Udayavni Special

ಅಂತರ್ಜಾಲದಲ್ಲಿ ಗ್ರಾಪಂ ಹೆಸರು ಬದಲಾಗಿಲ್ಲ : ಐದು ವರ್ಷಗಳಿಂದಲೂ ಅಧಿಕಾರಿಗಳ ನಿರ್ಲಕ್ಷ್ಯ

ನರೇಗಾ, ಪಂಚತಂತ್ರದಲ್ಲಿ ಹಳೇ ವಿಳಾಸ

Team Udayavani, Dec 15, 2020, 2:39 PM IST

ಅಂತರ್ಜಾಲದಲ್ಲಿ ಗ್ರಾಪಂ ಹೆಸರು ಬದಲಾಗಿಲ್ಲ : ಐದು ವರ್ಷಗಳಿಂದಲೂ ಅಧಿಕಾರಿಗಳ ನಿರ್ಲಕ್ಷ್ಯ

ಮಂಡ್ಯ: ಮಳವಳ್ಳಿ ತಾಲೂಕಿನ ನಾಗೇಗೌಡನದೊಡ್ಡಿ ಗ್ರಾಮ ಪಂಚಾಯಿತಿಯಾಗಿ ಬದಲಾದವಣೆ ಗೊಂಡು ಐದು ವರ್ಷ ಕಳೆದರೂ ಇನ್ನೂ ನರೇಗಾ ಹಾಗೂ ಪಂಚತಂತ್ರ ಅಂತರ್ಜಾಲಗಳಲ್ಲಿ ಬದಲಾವಣೆಯಾಗಿಲ್ಲ. 2014-15ರಲ್ಲಿ ಮಾರೇಹಳ್ಳಿ ಗ್ರಾಮ ಪಂಚಾಯಿತಿಯನ್ನು ನಾಗೇಗೌಡನದೊಡ್ಡಿ ಗ್ರಾಮ ಪಂಚಾಯಿತಿಯಾಗಿ ಬದಲಾವಣೆ  ಮಾಡಲಾಗಿದೆ. ಆದರೆ, ಐದು ವರ್ಷ ಕಳೆಯುತ್ತಾ ಬಂದರೂ, ನರೇಗಾ ಹಾಗೂ ಪಂಚತಂತ್ರಗಳಲ್ಲಿ ಇನ್ನೂ ಮಾರೇಹಳ್ಳಿ ಗ್ರಾಪಂ ಎಂದು ನಮೂದಾಗಿದೆ.

ಮಾರೇಹಳ್ಳಿ ಪುರಸಭೆ ವ್ಯಾಪ್ತಿಗೆ: ಮಾರೇಹಳ್ಳಿ ಗ್ರಾಮವನ್ನು ಐದು ವರ್ಷಗಳ ಹಿಂದೆ ಮಳವಳ್ಳಿ ಪಟ್ಟಣದ ಪುರಸಭೆ ವ್ಯಾಪ್ತಿಗೆ ಸೇರಿಸಲಾಗಿದೆ. ಆಗ ನಾಗೇಗೌಡನದೊಡ್ಡಿಯನ್ನು ಗ್ರಾಮ ಪಂಚಾಯಿತಿ ಯನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಈ ವ್ಯಾಪ್ತಿಗೆ ಬೋಸೇಗೌಡನದೊಡ್ಡಿ, ವಡ್ಡರಹಳ್ಳಿ, ಚನ್ನೇಗೌಡ ನದೊಡ್ಡಿ, ತಮ್ಮಡಹಳ್ಳಿ, ಅಂಚೇದೊಡ್ಡಿ, ಅಣ್ಣೆಕೊಪ್ಪಲು ಗ್ರಾಮಗಳು ಒಳಪಟ್ಟಿವೆ.

ಅಂತರ್ಜಾಲದಲ್ಲೂ ಮಾರೇಹಳ್ಳಿ: ಪಂಚತಂತ್ರ ಹಾಗೂ ನರೇಗಾ ಅಂತರ್ಜಾಲಗಳಲ್ಲಿ ಮಾರೇಹಳ್ಳಿ ಗ್ರಾಮಪಂಚಾಯಿತಿಎಂದೇ ನಮೂದಾಗಿದ್ದು, ಇನ್ನೂಬದಲಾವಣೆಯಾಗಿಲ್ಲ. ಇದರಿಂದ ಆಯಾಗ್ರಾಮಗಳಲ್ಲಿ ಪಂಚಾಯಿತಿಯ ಹೆಸರು ಮಾರೇಹಳ್ಳಿ ಎಂದೇ ನಮೂದಾಗುತ್ತದೆ.

