ವಿಜಯಪುರ ಜಿಲ್ಲೆಗೆ ಈ ಬಾರಿ ಸಚಿವ ಸ್ಥಾನದ ವಿಶ್ವಾಸ :ಬಿಜೆಪಿ ಶಾಸಕರಿಂದ ಬಹಿರಂಗ ಪ್ರಸ್ತಾಪ

Team Udayavani, Aug 30, 2021, 4:28 PM IST

vijayapura politics

ಮುದ್ದೇಬಿಹಾಳ: ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಸೋಮವಾರ (ಆ.30) ನಡೆದ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಸಚಿವ ಸ್ಥಾನ ವಂಚಿತ ಜಿಲ್ಲೆಗೆ ಈ ಬಾರಿ ಸಚಿವ ಸ್ಥಾನ ಸಿಗುವ ಸಾಧ್ಯತೆ ಕುರಿತು ಶಾಸಕರಿಬ್ಬರು ಬಹಿರಂಗವಾಗಿಯೇ ಹೇಳಿಕೊಂಡ ಪ್ರಸಂಗ ನಡೆಯಿತು.

ಸರ್ಕಾರಿ ಆರ್‍ಎಂಎಸ್‍ಎ ಶಾಲೆಯ ನೂತನ ಕಟ್ಟಡ ಉದ್ಘಾಟನೆಯಲ್ಲಿ ಮುಖ್ಯ ಅತಿಥಿಯಾಗಿದ್ದ ವಿಧಾನ ಪರಿಷತ್ ಸದಸ್ಯ ಬಿಜೆಪಿಯ ಅರುಣ ಶಹಾಪೂರ ಅವರು ಮಾತನಾಡುತ್ತ ಇನ್ನೂ 6 ಸಚಿವರ ಸ್ಥಾನ ಖಾಲಿ ಇದೆ. ಸಚಿವ ಸಂಪುಟ ರಚನೆಯಾದ ಮೇಲೆ ಪಕ್ಷ 6 ಸ್ಥಾನ ಖಾಲಿ ಉಳಿಸಿಕೊಂಡು ಯಾರಿಗೆ ಕೊಡಬೇಕು ಅನ್ನೋ ಮೌಲ್ಯಮಾಪನ ಮಾಡುತ್ತಿದೆ. ಈ ಬಾರಿ ವಿಜಯಪುರ ಜಿಲ್ಲೆಗೂ ಮಂತ್ರಿ ಸ್ಥಾನ ಸಿಗುತ್ತದೆ. ಆ ಸ್ಥಾನ ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರದ ಶಾಸಕರಾದ ಎ.ಎಸ್.ಪಾಟೀಲ ನಡಹಳ್ಳಿಯವರಿಗೆ ಸಿಕ್ಕರೆ ಸಂತೋಷ ಪಡುವವರಲ್ಲಿ ನಾನು ಮೊದಲಿಗನಾಗಿರುತ್ತೇನೆ ಎನ್ನುವುದನ್ನು ಬಹಿರಂಗವಾಗಿ ಹೇಳ್ತೇನೆ ಎಂದು ಜಿಲ್ಲೆಯ ಬಿಜೆಪಿ ರಾಜಕಾರಣದ ಅಂತರ್ಯ ಬಿಡಿಸಿಟ್ಟರು.

