ವಾಹನವಿದ್ದರೂ ಮಲ ಹೊರಲು ಕಾರ್ಮಿಕರ ಬಳಕೆ

Team Udayavani, Mar 11, 2018, 3:58 PM IST

mandya-2.jpg

ಮಂಡ್ಯ: ಜಿಲ್ಲೆಯ ಮದ್ದೂರು ತಾಲೂಕಿನ ಕೆರೆಮೇಗಳದೊಡ್ಡಿ ಗ್ರಾಮದಲ್ಲಿ ಶೌಚಾಲಯ ಪಿಟ್‌ನ್ನು ಬೆಸಗರಹಳ್ಳಿ ಪಂಚಾಯಿತಿ ಪೌರ ಕಾರ್ಮಿಕರು ಶುಚಿಗೊಳಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಗ್ರಾಮದ ಅನಂತರಾಮು ಮನೆಯ ಶೌಚಾಲಯದ ಪಿಟ್‌ ಒಳಗಿದ್ದ ಮಲ ಗಟ್ಟಿಯಾಗಿದ್ದ ಕಾರಣ ಯಂತ್ರದ ಸಹಾಯದಿಂದ ತೆಗೆಯಲು ಸಾಧ್ಯವಾಗಿರಲಿಲ್ಲ. ಅದಕ್ಕಾಗಿ ಪೌರ ಕಾರ್ಮಿಕರನ್ನು ಬಳಸಿಕೊಂಡು ಅದನ್ನು ತೆಗೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಆದರೆ, ಸ್ಥಳ ಪರಿಶೀಲನೆ ನಡೆಸಿರುವ ಮದ್ದೂರು ತಾಪಂ ಇಒ, ಶೌಚಾಲಯದ ಫಿಟ್‌ ಶುಚಿಗೊಳಿಸಿರುವವರು ಪಂಚಾಯಿತಿ ಪೌರ ಕಾರ್ಮಿಕರಲ್ಲ, ಅವರು ಖಾಸಗಿ ವ್ಯಕ್ತಿಗಳು ಎಂಬುದಾಗಿ ಮಂಡ್ಯ ಜಿಪಂ ಸಿಇಒ ಶರತ್‌ ಅವರಿಗೆ ಸ್ಪಷ್ಟಪಡಿಸಿದ್ದಾರೆ. ಬೇರೆ ವ್ಯಕ್ತಿಗಳಿಂದ ಶೌಚಾಲಯದ ಫಿಟ್‌ ಶುಚಿಗೊಳಿಸಿದ್ದರೂ ಅದು ಅಪರಾಧವಾಗಿದ್ದು, ಮಾಲಿಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

ಘಟನೆ ಏನು: ಮದ್ದೂರು ತಾಲೂಕು ಕೆರೆಮೇಗಳದೊಡ್ಡಿ ಅನಂತರಾಮು ಮನೆಯ ಪಿಟ್‌ ಶುಚಿಗೊಳಿಸುವಂತೆ ಪಂಚಾಯಿತಿಗೆ ಮನವಿ ಮಾಡಲಾಗಿತ್ತು. ಅದರಂತೆ ಶುಕ್ರವಾರ ಸಕ್ಕಿಂಗ್‌ ವಾಹನದ ಮೂಲಕ ಪಿಟ್‌ ಒಳಗಿದ್ದ ಶೌಚದ ನೀರೆಲ್ಲವನ್ನೂ ಹೊರ ತೆಗೆಯಲಾಗಿತ್ತು. ಕೆಳಭಾಗದಲ್ಲಿದ್ದ ಘನರೂಪದ ಮಲವನ್ನು ಯಂತ್ರದಿಂದ ತೆಗೆಯಲು ಸಾಧ್ಯವಾಗಲ್ಲ. ಮತ್ತೆ ಶೌಚಗುಂಡಿ ಯೊಳಗೆ ನೀರು ಹಾಕಿ ಯಂತ್ರದ ಸಹಾಯದಿಂದಲೇ ಹೊರತೆಗೆಯ
ಬೇಕೆನ್ನುವುದು ನಿಯಮ. ಆದರೂ ಪೌರ ಕಾರ್ಮಿಕರಿಗೆ 2 ಸಾವಿರ ರೂ. ಹಣ ಕೊಟ್ಟು ಬರಿಗೈನಿಂದಲೇ ಮಲವನ್ನು ಹೊರತೆಗೆಸಿರುವುದು ವಿವಾದಕ್ಕೆ ಕಾರಣವಾಗಿದೆ.

