ಸೋಂಕಿತ ಗರ್ಭಿಣಿಯರಿಗೆ ಹೆರಿಗೆ ಯಶಸ್ವಿ

Team Udayavani, Oct 18, 2020, 5:47 PM IST

mandya-tdy-1

ನಾಗಮಂಗಲ: ಕೋವಿಡ್‌ ಸೋಂಕಿತ 28 ಗರ್ಭಿಣಿಯರಿಗೆ ತಾಲೂಕಿನ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಹೆರಿಗೆ ಮಾಡಿಸುವ ಮೂಲಕ ವೈದ್ಯರು ಮಹತ್ವಕಾರ್ಯ ಮಾಡಿದ್ದಾರೆ.

ಉತ್ತಮ ಚಿಕಿತ್ಸೆ ನೀಡಿ ಯಾವುದೇ ಗರ್ಭಿಣಿಯರ ಹೆರಿಗೆ ಮಾಡಿಸಿ ಸಾರ್ವಜನಿಕರ ಪ್ರಶಂಸೆಗೆ ಕಾರಣರಾಗಿದ್ದಾರೆ. ತಾಲೂಕಿನ ಬಿಜಿ ನಗರದಲ್ಲಿರುವ ಆದಿಚುಂಚನಗಿರಿ ಆಸ್ಪತ್ರೆ ಜಿಲ್ಲಾ ಕೇಂದ್ರ ಸ್ಥಾನದಿಂದ ಸುಮಾರು 80 ಕಿ.ಮೀ ದೂರದಲ್ಲಿನ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದು, ತಾಲೂಕು ಹಾಗೂಪಕ್ಕದ ಜಿಲ್ಲೆಗಳ ಬಡವರು ಹಾಗೂ ರೈತಾಪಿ ವರ್ಗದವರಿಗೆ ಅನುಕೂಲವಾಗಿದೆ.

ಬಡ ರೋಗಿಗಳಿಗೆ ಸೇವೆ: ಕಳೆದ 6 ತಿಂಗಳಿನಿಂದ ಕೋವಿಡ್‌ ಸಂಕಷ್ಟಕ್ಕೀಡಾಗಿರುವ ಸಾವಿರಾರುರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯವ್ಯಾಪಿ ಆಸ್ಪತ್ರೆಗಳು ಕೇವಲ ಕೋವಿಡ್‌ ಚಿಕಿತ್ಸೆಗೆ ಮಾತ್ರ ಸೀಮಿತವಾಗಿದ್ದು, ಇತರೆ ಖಾಯಿಲೆಗಳ ಚಿಕಿತ್ಸೆಗಾಗಿ ರೋಗಿಗಳು ಅಲೆದಾಡುವಂಥ ಪರಿಸ್ಥಿತಿಎದುರಾಗಿದೆ. ಈ ಪರಿಸ್ಥಿತಿಯಲ್ಲೂ ಸೋಂಕಿತರಿಗೆ ಚಿಕಿತ್ಸೆ ನೀಡುವ ಜತೆಗೆ ಕೋವಿಡ್‌ ಇಲ್ಲದ ರೋಗಿಗಳಿಗೂ ಚಿಕಿತ್ಸೆ ನೀಡುತ್ತಿರುವ ಆದಿಚುಂಚನಗಿರಿ ಆಸ್ಪತ್ರೆಯ ಸೇವಾ ಕಾರ್ಯ ಬಡ ರೋಗಿ, ಗರ್ಭಿಣಿಯರು ಹಾಗೂ ತಾಯಿ ಮತ್ತು ಮಗುವಿನ ಪಾಲಿಗೆ ಸಂಜೀವಿನಿಯಾಗಿದೆ.

