ಸುಮಲತಾ ಬೆಂಬಲ ಕಾಂಗ್ರೆಸ್ಸಿಗಾ, ಬಿಜೆಪಿಗಾ?

Team Udayavani, Oct 30, 2019, 4:04 PM IST

ಕೆ.ಆರ್‌.ಪೇಟೆ: ಜಿಲ್ಲೆಯಲ್ಲಿ ಕೆಲ ತಿಂಗಳ ಹಿಂದೆ ನಡೆದ ಲೋಕಸಭಾ ಚುನಾವಣೆಯಲ್ಲಿ ಅನಿರೀಕ್ಷಿತವಾಗಿ ಚುನಾವಣಾ ಕಣಕ್ಕಿಳಿದು ಪಕ್ಷಾತೀತವಾಗಿ ಎಲ್ಲರ ಬೆಂಬಲ ಪಡೆದು ರಾಜ್ಯ ಸರ್ಕಾರವನ್ನೇ ಅಲುಗಾಡಿಸಿ ಭರ್ಜರಿ ಜಯಭೇರಿ ಬಾರಿಸಿದ್ದ ಸಂಸದೆ ಸುಮಲತಾ ಅಂಬರೀಶ್‌ ಅವರನ್ನು ಮುಂದಿನ ವಿಧಾನಸಭೆ ಉಪ ಚುನಾವಣೆ ಇಕ್ಕಟ್ಟಿನಲ್ಲಿ ಸಿಲುಕಿಸಿದೆ.

ಏಪ್ರಿಲ್‌ 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಲೋಕಸಭಾ ವ್ಯಾಪ್ತಿಯಲ್ಲಿ ಬರುವ ಎಂಟೂ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಜೆಡಿಎಸ್‌ ಶಾಸಕರೇ ಇದ್ದು ಜೆಡಿಎಸ್‌ ಭದ್ರಕೋಟೆ ಎಂದೇ ಬಿಂಬಿಸಲಾಗಿತ್ತು. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖೀಲ್‌ ಚುನಾವಣಾ ಕಣಕ್ಕಿಳಿಸಿದ್ದರು. ಸುಮಲತಾ ಗೆಲುವು ಕಷ್ಟ ಎಂದೇ ಎಲ್ಲರೂ ತಿಳಿದಿದ್ದರು. ಆದರೆ ಚುನಾವಣಾ ಪ್ರಚಾರದ ಬಿಸಿ ಏರುತ್ತಿದ್ದಂತೆ ಸುಮಲತಾಗೆ ಬಿಜೆಪಿ, ಕಾಂಗ್ರೆಸ್‌, ರೈತ ಸಂಘ, ಬಿಎಸ್‌ಪಿ, ಡಿಎಸ್‌ಎಸ್‌ ಸೇರಿದಂತೆ ವಿವಿಧ ಪಕ್ಷದ ನಾಯಕರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಬೆಂಬಲಿಸಿದರು.

ಅಂದಿನ ಬೆಂಬಲ ಇಂದು ಸಂಕಷ್ಟ: ನಿಖೀಲ್‌ ಕುಮಾರಸ್ವಾಮಿಯನ್ನು 1,25,876 ಮತಗಳ ಅಂತರದಲ್ಲಿ ಸೋಲಿಸುವ ಮೂಲಕ ದೇಶದಲ್ಲಿಯೇ ಸುದ್ದಿಯಾಗಿದ್ದರು. ಆದರೆ ಈಗ ಆ ಸರ್ವ ಪಕ್ಷದ ಬೆಂಬಲವೇ ಅವರಿಗೆ ಸಂಕಷ್ಟ ತಂದೊಡ್ಡಿದೆ. ಏಕೆಂದರೆ ಉಪ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳು ಕಣಕ್ಕೆ ಇಳಿಯುವುದರಿಂದ ಸ್ವತಂತ್ರ ಅಭ್ಯರ್ಥಿಯಾಗಿರುವ ಸುಮಲತಾ ಈಗ ಯಾವ ಪಕ್ಷಕ್ಕೆ ಬೆಂಬಲ ನೀಡಬೇಕು ಎಂಬ ಗೊಂದಲದಲ್ಲಿದ್ದಾರೆ. ಎರಡೂ ಪಕ್ಷದವರಿಂದ ಓಲೈಕೆ: ಸುಮಲತಾ ಅವರು ನಾನು ಯಾವುದೇ ಪಕ್ಷಕ್ಕೆ ಸೇರುವುದಿಲ್ಲ ಎಂದು ಘೋಷಣೆ ಮಾಡಿದ್ದರೂ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷದವರು ಉಪಚುನಾವಣೆಯಲ್ಲಿ ಬೆಂಬಲ ಪಡೆಯಲು ನಿರಂತರ ಪ್ರಯತ್ನ ಮಾಡುತ್ತಿದ್ದಾರೆ.