ದಾಖಲೆಗಳಲ್ಲೂ ಬದಲಾವಣೆ ಇಲ್ಲ: ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಕಚೇರಿ ಕಾರ್ಯನಿರ್ವಹಿಸುತ್ತಿದೆ. ಆದರೆ, ಯಾವುದೇ ದಾಖಲಾತಿಗಳು ಮಾರೇಹಳ್ಳಿ ಗ್ರಾಮ ಪಂಚಾಯಿತಿ ಎಂದು ತೋರಿಸುತ್ತದೆ. ನಾಗೇಗೌಡನದೊಡ್ಡಿಯಲ್ಲಿದ್ದರೂ ಮಾರೇಹಳ್ಳಿ ಗ್ರಾಮ ಪಂಚಾಯಿತಿ ಎಂದು ದಾಖಲೆ ಪಡೆಯಬೇಕಾಗಿದೆ. ಅಲ್ಲದೆ, ತಾಲೂಕು ಕಚೇರಿಯಲ್ಲೂ, ನರೇಗಾ ಜಾಬ್‌ ಕಾರ್ಡ್‌ ಹಾಗೂ ಆರ್‌ಟಿಸಿಯಲ್ಲೂ ಮಾರೇಹಳ್ಳಿ ಎಂದೇ ನಮೂದಾಗುತ್ತಿದೆ.

ಕಂದಾಯ ಗ್ರಾಮವಾಗಿಲ್ಲ: ಮೊದಲು ಮಾರೇಹಳ್ಳಿ ಗ್ರಾಮವನ್ನು ಕಂದಾಯ ಗ್ರಾಮವನ್ನಾಗಿ ಮಾಡಿ ಗ್ರಾಪಂ ಮಾಡಲಾಗಿತ್ತು. ಮಾರೇಹಳ್ಳಿ ಪುರಸಭೆಗೆ ಸೇರ್ಪಡೆಗೊಂಡ ಬಳಿಕ ನಾಗೇಗೌಡನದೊಡ್ಡಿ ಗ್ರಾಮವನ್ನು ಗ್ರಾಪಂನ್ನಾಗಿ ಮಾಡಲಾಗಿದೆ. ಆದರೆ, ಇನ್ನೂ ಕಂದಾಯ ಗ್ರಾಮ ವನ್ನಾಗಿ ಘೋಷಣೆಮಾಡಿಲ್ಲ. ಕಂದಾಯ ಗ್ರಾಮದ ವ್ಯಾಪ್ತಿಗೆ ಒಳಪಟ್ಟರೆಎಲ್ಲ ದಾಖಲಾತಿಗಳು ಬದಲಾಗಲಿವೆ. ಕೂಡಲೇ ಅಧಿಕಾರಿಗಳು ಇತ್ತ ಗಮನಹರಿಸಿ ಅಂತರ್ಜಾಲ ಹಾಗೂ ದಾಖಲಾತಿಗಳಲ್ಲಿ ನಾಗೇಗೌಡನದೊಡ್ಡಿ ಗ್ರಾಮ ಪಂಚಾಯಿತಿ ಎಂದು ಬದಲಾಯಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ದಾಖಲೆಗಳ ಬದಲಾವಣೆಗೆ ನಿರ್ಲಕ್ಷ್ಯ :  ಅಧಿಕಾರಿಗಳ ನಿರ್ಲಕ್ಷ್ಯದಿಂದ ಇನ್ನೂ ದಾಖಲೆಗಳಲ್ಲಿ ಬದಲಾವಣೆಯಾಗಿಲ್ಲ. ಐದು ವರ್ಷ ಕಳೆಯುತ್ತಾ ಬಂದರೂ ಇನ್ನೂ ನಾಗೇಗೌಡನದೊಡ್ಡಿ ಗ್ರಾಮ ಪಂಚಾಯಿತಿಯನ್ನಾಗಿ ಮಾರ್ಪಡಿಸಿರುವುದು ಗ್ರಾಮಸ್ಥರ ಬೇಸರಕ್ಕೆ ಕಾರಣವಾಗಿದೆ. ನರೇಗಾ ಹಾಗೂ ಪಂಚತಂತ್ರ ಅಂತರ್ಜಾಲದಲ್ಲಿ ನಾಗೇಗೌಡನದೊಡ್ಡಿ ಗ್ರಾಮ ಪಂಚಾಯಿತಿಯನ್ನಾಗಿ ಬದಲಾಯಿಸುವಂತೆ ಸರ್ಕಾರ, ತಹಶೀಲ್ದಾರ್‌, ಪಂಚಾಯತ್‌ ರಾಜ್‌ ಇಲಾಖೆಯ ಅಂತರ್ಜಾಲ ವಿಭಾಗಕ್ಕೆ ಪತ್ರ ಬರೆಯಲಾಗಿದೆ. ಆದರೂ, ಇನ್ನೂ ಕ್ರಮ ಕೈಗೊಂಡಿಲ್ಲ.