ಮಲವನ್ನು ಹೊರತೆಗೆಯುವ ಸಮಯದಲ್ಲಿ ಪೌರ ಕಾರ್ಮಿಕರ ಆರೋಗ್ಯದ ಹಿತದೃಷ್ಟಿಯಿಂದ ಗ್ಲೌಸ್‌ ಮತ್ತು ಶೂಗಳನ್ನು ನೀಡದೆ ಗುಂಡಿಗೆ ಇಳಿಸಲಾಗಿದೆ. ಯಾವುದೇ ಸುರಕ್ಷತಾ ಕ್ರಮಗಳನ್ನು ಅನುಸರಿಸದೆ ಮಲವನ್ನು ಹೊರತೆಗೆಸುವ ಮೂಲಕ ಗ್ರಾಪಂ ಅಧಿಕಾರಿಗಳೇ ಅನಿಷ್ಠ ಪದ್ಧತಿಯನ್ನು ಜೀವಂತವಾಗಿ ಉಳಿಸಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಫಿಟ್‌ನೊಳಗೆ ಘನರೂಪದಲ್ಲಿ ಉಳಿದಿದ್ದ ಮಲವನ್ನು ಪೌರ ಕಾರ್ಮಿಕ ನಟರಾಜು ಪ್ಲಾಸ್ಟಿಕ್‌ ಟಬ್‌
ವೊಂದರಲ್ಲಿ ತುಂಬಿಕೊಡುತ್ತಿದ್ದರೆ ಅದನ್ನು ಹೊತ್ತ ಮಹಿಳೆಯೊಬ್ಬರು ಟ್ರ್ಯಾಕ್ಟರ್‌ನಲ್ಲಿ ಸುರಿಯುತ್ತಿದ್ದುದು ಕಂಡು ಬಂದಿದೆ. ಪೌರ ಕಾರ್ಮಿಕರು ಸೇರಿದಂತೆ ಖಾಸಗಿ ವ್ಯಕ್ತಿಗಳನ್ನು ಯಾವುದೇ ಕಾರಣಕ್ಕೂ ಮಲ ಹೊರುವಂತಹ ಅನಿಷ್ಠ ಪದ್ಧತಿಗೆ ಬಳಸಿಕೊಳ್ಳಬಾರದು ಎಂಬ ಕಟ್ಟುನಿಟ್ಟಿನ ನಿಯಮ ಜಾರಿಯಲ್ಲಿದ್ದರೂ ಅದಾವುದನ್ನೂ ಲೆಕ್ಕಿಸದೆ ಗ್ರಾಪಂ ಅಧಿಕಾರಿಗಳೇ ಮಲಹೊರುವ ಪದ್ಧತಿಯನ್ನು ಪೋಷಿಸುತ್ತಿರುವುದಕ್ಕೆ ಕೆರಮೇಗಳದೊಡ್ಡಿ ಪ್ರಕರಣ ಸಾಕ್ಷೀಭೂತ ವಾಗಿದೆ. ಇದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಗ್ಲೌಸ್‌, ಶೂಗಳನ್ನೂ ಕೊಟ್ಟಿಲ್ಲ: ಸಕ್ಕಿಂಗ್‌ ಯಂತ್ರ ತಂದು ನೀರಿನ ರೂಪದಲ್ಲಿದ್ದ ತ್ಯಾಜ್ಯವನ್ನು ತುಂಬಿಸಿಕೊಂಡಿತು. ಆದರೆ, ಗಟ್ಟಿಯಾಗಿ ಉಳಿದಿದ್ದನ್ನು ತೆಗೆಯಲು ಸಾಧ್ಯವಾಗಲಿಲ್ಲ. ನಮಗೆ 2 ಸಾವಿರ ರೂ. ನೀಡಿ ಅದನ್ನು ತೆಗೆದುಬಿಡಿ. ಇಲ್ಲದಿದ್ದರೆ ಹೆಗ್ಗಣಗಳು ಗುಂಡಿ ತೋಡಿ ಇನ್ನಷ್ಟು ಅದ್ವಾನ ಎಬ್ಬಿಸುತ್ತವೆ ಎಂದದ್ದಕ್ಕೆ ಕೆಳಭಾಗದ ಮಣ್ಣಿನಲ್ಲಿ
ಸೇರಿಕೊಂಡಿದ್ದ ಘನರೂಪದ ಮಲವನ್ನು ಹೊರತೆಗೆದಿದ್ದೇವೆ. ಬೆಸಗರಹಳ್ಳಿ ಗ್ರಾಪಂ ಪೌರ ಕಾರ್ಮಿಕ ನಟರಾಜು ತಿಳಿಸಿದ್ದಾರೆ.

ನಮಗೆ ಇದುವರೆಗೂ ನಾವು ಕೆಲಸ ಮಾಡುವ ಸಮಯದಲ್ಲಿ ಸುರಕ್ಷಾ ಸಾಧನಗಳನ್ನು ನೀಡಿಲ್ಲ. ಪಂಚಾಯಿತಿಯಿಂದ ಇದುವರೆಗೂ ಯಾರೊಬ್ಬರಿಗೂ ಒಂದು ದಿನವೂ ಗ್ಲೌಸ್‌, ಶೂಗಳನ್ನೂ ಕೊಟ್ಟಿಲ್ಲ. ಪಿಡಿಒಗಳನ್ನು ಕೇಳ್ಳೋಣವೆಂದರೆ ದಿನಕ್ಕೊಬ್ಬರು ಪಿಡಿಒ ಬರುತ್ತಾರೆ. ನಾವು ಯಾರನ್ನಾ ಅಂತ ಕೇಳುವುದು. ಯುಗಾದಿಗೋ, ಸಂಕ್ರಾಂತಿಗೋ ಒಂದು ಪ್ಯಾಂಟು, ಅಂಗಿ ಕೊಡ್ತಾರೆ. ಆಮೇಲೆ ಏನನ್ನೂ ಕೊಡುವುದಿಲ್ಲ ಎಂದರು.