ಜಿಲ್ಲೆಯಲ್ಲಿ ನೀವು ನಿಮ್ಮ ಗಟ್ಟಿ ನೇತೃತ್ವವನ್ನು ಮುಂದುವರೆಸಿಕೊಂಡು ಹೋಗಬೇಕು. ಜಿಲ್ಲೆಗೆ ಯಾಕೆ ಮಂತ್ರಿ ಸ್ಥಾನ ಬೇಕು ಎಂದರೆ ನಡಹಳ್ಳಿಯವರು ಮಂತ್ರಿ ಆಗಬೇಕಂತಲ್ಲ, ಈ ಜಿಲ್ಲೆ ಅಭಿವೃದ್ದಿ ಆಗಬೇಕು ಅನ್ನೋ ಕಳಕಳಿಯಿಂದ ಈ ಮಾತನ್ನು ಹೇಳುತ್ತಿದ್ದೇನೆ. ಮುದ್ದೇಬಿಹಾಳದಲ್ಲಿ ಅಭಿವೃಧ್ದಿಯ ಹೊಸ ಶಕೆ ಆರಂಭವಾಗಿದೆ. ಇದು ಮುಂದುವರೆಯಬೇಕು, ಜಿಲ್ಲೆಗೂ ವಿಸ್ತರಿಸಬೇಕು ಅನ್ನೋ ಹಾರೈಕೆ ನನ್ನದು. ನೀವು ಮುನ್ನಡೆಯಿರಿ ನಿಮ್ಮ ಜೊತೆಗೆ ನಾವಿದ್ದೇವೆ. ಮುದ್ದೇಬಿಹಾಳದಲ್ಲಿ ಕಣ್ಣು ಮುಚ್ಚಿ ಕಣ್ತೆರೆಯೋದರೊಳಗೆ ಬಂದು ನೀವು ಹೇಗೆ ಎಂಎಲ್‍ಎ ಆದಿರೋ ಹಾಗೇ ಮಂತ್ರಿ ಕೂಡಾ ಆಗಬೇಕು. ನಡಹಳ್ಳಿಯವರು ಕೂಡಾ ಎಬಿವಿಪಿಯಲ್ಲಿದ್ದು ಹೋರಾಟ ಮಾಡಿದವರಾಗಿದ್ದಾರೆ.

ನಡಹಳ್ಳಿಯವರು ಬೆಳೆಯಬೇಕಾದರೆ ಧಾರವಾಡದಲ್ಲಿ ಅವರು ಶಿಕ್ಷಣ ಪಡೆಯುವಾಗ ಎಬಿವಿಪಿಯಲ್ಲಿನ ಹೋರಾಟವೂ ಕಾರಣವಾಗಿದೆ. ನಡಹಳ್ಳಿಯವರ ಪಲ್ಲಕ್ಕಿ ಹೊರಲೂ ನಾನು ಸಿದ್ದ ಎಂದು ಹುರಿದುಂಬಿಸಿದರು.

ಇದನ್ನೂ ಓದಿ:ಕಾಮಸಮುದ್ರ ರಸ್ತೆಯಲ್ಲಿ ಗುಂಡಿ ಗಂಡಾಂತರ

ಇದಕ್ಕೆ ಬಹಿರಂಗವಾಗಿಯೇ ಪ್ರತಿಕ್ರಿಯಿಸಿದ ಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ನಡಹಳ್ಳಿಯವರು, ನಾನು ಕಾಂಗ್ರೆಸ್‍ನಲ್ಲಿದ್ದರೂ (2008, 2013ರಲ್ಲಿ ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಾಗಿದ್ದರು) ಶಿಕ್ಷಕರ ಮತಕ್ಷೇತ್ರದಿಂದ ಪರಿಷತ್‍ಗೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಅರುಣ ಶಹಾಪೂರಗೆ ಸಹಾಯ ಮಾಡಿದ್ದೆ. ಅದನ್ನು ಇವತ್ತು ಬಹಿರಂಗಪಡಿಸುತ್ತಿದ್ದೇನೆ.

ಎಬಿವಿಪಿಯ ಸಂಬಂಧ ನಮ್ಮಿಬ್ಬರದು. ಜಿಲ್ಲೆಗೆ ಮಂತ್ರಿ ಸ್ಥಾನ ಸಿಗಬೇಕು ಅನ್ನೋದು ಜಿಲ್ಲೆಯ ಜನರ ಮತ್ತು ಪಕ್ಷದ ಕಾರ್ಯಕರ್ತರ ಅಪೇಕ್ಷೆಯಾಗಿದೆ. ಈ ಅಪೇಕ್ಷೆಯನ್ನು ಜಿಲ್ಲೆಯ ಹಿರಿಯರಾದ ರಮೇಶ ಜಿಗಜಿಣಗಿ ಅವರ ನೇತೃತ್ವದಲ್ಲಿ ಮಾಜಿ ಮಂತ್ರಿಗಳ, ಮಾಜಿ ಶಾಸಕರ ಸಹಕಾರದೊಂದಿಗೆ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ. ಮುಖ್ಯಮಂತ್ರಿಗಳು ನಮ್ಮ ಜಿಲ್ಲೆಗೆ ಪ್ರಾತಿನಿಧ್ಯ ಕೊಡುವ ವಿಶ್ವಾಸ ಇದೆ ಎಂದು ತಮ್ಮ ಮನದಾಳದ ಮಾತನ್ನು ಹೊರಗೆಡವಿದರು.

