ನಾಗಮಂಗಲ: ಭೀಕರ ಅಪಘಾತದಲ್ಲಿ ಆರು ಮಂದಿ ದುರ್ಮರಣ ; ಮೂವರಿಗೆ ಗಂಭೀರ ಗಾಯ

Team Udayavani, Nov 21, 2019, 11:12 PM IST

ನಾಗಮಂಗಲ: ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಅಂಚೆ ಚಿಟ್ಟನಹಳ್ಳಿ ಬಳಿ ಶ್ರೀರಂಗಪಟ್ಟಣ – ಬೀದರ್ ಹೆದ್ದಾರಿಯಲ್ಲಿ ಇಂದು ರಾತ್ರಿ ಕಾರು ಮತ್ತು ಟೆಂಪೋ ಟ್ರಾವೆಲ್ಲರ್ ನಡುವೆ ಸಂಭವಿಸಿದ ಮುಖಾಮುಖಿ ಢಿಕ್ಕಿಯಲ್ಲಿ ಎರಡೂ ವಾಹನಗಳಲ್ಲಿದ್ದ ಒಟ್ಟು ಆರು ಜನರು ಮೃತಪಟ್ಟು ಐವರು ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಆದಿ ಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳ್ಳೂರು ಠಾಣೆಯಲ್ಲಿ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.

ಬೆಳ್ಳೂರು ಕ್ರಾಸ್ ಸಮೀಪವಿರುವ ಬಿಜಿಎಸ್ ಸಸ್ಯಕಾಶಿ ಬಳಿ ಈ ಘಟನೆ ನಡೆದಿದ್ದು, ನಾಗಮಂಗಲದಿಂದ ಬೆಳ್ಳೂರು ಕ್ರಾಸ್ ಕಡೆಗೆ ಹೋಗುತ್ತಿದ್ದ ಟಾಟಾ ಸುಮೋಗೆ 407 ಕ್ಯಾಂಟರ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಟಾಟಾ ಸುಮೋದಲ್ಲಿದ್ದ ಓರ್ವ ಮಹಿಳೆ ಸೇರಿದಂತೆ ಆರು ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಮೃತಪಟ್ಟವರನ್ನು ನಾಗಮಂಗಲ ಪಟ್ಟಣದ ಬಾಕರ್ ಶರೀಫ್ (50), ಮಹಬೂಬ್ ಖಾನ್ (47), ನವ್‍ಸಾದ್ (45), ಮಕ್ಸೂದ್ (35) ಮತ್ತು ಪಾಯಿರ್ ಪಾಷ ಎಂದು ಗುರುತಿಸಲಾಗಿದ್ದು ಇನ್ನೋರ್ವ ಮಹಿಳೆಯ ಗುರುತು ಪತ್ತೆಯಾಗಿಲ್ಲ.

ಇವರೆಲ್ಲರೂ ಅಲ್ ಪಲಾಹ್ ಪತ್ತಿನ ಸಹಕಾರ ಸಂಘದ ನಿರ್ದೇಶಕರು ನಿರ್ದೇಶಕರುಗಳಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅಧಿಕಾರವಧಿ ಮುಗಿದ ಕಾರಣ ಕುಣಿಗಲ್ ಬಳಿಯಿರುವ ತಾಜ್ ಹೋಟೆಲ್ ನಲ್ಲಿ ಊಟ ಮುಗಿಸಿ ಹಿಂತಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಸಂಘದ ನಿರ್ದೇಶಕ ಅಮ್ಜದ್ ಅವರಿಗೆ ಕಾಲು ಮುರಿತವಾಗಿದೆ.

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