವದಿಂದ ನಡೆಯಿತು.

ಹೋಳಿ ಹುಣ್ಣಿಮೆಯ ಹಿಂದಿನ ರಾತ್ರಿ ಅಂದರೆ ಮಾ.27ರಂದು ಶ್ರೀ ಕ್ಷೇತ್ರದ ಶ್ರೀ ಕಾಲ ಭೈರವೇಶ್ವರ ಪುಷ್ಕರಣಿಯಲ್ಲಿ ತೆಪ್ಪೋತ್ಸವ ಮುಗಿದು ಮಧ್ಯರಾತ್ರಿಕಳೆಯುತ್ತಿದ್ದಂತೆಯೇ ಗಂಗಾಧರೇಶ್ವರ ರಥೋ ತ್ಸವಕ್ಕೆಕ್ಷಣಗಣನೆ ಪ್ರಾರಂಭವಾಯಿತು. ಬೆಳಗಿನಜಾವ ಬ್ರಾಹ್ಮೀ ಮುಹೂರ್ತದಲ್ಲಿ ನಡೆಯುವ ಗಂಗಾಧರೇಶ್ವರಸ್ವಾಮಿ ಮಹಾ ರಥೋತ್ಸವ ಮತ್ತು ಶ್ರೀ ಡಾ|| ನಿರ್ಮಲಾನಂದನಾಥ ಮಹಾಸ್ವಾಮಿ ಗಳವರ ಅಡ್ಡಪಲ್ಲಕ್ಕಿ ಉತ್ಸವ ಭಕ್ತಸಾಗರದ ನಡುವೆ ವಿಜೃಂಭಣೆಯಿಂದ ಜರುಗಿತು.

ಜೈಕಾರ: ಭಾನುವಾರ ಬೆಳಗಿನ ಜಾವ (ಶನಿವಾರ ರಾತ್ರಿ) ಬ್ರಾಹ್ಮೀ ಮುಹೂರ್ತ ಪ್ರಾರಂಭ ವಾಗುತ್ತಿದ್ದಂತೆಯೇ ಶ್ರೀಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಅವರುಸರ್ವಾಲಂಕಾರ ಭೂಷಿತರಾಗಿ, ಸುವರ್ಣಕಿರೀಟಧಾರಿಗಳಾಗಿ ಭಕ್ತರಿಗೆ ದರ್ಶನ ನೀಡುತ್ತಾವಟುಗಳ ವೇಧ ಘೋಷ, ಮಂತ್ರ ಪಠಣ,ವಿದ್ವಾಂಸರ ವೇದಘೋಷ ಹಾಗೂ ಮಂಗಳವಾದ್ಯಗಳ ಸಮೇತ ಅಡ್ಡಪಾಲಕಿಯಲ್ಲಿ ವಿರಾಜಮಾನ ರಾಗಿ ಗಿರಿಯ ಕೆಳಗಿರುವ ರಥಬೀದಿಗೆಬಿಜಯಂಗೈಯ್ಯುತ್ತಿದ್ದಂತೆಯೇ ಎಲ್ಲೆಲ್ಲೂಜೈಕಾರಗಳು ಮೊಳಗಿದವು. ಶ್ರೀ ಭೈರವೇಶ್ವರ, ಶ್ರೀಗಂಗಾಧರೇಶ್ವರ ಮತ್ತು ಚುಂಚಶ್ರೀಗಳಿಗೆ ಮೊಳಗಿಸಿದಜಯಕಾರಗಳು ಮುಗಿಲು ಮುಟ್ಟಿದವು. ಹೋಳಿ ಹುಣ್ಣಿಮೆಯ ತುಂಬು ಚಂದ್ರನ ಹಾಲುಬೆಳದಿಂಗಳಲ್ಲಿ ಭಕ್ತರಿಂದ ತುಂಬಿ ತುಳುಕುತ್ತಿದ್ದವಿಶಾಲವಾದ ರಥಬೀದಿ ಭಕ್ತಸಾಗರದಲ್ಲಿತೇಲಾಡುತ್ತಿದೆಯೇನೋ ಎನ್ನುವಂತೆ ಭಾಸವಾಗುತ್ತಿತ್ತು.

ರಥಕ್ಕೆ ವಿಶೇಷ ಪೂಜೆ: ವಿಧ ವಿಧ ಪುಷ್ಪಗಳಿಂದಹಾಗೂ ವಿದ್ಯುತ್‌ ದೀಪಮಾಲೆಗಳಿಂದ ಅಲಂಕೃತ ಗೊಂಡಿದ್ದ ಗಂಗಾಧರೇಶ್ವರಸ್ವಾಮಿ ರಥದ ಸನಿಹಕ್ಕೆಆಗಮಿಸಿದ ಮಹಾಸ್ವಾಮಿಗಳವರು ಪಾಲಕಿಯಿಂದ ಇಳಿದು ರಥಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ರಥವನ್ನುಮುಂದೆ ಚಲಿಸಲು ಪ್ರಾರ್ಥಿಸಿ ಪಾಲಕಿಯಲ್ಲಿ ಆಸೀನರಾಗುತ್ತಿದ್ದಂತೆಯೇ ರಥವುನಿಧಾನವಾಗಿ ಮುಂದಕ್ಕೆ ಚಲಿಸುತ್ತಿದ್ದಂತೆನೆರೆದಿದ್ದ ಭಕ್ತಸಾಗರ ಗಂಗಾಧರೇಶ್ವರನಿಗೂ, ಭೈರವೇಶ್ವರನಿಗೂ, ಶ್ರೀ ಗುರುಗಳಿಗೂ ಕೂಗಿದ ಜೈಕಾರ ಇಡೀ ಗಿರಿಯ ತುಂಬೆಲ್ಲ ಪ್ರತಿಧ್ವನಿಸಿತ್ತು.

