ಬಯೋಮೆಟ್ರಿಕ್‌ಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ

ಸಮಸ್ಯೆ ನಿವಾರಿಸಲು ಸರಳ ಕಾನೂನು ರೂಪಿಸಲು ಪಡಿತರದಾರರ ಮನವಿ

Team Udayavani, Feb 6, 2020, 3:18 PM IST

ಶ್ರೀರಂಗಪಟ್ಟಣ: ವಯಸ್ಸಾದವರು ಪ್ರತಿ ತಿಂಗಳೂ ಪಡಿತರ ಪಡೆಯಲು ತಿಂಡಿ, ಊಟ ಬಿಟ್ಟು ಬಯೋಮೆಟ್ರಿಕ್‌ ನೀಡಲು ನ್ಯಾಯಬೆಲೆ ಅಂಗಡಿ ಮುಂದೆ ಕಾಯುತ್ತಿದ್ದು, ಸರಳ ಕಾನೂನು ರೂಪಿಸಿ ಸಮಸ್ಯೆ ನಿವಾರಿಸಬೇಕು ಎಂದು ಪಡಿತರದಾರರು ಒತ್ತಾಯಿಸಿದರು.

ಸರ್ಕಾರ ಬೇರೆ ಏನಾದರೂ ಬಯೋಮೆಟ್ರಿಕ್‌ ನಂತೆ ಹೊಸ ತಂತ್ರಜ್ಞಾನ ಅಳವಡಿಸಿ ಮತ್ತೂಂದು ಸರ್ವರ್‌ಗಾಗಿ ಕಾಯುವುದನ್ನು ತಪ್ಪಿಸಬೇಕು. ಪಡಿತರ ಪಡೆಯಲು ಸರದಿಯಲ್ಲಿ ದಿನಗಟ್ಟಲೆ ಕಾದು ನಿಂತು ಸಮಯ ಪೋಲಾಗುವುದನ್ನು ತಪ್ಪಿಸಬೇಕು. ನ್ಯಾಯಬೆಲೆ ಅಂಗಡಿಯಿಂದ ಪಡಿತರ ಪಡೆಯಲು ಎರಡು, ಮೂರು ದಿನ ಸರದಿಯಲ್ಲಿ ನಿಂತರೂ ಪಡಿತರ ಸಿಕ್ಕೆ ಸಿಗುತ್ತದೆ ಎಂಬ ನಂಬಿಕೆಯಿಲ್ಲ ಎಂದು ಪಡಿತರದಾರರು ತಮ್ಮ ಅಳಲು ತೋಡಿಕೊಂಡರು.

ತಾಲೂಕಾದ್ಯಂತ ಒಟ್ಟು 49,438 ಪಡಿತರ ಚೀಟಿಗಳಿದ್ದು, ಅದರಲ್ಲಿ 46,624 ಬಿಪಿಎಲ್‌, 2,621 ಅಂತ್ಯೋದಯ ಕಾರ್ಡ್‌ ಹಾಗೂ 193 ಎಪಿಎಲ್‌ ಕಾರ್ಡ್‌ದಾರರಿದ್ದು, ಅಂತ್ಯೋದಯ, ಬಿಪಿಎಲ್‌ ಹಾಗೂ ಕೆಲ ಎಪಿಎಲ್‌ ಪಡಿತರದಾರರು ಪಡಿತರ ಪಡೆಯಲು ಪ್ರತಿ ತಿಂಗಳು ಬಯೋಮೆಟ್ರಿಕ್‌ ಕೊಟ್ಟು ಪಡಿತರ ಪಡೆದುಕೊಳ್ಳುತ್ತಿದ್ದರು. ಕಳೆದೆರಡು ತಿಂಗಳಿಂದ ಬಯೋಮೆಟ್ರಿಕ್‌ ಸರ್ವರ್‌ ಸಮಸ್ಯೆಯಿಂದ ತುಂಬಾ ತೊಂದರೆಯಾಗಿದೆ.