ಟಾಪ್ ನ್ಯೂಸ್

ಮಲ್ಯ ನ್ಯಾಯಾಂಗ ನಿಂದನೆ: ಜ.18ಕ್ಕೆ ಸುಪ್ರೀಂಕೋರ್ಟ್‌ ತೀರ್ಪು

ಮಲ್ಯ ನ್ಯಾಯಾಂಗ ನಿಂದನೆ: ಜ.18ಕ್ಕೆ ಸುಪ್ರೀಂಕೋರ್ಟ್‌ ತೀರ್ಪು

ಸಲಿಂಗಕಾಮಿ ವಿವಾಹ: ವಿಚಾರಣೆಯ ನೇರ ಪ್ರಸಾರಕ್ಕೆ ಮನವಿ

ಸಲಿಂಗಕಾಮಿ ವಿವಾಹ: ವಿಚಾರಣೆಯ ನೇರ ಪ್ರಸಾರಕ್ಕೆ ಮನವಿ

ಪದ್ಮಶ್ರೀ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ ನಿಧನ

ಪದ್ಮಶ್ರೀ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ ನಿಧನ

ಬಿಹಾರ ವಿಧಾನಸಭೆಯಲ್ಲಿ ಮದ್ಯದ ಬಾಟಲಿ!

ಬಿಹಾರ ವಿಧಾನಸಭೆಯಲ್ಲಿ ಮದ್ಯದ ಬಾಟಲಿ!

ಅಯೋಧ್ಯೆ ತೀರ್ಪು ಧರ್ಮಾಧಾರಿತವಲ್ಲ: ಮಾಜಿ ಸಿಜೆಐ ಗೊಗೋಯ್!

ಅಯೋಧ್ಯೆ ತೀರ್ಪು ಧರ್ಮಾಧಾರಿತವಲ್ಲ: ಮಾಜಿ ಸಿಜೆಐ ಗೊಗೋಯ್!

ಅಪ್ಪ ಅರ್ಥವಾದರೂ ಮಗನ ನಡೆ ಅರ್ಥವಾಗುತ್ತಿಲ್ಲ: ಶಂಕರ್‌

ಅಪ್ಪ ಅರ್ಥವಾದರೂ ಮಗನ ನಡೆ ಅರ್ಥವಾಗುತ್ತಿಲ್ಲ: ಶಂಕರ್‌

ಭ್ರಷ್ಟಾಚಾರ ಪ್ರಕರಣ: ವಿಚಾರಣೆಗೆ ಹಾಜರಾದ ಅನಿಲ್‌ ದೇಶ್‌ಮುಖ್‌

ಭ್ರಷ್ಟಾಚಾರ ಪ್ರಕರಣ: ವಿಚಾರಣೆಗೆ ಹಾಜರಾದ ಅನಿಲ್‌ ದೇಶ್‌ಮುಖ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೃಷಿ ಮೇಳ

