Udayavni Special

ಸ್ವಗ್ರಾಮ ಬೂಕನಕೆರೆಗೆ ಯಡಿಯೂರಪ್ಪ ಭೇಟಿ

ವಿಶ್ವಾಸಮತ ಗೆಲ್ಲಲು ಗ್ರಾಮದೇವತೆಯ ಆಶೀರ್ವಾದ ಕೋರಿದ ಮುಖ್ಯಮಂತ್ರಿ

Team Udayavani, Jul 28, 2019, 5:08 AM IST

270719kpn98

ಮಂಡ್ಯ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಶನಿವಾರ ಮಂಡ್ಯ ಜಿಲ್ಲೆಯ ಮೇಲುಕೋಟೆ, ತಮ್ಮ ಹುಟ್ಟೂರು ಬೂಕನಕೆರೆಗೆ ಭೇಟಿ ನೀಡಿ, ಗ್ರಾಮದೇವತೆಗೆ ವಿಶೇಷ ಪೂಜೆ ಸಲ್ಲಿಸಿದರು.

ಬೆಳಗ್ಗೆ 11.20ಕ್ಕೆ ಕಾಪನಹಳ್ಳಿ ಗ್ರಾಮಕ್ಕೆ ಆಗಮಿಸಿದ ಮುಖ್ಯಮಂತ್ರಿ, ತಮ್ಮ ಮನೆ ದೇವರು ಸ್ವತಂತ್ರ ಸಿದ್ದಲಿಂಗೇಶ್ವರ ಸ್ವಾಮಿಯವರ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದರು. ಗವಿಮಠ ಶ್ರೀಗಳಾದ ಶ್ರೀ ಸ್ವತಂತ್ರ ಚನ್ನವೀರ ಸ್ವಾಮೀಜಿಯವರ ಆಶೀರ್ವಾದ ಪಡೆದುಕೊಂಡರು. ಅಲ್ಲಿಂದ ಬೂಕನಕೆರೆ ಗ್ರಾಮಕ್ಕೆ ಆಗಮಿಸಿ, ತಮ್ಮ ಹುಟ್ಟೂರು ಬೂಕನಕೆರೆ ಗ್ರಾಮ ದೇವತೆ ಗೋಗಾಲಮ್ಮಗೆ ವಿಶೇಷ ಪೂಜೆ ಸಲ್ಲಿಸಿದರು. ಅರ್ಚಕ ಕೇಶವಮೂರ್ತಿ ಅವರು ಯಡಿಯೂರಪ್ಪ ಹೆಸರಿನಲ್ಲಿ ದೇವರಿಗೆ ಅರ್ಚನೆ ಸಲ್ಲಿಸಿದರು. ಸೋಮವಾರ ನಡೆಯುವ ವಿಶ್ವಾಸಮತದಲ್ಲಿ ಗೆಲುವಾಗಲಿ ಹಾಗೂ ಮುಖ್ಯಮಂತ್ರಿಗಳಾಗಿ ಮುಂದಿನ ನಾಲ್ಕು ವರ್ಷಗಳ ಕಾಲ ನಿರ್ವಿಘ್ನವಾಗಿ ಆಡಳಿತ ನಡೆಸಲು ಗೋಗಾಲಮ್ಮ ದೇವಿ ಶಕ್ತಿ ನೀಡಲಿ ಎಂದು ಬಿಎಸ್‌ವೈ ಪ್ರಾರ್ಥಿಸಿದರು.

ಇದೇ ವೇಳೆ, ಯಡಿಯೂರಪ್ಪ ಸಿಎ ಆದರೆ ಈಡುಗಾಯಿ ಒಡೆ ಯುವುದಾಗಿ ಹರಕೆ ಹೊತ್ತಿದ್ದ ಯಡಿಯೂರಪ್ಪ ಅಭಿಮಾನಿಗಳು, 101ತೆಂಗಿನ ಕಾಯಿಗಳನ್ನು ಗೋಗಾಲಮ್ಮ ದೇವಾಲಯದ ಮುಂದೆ ಒಡೆಯುವ ಮೂಲಕ ಹರಕೆ ತೀರಿಸಿದರು.

