ಸಮಸ್ಯೆಗಳ ಸಮಗ್ರ ಅಧ್ಯಯನ ಅಗತ್ಯ: ಸುಮಲತಾ ಅಂಬರೀಶ್‌

Team Udayavani, Apr 14, 2019, 12:23 PM IST

ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕುರುಕ್ಷೇತ್ರದೊಳಗೆ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿ ನಿಖೀಲ್‌ ಹಾಗೂ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್‌ ಕದನ ಕಲಿಗಳಂತೆ ಗೆಲುವಿಗೆ ಹೋರಾಟ ನಡೆಸುತ್ತಿದ್ದಾರೆ. ಅವರ ರಾಜಕೀಯ ಪ್ರವೇಶದ ಉದ್ದೇಶ, ಗುರಿ, ಪ್ರಚಾರದ ಅನುಭವಗಳನ್ನು ಉದಯವಾಣಿಯೊಂದಿಗೆ ಹಂಚಿಕೊಂಡಿದ್ದಾರೆ.

*ಜಿಲ್ಲೆಯ ಸಮಸ್ಯೆಗಳ ಬಗ್ಗೆ ನಿಮಗೆ ಅರಿವಿದೆಯೇ?
ಸುಮಲತಾ: ಜಿಲ್ಲೆಯ ಅಭಿವೃದ್ಧಿ ದೊಡ್ಡ ಮಾತು. ಒಳ್ಳೆಯ ಉದ್ದೇಶ ಇಟ್ಟುಕೊಂಡು ಸಮಸ್ಯೆಗಳ ಕುರಿತು ಅಧ್ಯಯನ ನಡೆಸಿ ಜನಾಭಿಪ್ರಾಯ ಸಂಗ್ರಹಿಸಬೇಕು. ಅದಕ್ಕೆ ಬೆಲೆ ಕೊಡಬೇಕು. ಫ್ಲೈಓವರ್‌, ಸ್ಟೀಲ್‌ ಬ್ರಿಡ್ಜ್ ಮಾಡುವುದು ನಮ್ಮ ಉದ್ದೇಶವಾಗಿರಬಹುದು. ಆದರೆ, ತಳಮಟ್ಟಕ್ಕೆ ಹೋಗಿ ನೋಡಿದಾಗ ಸಮಸ್ಯೆಗಳೇ ಬೇರೆಯಾಗಿರುತ್ತದೆ. ಕುಡಿಯುವ ನೀರು, ಕೃಷಿಗೆ ನೀರು, ರೈತರ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳಿವೆ. ಇವೆಲ್ಲವನ್ನೂ ಮನಸ್ಸಿನಲ್ಲಿಟ್ಟುಕೊಂಡು ಅಧ್ಯಯನ ಮಾಡಬೇಕು. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜನಾಭಿಪ್ರಾಯ ತಿಳಿದುಕೊಂಡು ನಾನು ಈ ನಿರ್ಧಾರಕ್ಕೆ ಬಂದಿದ್ದೇನೆ. ಈಗ ಕಾಡುತ್ತಿರುವ ಸಮಸ್ಯೆಗಳೇನು. ಅದಕ್ಕೆ ಯಾವ ರೀತಿ ಪರಿಹಾರ ನಿರೀಕ್ಷಿಸುತ್ತಾರೆ. ಅದನ್ನು ತಿಳಿದು ಮುಂದಿನ ಹೆಜ್ಜೆ ಇಡುತ್ತೇನೆ.

* ಪ್ರವಾಸ ಕಾಲದಲ್ಲಿ ಕಂಡುಬಂದ ಸಮಸ್ಯೆಗಳೇನು?
ಸುಮಲತಾ: ಚುನಾವಣೆ ಸಮಯದಲ್ಲಿ ಉದ್ವೇಗ ಇರುತ್ತದೆ. ಈ ಸಮಯದಲ್ಲಿ ಅವರ ಸಮಸ್ಯೆಗಳ ಸಮಗ್ರ ಚಿತ್ರಣ ಸಿಗುವುದಿಲ್ಲ. ಕಬ್ಬಿನ ಸಮಸ್ಯೆ, ಮಹಿಳೆಯರು, ರಸ್ತೆಯ ಅಧ್ವಾನ ಸ್ಥಿತಿ. ಇದನ್ನೆಲ್ಲಾ ಗಣನೆಗೆ ತೆಗೆದು ಕೊಳ್ಳಬೇಕಾಗುತ್ತದೆ. ಸಂಸದರಾಗಿ ನಮಗಿರುವ ನಿರ್ದಿಷ್ಟ ಚೌಕಟ್ಟಿನಲ್ಲಿ ಸಂಸತ್‌ನಲ್ಲಿ ಹೋರಾಟ ನಡೆಸಬೇಕು, ಜನರ ಧ್ವನಿಯಾಗುವ ಆಶಯ ನನ್ನದು. ಅದಕ್ಕೆ ನಾನು ಸಿದ್ಧಳಿದ್ದೇನೆ.