ಭಕ್ತಿ ಸಮರ್ಪಣೆ: ಮಹಾರಥದಮುಂದೆ ಮುಂದೆ ಶ್ರೀಗಳವರಪಾಲಕಿಯೂ, ಪಾಲಕಿಯ ಹಿಂದೆ ಮಹಾರಥವೂ ಸಾಗುತ್ತಿದ್ದಂತೆ ಭಕ್ತರ ಭಕ್ತಿಯಪರಾಕಾಷ್ಠೆ ಮೇರೆ ಮೀರಿತ್ತು. ನೆರೆದಿದ್ದ ಸಹಸ್ರ ಸಹಸ್ರಸಂಖ್ಯೆಯಲ್ಲಿ ಭಕ್ತಗಣ ರಥವನ್ನು ಎಳೆಯುವ ಮೂಲಕ ಭಕ್ತಿ ಸಮರ್ಪಿಸಿದರು.

ಸೂರ್ಯೋದಯಕ್ಕೂ ಮುನ್ನ ಮೂಲ ಸ್ಥಾನಕ್ಕೆ: ರಥಕ್ಕೆ ಹೂವು, ದವನ ಹಾಗೂ ಬಾಳೆಹಣ್ಣನ್ನು ಅರ್ಪಿಸಿ ತಮ್ಮ ಹರಕೆ ತೀರಿಸಿದರು. ವಿದ್ಯುತ್‌ ದೀಪಗಳ ಕಣ್ಣುಕೋರೈಸುವ ಬೆಳಕಿನ ನಡುವೆ ಭಕ್ತರ ಜಯಘೋಷಗಳ ನಡುವೆ, ಶ್ರೀ ಗಂಗಾಧರೇಶ್ವರನರಥವನ್ನು ಎಳೆದು ಭಕ್ತಿ ಪರವಶ ರಾದರು. ಮಹಾಸ್ವಾಮಿ ಗಳವರ ಅಡ್ಡಪಾಲಕಿ ಉತ್ಸವವನ್ನುಹೊತ್ತು ಮೆರೆಸಿ ಧನ್ಯತಾಭಾವ ಹೊಂದಿದರು. ಬ್ರಾಹ್ಮೀ ಮುಹೂರ್ತ ದಲ್ಲಿ ಪ್ರಾರಂಭವಾಗುವರಥೋತ್ಸವವು ರಥ ಬೀದಿಯಲ್ಲಿ ಚಲಿಸಿ ಅಪಾರಭಕ್ತರಿಗೆ ದರ್ಶನ ನೀಡಿ ಸೂರ್ಯೋದಯಕ್ಕೂ ಮುನ್ನ ವಾಪಸ್‌ ಮೂಲ ಸ್ಥಾನಕ್ಕೆ ಬಂದು ನಿಂತಿತು.

ಟಾಪ್ ನ್ಯೂಸ್

fcdyryr

ವಾಟ್ಸ್‌ಆ್ಯಪ್‌ ಫ್ರೆಂಡ್ಸ್‌ನಿಂದ ವಂಚನೆ: ಇಬ್ಬರ ಬಂಧನ

hfghdrr

ಉದ್ಯೋಗ ಖಾತ್ರಿ ಯೋಜನೆಯಡಿ ಗುದ್ದಲಿ ಹಿಡಿದ ಗ್ರಾಪಂ ಸದಸ್ಯ

ಸೊರಬ:ಕೋವಿಡ್ ನಿಯಮ ಉಲ್ಲಂಘಿಸಿ ದೇವರ ಜಾತ್ರೆ ಆಚರಣೆ 11 ಜನರ ಮೇಲೆ ಪ್ರಕರಣ ದಾಖಲು

ಸೊರಬ:ಕೋವಿಡ್ ನಿಯಮ ಉಲ್ಲಂಘಿಸಿ ದೇವರ ಜಾತ್ರೆ ಆಚರಣೆ 11 ಜನರ ಮೇಲೆ ಪ್ರಕರಣ ದಾಖಲು

fghydtyetyer

ಅಣ್ಣನ ಶವ ತಂಗಿ ಕಾರಿನಲ್ಲಿದ್ದರೂ ಗೊತ್ತಿರಲಿಲ್ಲವಂತೆ!

ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳನ್ನು ಹಾಸ್ಟೆಲ್‌ನಿಂದ ಹೊರಹಾಕುವಂತಿಲ್ಲ: ಡಿಸಿಎಂ

ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳನ್ನು ಹಾಸ್ಟೆಲ್‌ನಿಂದ ಹೊರಹಾಕುವಂತಿಲ್ಲ: ಡಿಸಿಎಂ

tutu

ನಾಳೆ ಕರ್ನಾಟಕ ಸೇರಿ 10 ರಾಜ್ಯಗಳ ಸಿಎಂಗಳ ಜೊತೆ ಪಿಎಂ ಸಭೆ

Untitled-2

ಸಿಡಿಲು ಬಡಿದು ಮನೆ ಕುಸಿದು ಒಂದೇ ಕುಟುಂಬ 7 ಮಂದಿ ಗಂಭೀರ ಗಾಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Trafficking in illegal rice

ಅಕ್ರಮ ಅಕ್ಕಿ ಸಾಗಣೆ: ಬಂಧನ

Mandya Taluk covid Hotspot

ಮಂಡ್ಯ ತಾಲೂಕು ಕೋವಿಡ್ ಹಾಟ್‌ಸ್ಪಾಟ್‌

Sri Venkatasubbayya

ಪ್ರೊ.ವೆಂಕಟಸುಬ್ಬಯ್ಯಗೆ ಶ್ರೀರಂಗಪಟ್ಟಣ ನಾಗರಿಕರ ಶ್ರದ್ಧಾಂಜಲಿ

Siddhartha Theater is just a memory

ಸಿದ್ಧಾರ್ಥ ಚಿತ್ರಮಂದಿರ ಇನ್ನು ನೆನಪು ಮಾತ್ರ

ಮಂಡ್ಯ:  413 ಮಂದಿಗೆ ಸೋಂಕು ದೃಢ: 113 ಮಂದಿ ಬಿಡುಗಡೆ

ಮಂಡ್ಯ:  413 ಮಂದಿಗೆ ಕೋವಿಡ್ ಸೋಂಕು ದೃಢ: 113 ಮಂದಿ ಬಿಡುಗಡೆ

MUST WATCH

udayavani youtube

ಬೈಕ್ ಗೆ ನಾಯಿಯನ್ನು ಕಟ್ಟಿ ಹೆದ್ದಾರಿಯಲ್ಲೇ ಎಳೆದುಕೊಂಡು ಹೋದ ಸವಾರರು ! |

udayavani youtube

ಅಘೋಷಿತ ಲಾಕ್ ಡೌನ್ ವಿರುದ್ಧ ಮಾಜಿ ಸಿಎಂ ಕುಮಾರ ಸ್ವಾಮಿ ಕೆಂಡಾಮಂಡಲ

udayavani youtube

ಮಂಗಳೂರಿನ ಮಾರುಕಟ್ಟೆ ಸುಧಾರಣೆ ಕುರಿತು ಉದಯವಾಣಿ ಫೋನ್ ಇನ್

udayavani youtube

ಕೊರೊನಾ 1 ವರುಷ !

udayavani youtube

ಆಕ್ಸಿಜನ್ ಮಹಾರಾಷ್ಟ್ರಕ್ಕೆ ಕಳುಹಿಸುವುದಕ್ಕೆ ಎಂ.ಬಿ.ಪಾಟೀಲ ಆಕ್ಷೇಪ

ಹೊಸ ಸೇರ್ಪಡೆ

ಪಡಿಕ್ಕಲ್‌ ಸೆಂಚುರಿ: ಆರ್‌ಸಿಬಿ 4ನೇ ಜಯಭೇರಿ

ಪಡಿಕ್ಕಲ್‌ ಸೆಂಚುರಿ: ಆರ್‌ಸಿಬಿ 4ನೇ ಜಯಭೇರಿ

fcdyryr

ವಾಟ್ಸ್‌ಆ್ಯಪ್‌ ಫ್ರೆಂಡ್ಸ್‌ನಿಂದ ವಂಚನೆ: ಇಬ್ಬರ ಬಂಧನ

hfghdrr

ಉದ್ಯೋಗ ಖಾತ್ರಿ ಯೋಜನೆಯಡಿ ಗುದ್ದಲಿ ಹಿಡಿದ ಗ್ರಾಪಂ ಸದಸ್ಯ

ಸೊರಬ:ಕೋವಿಡ್ ನಿಯಮ ಉಲ್ಲಂಘಿಸಿ ದೇವರ ಜಾತ್ರೆ ಆಚರಣೆ 11 ಜನರ ಮೇಲೆ ಪ್ರಕರಣ ದಾಖಲು

ಸೊರಬ:ಕೋವಿಡ್ ನಿಯಮ ಉಲ್ಲಂಘಿಸಿ ದೇವರ ಜಾತ್ರೆ ಆಚರಣೆ 11 ಜನರ ಮೇಲೆ ಪ್ರಕರಣ ದಾಖಲು

fghydtyetyer

ಅಣ್ಣನ ಶವ ತಂಗಿ ಕಾರಿನಲ್ಲಿದ್ದರೂ ಗೊತ್ತಿರಲಿಲ್ಲವಂತೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.