ಸುಮಲತಾ ಲೋಕಸಭಾ ಸದಸ್ಯರಾಗಿ ಆಯ್ಕೆಯಾದ ನಂತರ ತಾಲೂಕಿಗೆ ಮೊದಲ ಬಾರಿಗೆ ಆಗಮಿಸಿದಾಗ ಕಾಂಗ್ರೆಸ್‌ ಮತ್ತು ಬಿಜೆಪಿ ಮುಖಂಡರು ಅವರನ್ನು ಸ್ವಾಗತಿಸಲು ಸ್ಪರ್ಧೆಯನ್ನೇ ನಡೆಸಿದ್ದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹರಾಗಿರುವ ನಾರಾಯಣಗೌಡರಿಗೆ ಅವಕಾಶ ಸಿಕ್ಕರೆ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗುವ ಸಾಧ್ಯತೆ ಇದ್ದು, ಅವರು ಸುಮಲತಾ ಬೆಂಬಲ ಪಡೆಯಲು ತುದಿಗಾಲಿನಲ್ಲಿ ನಿಂತಿರುವುದರಿಂದ ರಸ್ತೆಯಲ್ಲೇ ನಿಂತು ಅವರನ್ನು ಸ್ವಾಗತಿಸಿದರೆ, ಬಳಿಕ ಕಾಂಗ್ರೆಸ್‌ ಮುಖಂಡರಿಂದ ಸ್ವಾಗತ.

ಬಳಿಕ ಎರಡೂ ಪಕ್ಷದವರೂ ಪ್ರತ್ಯೇಕ ಸಭೆ ನಡೆಸಿ ಸುಮಲತಾ ಅವರೊಂದಿಗೆ ಮಾತನಾಡಿದರು. ಆದರೆ ಈಗ ಸುಮಲತಾ ಅವರು ಯಾರನ್ನು ಬೆಂಬಲಿಸುತ್ತಾರೆ ಅಥವಾ ಚುನಾವಣಾ ಪ್ರಚಾರದಿಂದಲೇ ದೂರ ಉಳಿಯುವ ಸಾಧ್ಯತೆ ಇದೆಯಾ ಎಂಬ ಬಿಸಿಬಿಸಿ ಚರ್ಚೆಗಳು ಕ್ಷೇತ್ರದಲ್ಲಿ ಕೇಳಿ ಬರುತ್ತಿವೆ. ಮಾಜಿ ಶಾಸಕ ಕೆ.ಬಿ.ಚಂದ್ರೆಶೇಖರ್‌ ನೇರವಾಗಿ ಸುಮಲತಾ ಪರವಾಗಿ ಚುಣಾವಣಾ ಪ್ರಚಾರ ಮಾಡದಿದ್ದರು. ಜೊತೆಗೆ ಸುಮಲತಾ ವಾಹನದ ಹಿಂಭಾಗದಲ್ಲಿ ಅವರೂ ತಮ್ಮ ವಾಹನದಲ್ಲಿ ಸುತ್ತಾಡಿ ಬೆಂಬಲ ನೀಡಿದ್ದರು. ಹಾಗಾಗಿ ಉಪ ಚುನಾವಣೆಯಲ್ಲಿ ಸುಮಲತಾ ತಮಗೇ ಬೆಂಬಲ ನೀಡಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.

