ಸೌಲಭ್ಯವಿಲ್ಲದೇ ನರಳುತ್ತಿದೆ ಬೇವಿನಹಳ್ಳಿ ಶಾಲೆ
Team Udayavani, Jan 21, 2021, 12:34 PM IST
ಮಂಡ್ಯ: ನಗರದ ಸಮೀಪವೇ ಇರುವ ಬೇವಿನಹಳ್ಳಿ ಗ್ರಾಮದ ಸರ್ಕಾರಿ ಶಾಲೆ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಕೊಠಡಿಗಳು ಶಿಥಿಲಗೊಂಡಿದ್ದು, ಹೆಂಚುಗಳು ಒಡೆದು ಹೋಗಿದ್ದು, ಮಳೆ ಬಂದರೆ ನೀರು ಸೋರುತ್ತದೆ. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ.
76 ಮಕ್ಕಳ ದಾಖಲಾತಿ: 1ನೇ ತರಗತಿಯಿಂದ 7ನೇ ತರಗತಿವರೆಗೆ ಸುಮಾರು 76 ಮಕ್ಕಳು ದಾಖಲಾಗಿದ್ದಾರೆ. ಬಡ, ಕಾರ್ಮಿಕ ಮಕ್ಕಳು ಇದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ, ಶಾಲೆಯ ಕೊಠಡಿಗಳು ಶಿಥಿಲಗೊಂಡಿರುವುದರಿಂದ ಮಕ್ಕಳು ಆತಂಕದಲ್ಲಿಯೇ ಪಾಠ ಕೇಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕೊಠಡಿ ಸಂಪೂರ್ಣ ಶಿಥಿಲ: ಶಾಲೆಯಲ್ಲಿ 10 ಕೊಠಡಿಗಳಿವೆ. ಅದರಲ್ಲಿ ಒಂದು ಕೊಠಡಿ ಸಂಪೂರ್ಣವಾಗಿ ಶಿಥಿಲ ಗೊಂಡಿದ್ದು, ಗೋಡೆಗಳು ಬಿರುಕು ಬಿಟ್ಟಿದ್ದು, ಬೀಳುವ ಹಂತದಲ್ಲಿದೆ. ಅನುಪಯುಕ್ತಗಳನ್ನು ಕೊಠಡಿ ಯಲ್ಲಿ ಹಾಕಲಾಗಿದ್ದು, ಪಾಳು ಬಿದ್ದಿದೆ. ಎಲ್ಲ ಕೊಠಡಿಗಳ ಮೇಲ್ಛಾವಣಿ ಹೆಂಚುಗಳಾಗಿರುವುದರಿಂದ ಒಡೆದು ಹೋಗಿದ್ದು, ಮಳೆ ಬಂದಾಗ ನೀರು ಸೋರುತ್ತವೆ. ಇದರಿಂದ ಮಕ್ಕಳು ಪಾಠ ಕೇಳಲು ತೊಂದರೆಯಾಗು ತ್ತದೆ. ಗ್ರಾಮಸ್ಥರೇ ಹೆಂಚುಗಳನ್ನು ಸರಿಪಡಿಸಿದರೂ ಮತ್ತೆ ಮತ್ತೆ ಜರುಗುವ ಮೂಲಕ ಬೆಳಕಿನ ಕಿಂಡಿಗಳಂತೆ ಗೋಚರಿಸುತ್ತವೆ.
ಯೋಗ್ಯವಿಲ್ಲದ ಶೌಚಾಲಯ: ಶೌಚಾಲಯವಿದ್ದರೂ ಬಳಕೆಗೆ ಯೋಗ್ಯವಾಗಿಲ್ಲ. ಸ್ವತ್ಛತೆ ಇಲ್ಲದೆ, ಗಬ್ಬು ನಾರುತ್ತಿವೆ. ಶೌಚಾಲಯಕ್ಕೆ ಕುಡಿಯುವ ನೀರಿನ ಸೌಲಭ್ಯವೂ ಇಲ್ಲದಂತಾಗಿದೆ.
ಇದನ್ನೂ ಓದಿ:ಹಿಪ್ಪುನೇರಳೆ ತೋಟಕ್ಕೆ ವಿಷ ಸಿಂಪಡಿಸಿದ ಕಿಡಿಗೇಡಿಗಳು
ಕಾಂಪೌಂಡ್ ಇಲ್ಲ: ಶಾಲೆಗೆ ಯಾವುದೇ ಕಾಂಪೌಂಡ್ ಇಲ್ಲದಿರುವುದರಿಂದ ಅಭದ್ರತೆ ಕಾಡುತ್ತಿದೆ. ರಾತ್ರಿ ವೇಳೆ ಕೆಲವು ಕಿಡಿಗೇಡಿಗಳು ಮದ್ಯ ಸೇವನೆಗೆ ಬಳಸಿಕೊಳ್ಳುತ್ತಿದ್ದಾರೆ. ಬೆಳಗ್ಗೆ ಬಂದಾಗ ಮದ್ಯದ ಬಾಟಲ್‌ಗಳು, ಬೀಡಿ, ಸಿಗರೇಟಿನ ವಸ್ತುಗಳು ಬಿದ್ದಿರುತ್ತವೆ ಎಂದು ತಿಳಿದು ಬಂದಿದೆ.
