ಅಂಗನವಾಡಿಗಳಲ್ಲೇ ಯುಕೆಜಿ ಆರಂಭಿಸಿ

ಬಾಕಿ ಗೌರವಧನ ಬಿಡುಗಡೆಗೊಳಿಸಲು ಒತ್ತಾಯ • ಅಂಗನವಾಡಿ ಕಾರ್ಯಕರ್ತೆಯರಿಂದ ಪ್ರತಿಭಟನೆ

Team Udayavani, Jul 11, 2019, 4:32 PM IST

ಅಂಗನವಾಡಿಗಳಲ್ಲಿ ಎಲ್‌ ಕೆಜಿ-ಯುಕೆಜಿ ತರಗತಿಗಳನ್ನು ಆರಂಭಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ಮಂಡ್ಯದ ಜಿಲ್ಲಾದಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಮಂಡ್ಯ: ಅಂಗನವಾಡಿ ಕೇಂದ್ರಗಳಲ್ಲಿ ಎಲ್ಕೆಜಿ, ಯುಕೆಜಿ ಪ್ರಾರಂಭಿಸುವುದು, ಬಾಕಿ ಗೌರವಧನ, ಕೋಳಿಮೊಟ್ಟೆ, ತರಕಾರಿ ಹಾಗೂ ಹೆಚ್ಚಳವಾಗಿರುವ ಗೌರವಧನ ಬಿಡುಗಡೆಗೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. ನಗರದ ಸಿಲ್ವರ್‌ ಜ್ಯೂಬಿಲಿ ಪಾರ್ಕ್‌ನಲ್ಲಿ ಜಮಾಯಿಸಿದ ಕಾರ್ಯಕರ್ತೆಯರು, ಬೆಂಗಳೂರು- ಮೈಸೂರು ಹೆದ್ದಾರಿ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಕೆಲಕಾಲ ಧರಣಿ ನಡೆಸಿ ಮನವಿ ಸಲ್ಲಿಸಿದರು.

ಅಂಗನವಾಡಿಗಳಲ್ಲೇ ಯುಕೆಜಿ, ಎಲ್ಕೆಜಿ ಆರಂಭಿಸಿ: 6 ವರ್ಷದೊಳಗಿನ ಮಕ್ಕಳಲ್ಲಿ ಶೇ.40ರಷ್ಟು ದೈಹಿಕ ಬೆಳವಣಿಗೆ, ಶೇ. 80ರಷ್ಟು ಮಾನಸಿಕ ಬೆಳವಣಿಗೆ ನಡೆಯುವ ಸಂದರ್ಭದಲ್ಲಿ ಪೂರಕ ಪೌಷ್ಠಿಕ ಆಹಾರ ಮತ್ತು ಪ್ರಾಥಮಿಕ ಆರೋಗ್ಯವನ್ನು ಪೂರೈಸುವ ಸಲುವಾಗಿಯೇ ಐಸಿಡಿಎಸ್‌ ಯೋಜನೆ ಆರಂ ಭಿಸಿದೆ. 3 ವರ್ಷದೊಳಗಿನ ಮಗು ತಾಯಿಯ ಆರೈಕೆಯಲ್ಲಿರಬೇಕಾದ್ದರಿಂದ, ಮಕ್ಕಳ ಆಟ-ಪಾಠಗಳಿಗೆ ಅನುಗುಣವಾಗಿ ಅಂಗನವಾಡಿಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಆದ ಕಾರಣ ಅಂಗನವಾಡಿ ಕೇಂದ್ರಗಳಲ್ಲಿ ಎಲ್ಕೆಜಿ, ಯುಕೆಜಿ ಪ್ರಾರಂಭಿಸುವಂತೆ ಒತ್ತಾಯಿಸಿದರು.