ಕೆರಮೇಗಳದೊಡ್ಡಿಯಲ್ಲಿ ಮಲ ಹೊರುವ ಪದ್ಧತಿ ನಡೆದಿರುವುದು ನನ್ನ ಗಮನಕ್ಕೆ ಬಂದಿದೆ. ತಾಪಂ ಇಒಗೆ ಸ್ಥಳಕ್ಕೆ ತೆರಳಿ ಪರಿಶೀಲಿಸುವಂತೆ ಸೂಚಿಸಿದ್ದೆ. ಪಂಚಾಯಿತಿ ಪೌರಕಾರ್ಮಿಕರಲ್ಲ ಎಂದು ವರದಿ ನೀಡಿದ್ದರು. ಆದರೂ ಪಂಚಾಯಿತಿ ಪೌರಕಾರ್ಮಿಕರೆಲ್ಲರ ಭಾವಚಿತ್ರ ಸಹಿತ ವರದಿ ಕಳುಹಿಸುವಂತೆ ಸೂಚಿಸಿದ್ದೇನೆ. ಯಾರೇ ಆದರೂ ಮಲ
ಹೊರಿಸಿರುವುದು ಕಾನೂನು ರೀತಿ ಅಪರಾಧ. ಬರಿಗೈಲಿ ಮಲ ಎತ್ತಿ ಹಾಕಿಸಿರುವ ಮಾಲಿಕನ ವಿರುದ್ಧವೂ
ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ.
ಶರತ್‌, ಸಿಇಒ, ಜಿಪಂ

ಟಾಪ್ ನ್ಯೂಸ್

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

9-joshi

ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

8-gadag

Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಗನಿಗೆ ಮದ್ವೆ ಮಾಡಲು ಹೋಗಿ ಅಪ್ಪನೇ ಮದ್ವೆ ಆದಂತಿದೆ: ಸಚಿವ

ಮಗನಿಗೆ ಮದ್ವೆ ಮಾಡಲು ಹೋಗಿ ಅಪ್ಪನೇ ಮದ್ವೆ ಆದಂತಿದೆ: ಸಚಿವ

Mandya; ಕಾವೇರಿ ನದಿಯಲ್ಲಿ ಈಜಲು ಹೋದ ಮೈಸೂರಿನ ನಾಲ್ವರು ನೀರುಪಾಲು

Mandya; ಕಾವೇರಿ ನದಿಯಲ್ಲಿ ಈಜಲು ಹೋದ ಮೈಸೂರಿನ ನಾಲ್ವರು ನೀರುಪಾಲು

Congress ಅಭ್ಯರ್ಥಿಗೆ ಸುಮಲತಾ ಬೆಂಬಲ ಕೊಟ್ಟರೆ ಸ್ವಾಗತ: ಸಚಿವ ಚಲವರಾಯಸ್ವಾಮಿ

Congress ಅಭ್ಯರ್ಥಿಗೆ ಸುಮಲತಾ ಬೆಂಬಲ ಕೊಟ್ಟರೆ ಸ್ವಾಗತ: ಸಚಿವ ಚಲವರಾಯಸ್ವಾಮಿ

ಪಟಾಕಿಗೆ ಮದ್ದು ತುಂಬುತ್ತಿದ್ದಾಗ ಸ್ಫೋಟ: ಓರ್ವ ಕಾರ್ಮಿಕ ಸಾವು

ಪಟಾಕಿಗೆ ಮದ್ದು ತುಂಬುತ್ತಿದ್ದಾಗ ಸ್ಫೋಟ: ಓರ್ವ ಕಾರ್ಮಿಕ ಸಾವು

Melukote: ಚೆಲುವನಾರಾಯಣಸ್ವಾಮಿಯ ಉತ್ಸವ… ಖಜಾನೆಯಿಂದ ವೈರಮುಡಿ ಕಿರೀಟ ರವಾನೆ

Melukote: ಶ್ರೀ ಚೆಲುವನಾರಾಯಣಸ್ವಾಮಿಯ ಉತ್ಸವ… ಖಜಾನೆಯಿಂದ ವೈರಮುಡಿ ಕಿರೀಟ ರವಾನೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Kollywood: ಸ್ಟೈಲಿಶ್‌ ಲುಕ್‌ನಲ್ಲಿ ಜಯಂ ರವಿ

Kollywood: ಸ್ಟೈಲಿಶ್‌ ಲುಕ್‌ನಲ್ಲಿ ಜಯಂ ರವಿ

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.