ಬಳಿಕ, ತಾವು ಹುಟ್ಟಿ ಬೆಳೆದ ತಮ್ಮ ಮನೆಗೆ ಭೇಟಿ ನೀಡಿದ ಯಡಿಯೂರಪ್ಪ, ತಮ್ಮ ಸಹೋದರ ದಿ.ಮಹಾದೇವಪ್ಪ ಮತ್ತು ತಮ್ಮ ತಂದೆ ದಿ.ಸಿದ್ದಲಿಂಗಪ್ಪ, ತಾಯಿ ದಿ.ಪುಟ್ಟತಾಯಮ್ಮ ಅವರ ಭಾವಚಿತ್ರಗಳಿಗೆ ನಮಸ್ಕರಿಸಿ ಗೌರವ ಸಲ್ಲಿಸಿದರು. ತಮ್ಮ ಅತ್ತಿಗೆ ಶಾರದಮ್ಮ ಅವರ ಆರೋಗ್ಯ ವಿಚಾರಿಸಿ, ಅವರ ಆಶೀರ್ವಾದ ಪಡೆದರು. ಅತ್ತಿಗೆ ಮತ್ತು ಬೂಕನಕೆರೆ ಗ್ರಾಮದ ತಮ್ಮ ಸಂಬಂಧಿಗಳೊಂದಿಗೆ ಉಪಾಹಾರ ಸೇವಿಸಿ, ಎಲ್ಲರ ಆರೋಗ್ಯ ವಿಚಾರಿಸಿದರು.

ಈ ವೇಳೆ ಸುದ್ದಿಗಾರರ ಜತೆ ಮಾತನಾಡಿ, ಸೋಮವಾರ ವಿಶ್ವಾಸಮತವನ್ನು ಪಡೆದು, ರಾಜ್ಯದ ಸಮಗ್ರ ಅಭಿವೃದ್ಧಿಗೆ ಗಮನ ಹರಿಸುತ್ತೇನೆ. ಈಗಾಗಲೇ ರೈತರಿಗೆ ಕೃಷಿ ಸಮ್ಮಾನ್‌ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರದ 6 ಸಾವಿರದ ಜೊತೆಗೆ ರಾಜ್ಯ ಸರ್ಕಾರದಿಂದಲೂ ವಾರ್ಷಿಕ 4 ಸಾವಿರ ರೂ.ಗಳನ್ನು ನೀಡಲು ನಿರ್ಧಾರ ಮಾಡಿದ್ದೇನೆ. ಜೊತೆಗೆ, ನೇಕಾರ ಬಂಧುಗಳ 100 ಕೋಟಿ ರೂ.ಗಳ ಸಾಲ ಮನ್ನಾ ಮಾಡಲು ನಿರ್ಧಾರ ಕೈಗೊಂಡಿದ್ದೇನೆ. ಸೋಮವಾರದ ನಂತರ ರಾಜ್ಯದ ರೈತರು, ಬಡವರು, ಕೂಲಿ ಕಾರ್ಮಿಕರು, ದೀನ-ದಲಿತರ ಏಳಿಗೆಗೆ ಹೊಸ ಯೋಜನೆಗಳನ್ನು ರೂಪಿಸಲಾಗುವುದು ಎಂದು ಹೇಳಿದರು.