ನಾಗೇಗೌಡನದೊಡ್ಡಿ ಗ್ರಾಮವನ್ನು ಗ್ರಾಮ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಿ ಐದು ವರ್ಷಗಳು ಕಳೆಯುತ್ತಾ ಬಂದರೂ,ಇನ್ನೂ ದಾಖಲಾತಿಗಳಲ್ಲಿ ಬದಲಾಗಿಲ್ಲ. ಕೂಡಲೇ ಅಧಿಕಾರಿಗಳು ಇದರ ಬಗ್ಗೆ ಕ್ರಮ ಕೈಗೊಂಡು ನಾಗೇಗೌಡನದೊಡ್ಡಿ ಗ್ರಾಪಂ ಎಂದು ಎಲ್ಲ ದಾಖಲಾತಿಗಳಲ್ಲೂ ಬದಲಾಯಿಸಬೇಕು. -ರಮೇಶ್‌ ಪಟೇಲ್‌, ನಾಗೇಗೌಡನದೊಡ್ಡಿ

ನರೇಗಾ ಹಾಗೂ ಪಂಚತಂತ್ರ ಅಂತರ್ಜಾಲದಲ್ಲಿ ನಾಗೇಗೌಡನದೊಡ್ಡಿ ಗ್ರಾಮ ಪಂಚಾಯಿತಿಯನ್ನಾಗಿ ಬದಲಾಯಿಸುವಂತೆ ಪತ್ರ ಬರೆದು ಮನವಿ ಮಾಡಲಾಗಿದೆ. ಆದರೂ,ಇನ್ನೂ ಬದಲಾವಣೆ ಮಾಡಿಲ್ಲ. ನಾನೇ ಖುದ್ದಾಗಿ ಹೋಗಿ ಬದಲಾಯಿಸಲು ಕ್ರಮ ಕೈಗೊಳ್ಳುತ್ತೇನೆ. ಕಂದಾಯ ಗ್ರಾಮವನ್ನಾಗಿ ಮಾರ್ಪಡಿಸಿಲ್ಲ. ಮಂಗಳಾ, ಪಿಡಿಒ, ನಾಗೇಗೌಡನದೊಡ್ಡಿ ಗ್ರಾಪಂ

 

– ಎಚ್‌.ಶಿವರಾಜು

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ric-ket

ನಾಲ್ಕನೇ ಟೆಸ್ಟ್ ಪಂದ್ಯ: ಆಸ್ಟ್ರೇಲಿಯಾ 369ಕ್ಕೆ ಆಲೌಟ್; ಭಾರತಕ್ಕೆ ಆರಂಭಿಕ ಆಘಾತ

mdoi

ವಿಶ್ವದ ಅತಿದೊಡ್ಡ ಲಸಿಕೆ ಆಂದೋಲನಕ್ಕೆ ಮೋದಿ ಚಾಲನೆ:10:30ಕ್ಕೆ ದೇಶವನ್ನು ಉದ್ದೇಶಿಸಿ ಭಾಷಣ !

chinna

ಚಿನ್ನದ ಸರ ಕಳ್ಳತನವಾಗಿದೆ ಎಂದ ಅಜ್ಜಿ:ಪೊಲೀಸರ ತನಿಖೆಯ ವೇಳೆ ಬಯಲಾಯ್ತು ಬೆಚ್ಚಿ ಬೀಳುವ ರಹಸ್ಯ

ಈಗ ಚುನಾವಣೆ ನಡೆದರೂ ಮೋದಿಯದ್ದೇ ಗೆಲುವು!

ಈಗ ಚುನಾವಣೆ ನಡೆದರೂ ಮೋದಿಯದ್ದೇ ಗೆಲುವು!

ಜಾಗತಿಕ ಡೋಸ್‌ ನೋಟ

ಜಾಗತಿಕ ಡೋಸ್‌ ನೋಟ

ಕೋವಿಡ್ ದಿಂದ ಬಳಲಿದ ಶಿಕ್ಷಣ ವ್ಯವಸ್ಥೆ

ಕೋವಿಡ್ ದಿಂದ ಬಳಲಿದ ಶಿಕ್ಷಣ ವ್ಯವಸ್ಥೆ

ಗಣರಾಜ್ಯೋತ್ಸವ  55 ವರ್ಷಗಳ ಬಳಿಕ  ವಿದೇಶಿ ಮುಖ್ಯ ಅತಿಥಿ ಇಲ್ಲ

ಗಣರಾಜ್ಯೋತ್ಸವ 55 ವರ್ಷಗಳ ಬಳಿಕ ವಿದೇಶಿ ಮುಖ್ಯ ಅತಿಥಿ ಇಲ್ಲಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