ನಿವೃತ್ತಿಯಾದವರಿಗೆ ಪಿಂಚಣಿ ನೀಡಿ: ಕೇಂದ್ರ ಮತ್ತು ರಾಜ್ಯಸರ್ಕಾರಿ ನೌಕರರಿಗೆ ಕೊಡುವ ಎನ್‌ಪಿಎಸ್‌ ಮಾನದಂಡಗಳನ್ನು ಅಂಗನವಾಡಿ ಕಾರ್ಯಕರ್ತರಿಗೂ ಅನ್ವಯಿಸಬೇಕು. ನಿವೃತ್ತಿ ಹೊಂದಿದ ಕಾರ್ಯ ಕರ್ತೆಯರು, ಸಹಾಯಕಿಯರಿಗೆ ಇಡಗಂಟನ್ನು ತಕ್ಷಣವೇ ಬಿಡುಗಡೆ ಮಾಡುವುದು. ಕಾರ್ಯಕರ್ತೆ, ಸಹಾಯಕಿಯರಿಗೆ ತಕ್ಷಣವೇ ಪಾನ್‌ಕಾರ್ಡ್‌ ನೀಡಬೇಕು. 2016ರ ಏಪ್ರಿಲ್ನಿಂದ ಆಯ್ಕೆ ಆದ ಕಾರ್ಯಕರ್ತೆ, ಸಹಾಯಕಿಯರಿಗೆ ಕಾಯಂ ನಿವೃತ್ತಿ ಸೌಲಭ್ಯದಡಿ ತರಬೇಕು, ಈಗಾಗಲೇ ನಿವೃತ್ತಿ ಆದವರಿಗೆ ಕನಿಷ್ಠ 3 ಸಾವಿರ ರೂ. ಪಿಂಚಣಿ ನೀಡುವಂತೆ ಆಗ್ರಹಿಸಿದರು.

ಅಂಗನವಾಡಿ ಕೇಂದ್ರಗಳಲ್ಲಿ ಮಾತೃಪೂರ್ಣ ಯಶಸ್ವಿ ಮಾಡಲು ಹೆಚ್ಚುವರಿ ಸಹಾಯಕಿಯನ್ನು ಕೊಡಬೇಕು. ಅಂಗನವಾಡಿ ಕೇಂದ್ರಗಳಿಗೆ ಎಲ್ಲ ರೀತಿಯ ಗುಣಾತ್ಮಕ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು. 1995ರಿಂದ ಪ್ರಾರಂಭವಾಗಿರುವ ಎಲ್ಲಾ ಯೋಜನೆಗಳು ಮತ್ತು ಆಯ್ಕೆಯಾಗಿರುವ ಎಲ್ಲ ಅಂಗನವಾಡಿ ಕಾರ್ಯಕರ್ತೆಯರು ಎಸ್‌ಎಸ್‌ಎಲ್ಸಿ ಪಾಸಾಗಿರುವುದರಿಂದ ಅವರಿಗೆ ತರಬೇತಿ ಕೊಟ್ಟು ಅಂಗನವಾಡಿ ಕೇಂದ್ರಗಳಲ್ಲೇ ಎಲ್ಕೆಜಿ, ಯುಕೆಜಿಯನ್ನು ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.

ಈಗಾಗಲೇ ಸರ್ಕಾರಿ ಶಾಲೆಗಳಲ್ಲಿ ಪ್ರಾರಂಭವಾಗಿರುವ ಮತ್ತು ಪ್ರಾರಂಭವಾಗುತ್ತಿರುವ ಎಲ್ಕೆಜಿ, ಯುಕೆಜಿ ತರಗತಿಗಳಿಗೆ ಇಲಾಖೆಯಿಂದ ತಡೆಯೊಡ್ಡಬೇಕು. ಅದಕ್ಕೆ ಬೇಕಾದ ಎಲ್ಲಾ ಕ್ರಮಗಳನ್ನು ಕೂಡಲೇ ವಹಿಸಬೇಕು. ಮಾತೃಪೂರ್ಣ ಯೋಜನೆಯ ಸಹಾಯಕಿಯರ ಕೆಲಸ ದುಪ್ಪಟ್ಟು ಆಗಿರುವುದರಿಂದ ಕಾರ್ಯಕರ್ತೆಯರಿಗೆ ನೀಡುವ ಗೌರವ ಧನದ ಶೇ. 75ರಷ್ಟು ಕೊಡಬೇಕು ಎಂದು ಆಗ್ರಹಿಸಿದರು.

ಮುಂಬಡ್ತಿಗೆ ವಯಸ್ಸಿನ ಮಿತಿ ಸಡಿಲಿಸಿ: ಅಂಗನವಾಡಿ ಸಹಾಯಕ ಕಾರ್ಯಕರ್ತೆಯಾಗಿ ಮುಂಬಡ್ತಿ ಪಡೆಯಲು ಇರುವ ವಯಸ್ಸಿನ ಭೌಗೋಳಿಕ ವಿಸ್ತೀರ್ಣದ ಮಿತಿಯನ್ನು ಸಡಿಲಿಸಬೇಕು. ಅನುಕಂಪದ ಆಧಾರದಲ್ಲಿರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳನ್ನು ಮದುವೆಯಾಗದ ಹೆಣ್ಣು ಮಕ್ಕಳಿಗೆ ಮಾತ್ರ ಎಂಬ ಷರತ್ತನ್ನು ತೆಗೆದು ಕುಟುಂಬದವ ರಿಗೆ ನೀಡುವಂತೆ ತಿದ್ದುಪಡಿಯಾಗಬೇಕು. ಖಾಲಿ ಇರುವ ಸಹಾಯಕಿ ಮತ್ತು ಕಾರ್ಯಕರ್ತೆಯರ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡುವುದು. ಅಂಗನವಾಡಿ ಕಾರ್ಯಕರ್ತೆಯರಿಗೆ ಸೇವಾ ನಿಯಮಾಳಿ ರಚಿಸಿ, ಕೇಂದ್ರ ಸರ್ಕಾರ ಕಡಿತ ಮಾಡಿರುವ ಅನುದಾನ ವಾಪಸ್ಸು ನೀಡುವಂತೆ ಒತ್ತಾಯಿಸಿದರು.

