Udayavni Special

ವಾಮಾಚಾರ ಸ್ಥಳವಾದ ಪಶ್ಚಿಮವಾಹಿನಿ ?


Team Udayavani, Feb 3, 2020, 4:42 PM IST

mandya-tdy-1

ಶ್ರೀರಂಗಪಟ್ಟಣ: ಗಣ್ಯ ವ್ಯಕ್ತಿಗಳ ಅಸ್ಥಿ ವಿಸರ್ಜನೆ ಮಾಡುವ ಸ್ಥಳ ಈಗ ಅನಾಚಾರ ಹಾಗೂ ವಾಮಾಚಾರ ನಡೆಸುವ ಸ್ಥಳವಾಗಿ ಮಾರ್ಪಡುವಂತಾಗುತ್ತಿದ್ದರೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ.

ಮಹಾತ್ಮಗಾಂಧಿ, ಮಾಜಿ ಪ್ರಧಾನಿಗಳಾದ ಜವಲಾಲ್‌ ನೆಹರು, ಇಂದಿರಾಗಾಂಧಿ, ರಾಜೀವ್‌ ಗಾಂಧಿ, ವಾಜಪೇಯಿ, ಮೇಲ್ಪಟ್ಟಿರುವ ಹಲವು ಮುಖ್ಯ ಮಂತ್ರಿಗಳ ಅಸ್ಥಿಗಳನ್ನು ವಿವಿಧ ಭಾಗದಿಂದ ಬಂದು ವಿಸರ್ಜನೆ ಮಾಡಲಾಗಿದೆ. ಮುಖ್ಯವಾಗಿ ಮಹಾತ್ಮಗಾಂಧಿ ಅಸ್ಥಿ ಬಿಟ್ಟ ಸ್ಥಳವಾಗಿರುವುದರಿಂದ ಈ ಸ್ಥಳಲ್ಲಿ ಗಾಂಧಿ ಸ್ಮಾರಕ ನಿರ್ಮಿಸಲು ಹಿಂದಿನ ಸರ್ಕಾರ ಮುಂದಾಗಿತ್ತು. ಗಾಂಧಿ ಚಿತಾಭಸ್ಮ ಬಿಟ್ಟಿರುವುದರಿಂದ ಈಗ ಕಾವೇರಿ ನದಿ ಪಕ್ಕದಲ್ಲೇ ಕಲ್ಲಿನಿಂದ ಕೆತ್ತಿರುವ ಗುರುತಿಗೆ ಒಂದು ಸ್ಮಾರಕ ನೆಡಲಾಗಿದೆ. ಆದ್ದರಿಂದ ಈ ಸ್ಥಳದ ಬಗ್ಗೆ ಎಲ್ಲರಿಗೂ ವಿಶೇಷವಾಗಿ ಗೌರವಿದೆ.