ಸಮನ್ವಯದ ಕೊರತೆ
ಶಾಲೆ, ಎಸ್‌ಡಿಎಂಸಿ ನಡುವೆ ಸಮನ್ವಯದ ಕೊರತೆ ಇದೆ. ಶಾಲೆ ಹಾಗೂ ಗ್ರಾಮಸ್ಥರು ಒಗ್ಗಟ್ಟಾಗಿ ಅಭಿವೃದ್ಧಿಗೆ ಶ್ರಮಿಸಿದರೆ ಶಾಲೆ ಪುನಶ್ಚೇತನಗೊಳಿಸಬಹುದಾಗಿದೆ. ಶಾಲೆಯ ಯಾವುದೇ ಕಾರ್ಯಕ್ರಮ, ಅಭಿವೃದ್ಧಿಗೆ ಗ್ರಾಮದಲ್ಲಿ ಸ್ಪಂದನೆ ಇಲ್ಲ ಎಂದು ಮುಖ್ಯ ಶಿಕ್ಷಕಿ ಹೇಳಿದರೆ, ನಾವು ಎಲ್ಲ ರೀತಿಯ ಸಹಕಾರ ನೀಡುತ್ತೇವೆ. ಆದರೆ, ಮುಖ್ಯ ಶಿಕ್ಷಕರು ನಿರ್ಲಕ್ಷ್ಯ ವಹಿಸುತ್ತಾರೆ ಎಂದು ಎಸ್ ಡಿಎಂಸಿ ಅಧ್ಯಕ್ಷರು ಹೇಳುತ್ತಾರೆ.
ಶಾಲೆ ದುರಸ್ತಿಗೆ ಹಲವು ಬಾರಿ ಜನಪ್ರತಿನಿಧಿಗಳು, ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಕ್ರಮ ವಹಿಸುತ್ತಿಲ್ಲ. ಸುಮಾರು ವರ್ಷದಿಂದ ಶಾಲೆ ಇದೇ ಪರಿಸ್ಥಿತಿಯಲ್ಲಿದೆ. ಆದರೂ, ಇದಕ್ಕೆ ಹಣ ಬಿಡುಗಡೆ ಮಾಡಿ ದುರಸ್ತಿಗೆ ಮುಂದಾಗುತ್ತಿಲ್ಲ.
ರವಿ, ಎಸ್‌ಡಿಎಂಸಿ ಅಧ್ಯಕ್ಷ, ಬೇವಿನಹಳ್ಳಿ
ಎಚ್.ಶಿವರಾಜು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಮಂಗಳೂರು: 22 ಎಟಿಎಂ ಸ್ಕಿಮ್ಮಿಂಗ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಂತಾರಾಜ್ಯ ಚೋರರ ಬಂಧನ
ರಾಷ್ಟ್ರಮಟ್ಟದ ಜಾದೂ ದಿನಾಚರಣೆ: ಮಂಗಳೂರಿನಲ್ಲಿ ಮನಸೂರೆಗೊಂಡ ಕುದ್ರೋಳಿ ಗಣೇಶ್ ಮ್ಯಾಜಿಕ್ ಶೋ
ದಾನದ ಪರಿಕಲ್ಪನೆಯ ಕುರಿತು ಡಾ.ಗುರುರಾಜ ಕರ್ಜಗಿ ಹೇಳಿದ ಕತೆ ಕೇಳಿ.. Part-1
ಎಟಿಎಂ ನಲ್ಲಿ ಸಹಾಯದ ನೆಪವೊಡ್ಡಿ 70 ಸಾವಿರ ರೂ. ಲಪಟಾಯಿಸಿದ ವಂಚಕ ! | Udayavani
ದೇಹದ ತೂಕಕ್ಕೂ, ಮೊಣಕಾಲ ಆರೋಗ್ಯಕ್ಕೂ ಸಂಬಂಧ ಇದೆಯೇ?
ಹೊಸ ಸೇರ್ಪಡೆ
ಭಾರತ, ಚೀನಾಕ್ಕೆ ಅನುಕೂಲ ವಾತಾವರಣ : ಭೂಸೇನಾ ಮುಖ್ಯಸ್ಥ ನರವಣೆ ಅಭಿಮತ
ಕಾಶ್ಮೀರ ಸಮಸ್ಯೆ ನಿವಾರಣೆಗೆ ಭಾರತ ಸ್ಪಂದಿಸುತ್ತಿಲ್ಲ: ಇಮ್ರಾನ್ ಆರೋಪ
ಶಾಶ್ವತ ಆಯೋಗ ತೀರ್ಪಿನಲ್ಲಿ ಯಾವುದೇ ಮಾರ್ಪಾಟಿಲ್ಲ: ಸುಪ್ರೀಂ ಕೋರ್ಟ್ ಸ್ಪಷ್ಟನೆ
80 ಕೋಟಿ ರೂ. ಕರೆಂಟ್ ಬಿಲ್ ನೋಡಿ ಆಸ್ಪತ್ರೆ ಸೇರಿದ ವೃದ್ದ : ನಡೆದಿದ್ದು ಎಲ್ಲಿ ಗೊತ್ತಾ ?
ದಚ್ಚು ಮಾತಿಗೆ ಜಗ್ಗೇಶ್ ಮನಸ್ಸು ಹಗುರ…ದರ್ಶನ್ ಗೆ ಧನ್ಯವಾದ ಹೇಳಿದ ನವರಸ ನಾಯಕ