ಆದರೆ, ನಾರಾಯಣಗೌಡರು ಆಗ ಜೆಡಿಎಸ್‌ ಶಾಸಕರಾಗಿದ್ದರಿಂದ ಸುಮಲತಾ ಅವರಿಗೆ ಯಾವುದೇ ಬೆಂಬಲ ನೀಡಿರಲಿಲ್ಲ. ನಾರಾಯಣಗೌಡರು ನೀಡಿದ್ದ ಹೇಳಿಕೆಯಿಂದಲೇ ಜಿಲ್ಲೆಯಲ್ಲಿ ಸಹಸ್ರಾರು ಮತಗಳು ಸುಮಲತಾಗೆ ಲಭಿಸಲು ಕಾರಣವಾಗಿತ್ತು. ಆದರೆ, ಈಗ ನಾರಾಯಣಗೌಡರು ಸುಮಲತಾ ಅವರಿಗೆ ನೇರವಾಗಿ ಬೆಂಬಲ ನೀಡಿರುವ ಬಿಜೆಪಿ ಅಭ್ಯರ್ಥಿ ಆದರೆ ಸುಮಲತಾ ಅವರು ನನಗೇ ಬೆಂಬಲ ನೀಡುತ್ತಾರೆ ಎಂಬ ವಿಶ್ವಾಸದಲ್ಲಿದ್ದಾರೆ. ಜೊತೆಗೆ ರೈತಸಂಘದ ಅಭ್ಯರ್ಥಿ ಏನಾದರೂ ಕಣಕ್ಕೆ ಇಳಿದರೆ ಸುಮಲತಾ ಅವರು ಯಾರಿಗೂ ಬೆಂಬಲ ನೀಡದೆ ತಟಸ್ಥ ನಿಲುವು ತಾಳುವುದು ಖಚಿತ ಎಂಬ ಮಾತುಗಳೂ ಕೇಳಿ ಬರುತ್ತಿದೆ.

 

-ಎಚ್‌.ಬಿ.ಮಂಜುನಾಥ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಮಂಡ್ಯ: ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಜಿಲ್ಲೆಯ ಎಲ್ಲಾ ಶಿವಾಲಯಗಳಲ್ಲಿ ವಿಶೇಷ ಪೂಜೆ, ಅಭಿಷೇಕ, ರುದ್ರಾಭಿಷೇಕ, ಹೋಮ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಶ್ರದ್ಧಾ ಭಕ್ತಿಯಿಂದ...

  • ಮಂಡ್ಯ: ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ನಡೆದ ಉಗ್ರರ ದಾಳಿಯಲ್ಲಿ ವೀರಮರಣವನ್ನಪ್ಪಿದ ಮದ್ದೂರು ತಾಲೂಕಿನ ಗುಡಿಗೆರೆ ಗ್ರಾಮದ ಹೆಚ್‌. ಗುರು...

  • ಮೇಲುಕೋಟೆ: ವಿಭಿನ್ನ ಸಂಸ್ಕೃತಿ, ಭಾಷೆ, ಆಚಾರ-ವಿಚಾರ, ಉಡುಗೆ-ತೊಡುಗೆ ಹೊಂದಿರುವ ಭಾರತದ ಯುವಜನರಲ್ಲಿ ರಾಷ್ಟ್ರೀಯ ಭಾವೈಕ್ಯತೆ ಮೂಡಿಸುವ ಉದ್ದೇಶದಿಂದ ಏಕ್‌ ಭಾರತ್‌...

  • ಪಾಂಡವಪುರ: ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಹಾಗೂ ನೀರಿನ ಬವಣೆ ನೀಗಿಸುವ ಸಲುವಾಗಿ ಚೆಕ್‌ ಡ್ಯಾಂ ನಿರ್ಮಾಣಕ್ಕೆ ಹೆಚ್ಚು ಆದ್ಯತೆ ನೀಡಿ ಕೆಲಸ ಮಾಡಿದ್ದೇನೆ...

  • ಮಂಡ್ಯ: ಮೇಲುಕೋಟೆಯಲ್ಲಿ ಫೆ.18ರಿಂದ 22ರವರೆಗೆ ರಾಷ್ಟ್ರೀಯ ಭಾವೈಕ್ಯತಾ ಶಿಬಿರ ಹಾಗೂ ಸಾಂಸ್ಕೃತಿಕ ಹಬ್ಬ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌...

ಹೊಸ ಸೇರ್ಪಡೆ