ವಾಮಾಚಾರದ ಸ್ಥಳ: ಈಗ ಆ ಸ್ಥಳಲ್ಲಿ ಕೋಳಿ ಬಲಿಕೊಟ್ಟು ವಾಮಾಚಾರದ ಪೂಜೆಗಳನ್ನು ಮಾಡಲಾಗುತ್ತಿದೆ. ಅಸ್ಥಿ ಬಿಟ್ಟ ಸ್ಥಳಕ್ಕೆ ಜಾಗ ಮಾಡಿ ಕೊಟ್ಟ ನಂತರ ಆಸ್ಥಳವನ್ನು ಕೆಲವರು ಮರಗಳ ಮರೆಯಲ್ಲಿ ಸೀರೆಗಳಿಂದ ಸುತ್ತಲೂ ಚೌಕಾಕಾರದಲ್ಲಿ ತೆರೆ ಕಟ್ಟಿ ಅದರ ಒಳಗೆ ವಾಮಾಚಾರದ ಪೂಜೆಯೋ ಅಥವಾ ಅನಾಚಾರದ ಸ್ಥಳವನ್ನಾಗಿ ಪರಿವರ್ತಿನೆ ಮಾಡಿಕೊಂಡು ಬಂದ ಜನರಿಗೆ ಪೂಜೆ ಸೇರಿದಂತೆ ಅನೈತಿಕ ಚಟುವಟಿಕೆಗಳಿಗೆ ಬಳಕೆ ಮಾಡಿಕೊಳ್ಳುವಂತೆ ಆಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.  ಸಂಬಂಧ ಪಟ್ಟ ಅಧಿಕಾರಿಗಳು ಎಚ್ಚೆತ್ತು ಅಭಿವೃದ್ಧಿಗೆ ಪೂರಕವಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಕಾಮಗಾರಿಗೆ ಚಾಲನೆ ನೀಡಿದ್ದ ಅಂದಿನ ಡೀಸಿ:2013-14 ಸಾಲಿನಲ್ಲಿ ಪಶ್ಚಿಮವಾಹಿನಿ ಅಭಿವೃದ್ಧಿಗೆ ಅಂದಿನ ಜಿಲ್ಲಾಧಿಕಾರಿ ಕೃಷ್ಣಯ್ಯ ಅವರು ಕೋಟಿ ರೂ. ಅನುದಾನ ನೀಡಿ ಗಾಂಧೀಜಿಯವರ ನೆನಪು ಕುರಿತಾದ ದಿನಗಳಲ್ಲಿ ಅಭಿವೃದ್ಧಿಪಡಿಸಲಾಗಿತ್ತು. ಸ್ಮಾರಕಕ್ಕೆ ವಿಶೇಷ ಪೂಜಾ ಕಾರ್ಯಗಳು ನಡೆಯುತ್ತಿರುತ್ತವೆ. ಪ್ರಸ್ತುತ ಗಾಂಧಿ ಸ್ಮಾರಕ ನಿರ್ಮಾಣದ ಜೊತೆಗೆ ಪಶ್ಚಿಮವಾಹಿನಿ ಅಭಿವೃದ್ಧಿಗೆ ಜಿಲ್ಲಾಧಿಕಾರಿಗಳ ಅನುದಾನದಲ್ಲಿ ಸ್ಮಾರಕದ ಪಕ್ಕದಲ್ಲಿ ಮಕ್ಕಳ ಪಾರ್ಕ್‌, ಮಕ್ಕಳು ಆಟವಾಡಲು ಆಟೋಟಗಳ ಪರಿಕರ ನಿರ್ಮಾಣ, ಗಾಂಧಿ ಸ್ಮಾರಕ, ಸುತ್ತಲೂ ಸಿಮೆಂಟ್‌ನಿಂದ ಸಮತಟ್ಟು ಮಾಡಿ ಬಂದ ಪ್ರವಾಸಿಗರಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ, ನದಿಯ ದಡದಲ್ಲಿ ಸಣ್ಣ ಸಣ್ಣ ಸೇತುವೆ ನಿರ್ಮಾಣ, ರಸ್ತೆ ಅಭಿವೃದ್ಧಿ ಹೀಗೆ ಈ ಸ್ಥಳವನ್ನು ಅಭಿವೃದ್ಧಿ ಪಡಿಸಲು ಕೋಟಿ ರೂ. ಅನುದಾನ ಬಳಕೆ ಮಾಡಕೊಳ್ಳಲು ಸ್ವತಃ ಅಂದಿನ ಜಿಲ್ಲಾಧಿಕಾರಿ ಕಾಮಗಾರಿಗೆ ಚಾಲನೆ ನೀಡಿದ್ದರು.

ಸ್ವಚ್ಛತೆ ಎನ್ನುವುದು ಇಲ್ಲಿ ಮರೀಚಿಕೆ: ಈ ಸ್ಥಳ ಪುರಸಭಾ ವ್ಯಾಪ್ತಿಯಲ್ಲಿರುವುದರಿಂದ ಪುರಸಭೆ ಕಚೇರಿಯಿಂದ ಇಲ್ಲಿ ಸ್ವಚ್ಛತೆ ಕಾಪಾಡಲು ಅಸ್ಥಿ ಬಿಡಲು ಬಂದವರಿಂದ 100 ರೂ. ವಸೂಲಿ ಮಾಡಲಾಗುತ್ತಿದೆ. ಹಣ ಪಡೆಯುತ್ತಾರೆ ಆದರೆಯಾವುದೇ ಸ್ವತ್ಛತೆ ಇಲ್ಲದೆ ಪೂಜಾಕಾರ್ಯಗಳನ್ನು ಮಾತ್ರ ಮಾಡಿಸಿಕೊಂಡು ಇಲ್ಲಿನ ಸ್ಥಳವನ್ನು ಹಾಳು ಮಾಡುತ್ತಿದ್ದಾರೆ.