ಮೇಲುಕೋಟೆಗೆ ಭೇಟಿ: ಶನಿವಾರ ಮಧ್ಯಾಹ್ನ ಮೇಲುಕೋಟೆಗೆ ಆಗಮಿಸಿ, ಚೆಲುವನಾರಾಯಣಸ್ವಾಮಿಯ ದರ್ಶನ ಪಡೆದರು. ಮುಖ್ಯಮಂತ್ರಿಯವರನ್ನು ಸಾಂಪ್ರದಾಯಿಕ ಪೂರ್ಣಕುಂಭ ಹಾಗೂ ಪಾದುಕಾ ಮರ್ಯಾದೆಯೊಂದಿಗೆ ಸ್ವಾಗತಿಸಲಾಯಿತು. ಚೆಲುವನಾರಾಯಣಸ್ವಾಮಿ, ಮಹಾಲಕ್ಷ್ಮೀ ಯದುಗಿರಿ ನಾಯಕಿ, ಭಗವದ್ರಾಮಾನುಜರ ದರ್ಶನ ಪಡೆದ ನಂತರ, ಪಾತಾಳಾಂಕಣದಲ್ಲಿ ರಾಜಾಶೀರ್ವಾದ ಮಾಡುವುದರೊಂದಿಗೆ ಮುಖ್ಯಮಂತ್ರಿಗಳನ್ನು ಬೀಳ್ಕೊಡಲಾಯಿತು. ಪೂರ್ಣಕುಂಭ ಸ್ವಾಗತಕ್ಕೂ ಮುನ್ನ ಜಿಲ್ಲಾಧಿಕಾರಿ ಮಂಜುಶ್ರೀ ಸೇರಿ ಇತರ ಅಧಿಕಾರಿಗಳು ಮುಖ್ಯಮಂತ್ರಿಯನ್ನು ಬರಮಾಡಿಕೊಂಡರು.

ಈ ವೇಳೆ, ಸುದ್ದಿಗಾರರ ಜತೆ ಮಾತನಾಡಿ, ತಿರುಪತಿಗೆ ಸಮಾನ ಮಹತ್ವವಿರುವ ರಾಮಾನುಜರ ತಪೋಭೂಮಿಯ ಅಭಿವೃದ್ಧಿಗೆ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳುತ್ತೇನೆ. ಈ ಹಿಂದೆ ಬಿಡುಗಡೆ ಮಾಡಿದ್ದ ಅನುದಾನ ಬಳಕೆಯ ಬಗ್ಗೆಯೂ ಪರಿಶೀಲಿಸುತ್ತೇನೆ. ವೈಷ್ಣವ ಕ್ಷೇತ್ರ ಎನಿಸಿರುವ ಮೇಲುಕೋಟೆ ಕ್ಷೇತ್ರದಲ್ಲಿ ಅನ್ನದಾನ ಭವನ ನಿರ್ಮಾಣಕ್ಕೆ ತಕ್ಷಣವೇ 2 ಕೋಟಿ ರೂ.ಬಿಡುಗಡೆ ಮಾಡುತ್ತೇನೆ. ನಾನೇ ಖುದ್ದು ಆಗಮಿಸಿ ಭೂಮಿ ಪೂಜೆ ನೆರವೇರಿಸುತ್ತೇನೆ ಎಂದು ಭರವಸೆ ನೀಡಿದರು.

ಜೇಬುಗಳ್ಳರ ಕೈಚಳಕ: ಬೂಕನಕೆರೆಯಲ್ಲಿ ಯಡಿಯೂರಪ್ಪ ಅವರನ್ನು ನೋಡಲು ಬಂದಿದ್ದ ಸಾವಿರಾರು ಸಂಖ್ಯೆಯ ಗುಂಪಿನಲ್ಲಿ ನಿಂತಿದ್ದ ಮೋದೂರು ಗ್ರಾಮದ ಕುಮಾರ್‌ ಅವರಲ್ಲಿದ್ದ 30 ಸಾವಿರ ಹಾಗೂ ಚೋಕನಹಳ್ಳಿ ಗ್ರಾಮದ ಸಿದ್ದಪ್ಪ ಅವರ ಜೇಬಿನಲ್ಲಿದ್ದ 20 ಸಾವಿರ ರೂ.ಗಳನ್ನು ಜೇಬುಗಳ್ಳರು ಪಿಕ್‌ ಪಾಕೇಟ್ ಮಾಡಿಕೊಂಡು ಪರಾರಿಯಾಗಿದ್ದಾರೆ.