ಸೆಪ್ಟೆಂಬರ್‌ನಿಂದ ಇಲ್ಲಿಯವರೆಗೆ ಸೋಂಕಿತ 18 ಸಾಮಾನ್ಯ ಹೆರಿಗೆ ಹಾಗೂ 10 ಶಸ್ತ್ರ ಚಿಕಿತ್ಸೆ ಮೂಲಕ ಹೆರಿಗೆ ಮಾಡಲಾಗಿದೆ. ತಾಯಿ ಮತ್ತು ಮಗು ಸೋಂಕಿನಿಂದ ಗುಣಮುಖರಾಗಿದ್ದಾರೆ. ಬೆಂಗಳೂರು, ಹಾಸನ, ರಾಮನಗರ, ತುಮಕೂರು, ಮೈಸೂರು ಜಿಲ್ಲೆ ಸೇರಿದಂತೆ ಮತ್ತಿತರ ಕಡೆಗಳಿಂದ ಆಗಮಿಸಿ ಚಿಕಿತ್ಸೆ ಪಡೆದಿದ್ದಾರೆ. ಗರ್ಭಿಣಿಯರೆಲ್ಲರೂ ಉತ್ತಮ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಯಾಗುವಾಗ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳನ್ನು ಶ್ಲಾಘಿಸಿದ್ದಾರೆ.

ವೈದ್ಯರಿಗೂ ಸೋಂಕು: ಸೋಂಕಿತ ‌ ಗರ್ಭಿಣಿಗೆ ಹೆರಿಗೆ ಮಾಡಿದ ಆಸ್ಪೆತ್ರೆಯ ಇಬ್ಬರು ವೈದ್ಯರು ಹಾಗೂ ಮೂವರು ಹೌಸ್‌ ಸ‌ರ್ಜನ್‌ಗಳು ಸೇರಿದಂತೆ 10ಕ್ಕೂ ಹೆಚ್ಚು ದಾದಿಯರಿಗೆ ಸೋಂಕು ತಗುಲಿದೆ. ಆದರೂ, ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ಆತಂಕಕ್ಕೊಳಗಾಗದೆ ತಮ್ಮ ಸೇವೆ ಸ‌ಲ್ಲಿಸುವ ‌ ಮೂಲಕ ಗರ್ಭಿಣಿ ಪಾಲಿಗೆ ದೇ ‌ರಾಗಿದ್ದಾರೆ.

ಹೆರಿಗೆಯಾಗಿ ಮನೆಗೆ ತೆರಳಿದ‌ ಬಾಣಂತಿಯೊಬ್ಬರಿ 28 ದಿನಗಳನಂತೆ ‌ ತಾಯಿ ಮಗು ಮಗುವಿಗೆ ಸೋಂಕು ದೃಢಪಟ್ಟಿತ್ತು. ಈ ಇಬ್ಬರನ್ನು ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡಿದ ಪರಿಣಾಮ ಗುಣಮುಖರಾಗಿದ್ದಾರೆ.

ಗರ್ಭಿಣಿಯರು ಸೋಂಕು ದೃಢಪಟ್ಟರೂ ಆತಂಕಬೇಡ. ಮುಂಜಾಗ್ರತೆಕ್ರಮವಾಗಿ ತಾಯಿ, ಮಗುವಿಗೆ ಹಾಲುಣಿಸುವಾಗ ಎನ್‌95 ಮಾಸ್ಕ್ ಧರಿಸುವುದು ಒಳ್ಳೆಯದು. ಮಗುವನ್ನುಕನಿಷ್ಟ 6 ತಿಂಗಳವರೆಗೆ ಇತರರಿಗೆ ಕೊಡದಂತೆ ಜಾಗೃತಿ ವಹಿಸಬೇಕು.- ಡಾ.ರವೀಂದ್ರ ಪುಕಾಳೆ, ಮುಖ್ಯಸ್ಥರು, ಪ್ರಸೂತಿ ವಿಭಾಗ

ಗರ್ಭಿಣಿಯರು ಸೇರಿದಂತೆ ಇತರೆ ರೋಗಿಗಳಿಗೆ ಕೋವಿಡ್ ಸಂಕಷ್ಟದಲ್ಲೂ ಉತ್ತಮ ಚಿಕಿತ್ಸೆ ನೀಡುವಲ್ಲಿ ನಮ್ಮ ವೈದ್ಯಕೀಯ ತಂಡ ಶ್ರಮಿಸುತ್ತಿದೆ. ಪೂಜ್ಯ ಸ್ವಾಮೀಜಿ ಆಶಯದಂತೆ ಗ್ರಾಮೀಣ ಜನರಿಗೆ ಉತ್ತಮ ವೈದ್ಯಕೀಯ ಸೇವೆ ನೀಡಬೇಕೆಂಬುದು ಸಂಕಲ್ಪವಾಗಿದೆ. ಡಾ.ಸಾಗರ್‌, ವೈದ್ಯಕೀಯ ಅಧೀಕ್ಷಕ, ಆದಿಚುಂಚನಗಿರಿ ಆಸ್ಪತ್ರೆ

ಪಿ.ಜೆ.ಜಯರಾಂ

ಟಾಪ್ ನ್ಯೂಸ್

ಇನ್ನು ಆರು ತಿಂಗಳಲ್ಲಿ ಅಮೆರಿಕಕ್ಕೆ ಐಎಸ್‌ಕೆಪಿ ದಾಳಿ?