ಪಟ್ಟಣ ಪುರಸಭೆ ವ್ಯಾಪ್ತಿಯಲ್ಲಿ ಇರುವ ಪಶ್ಚಿಮವಾಹಿನಿ ವಿವಿಧ ಭಾಗಗಳಿಂದ ಈ ಸ್ಥಳಕ್ಕೆ ಬರುವುದು ಅಸ್ಥಿ ಬಿಡುವುದಕ್ಕೆ ಹೆಸರುವಾಸಿಯಾಗಿದೆ. ಸ್ಮಾರಕದ ಬಳಿ ಇರುವ ಮರಗಳ ಮಧ್ಯೆ ಸೀರೆ ಬಟ್ಟೆಯಿಂದ ತೆರೆಗಳನ್ನು ಕಟ್ಟಿರುವ ಬಗ್ಗೆ ಮಾಹಿತಿ ಬಂದಿಲ್ಲ. ಹಾಗೇನಾದರೂ ವಾಮಾಚಾರ ಹಾಗೂ ಅನಾಚಾರಕ್ಕೆ ಇಂತಹ ಕಾರ್ಯವೆಸಗಿದ್ದರೆ ಅಂಥವರ ವಿರುದ್ಧ ಕ್ರಮವಹಿಸಲಾಗುವುದು. ಪ್ರಸ್ತುತ ನಮ್ಮ ಇಲಾಖೆಯ ಸಿಬ್ಬಂದಿಯನ್ನು ಪ್ರತಿದಿನ ಅಲ್ಲೇ ಇರಿಸಲಾಗಿದೆ. ಸೀರೆ ಕಟ್ಟಿರುವ ತೆರೆಯನ್ನು ಈ ತಕ್ಷಣವೇ ತೆಗೆಸಲಾಗುವುದು.  –ಕೃಷ್ಣ, ಪುರಸಭಾ ಮುಖ್ಯಾಧಿಕಾರಿ

 

-ಗಂಜಾಂ ಮಂಜು

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಸಾಮಾಜಿಕ ಅಂತರಕ್ಕೆ ಚೆನ್ನೈ ಎಕ್ಸ್ ಪ್ರೆಸ್ ಐಡಿಯಾ ಬಳಸಿದ ನಾಗ್ಪುರ ಪೊಲೀಸರು