ರೈತರಿಂದ ಮನವಿ: ಇದೇ ವೇಳೆ ಸಿಎಂಗೆ ಮನವಿ ಸಲ್ಲಿಸಿದ ರೈತರು, ಮಳೆ ಇಲ್ಲದೆ ಕೆರೆ-ಕಟ್ಟೆಗಳು ಖಾಲಿಯಾಗಿದ್ದು, ಹೇಮಾ ವತಿ ನದಿಯಿಂದ ನೀರು ಬಿಡಬೇಕು. ಜೊತೆಗೆ, ಸಕ್ಕರೆ ಕಾರ್ಖಾ ನೆಗಳನ್ನು ಮತ್ತೆ ಆರಂಭಿಸಿ, ರೈತರಿಗೆ ನೆರವಾಗಬೇಕು ಎಂದು ಮನವಿ ಮಾಡಿದರು. ರೈತರಿಂದ ಮನವಿ ಸ್ವೀಕರಿಸಿದ ಬಿಎಸ್‌ವೈ, ಸ್ಥಳದಲ್ಲಿ ಹಾಜರಿದ್ದ ಅವರ ಪುತ್ರ, ಸಂಸದ ರಾಘವೇಂದ್ರ ಅವರಿಗೆ ತಕ್ಷಣ ನೀರು ಬಿಡಲು ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದರು.

ಅಭಿಮಾನಿಗೆ ವಾರದೊಳಗೆ
ಹೊಸ ಚಪ್ಪಲಿ ಕೊಡಿಸುವೆ’
ಯಡಿಯೂರಪ್ಪ ಸಿಎಂ ಆಗೋವರೆಗೂ ಚಪ್ಪಲಿ ಧರಿಸುವುದಿಲ್ಲ ಎಂದು ಶಪಥಗೈದಿದ್ದ ಅಭಿಮಾನಿಯ ಹರಕೆ ಈಡೇರಿದ ಹಿನ್ನೆಲೆಯಲ್ಲಿ ವಾರದೊಳಗೆ ಹೊಸ ಚಪ್ಪಲಿ ಕೊಡಿಸುವುದಾಗಿ ಯಡಿಯೂರಪ್ಪ ಭರವಸೆ ನೀಡಿದ್ದಾರೆ.

ಹದಿನಾಲ್ಕು ತಿಂಗಳ ಹಿಂದೆ ಯಡಿಯೂರಪ್ಪ ಅವರು ಸಿಎಂ ಸ್ಥಾನದಿಂದ ಕೆಳಗಿಳಿದಾಗ ಬಿಎಸ್‌ವೈ ಮತ್ತೆ ಸಿಎಂ ಆಗುವವರೆಗೂ ಚಪ್ಪಲಿ ತೊಡುವುದಿಲ್ಲ ಎಂದು ಮಂಡ್ಯ ತಾಲೂಕು ಉಪ್ಪರಕನಹಳ್ಳಿಯ ಶಿವಕುಮಾರ ಆರಾಧ್ಯ ಶಪಥ ಮಾಡಿದ್ದರು. ಅದರಂತೆ ಇಲ್ಲಿಯವರೆಗೂ ಚಪ್ಪಲಿ ಇಲ್ಲದೆ ಬರಿಗಾಲಿನಲ್ಲೇ ಓಡಾಡುತ್ತಿದ್ದರು. ಶನಿವಾರ ಬೂಕನಕೆರೆಯಲ್ಲಿ ಯಡಿಯೂರಪ್ಪನವರನ್ನು ಅಭಿನಂದಿಸಲು ಶಿವಕುಮಾರ ಮುಂದಾದಾಗ ಶಪಥದ ವಿಷಯ ತಿಳಿದು ಸಿಎಂ ಸಂತಸಪಟ್ಟರು. “ನಿನ್ನ ಶಪಥ ಈಡೇರಿದೆ. ಈ ವಾರದೊಳಗೆ ನಾನೇ ನಿನಗೆ ಹೊಸ ಚಪ್ಪಲಿ ಕೊಡಿಸುತ್ತೇನೆ’ ಎಂದರು.