* ಚುನಾವಣೆಯಲ್ಲಿ ಹಣದ ಹೊಳೆ ಸಾಮಾನ್ಯ? ಇದನ್ನು ಹೇಗೆ ಎದುರಿಸುತ್ತೀರಿ?
ಸುಮಲತಾ: ಈ ಚುನಾವಣೆಯಲ್ಲಿ ಜನರಿಗೆ ಒಂದು ಸಂದೇಶ ರವಾನಿಸಲು ಪ್ರಯತ್ನಿಸುತ್ತಿದ್ದೇವೆ. ಚುನಾವಣೆಯಲ್ಲಿ ಸಿಗುವ ಹಣ ತಾತ್ಕಾಲಿಕ. ಅದು ಒಂದು ವಾರ ಅಥವಾ ಒಂದು ತಿಂಗಳೊಳಗೆ ಖರ್ಚಾಗುವಂತಹದ್ದು. ಅದರಿಂದ ಯಾವುದೇ ಲಾಭವಾಗುವುದಿಲ್ಲ. ಹಣದ ಹರಿವಿನಿಂದ ಭ್ರಷ್ಟಾಚಾರ ಹೆಚ್ಚಾಗುತ್ತದೆ. ಅಭಿವೃದ್ಧಿ ಕೆಲಸಗಳು ಆಗುವುದಿಲ್ಲ. ಈ ಸಂದೇಶವನ್ನು ಜನರಿಗೆ ಮುಟ್ಟಿಸಬೇಕಿದೆ. ಮಂಡ್ಯಕ್ಕೆ ಸಂಬಂಧಿಸಿದಂತೆ ಈ ಬಾರಿ ಬೇರೆಯದ್ದೇ ಆದಂತಹ ಚುನಾವಣೆಯನ್ನು ನೋಡಬಹುದು. ಹಣಕ್ಕೆ ಆಗುವ ಚುನಾವಣೆಯಲ್ಲ ಅನ್ನೋದರಲ್ಲಿ ನನಗೆ ಪೂರ್ಣ ವಿಶ್ವಾಸವಿದೆ.

* ಜಿದ್ದಾಜಿದ್ದಿನ ಚುನಾವಣೆಯಲ್ಲಿ ಜೆಡಿಎಸ್‌ ವೋಟುಗಳು ನಿಮಗೆ ಬರಲಿವೆಯೇ?
ಸುಮಲತಾ: ಖಂಡಿತಾ ಬರಲಿದೆ. ಬೇಕಾದಷ್ಟು ಕಡೆ ಜೆಡಿಎಸ್‌ ಬೆಂಬಲಿಗರೇ ನನ್ನ ಬಳಿ ಬಂದು ಹೇಳುತ್ತಿದ್ದಾರೆ. ಈ ಬಾರಿ ನಿಮ್ಮ ಪರವಾಗಿ ಚುನಾವಣೆ ನಡೆಸುತ್ತೇವೆ. ಅಂಬರೀಶಣ್ಣನ ಮೇಲೆ ಅಭಿಮಾನವಿದೆ. ನಿಮ್ಮ ಪರವಾಗಿ ಚುನಾವಣೆ ಮಾಡುತ್ತೇವೆ. ಉಳಿದಂತೆ ಕಾಂಗ್ರೆಸ್‌ ಕಾರ್ಯಕರ್ತರು ಬಹಿರಂಗವಾಗಿ ನನ್ನ ಬೆಂಬಲಕ್ಕೆ ನಿಂತಿದೆ. ಬಿಜೆಪಿ, ರೈತಸಂಘದ ಬೆಂಬಲವೂ ಸಿಕ್ಕಿದೆ. ಇದನ್ನು ನೋಡಿದಾಗ ಎಲ್ಲಾ ಪಕ್ಷದವರೂ ನನ್ನ ಪರವಾಗಿದ್ದಾರೆ ಅನ್ನೋ ನಂಬಿಕೆ ಇದೆ.

* ಬಿಜೆಪಿ ಬೆಂಬಲದಿಂದ ಅಲ್ಪಸಂಖ್ಯಾತ ಮತಗಳು ಕೈತಪ್ಪಿ ಹೋಗುವ ಭಯವಿದೆಯೇ?
ಸುಮಲತಾ: ಖಂಡಿತಾ ಇಲ್ಲ, ನಾನು ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದೇನೆ. ಇದೊಂದು ಕಠಿಣವಾದ ಚಾಲೆಂಜ್‌. ಅದನ್ನು ನಾನು ಎದುರಿಸುತ್ತಿದ್ದೇನೆ. ಇದು ಅಲ್ಪಸಂಖ್ಯಾತರು ಅರ್ಥಮಾಡಿ ಕೊಂಡಿದ್ದಾರೆ ಎಂದು ತಿಳಿದಿದ್ದೇನೆ. ಎಲ್ಲರನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗುವ ಉದ್ದೇಶದಿಂದ ನಾನು ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದೇನೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಮಂಡ್ಯ: ಜಿಲ್ಲೆಯಲ್ಲಿ 9 ಕಡೆ ಜ್ವರ ತಪಾಸಣೆ ಕೇಂದ್ರಗಳನ್ನು ಗುರುತಿಸಲಾಗಿದ್ದು, ಜ್ವರಕ್ಕೆ ಸಂಬಂಧಿಸಿದಂತೆ ವೈದ್ಯರು ಚಿಕಿತ್ಸೆ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿ...