ನಾಳೆ, ನಾಡಿದ್ದು ಕೃಷಿ ಮೇಳ

ಶ್ರೀರಂಗಪಟ್ಟಣ ದಲ್ಲಿ ಅಪ್ಪು ಪುಣ್ಯ ಸ್ಮರಣೆ

ಶ್ರೀರಂಗಪಟ್ಟಣದಲ್ಲಿ ಅಪ್ಪು ಪುಣ್ಯ ಸ್ಮರಣೆ

ಶ್ರೀರಂಗಪಟ್ಟಣ : ಹಿರಿದೇವಿ ಅಮ್ಮನ ಜಾತ್ರಾ ಮಹೋತ್ಸವದಲ್ಲಿ ಮನರಂಜಿಸಿದ ನಾಡಕುಸ್ತಿ ಪಂದ್ಯಾವಳಿ

ಶ್ರೀರಂಗಪಟ್ಟಣ : ಹಿರಿದೇವಿ ಅಮ್ಮನ ಜಾತ್ರಾ ಮಹೋತ್ಸವದಲ್ಲಿ ಮನರಂಜಿಸಿದ ನಾಡಕುಸ್ತಿ ಪಂದ್ಯಾವಳಿ

ಅಕ್ರಮ ಪಡಿತರ ಅಕ್ಕಿ- ಕ್ಯಾಂಟರ್‌ ವಶ

ಅಕ್ರಮ ಪಡಿತರ ಅಕ್ಕಿ: ಕ್ಯಾಂಟರ್‌ ವಶ

1-fff

ಪಾಂಡವಪುರ: ಬಿಜೆಪಿ ಕಾರ್ಯಕರ್ತರಿಂದ ಪುರಸಭೆ ಅಧಿಕಾರಿಗಳಿಗೆ ತರಾಟೆ

MUST WATCH

udayavani youtube

ಕಾಪು ಪರಿಸರದಲ್ಲಿ ಗಾಳಿ, ಗುಡುಗು, ಮಿಂಚು ಸಹಿತ ಭಾರೀ ಮಳೆ

udayavani youtube

ದನಗಳ್ಳರನ್ನು ಹಿಡಿಯಲು ಹೋದವರ ಮೇಲೆ ವಾಹನ ಚಲಾಯಿಸಿ ಹಲ್ಲೆ: ಇಬ್ಬರಿಗೆ ಗಂಭೀರ ಗಾಯ

udayavani youtube

ಸುಟ್ಟಗಾಯ ಸಂರ್ಪೂಣ ನಿವಾರಣೆ ಆಗಲು ಈ ನಾಟಿ ವೈದ್ಯರ ಬಳಿ ಇದೆ ಔಷಧಿ.

udayavani youtube

ಕಸ್ತೂರಿರಂಗನ್ ಸಮೀಕ್ಷೆ ಅವೈಜ್ಞಾನಿಕ !?

udayavani youtube

ಭಾರತದಲ್ಲಿ ವ್ಯಾಸಂಗ ಮಾಡಿದ್ದನಂತೆ ಈ ತಾಲಿಬಾನ್‌ ವಕ್ತಾರ!

ಹೊಸ ಸೇರ್ಪಡೆ

ಮಲ್ಯ ನ್ಯಾಯಾಂಗ ನಿಂದನೆ: ಜ.18ಕ್ಕೆ ಸುಪ್ರೀಂಕೋರ್ಟ್‌ ತೀರ್ಪು

ಮಲ್ಯ ನ್ಯಾಯಾಂಗ ನಿಂದನೆ: ಜ.18ಕ್ಕೆ ಸುಪ್ರೀಂಕೋರ್ಟ್‌ ತೀರ್ಪು

ಸಲಿಂಗಕಾಮಿ ವಿವಾಹ: ವಿಚಾರಣೆಯ ನೇರ ಪ್ರಸಾರಕ್ಕೆ ಮನವಿ

ಸಲಿಂಗಕಾಮಿ ವಿವಾಹ: ವಿಚಾರಣೆಯ ನೇರ ಪ್ರಸಾರಕ್ಕೆ ಮನವಿ

ಪದ್ಮಶ್ರೀ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ ನಿಧನ

ಪದ್ಮಶ್ರೀ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ ನಿಧನ

ಬಿಹಾರ ವಿಧಾನಸಭೆಯಲ್ಲಿ ಮದ್ಯದ ಬಾಟಲಿ!

ಬಿಹಾರ ವಿಧಾನಸಭೆಯಲ್ಲಿ ಮದ್ಯದ ಬಾಟಲಿ!

ಅಯೋಧ್ಯೆ ತೀರ್ಪು ಧರ್ಮಾಧಾರಿತವಲ್ಲ: ಮಾಜಿ ಸಿಜೆಐ ಗೊಗೋಯ್!

ಅಯೋಧ್ಯೆ ತೀರ್ಪು ಧರ್ಮಾಧಾರಿತವಲ್ಲ: ಮಾಜಿ ಸಿಜೆಐ ಗೊಗೋಯ್!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.