ಮಹಿಳೆಯ ಸಮಸ್ಯೆ
ಆಲಿಸಿದ ಬಿಎಸ್‌ವೈ
ದಿವ್ಯಾಂಗ ಪುತ್ರನೊಂದಿಗೆ ಆಗಮಿಸಿದ್ದ ಮಹಿಳೆ, ಜಯಲಕ್ಷ್ಮೀ ಎಂಬಾಕೆಗೆ ಮೇಲುಕೋಟೆ ಯಲ್ಲಿ ಮುಖ್ಯಮಂತ್ರಿ ಭೇಟಿಗೆ ಪೊಲೀಸರು ಅವಕಾಶ ನಿರಾಕರಿಸಿದರು.ಇದನ್ನು ಗಮನಿಸಿದ ಸಂಸದ ರಾಘವೇಂದ್ರ, ಮಹಿಳೆ ಬಳಿಗೆ ಆಗಮಿಸಿ, ಸಮಸ್ಯೆ ಆಲಿಸಿದರು. ಅಲ್ಲದೆ, ಯಡಿಯೂರಪ್ಪ ಅವರನ್ನೂ ಆಕೆಯ ಬಳಿಗೆ ಕರೆ ತಂದರು. ಈ ವೇಳೆ ಜಯಲಕ್ಷ್ಮೀ ಅವರು, “ನನ್ನ ಮಗ ಪ್ರತಾಪ್‌, ಪೋಲಿಯೋ ಪೀಡಿತನಾಗಿ ಹಾಸಿಗೆ ಹಿಡಿದಿದ್ದಾನೆ.
ಸರ್ಕಾರ 2013ರಲ್ಲೇ ನನ್ನ ಮಗನಿಗೆ ಒಂದು ಸಾವಿರ ರೂ. ಅಂಗವಿಕಲ ವೇತನ ಮಂಜೂರು ಮಾಡಿದ್ದರೂ 2017ರವರೆಗೆ 500 ರೂ.ಮಾತ್ರ ನೀಡಿದ್ದಾರೆ.

2017ರಿಂದ 1000 ರೂ. ನೀಡುತ್ತಿದ್ದಾರೆ. ಈ ನಡುವೆ ಕಡಿತವಾಗಿದ್ದ 500 ರೂ.ಗಳನ್ನು ಮಂಜೂರು ಮಾಡಿಸಿ ಕೊಡಿ ಎಂದು ನಿವೇದಿಸಿಕೊಂಡರು. ಈ ಬಗ್ಗೆ ಕ್ರಮಕೈಗೊಳ್ಳು ವಂತೆ ಸಿಎಂ, ಜಿಲ್ಲಾಧಿಕಾರಿಗೆ ಸೂಚಿಸಿದರು.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಶ್ರೀರಂಗಪಟ್ಟಣ: ಕಾರಿಗೆ ಅಡ್ಡಗಟ್ಟಿ ಕಣ್ಣಿಗೆ ಖಾರದಪುಡಿ ಎರಚಿ ಯುವಕನ ಬರ್ಬರ ಹತ್ಯೆ

ಶ್ರೀರಂಗಪಟ್ಟಣ: ಕಾರಿಗೆ ಅಡ್ಡಗಟ್ಟಿ ಕಣ್ಣಿಗೆ ಖಾರದಪುಡಿ ಎರಚಿ ಯುವಕನ ಬರ್ಬರ ಹತ್ಯೆ

jee main exam in regional languages

ಇನ್ನು ಮುಂದೆ ಪ್ರಾದೇಶಿಕ ಭಾಷೆಗಳಲ್ಲೂ ಜೆಇಇ ಮೈನ್: ಕನ್ನಡದಲ್ಲೂ ಸಿಗುತ್ತಾ ಅವಕಾಶ?