  • ಮಂಡ್ಯ: ರಾಜ್ಯದಲ್ಲಿ ಕೋವಿಡ್ 19 ವೈರಸ್‌ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಜಾರಿಗೊಳಿಸಿದ್ದ ನಿಷೇಧಾಜ್ಞೆಯನ್ನೂ ಲೆಕ್ಕಿಸದೆ ನಗರದೊಳಗೆ...

  • ನಾಗಮಂಗಲ: ದಿನದಿಂದ ದಿನಕ್ಕೆ ಕೋವಿಡ್ 19 ಸೋಂಕು ತೀವ್ರವಾಗಿ ಹರಡುತ್ತಾ ಜನರನ್ನು ಆತಂಕ ಗೊಳಿಸುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ 144 ನೇ ಸೆಕ್ಷನ್‌...

  • ಭಾರತೀನಗರ: ಸಮೀಪದ ಕೊಕ್ಕರೆಬೆಳ್ಳೂರು ಪಕ್ಷಿಧಾಮದಲ್ಲಿ ಕಳೆದ ಮಂಗಳವಾರ (ಮಾ.17) ಮೃತಪಟ್ಟಿದ್ದ ಪೆಲಿಕಾನ್‌ಗೆ ಹಕ್ಕಿಜ್ವರವಿಲ್ಲ ಎಂದು ಬೆಂಗಳೂರು ಹೆಬ್ಟಾಳದ...

  • ಮಂಡ್ಯ: ಕೊರೊನಾ ನಿಯಂತ್ರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ದೇಶಾದ್ಯಂತ ಜಾರಿಗೊಳಿಸಿದ್ದ ಜನತಾ ಕರ್ಫ್ಯೂ ಜಿಲ್ಲೆಯಲ್ಲಿ ನಿರೀಕ್ಷೆಗೂ ಮೀರಿ ಯಶಸ್ಸನ್ನು...

ಹೊಸ ಸೇರ್ಪಡೆ

  • ಬೆನ್ನುಹುರಿಯ ಮುಂಭಾಗದಲ್ಲಿರುವ ಕೋಡಿನಾಕೃತಿಯ ಅಂಗಾಂಶಗಳನ್ನು ಬಾಧಿಸಿ ಚಲನೆಯ ಮೇಲೆ ದುಷ್ಪರಿಣಾಮ ಬೀರುವ ಅನಾರೋಗ್ಯವೇ ಪೋಲಿಯೋಮೈಲೈಟಿಸ್‌ ಅಥವಾ ಜನರು ಸಾಮಾನ್ಯವಾಗಿ...

  • ಸುಳ್ಯ: ಸಂಪೂರ್ಣ ಬಂದ್‌ನಿಂದಾಗಿ ಶನಿವಾರ ತಾಲೂಕಿನಲ್ಲಿ ಜನಜೀವನ ಸ್ತಬ್ಧವಾಗಿತ್ತು. ಜನ, ವಾಹನ ಓಡಾಟಕ್ಕೆ ಕಡಿವಾಣ ಬಿದ್ದು, ಲಾಕ್‌ಡೌನ್‌ ಆದೇಶ ಪಾಲನೆ ಆಯಿತು....

  • ವಿಶ್ವ ಆರೋಗ್ಯ ಸಂಸ್ಥೆಯ ವ್ಯಾಖ್ಯಾನದಂತೆ "ಕಿವುಡು' ಎಂದರೆ ಒಂದು ಅಥವಾ ಎರಡೂ ಕಿವಿಗಳಲ್ಲಿ ಶ್ರವಣ ಸಾಮರ್ಥ್ಯ ನಷ್ಟವಾಗಿದೆ. "ಶ್ರವಣ ಶಕ್ತಿ ನಷ್ಟ'ವನ್ನು ಕೇಳಿಸಿಕೊಳ್ಳುವ...

  • ಕಡಿಮೆ ದೇಹತೂಕ ಹೊಂದಿರುವುದು ಅಪಾರವಾಗಿ ಆರೋಗ್ಯ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಕಡಿಮೆ ದೇಹತೂಕ ಹೊಂದಿರುವ ಜನರು ಪದೇ ಪದೇ ಅನಾರೋಗ್ಯಗಳಿಗೆ...

  • ಶ್ರೀ ಅಷ್ಟ ಲಕ್ಷ್ಮೀ ಜ್ಯೋತಿಷ್ಯ ಮಂದಿರ ಶ್ರೀ ಶ್ರೀ ಬಿ.ಹೆಚ್. ಆಚಾರ್ಯ ಗುರೂಜಿ ಮನೆ #1191 26th main 9 ನೇ ಬ್ಲಾಕ್ ರಾಗಿಗುಡ್ಡ ಆರ್ಚ್ (ಬಸ್ ಸ್ಟಾಪ್) ಎದುರುಗಡೆ ಜಯನಗರ 9ನೇ...