ಶ್ರೀರಂಗಪಟ್ಟಣ: ವೀಕೆಂಡ್ ಕರ್ಫ್ಯೂಗೆ ಪ್ರವಾಸಿ ತಾಣಗಳು ಭಣಭಣ, ದೇಗುಲಗಳು ಬಂದ್
Team Udayavani, Jan 9, 2022, 2:42 PM IST
ಶ್ರೀರಂಗಪಟ್ಟಣ: ವೀಕೆಂಡ್ ಕರ್ಫ್ಯೂಗೆ ಜನರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜಿಲ್ಲೆಯ ಪ್ರವಾಸಿತಾಣಗಳು ಪ್ರವಾಸಿಗರಿಲ್ಲದೆ ಭಣ ಗುಡುತ್ತಿದ್ರೆ,ದೇಗುಲಗಳಿಗೆ ಭಕ್ತರು ಬರದೆ ದೇಗುಲಗಳ ಬಾಗಿಲು ಬಂದ್ ಆಗಿವೆ.
ವೀಕೆಂಡ್ ಕರ್ಫ್ಯೂಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ವೀಕೆಂಡ್ ಕರ್ಫ್ಯೂಗೆ ಸದಾ ಗಿಜಿಗುಡುತ್ತಿದ್ದ ಶ್ರೀರಂಗಪಟ್ಟಣ ಇದೀಗ ವೀಕೆಂಡ್ಕರ್ಫ್ಯೂ ಗೆ ಸ್ತಬ್ಧಗೊಂಡಿದೆ. ಶ್ರೀರಂಗಪಟ್ಟಣದಲ್ಲಿ ಪ್ರವಾಸಿಗರು ಬರದೆ ಪ್ರವಾಸಿ ತಾಣಗಳಾದ ಕೆ.ಆರ್.ಎಸ್,ಕಾವೇರಿ ಬಲಮುರಿ ಪಕ್ಷಿಧಾಮ,ದರಿಯಾ ದೌಲತ್,ಗುಂಬಸ್ ನ ಪ್ರ ವಾಸಿ ತಾಣಗಳು ಪ್ರವಾಸಿಗರಿಲ್ಲದೆ ಭಣಗುಡ್ತಿದೆ
ಪ್ರಸಿದ್ದ ದೇಗುಲಗಳಾದ ಶ್ರೀರಂಗಪಟ್ಟಣದ ರಂಗನಾಥ ದೇವಾಲಯ,ಗಂಜಾಂ ನ ನಿಮಿಷಾಂಭ ದೇಗುಲ, ಮೇಲುಕೋಟೆಯ ಚಲುವನಾರಾಯಣಸ್ವಾಮಿ ದೇಗುಲಗಳು ಭಕ್ತರಿಲ್ಲದೆ ಬಾಗಿಲು ಬಂದ್ ಆಗಿವೆ. ದೇಗುಲ ದ ಬಳಿ ಭಕ್ತರಿಲ್ಲದೆ ದೇಗುಲದ ಆವರಣದಲ್ಲಿ ಹುಡುಗುರು ಕ್ರಿಕೇಟ್ ,ಚಿನ್ನಿದಾಂಡು ಆಡುತ್ತಾ ಆಟದ ಮೈದಾನ ಮಾಡಿಕೊಂಡಿದ್ದಾರೆ.
ಇನ್ನು ಪ್ರವಾಸಿ ತಾಣ ಸೇರಿ ದೇಗುಲದ ಆವರಣ ಬಳಿ ಇರುವ ವ್ಯಾಪಾರಸ್ಥರು ವ್ಯಾಪಾರವಿಲ್ಲದೆ ಕಂಗಾ ಲಾಗಿದ್ರೆ,ಪ್ರವಾಸಿಗರಿಗೆ ಮುದ ನೀಡ್ತಿದ್ದ ಕುದುರೆ ಸವಾರಿಯಿಂದ ಜೀವನ ನಡೆಸ್ತಿದ್ದರು ತುತ್ತಿನ ಚೀ ಲ ತುಂಬಿಸಿಕೊಳ್ಳಲು ಕೆಲಸವಿಲ್ಲದೆ ಕುದುರೆ ತಂದು ನಿಲ್ಲಿಸಿದ್ದು ತಮ್ಮ ಸಂಕಟ ಹೇಳಿಕೊಂಡಿದ್ದಾರೆ.
ಒಟ್ಟಾರೆ ವೀಕೆಂಡ್ ಕರ್ಫ್ಯೂಗೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು,ಸದಾ ಜನರಿಂದ ಮತ್ತು ಪ್ರವಾಸಿಗರಿಂದ ಗಿಜಿಗುಡ್ತಿದ್ದ ಪಟ್ಟಣ ಇದೀಗ ಸ್ತಬ್ಧಗೊಂಡಿದೆ.