ಭಾರತದಲ್ಲಿ ಗಾಳಿ ಕಲುಷಿತವಾಗಿದೆ: ಹವಾಮಾನ ಬದಲಾವಣೆ ಸಮರ್ಥನೆಗೆ ಭಾರತವನ್ನು ಟೀಕಿಸಿದ ಟ್ರಂಪ್

ಭಾರತದಲ್ಲಿ ಗಾಳಿ ಕಲುಷಿತವಾಗಿದೆ: ಹವಾಮಾನ ಬದಲಾವಣೆ ಸಮರ್ಥನೆಗೆ ಭಾರತವನ್ನು ಟೀಕಿಸಿದ ಟ್ರಂಪ್

swachh bharat mission

ಸ್ವಚ್ಛ ಭಾರತ್‌: ಪ್ರತಿ ಕುಟುಂಬಕ್ಕೆ 53000 ರೂ. ಉಳಿತಾಯ

ಭಾರತ-ಆಸೀಸ್‌ ಪಂದ್ಯಗಳಿಗೆ ಸಿಡ್ನಿ ಸಮ್ಮತಿ: ಆಸೀಸ್ ಗೆ ತೆರಳಲಿದೆ 32 ಸದಸ್ಯರ ಜಂಬೋ ತಂಡ

ಭಾರತ-ಆಸೀಸ್‌ ಪಂದ್ಯಗಳಿಗೆ ಸಿಡ್ನಿ ಸಮ್ಮತಿ: ಆಸೀಸ್ ಗೆ ತೆರಳಲಿದೆ 32 ಸದಸ್ಯರ ಜಂಬೋ ತಂಡ

ಮುಂಬೈ ಸಿಟಿ ಸೆಂಟರ್ ಮಾಲ್ ನಲ್ಲಿ ಅಗ್ನಿ ಅವಗಢ: 20 ಅಗ್ನಿಶಾಮಕ ವಾಹನಗಳು ದೌಡು

ಮುಂಬೈ ಸಿಟಿ ಸೆಂಟರ್ ಮಾಲ್ ನಲ್ಲಿ ಅಗ್ನಿ ಅವಗಢ: 20 ಅಗ್ನಿಶಾಮಕ ವಾಹನಗಳು ದೌಡು

ಪರೀಕ್ಷೆ ಬಿಡಿ; ಪಠ್ಯಕ್ರಮವೇ ಬಂದಿಲ್ಲ ! ಎಸೆಸೆಲ್ಸಿ ಇನ್ನೂ ಗೊಂದಲದ ಗೂಡು

ಪರೀಕ್ಷೆ ಬಿಡಿ; ಪಠ್ಯಕ್ರಮವೇ ಬಂದಿಲ್ಲ ! ಎಸೆಸೆಲ್ಸಿ ಇನ್ನೂ ಗೊಂದಲದ ಗೂಡು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪರೀಕ್ಷೆ ಬಿಡಿ; ಪಠ್ಯಕ್ರಮವೇ ಬಂದಿಲ್ಲ ! ಎಸೆಸೆಲ್ಸಿ ಇನ್ನೂ ಗೊಂದಲದ ಗೂಡು