ಪರ್ಯಾಯ ವ್ಯವಸ್ಥೆ ಕಲ್ಪಿಸಿ: ವಯಸ್ಸಾದವರು, ಕಾಂಕ್ರೀಟ್‌ ಕೆಲಸ, ಮನೆಗೆಲಸ ಮಾಡುವವರ ಕೈ ಬೆರಳು ಅಚ್ಚು ಅಳಿಸಿ ಹೋಗಿ ಅವರ ಸಮಸ್ಯೆ ಹೇಳ ತೀರದಾಗಿದೆ. ಇವರು ಪ್ರತಿ ತಿಂಗಳು ಬಯೋಮೆಟ್ರಿಕ್‌ ನಿಂದ ಪಡಿತರ ಪಡೆಯುವುದೇ ಒಂದು ದೊಡ್ಡ ಸವಾಲಾಗಿದೆ. ಇವರ ಬೆರಳಿನ ರೇಖೆಗಳು ಅಳಸಿದ್ದು, ತಮ್ಮ ಎರಡು ಕೈಯಲ್ಲಿನ 10 ಬೆರಳಿನ ರೇಖೆಗಳು ಬಾರದೆ ತೊಂದರೆ ಅನುಭಸುವ
ಬದಲು ಮತ್ತೂಂದು ತಂತ್ರಗಾರಿಕೆ ಸರ್ಕಾರದ ಮಟ್ಟದಲ್ಲಿ ಬಳಸಬೇಕಾಗಿದೆ.

ಕಾರ್ಡ್‌ ರದ್ದಾಗುವ ಆತಂಕ: 2-3 ತಿಂಗಳು ಸತತವಾಗಿ ಪಡಿತರ ತೆಗೆದುಕೊಳ್ಳದಿದ್ದರೆ ಕಾರ್ಡ್ ಗಳು ರದ್ದಾಗಲಿದ್ದು, ಇದಕ್ಕಾಗಿ ಎಷ್ಟೋ ಮಂದಿ ಪಡಿತರ ಕಾರ್ಡ್‌ ಉಳಿಸಿಕೊಳ್ಳುವ ಉದ್ದೇಶಕ್ಕಾಗಿ ಒಂದೆರಡು ದಿನ ಕೆಲವೊಮ್ಮೆ ವಾರಗಟ್ಟಲೆ ಸರದಿ ಯಲ್ಲಿ ನಿಂತು ಪಡಿತರ ಪಡೆದುಕೊಳ್ಳುವುದುಂಟು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಪಾಂಡವಪುರ: ಟೊಮೆಟೋ ಖರೀದಿಗೆ ಒಪ್ಪಂದ ಮಾಡಿಕೊಂಡಿದ್ದ ಕಂಪನಿ ನಿಗದಿತ ಸಮಯಕ್ಕೆ ಖರೀದಿಸಲಿಲ್ಲವೆಂಬ ಕಾರಣಕ್ಕೆ ಕೆರೆಗೆ ಟೊಮೆಟೋ ಸುರಿದು ರೈತನೊಬ್ಬ ಆಕ್ರೋಶ...

  • ಮಂಡ್ಯ: ಕೋವಿಡ್ 19 ಸೋಂಕು ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಸೇರಿದಂತೆ ಇತರೆಡೆ ಬೆಳೆದಿರುವ ದ್ರಾಕ್ಷಿ ಬೆಳೆ ಕಟಾವು ಮಾಡಿ, ಮಾರಾಟ ಮಾಡಲು...

  • ಮಂಡ್ಯ: ಜಿಲ್ಲೆಯಲ್ಲಿ 9 ಕಡೆ ಜ್ವರ ತಪಾಸಣೆ ಕೇಂದ್ರಗಳನ್ನು ಗುರುತಿಸಲಾಗಿದ್ದು, ಜ್ವರಕ್ಕೆ ಸಂಬಂಧಿಸಿದಂತೆ ವೈದ್ಯರು ಚಿಕಿತ್ಸೆ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿ...

  • ಮಂಡ್ಯ: ರಾಜ್ಯದಲ್ಲಿ ಕೋವಿಡ್ 19 ವೈರಸ್‌ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಜಾರಿಗೊಳಿಸಿದ್ದ ನಿಷೇಧಾಜ್ಞೆಯನ್ನೂ ಲೆಕ್ಕಿಸದೆ ನಗರದೊಳಗೆ...

  • ನಾಗಮಂಗಲ: ದಿನದಿಂದ ದಿನಕ್ಕೆ ಕೋವಿಡ್ 19 ಸೋಂಕು ತೀವ್ರವಾಗಿ ಹರಡುತ್ತಾ ಜನರನ್ನು ಆತಂಕ ಗೊಳಿಸುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ 144 ನೇ ಸೆಕ್ಷನ್‌...

ಹೊಸ ಸೇರ್ಪಡೆ