The farmer commits suicide by holding an electric wire

ಸಾಲಬಾಧೆ: ವಿದ್ಯುತ್ ಪ್ರವಹಿಸುತ್ತಿದ್ದ ತಂತಿ ಹಿಡಿದು ರೈತ ಆತ್ಮಹತ್ಯೆ

abhishek

ಅಭಿಷೇಕ್ ನಟನೆಯ ‘ಬ್ಯಾಡ್ ಮ್ಯಾನರ್ಸ್’ ಚಿತ್ರತಂಡಕ್ಕೆ ಶುಭ ಕೋರಿದ ನಟ ದರ್ಶನ್

bike

ಮಂಡ್ಯ: ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳ ಬಂಧನ

ram-mandir

ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ ಸುಮಲತಾ ಅಂಬರೀಶ್

mandya-2

ಮಂಡ್ಯ: ದರೋಡೆಗೆ ಹೊಂಚು ಹಾಕುತ್ತಿದ್ದ 10 ಮಂದಿಯ ಬಂಧನ

MUST WATCH

udayavani youtube

ಪಾಕ್ ಪರ ಘೋಷಣೆ ವಿಚಾರ: ಮಂಗಳೂರಿನಲ್ಲಿ ಎಸ್‌ಡಿಪಿಐನಿಂದ ‘SP ಕಚೇರಿ ಚಲೋ’ ಪ್ರತಿಭಟನೆ

udayavani youtube

ದಕ್ಷಿಣಕನ್ನಡ ಜಿಲ್ಲೆಯ 6 ಕೇಂದ್ರಗಳಲ್ಲಿ ನಾಳೆಯಿಂದ ಲಸಿಕೆ ವಿತರಣೆ: ಡಾ. ಕೆ.ವಿ. ರಾಜೇಂದ್ರ

udayavani youtube

ಸಚಿವ ಸಂಪುಟ ಅಸಮಾಧಾನ: ಮಾರ್ಗದಲ್ಲಿ ನಿಂತು ಅಪಸ್ವರ ತೆಗೆಯೋ ಅವಶ್ಯಕತೆ ಇಲ್ಲ ಎಂದ ನಳಿನ್

udayavani youtube

ಕತ್ತಲೆ ಕವಿದ ಬದುಕಿನಲ್ಲಿ ಬೆಳಕು ಮೂಡಿಸಿದ ಸ್ವ ಉದ್ಯೋಗ | Udayavani

udayavani youtube

ಭಾರತ ಆತ್ಮನಿರ್ಭರವಾಗಲು ಗ್ರಾಹಕರು ಸ್ಥಳೀಯ ವ್ಯಾಪಾರಿಗಳನ್ನು ಬೆಂಬಲಿಸಬೇಕು

ಹೊಸ ಸೇರ್ಪಡೆ

ric-ket

ನಾಲ್ಕನೇ ಟೆಸ್ಟ್ ಪಂದ್ಯ: ಆಸ್ಟ್ರೇಲಿಯಾ 369ಕ್ಕೆ ಆಲೌಟ್; ಭಾರತಕ್ಕೆ ಆರಂಭಿಕ ಆಘಾತ

mdoi

ವಿಶ್ವದ ಅತಿದೊಡ್ಡ ಲಸಿಕೆ ಆಂದೋಲನಕ್ಕೆ ಮೋದಿ ಚಾಲನೆ:10:30ಕ್ಕೆ ದೇಶವನ್ನು ಉದ್ದೇಶಿಸಿ ಭಾಷಣ !

chinna

ಚಿನ್ನದ ಸರ ಕಳ್ಳತನವಾಗಿದೆ ಎಂದ ಅಜ್ಜಿ:ಪೊಲೀಸರ ತನಿಖೆಯ ವೇಳೆ ಬಯಲಾಯ್ತು ಬೆಚ್ಚಿ ಬೀಳುವ ರಹಸ್ಯ

ಗಲಭೆಗೆ ಬಿಟ್‌ಕಾಯಿನ್‌ ಪೇಮೆಂಟ್‌?

ಗಲಭೆಗೆ ಬಿಟ್‌ಕಾಯಿನ್‌ ಪೇಮೆಂಟ್‌?

ಈಗ ಚುನಾವಣೆ ನಡೆದರೂ ಮೋದಿಯದ್ದೇ ಗೆಲುವು!

ಈಗ ಚುನಾವಣೆ ನಡೆದರೂ ಮೋದಿಯದ್ದೇ ಗೆಲುವು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.