ಪರೀಕ್ಷೆ ಬಿಡಿ; ಪಠ್ಯಕ್ರಮವೇ ಬಂದಿಲ್ಲ ! ಎಸೆಸೆಲ್ಸಿ ಇನ್ನೂ ಗೊಂದಲದ ಗೂಡು

ಅಂಚೆಯಲ್ಲೇ ಭಾಗ್ಯಲಕ್ಷ್ಮೀ, ಸುಕನ್ಯಾ ಸಮೃದ್ಧಿ ಜತೆ ವಿಲೀನಕ್ಕೆ ಸಂಪುಟ ಅಸ್ತು

ಅಂಚೆಯಲ್ಲೇ ಭಾಗ್ಯಲಕ್ಷ್ಮೀ, ಸುಕನ್ಯಾ ಸಮೃದ್ಧಿ ಜತೆ ವಿಲೀನಕ್ಕೆ ಸಂಪುಟ ಅಸ್ತು

ಎಲೆಕ್ಟ್ರಿಕ್‌ ಬಸ್‌ಗಳ ಪರೀಕ್ಷಾರ್ಥ ಸಂಚಾರ

ಎಲೆಕ್ಟ್ರಿಕ್‌ ಬಸ್‌ಗಳ ಪರೀಕ್ಷಾರ್ಥ ಸಂಚಾರ

OnlineClass

ಆನ್‌ಲೈನ್‌ ಶಿಕ್ಷಣದಲ್ಲೂ ಕ್ರಿಯಾತ್ಮಕ, ಸೃಜನಶೀಲ ಬೋಧನೆ ಸಾಧ್ಯ

ಹೋರಾಟಗಾರ ತೇರದಾಳಗೆ ವಿಧಾನ ಪರಿಷತ್‌ ಪ್ರವೇಶಿಸುವ ಕನಸು

ಹೋರಾಟಗಾರ ತೇರದಾಳಗೆ ವಿಧಾನ ಪರಿಷತ್‌ ಪ್ರವೇಶಿಸುವ ಕನಸು

MUST WATCH

udayavani youtube

ಮಲ್ಪೆ: ಬಲೆಗೆ ಬಿತ್ತು ಭಾರಿ ಗಾತ್ರದ ಎರಡು ಕೊಂಬು ತೊರಕೆ ಮೀನು

udayavani youtube

ಉಡುಪಿಯಲ್ಲಿ ಪ್ರಪ್ರಥಮ ಬಾರಿಗೆ ಪ್ರಾರಂಭವಾಗಿರುವ ದೇಶಿ ಉತ್ಪನ್ನಗಳ ಮಳಿಗೆ

udayavani youtube

ಸ್ವಾಮಿತ್ವ: ಹೊಸ ಯೋಜನೆಯಿಂದ ನಮಗೆ ಏನು ಲಾಭ ?

udayavani youtube

ಚಿಕ್ಕಮಗಳೂರು : ಪುಷ್ಪ ಸಮರ್ಪಣೆ ವೇಳೆ ಮಗಳನ್ನ ನೆನೆದು ಕಣ್ಣೀರಿಟ್ಟ ಮೃತ ಪೇದೆ ತಾಯಿ

udayavani youtube

ಮಂಗಳೂರು: ಡ್ರಗ್ಸ್ ಜಾಗೃತಿ ಬರಹದಿಂದ ಗಮನಸೆಳೆಯುತ್ತಿದೆ ಸಿಟಿ ಬಸ್ಹೊಸ ಸೇರ್ಪಡೆ

ಶ್ರೀರಂಗಪಟ್ಟಣ: ಕಾರಿಗೆ ಅಡ್ಡಗಟ್ಟಿ ಕಣ್ಣಿಗೆ ಖಾರದಪುಡಿ ಎರಚಿ ಯುವಕನ ಬರ್ಬರ ಹತ್ಯೆ

ಶ್ರೀರಂಗಪಟ್ಟಣ: ಕಾರಿಗೆ ಅಡ್ಡಗಟ್ಟಿ ಕಣ್ಣಿಗೆ ಖಾರದಪುಡಿ ಎರಚಿ ಯುವಕನ ಬರ್ಬರ ಹತ್ಯೆ

jee main exam in regional languages

ಇನ್ನು ಮುಂದೆ ಪ್ರಾದೇಶಿಕ ಭಾಷೆಗಳಲ್ಲೂ ಜೆಇಇ ಮೈನ್: ಕನ್ನಡದಲ್ಲೂ ಸಿಗುತ್ತಾ ಅವಕಾಶ?

ಭಾರತದಲ್ಲಿ ಗಾಳಿ ಕಲುಷಿತವಾಗಿದೆ: ಹವಾಮಾನ ಬದಲಾವಣೆ ಸಮರ್ಥನೆಗೆ ಭಾರತವನ್ನು ಟೀಕಿಸಿದ ಟ್ರಂಪ್

ಭಾರತದಲ್ಲಿ ಗಾಳಿ ಕಲುಷಿತವಾಗಿದೆ: ಹವಾಮಾನ ಬದಲಾವಣೆ ಸಮರ್ಥನೆಗೆ ಭಾರತವನ್ನು ಟೀಕಿಸಿದ ಟ್ರಂಪ್

swachh bharat mission

ಸ್ವಚ್ಛ ಭಾರತ್‌: ಪ್ರತಿ ಕುಟುಂಬಕ್ಕೆ 53000 ರೂ. ಉಳಿತಾಯ

ಭಾರತ-ಆಸೀಸ್‌ ಪಂದ್ಯಗಳಿಗೆ ಸಿಡ್ನಿ ಸಮ್ಮತಿ: ಆಸೀಸ್ ಗೆ ತೆರಳಲಿದೆ 32 ಸದಸ್ಯರ ಜಂಬೋ ತಂಡ

ಭಾರತ-ಆಸೀಸ್‌ ಪಂದ್ಯಗಳಿಗೆ ಸಿಡ್ನಿ ಸಮ್ಮತಿ: ಆಸೀಸ್ ಗೆ ತೆರಳಲಿದೆ 32 ಸದಸ್ಯರ ಜಂಬೋ ತಂಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.