ಸುಮಲತಾ ಕೈ ಹಿಡಿದ ಮಹಿಳಾ ಮತದಾರರು

ಗುಪ್ತಗಾಮಿನಿಯಂತೆ ಹರಿದುಬಂದ ಮತಗಳು • ಸ್ವಯಂಪ್ರೇರಣೆಯಿಂದ ಮತ ಚಲಾಯಿಸಿದ್ದ ನಾರಿಯರು

Team Udayavani, May 25, 2019, 4:23 PM IST

mandya-tdy-1..

ಮಂಡ್ಯ: ಅಂಬರೀಶ್‌ ಸಾವಿನ ಅನುಕಂಪದ ಅಲೆಯ ಜೊತೆಗೆ ಜಿಲ್ಲೆಯ ಮಹಿಳಾ ಮತದಾರರು ಕೈ ಹಿಡಿದ ಪರಿಣಾಮ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಪ್ರಚಂಡ ಜಯ ಸಾಧಿಸಲು ಸಾಧ್ಯವಾಯಿತು.

ಮಂಡ್ಯ ಲೋಕಸಭಾ ಚುನಾವಣಾ ಇತಿಹಾಸದಲ್ಲೇ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಮಹಿಳಾ ಮತದಾರರು ಸ್ವಯಂಪ್ರೇರಣೆಯಿಂದ ಬಂದ ಮತ ಚಲಾಯಿಸಿದ್ದರು. ಬಹಿರಂಗ ಪ್ರಚಾರದ ಅಂತಿಮ ದಿನ ಸುಮಲತಾ ಜಿಲ್ಲೆಯ ಜನರೆದುರು ಸೆರಗೊಡ್ಡಿ ಸ್ವಾಭಿಮಾನದ ಭಿಕ್ಷೆ ಬೇಡಿದರು. ಜನರು ಅದನ್ನು ದಯಪಾಲಿಸಿ ವಿಜಯಮಾಲೆ ತೊಡಿಸಿದರು.

ಲೋಕಸಭಾ ಚುನಾವಣೆಯಲ್ಲಿ 680859 ಮಹಿಳೆಯರು ಮತ ಚಲಾಯಿಸಿದ್ದರು. ಇದರಲ್ಲಿ ಬಹುತೇಕ ಮತಗಳು ಸುಮಲತಾ ಪರವಾಗಿ ಹರಿದುಬಂದಿವೆ. ಚುನಾವಣೋತ್ತರದಲ್ಲಿ ಬಹಳಷ್ಟು ಮಹಿಳಾ ಮತದಾರರು ಬಹಿರಂಗವಾಗಿಯೇ ಸುಮಲತಾ ಪರ ಮತ ಚಲಾಯಿಸಿರುವ ಬಗ್ಗೆ ಮಾತನಾಡುತ್ತಿದ್ದುದು ಸುಮಲತಾ ಗೆಲುವಿನ ಮುನ್ಸೂಚನೆ ನೀಡಿತ್ತು. ಫ‌ಲಿತಾಂಶದಲ್ಲಿ ಅದು ನಿಜವೂ ಆಯಿತು.

ಮಹಿಳಾ ಮತಗಳು ಒಗ್ಗೂಡಿದ್ದು ಹೇಗೆ: ಚುನಾವಣೆ ಪೂರ್ವ ಹಾಗೂ ಪ್ರಚಾರ ಸಮಯದಲ್ಲಿ ಜೆಡಿಎಸ್‌ ನಾಯಕರು ಸುಮಲತಾ ವಿರುದ್ಧವಾಗಿ ಆಡಿದ ಅಸಹನೀಯ ಮಾತುಗಳೂ ಮಹಿಳೆಯರನ್ನು ಕೆರಳುವಂತೆ ಮಾಡಿತ್ತು. ಅಂಬರೀಶ್‌ ಕಳೆದುಕೊಂಡು ದುಃಖದಲ್ಲಿದ್ದ ಸುಮಲತಾ ಪರ ಮಹಿಳೆಯರಿಗಿದ್ದ ಅನುಕಂಪ ಜೆಡಿಎಸ್‌ ನಾಯಕರ ಟೀಕಾ ಪ್ರಹಾರದಿಂದ ಇನ್ನಷ್ಟು ಹೆಚ್ಚಾಗುವಂತೆ ಮಾಡಿತು. ಈ ಬೆಳವಣಿಗೆ ಮಹಿಳಾ ಮತಗಳೆಲ್ಲವೂ ಕೇಂದ್ರೀಕೃತವಾಗುವುದಕ್ಕೆ ಎಡೆಮಾಡಿಕೊಟ್ಟವು.