ಇನ್ನು ಆರು ತಿಂಗಳಲ್ಲಿ ಅಮೆರಿಕಕ್ಕೆ ಐಎಸ್‌ಕೆಪಿ ದಾಳಿ?

ಹಿಂದುಳಿದವರು,ದಲಿತರು ಬಿಜೆಪಿ ಜತೆ ಇದ್ದಾರೆ: ಸಚಿವ ಕೆ.ಎಸ್‌.ಈಶ್ವರಪ್ಪ

ಹಿಂದುಳಿದವರು,ದಲಿತರು ಬಿಜೆಪಿ ಜತೆ ಇದ್ದಾರೆ: ಸಚಿವ ಕೆ.ಎಸ್‌.ಈಶ್ವರಪ್ಪ

ಪ್ರವಾಸಿ ಗೈಡ್‌ಗಳಿಗೆ ಶೀಘ್ರ ಗುರುತಿನ ಚೀಟಿ: ಆನಂದ್‌ ಸಿಂಗ್‌

ಪ್ರವಾಸಿ ಗೈಡ್‌ಗಳಿಗೆ ಶೀಘ್ರ ಗುರುತಿನ ಚೀಟಿ: ಆನಂದ್‌ ಸಿಂಗ್‌

ಟಿ20 ವಿಶ್ವಕಪ್‌: ಆಂಗ್ಲರೆದುರು ಲಾಗ ಹಾಕಿದ ಬಾಂಗ್ಲಾ

ಟಿ20 ವಿಶ್ವಕಪ್‌: ಆಂಗ್ಲರೆದುರು ಲಾಗ ಹಾಕಿದ ಬಾಂಗ್ಲಾ

ಕೆನಡಾಕ್ಕೆ ಭಾರತ ಮೂಲದ ರಕ್ಷಣಾ ಸಚಿವೆ

ಕೆನಡಾಕ್ಕೆ ಭಾರತ ಮೂಲದ ರಕ್ಷಣಾ ಸಚಿವೆ

ಟೀವಿ ಕಾರ್ಯಕ್ರಮದ ನಡುವೆಯೇ ಹೊರ ನಡೆದ ಶೋಯಿಬ್‌ ಅಖ್ತರ್‌

ಟೀವಿ ಕಾರ್ಯಕ್ರಮದ ನಡುವೆಯೇ ಹೊರ ನಡೆದ ಶೋಯಿಬ್‌ ಅಖ್ತರ್‌

ದೀಪಾವಳಿ ದಿನ ದೇವಸ್ಥಾನಗಳಲ್ಲಿ ಗೋಪೂಜೆ : ಜೊಲ್ಲೆಗೆ ಪ್ರಭು ಚೌವ್ಹಾಣ್‌ ಅಭಿನಂದನೆ

ದೀಪಾವಳಿ ದಿನ ದೇವಸ್ಥಾನಗಳಲ್ಲಿ ಗೋಪೂಜೆ : ಜೊಲ್ಲೆಗೆ ಪ್ರಭು ಚೌವ್ಹಾಣ್‌ ಅಭಿನಂದನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶಾಲೆ, ಟೀಸಿ, TC, udayavanipaper, kannadanews,