ಸಾಮಾಜಿಕ ಅಂತರಕ್ಕೆ ಚೆನ್ನೈ ಎಕ್ಸ್ ಪ್ರೆಸ್ ಐಡಿಯಾ ಬಳಸಿದ ನಾಗ್ಪುರ ಪೊಲೀಸರು

ರಾಜ್ಯದಲ್ಲಿ ಮತ್ತೆ ಐದು ಸೋಂಕು ಪ್ರಕರಣಗಳು: ಐವರಿಗೂ ನಿಜಾಮುದ್ದೀನ್ ನಂಟು

ರಾಜ್ಯದಲ್ಲಿ ಮತ್ತೆ ಐದು ಸೋಂಕು ಪ್ರಕರಣಗಳು: ಐವರಿಗೂ ನಿಜಾಮುದ್ದೀನ್ ನಂಟು

ಕೋವಿಡ್ 19 ಚರ್ಚೆ: ಪ್ರಣಬ್, ಸೋನಿಯಾ, ದೇವೇಗೌಡರಿಗೆ ಪ್ರಧಾನಿ ಮೋದಿ ದೂರವಾಣಿ ಕರೆ

ಕೋವಿಡ್ 19 ಚರ್ಚೆ: ಪ್ರಣಬ್, ಸೋನಿಯಾ, ದೇವೇಗೌಡರಿಗೆ ಪ್ರಧಾನಿ ಮೋದಿ ದೂರವಾಣಿ ಕರೆ

ಕೋವಿಡ್-19 ಹಿನ್ನೆಲೆ ಆನ್ ಲೈನ್ ಮೂಲಕ ಎಸ್ ಎಸ್ ಎಲ್ ಸಿ ಮಕ್ಕಳಿಗೆ ಪಾಠ ಪ್ರವಚನ

ಕೋವಿಡ್-19 ಹಿನ್ನೆಲೆ ಆನ್ ಲೈನ್ ಮೂಲಕ ಎಸ್ ಎಸ್ ಎಲ್ ಸಿ ಮಕ್ಕಳಿಗೆ ಪಾಠ ಪ್ರವಚನ

ಜಮ್ಮು-ಕಾಶ್ಮೀರ ಗಡಿಯಲ್ಲಿ ಭಾರೀ ಗುಂಡಿನ ಕಾಳಗ; ಐವರು ಉಗ್ರರ ಸಾವು, 3 ಯೋಧರು ಹುತಾತ್ಮ

ಜಮ್ಮು-ಕಾಶ್ಮೀರ ಗಡಿಯಲ್ಲಿ ಭಾರೀ ಗುಂಡಿನ ಕಾಳಗ; ಐವರು ಉಗ್ರರ ಸಾವು, 3 ಯೋಧರು ಹುತಾತ್ಮ

ಕೋವಿಡ್-19 ಗೆದ್ದ 104 ವರ್ಷದ ಸೈನಿಕ

ಕೋವಿಡ್-19 ಗೆದ್ದ 104 ವರ್ಷದ ಸೈನಿಕ

ಆಸ್ಪತ್ರೆಯ ಐಸಿಯು ಬೀಗದ ಕೈ ಹುಡುಕಲು ಸಿಬ್ಬಂದಿಗಳ ಪರದಾಟ: 55 ವರ್ಷದ ಮಹಿಳೆ ಸಾವು

ಆಸ್ಪತ್ರೆಯ ಐಸಿಯು ಬೀಗದ ಕೈ ಹುಡುಕಲು ಸಿಬ್ಬಂದಿಗಳ ಪರದಾಟ: 55 ವರ್ಷದ ಮಹಿಳೆ ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

mandya-tdy-1

ಮಳವಳ್ಳಿ, ನಾಗಮಂಗಲದಲ್ಲಿ ಕೋವಿಡ್ 19 ಶಂಕೆ

mandya-tdy-2

ದುಬಾರಿ ಬೆಲೆಗೆ ಪೆಟ್ರೋಲ್‌ ಮಾರಾಟ

mandya-tdy-1

ಪ್ರತಿದಿನ 100 ಕಾರ್ಡ್‌ಗೆ ಪಡಿತರ ವಿತರಣೆ

ಹಾಪ್‌ಕಾಮ್ಸ್‌: 4 ಲಕ್ಷ ರೂ. ಹಣ್ಣು  ಮಾರಾಟ

ಹಾಪ್‌ಕಾಮ್ಸ್‌: 4 ಲಕ್ಷ ರೂ. ಹಣ್ಣು ಮಾರಾಟ

ನಿಜಾಮುದ್ದೀನ್ ಸಭೆಯಲ್ಲಿ ಯೋಧರು

ನಿಜಾಮುದ್ದೀನ್ ಸಭೆಯಲ್ಲಿ ಯೋಧರು! ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಮಂಡ್ಯ ಎಸ್ಪಿ

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ

ಸಾಮಾಜಿಕ ಅಂತರಕ್ಕೆ ಚೆನ್ನೈ ಎಕ್ಸ್ ಪ್ರೆಸ್ ಐಡಿಯಾ ಬಳಸಿದ ನಾಗ್ಪುರ ಪೊಲೀಸರು

ಸಾಮಾಜಿಕ ಅಂತರಕ್ಕೆ ಚೆನ್ನೈ ಎಕ್ಸ್ ಪ್ರೆಸ್ ಐಡಿಯಾ ಬಳಸಿದ ನಾಗ್ಪುರ ಪೊಲೀಸರು

ಲಾಕ್‌ ಡೌನ್‌ ಅರ್ಧ ಮುಕ್ತಾಯ; ನಿಯಮ ಸಡಿಲಿಕೆ?

ಲಾಕ್‌ ಡೌನ್‌ ಅರ್ಧ ಮುಕ್ತಾಯ; ನಿಯಮ ಸಡಿಲಿಕೆ?

ರಾಜ್ಯದಲ್ಲಿ ಮತ್ತೆ ಐದು ಸೋಂಕು ಪ್ರಕರಣಗಳು: ಐವರಿಗೂ ನಿಜಾಮುದ್ದೀನ್ ನಂಟು

ರಾಜ್ಯದಲ್ಲಿ ಮತ್ತೆ ಐದು ಸೋಂಕು ಪ್ರಕರಣಗಳು: ಐವರಿಗೂ ನಿಜಾಮುದ್ದೀನ್ ನಂಟು

ಸೋಂಕಿತರ ಪತ್ತೆಗೆ ಆನ್‌ಲೈನ್‌, ದೂರವಾಣಿ ಸಮೀಕ್ಷೆ  ಆರಂಭ

ಸೋಂಕಿತರ ಪತ್ತೆಗೆ ಆನ್‌ಲೈನ್‌, ದೂರವಾಣಿ ಸಮೀಕ್ಷೆ ಆರಂಭ

ಕ್ವಾರೆಂಟೈನ್‌ ಕೇಂದ್ರಕ್ಕೆ ಕಟ್ಟಡ ಕೊಟ್ಟ ಕಿಂಗ್‌ ಖಾನ್‌

ಕ್ವಾರೆಂಟೈನ್‌ ಕೇಂದ್ರಕ್ಕೆ ಕಟ್ಟಡ ಕೊಟ್ಟ ಕಿಂಗ್‌ ಖಾನ್‌