ಕೊಟ್ಟ ಮಾತಿಗೆ ತಪ್ಪಿದ ಸಿಎಂ: ಮುಖ್ಯಮಂತ್ರಿ ಕುಮಾರಸ್ವಾಮಿ ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ಸ್ತ್ರೀಶಕ್ತಿ ಸಾಲ ಮನ್ನಾ ಮಾಡಲಿಲ್ಲ. ಇದೂ ಕೂಡ ಮಹಿಳೆಯರಲ್ಲಿ ಅಸಮಾಧಾನ ಮೂಡಿಸಿತ್ತು. ಮುಖ್ಯಮಂತ್ರಿ ಗದ್ದುಗೆ ಏರಿದ ಬಳಿಕ ಕೊಟ್ಟ ಮಾತಿಗೆ ತಪ್ಪಿದ ಸಿಎಂ ಕುಮಾರಸ್ವಾಮಿ ವಿರುದ್ಧದ ಕೋಪವನ್ನು ಸುಮಲತಾ ಪರ ಮತ ಚಲಾಯಿಸಿ ತೀರಿಸಿಕೊಂಡರು.

ಸುಮಲತಾ ಮಾತು: ನಟನಾಗಿ ಅಂಬರೀಶ್‌ ಅವರನ್ನು ಇಷ್ಟಪಡುತ್ತಿದ್ದ ಮಹಿಳೆಯರು ಅಂಬರೀಶ್‌ ಪತ್ನಿಯನ್ನು ಸುಲಭವಾಗಿಯೇ ರಾಜಕಾರಣಿಯಾಗಿ ಒಪ್ಪಿಕೊಂಡರು. ನಾನು ಈ ಮಣ್ಣಿನ ಮಗಳು, ಜಿಲ್ಲೆಯ ಸೊಸೆ ಎಂದು ಹೇಳಿದ ಮಾತುಗಳು ಮಹಿಳೆಯರ ಮನಸ್ಸಿನ ಮೇಲೆ ಪರಿಣಾಮ ಬೀರಿದವು. ಸುಮಲತಾ ಹೋದಲೆಲ್ಲಾ ಮಹಿಳೆಯರು ಗುಂಪು ಗುಂಪಾಗಿ ಸೇರುತ್ತಿದ್ದರು. ಸುಮಲತಾ ಡ್ರೆಸ್‌ ಕೋಡ್‌, ನಡವಳಿಕೆ, ಮಾತುಗಾರಿಕೆ ಇವೆಲ್ಲ ಕಂಡು ಮಾರುಹೋದರು. ಸುಮಲತಾ ನಟಿ ಎಂಬುದಕ್ಕಿಂತ ಹೆಚ್ಚಾಗಿ ಅಂಬರೀಶ್‌ ಪತ್ನಿ, ತವರಿಗೆ ಸೇರಿದವಳು ಎಂಬುದನ್ನು ಹೃದಯದಲ್ಲಿರಿಸಿಕೊಂಡರು.

ಜಿಲ್ಲೆಯ ಮಹಿಳೆಯರು ಈ ಬಾರಿ ಹಣಕ್ಕೆ ಮರುಳಾಗಲಿಲ್ಲ. ಹಣದ ಹರಿದಾಟ ತೀವ್ರತೆಯಿಂದ ಕೂಡಿದ್ದರೂ ಸುಮಲತಾ ಅವರನ್ನು ತಿರಸ್ಕರಿಸುವುದಕ್ಕೆ ಮಹಿಳೆಯರ ಮನಸ್ಸು ಒಪ್ಪಲಿಲ್ಲ. ಜೆಡಿಎಸ್‌ನವರು ನೀಡಿದ ಹಣ ಪಡೆದು ಕೊನೆಗೆ ಸುಮಲತಾ ಪರ ನಿಂತರು. ಸ್ವಾಭಿಮಾನದ ಉಳಿವಿಗೆ ಬದ್ಧರಾದರು.