ಬೇರೆ ಶಾಲೆಗೆ ಸೇರಲು ಟೀಸಿ ನೀಡದ ಶಾಲೆ

ಮಿಮ್ಸ್‌ನ ಹೆರಿಗೆ ವಾರ್ಡ್‌ನಲ್ಲಿ ಹಾಸಿಗೆ ಹೆಚ್ಚಳ

ಮಿಮ್ಸ್‌ನ ಹೆರಿಗೆ ವಾರ್ಡ್‌ನಲ್ಲಿ ಹಾಸಿಗೆ ಹೆಚ್ಚಳ

ಗ್ರಾಮಸ್ಥರು

2 ಗ್ರಾಮಸ್ಥರಿಂದ ಪರಸ್ಪರ ಬಡಿದಾಟ

krs

ಕೆಆರ್‌ಎಸ್‌ ಜಲಾಶಯ ಭರ್ತಿಗೆ 3 ಅಡಿ ಬಾಕಿ

28

ಅಪಪ್ರಚಾರ ಮಾಡಿದವರ ಬಾಯಿ ಮುಚ್ಚಿಸಿದ್ದೇವೆ

MUST WATCH

udayavani youtube

ಹಿಂದೂಗಳ ನಡುವೆ ನಮಾಜ್ : ಹೇಳಿಕೆಗಾಗಿ ಕ್ಷಮೆಯಾಚಿಸಿದ ವಕಾರ್ ಯೂನಿಸ್

udayavani youtube

ಅಂಗಾಂಗ ದಾನ ಎಂದರೇನು ಏನಿದರ ಮಹತ್ವ ?

udayavani youtube

ಸಾವಯವ ಕೃಷಿಯಲ್ಲಿ ಅನುಸರಿಸಬೇಕಿರುವ ಪ್ರಮುಖ ಅಂಶಗಳ ಬಗ್ಗೆ ನಿಮಗೆ ಗೊತ್ತೇ?

udayavani youtube

ಶಾಲೆಗೆ ಬಂತು ಬಿಸಿಯೂಟ : ದೋಟಿಹಾಳ ಶಾಲಾ ಮಕ್ಕಳ ಒಂದು ಕಿಲೋಮೀಟರ್ ಪಾದಯಾತ್ರೆಗೆ ಬ್ರೇಕ್

udayavani youtube

ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ಉಳಿಸಬೇಕಾಗಿದೆ : ಆರ್. ಅಶೋಕ್

ಹೊಸ ಸೇರ್ಪಡೆ

ಇನ್ನು ಆರು ತಿಂಗಳಲ್ಲಿ ಅಮೆರಿಕಕ್ಕೆ ಐಎಸ್‌ಕೆಪಿ ದಾಳಿ?

ಇನ್ನು ಆರು ತಿಂಗಳಲ್ಲಿ ಅಮೆರಿಕಕ್ಕೆ ಐಎಸ್‌ಕೆಪಿ ದಾಳಿ?

ಹಿಂದುಳಿದವರು,ದಲಿತರು ಬಿಜೆಪಿ ಜತೆ ಇದ್ದಾರೆ: ಸಚಿವ ಕೆ.ಎಸ್‌.ಈಶ್ವರಪ್ಪ

ಹಿಂದುಳಿದವರು,ದಲಿತರು ಬಿಜೆಪಿ ಜತೆ ಇದ್ದಾರೆ: ಸಚಿವ ಕೆ.ಎಸ್‌.ಈಶ್ವರಪ್ಪ

ಪ್ರವಾಸಿ ಗೈಡ್‌ಗಳಿಗೆ ಶೀಘ್ರ ಗುರುತಿನ ಚೀಟಿ: ಆನಂದ್‌ ಸಿಂಗ್‌

ಪ್ರವಾಸಿ ಗೈಡ್‌ಗಳಿಗೆ ಶೀಘ್ರ ಗುರುತಿನ ಚೀಟಿ: ಆನಂದ್‌ ಸಿಂಗ್‌

ಟಿ20 ವಿಶ್ವಕಪ್‌: ಆಂಗ್ಲರೆದುರು ಲಾಗ ಹಾಕಿದ ಬಾಂಗ್ಲಾ

ಟಿ20 ವಿಶ್ವಕಪ್‌: ಆಂಗ್ಲರೆದುರು ಲಾಗ ಹಾಕಿದ ಬಾಂಗ್ಲಾ

ಕೆನಡಾಕ್ಕೆ ಭಾರತ ಮೂಲದ ರಕ್ಷಣಾ ಸಚಿವೆ

ಕೆನಡಾಕ್ಕೆ ಭಾರತ ಮೂಲದ ರಕ್ಷಣಾ ಸಚಿವೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.