ಅಳಿಯನಾಗುವೆನೆಂದರೂ ಒಪ್ಪಲಿಲ್ಲ: ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿ ಕೆ.ನಿಖೀಲ್ ಕೂಡ ನಾನೂ ಈ ಜಿಲ್ಲೆಯ ಮಗ, ಒಳ್ಳೆಯ ಹುಡುಗಿ ಸಿಕ್ಕರೆ ಮದುವೆಯಾಗಿ ಅಳಿಯನಾಗುತ್ತೇನೆ ಎಂದರೂ ಯಾರೊಬ್ಬರೂ ಅದನ್ನು ಒಪ್ಪಿಕೊಳ್ಳಲಿಲ್ಲ. ಜಮೀನು ಖರೀದಿಸಿ, ತೋಟದ ಮನೆ ಮಾಡಿಕೊಂಡು ಇಲ್ಲೇ ಉಳಿಯುತ್ತೇನೆ ಎಂದರೂ ಮಂಡ್ಯ ಜನತೆ ನಂಬಲಿಲ್ಲ. ಮಂಡ್ಯದ ಸೊಸೆ ಸುಮಲತಾ ಅಂಬರೀಶ್‌ ಪರ ಮತ ಚಲಾಯಿಸಿ ಗೆಲುವಿಗೆ ಕಾರಣರಾದರು.

ಸುಮಲತಾ ಸೆರಗೊಡ್ಡಿ ಬೇಡಿದ ಸ್ವಾಭಿಮಾನದ ಭಿಕ್ಷೆ ಮಹಿಳೆಯರ ಮನಸ್ಸು ಪರಿವರ್ತನೆಯಾಗುವಂತೆ ಮಾಡಿತು. ಒಟ್ಟು ಚಲಾವಣೆಯಾದ ಮಹಿಳಾ ಮತಗಳಲ್ಲಿ ಶೇ.70ರಷ್ಟು ಮತಗಳು ಸುಮಲತಾ ಪರ ಇದ್ದುದರಿಂದಲೇ ಗೆಲುವು ಸುಲಭವಾಯಿತು.

● ಮಂಡ್ಯ ಮಂಜುನಾಥ್‌

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

Mandya Lok Sabha Constituency; ಸ್ಟಾರ್‌ ಚಂದ್ರು ಪರ ಇಂದು ನಟ ದರ್ಶನ್‌ ಪ್ರಚಾರ

Mandya Lok Sabha Constituency; ಸ್ಟಾರ್‌ ಚಂದ್ರು ಪರ ಇಂದು ನಟ ದರ್ಶನ್‌ ಪ್ರಚಾರ

ಚುನಾವಣ ಬಾಂಡ್‌ ವಿಶ್ವದ ಅತಿದೊಡ್ಡ ಹಗರಣ: ರಾಹುಲ್‌

ಚುನಾವಣ ಬಾಂಡ್‌ ವಿಶ್ವದ ಅತಿದೊಡ್ಡ ಹಗರಣ: ರಾಹುಲ್‌

raLok Sabha Elections; ಜಾತಿ ಗಣತಿ ಬಗ್ಗೆ ಮೋದಿ ನಿಲುವೇನು?: ರಾಹುಲ್‌ ಗಾಂಧಿ

Lok Sabha Elections; ಜಾತಿ ಗಣತಿ ಬಗ್ಗೆ ಮೋದಿ ನಿಲುವೇನು?: ರಾಹುಲ್‌ ಗಾಂಧಿ

Lok Sabha Elections: ಎಚ್‌ಡಿಕೆ ಆಯ್ಕೆಯಾದರೆ ಕಾವೇರಿ ವಿವಾದಕ್ಕೆ ಪರಿಹಾರ: ಅಶೋಕ್‌

Lok Sabha Elections: ಎಚ್‌ಡಿಕೆ ಆಯ್ಕೆಯಾದರೆ ಕಾವೇರಿ ವಿವಾದಕ್ಕೆ ಪರಿಹಾರ: ಅಶೋಕ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.