ಅಪಘಾತಗಳಿಗೆ ಪರಿಹಾರ ನೀಡಿ: ಅಂಗನವಾಡಿ ಕೇಂದ್ರದ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಸೂಚನೆಯನ್ನು ಸರ್ಕಾರ ಒಪ್ಪಬಾರದು. ಅಂಗನವಾಡಿ ನೌಕರರು ಇಲಾಖಾ ಕೆಲಸಗಳಿಗಾಗಿ ಓಡಾಡುವಾಗ ಆಗುವ ಅಪಘಾತಗಳಿಗೆ ಪರಿಹಾರ ನೀಡ ಬೇಕು. ಈಗಾಗಲೇ ಜಮಖಂಡಿಯಲ್ಲಿ 8 ಜನ ಅಂಗನವಾಡಿ ನೌಕರರು ಗೌರವಧನದ ಸಭೆಗೆ ಹೋಗಿದ್ದ ಸಮಯದಲ್ಲಿ ಸಂಭವಿಸಿದ ಅಪಘಾತದಲ್ಲಿ 1.39 ಲಕ್ಷ ರೂ. ಖರ್ಚಾಗಿದೆ. ಈ ಹಣವನ್ನು ತಕ್ಷಣವೇ ನೊಂದವರಿಗೆ ಪಾವತಿ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಮುಖಂಡರಾದ ಪುಷ್ಪಾವತಿ, ಲತಾ, ಕಮಲಾ, ಗೀತಾ, ಸವಿತಾ, ಸಾವಿತ್ರಮ್ಮ, ಧನಲಕ್ಷ್ಮಿ, ಜಯಲಕ್ಷ್ಮಮ್ಮ, ಪ್ರೇಮೀಳಕುಮಾರಿ, ಸಿ. ಕುಮಾರಿ, ನಾಗಮ್ಮ, ಶಿವಮ್ಮ, ರೋಹಿಣಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಅಂಗನವಾಡಿ ಕೇಂದ್ರಗಳಲ್ಲಿ ಎಲ್ಕೆಜಿ, ಯುಕೆಜಿ ಪ್ರಾರಂಭಿಸುವುದು, ಬಾಕಿ ಗೌರವಧನ, ಕೋಳಿಮೊಟ್ಟೆ, ತರಕಾರಿ ಹಾಗೂ ಹೆಚ್ಚಳವಾಗಿರುವ ಗೌರವಧನ ಬಿಡುಗಡೆಗೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. ನಗರದ ಸಿಲ್ವರ್‌ ಜ್ಯೂಬಿಲಿ ಪಾರ್ಕ್‌ನಲ್ಲಿ ಜಮಾಯಿಸಿದ ಕಾರ್ಯಕರ್ತೆಯರು, ಬೆಂಗಳೂರು- ಮೈಸೂರು ಹೆದ್ದಾರಿ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಕೆಲಕಾಲ ಧರಣಿ ನಡೆಸಿ ಮನವಿ ಸಲ್ಲಿಸಿದರು.

ಅಂಗನವಾಡಿಗಳಲ್ಲೇ ಯುಕೆಜಿ, ಎಲ್ಕೆಜಿ ಆರಂಭಿಸಿ: 6 ವರ್ಷದೊಳಗಿನ ಮಕ್ಕಳಲ್ಲಿ ಶೇ.40ರಷ್ಟು ದೈಹಿಕ ಬೆಳವಣಿಗೆ, ಶೇ. 80ರಷ್ಟು ಮಾನಸಿಕ ಬೆಳವಣಿಗೆ ನಡೆಯುವ ಸಂದರ್ಭದಲ್ಲಿ ಪೂರಕ ಪೌಷ್ಠಿಕ ಆಹಾರ ಮತ್ತು ಪ್ರಾಥಮಿಕ ಆರೋಗ್ಯವನ್ನು ಪೂರೈಸುವ ಸಲುವಾಗಿಯೇ ಐಸಿಡಿಎಸ್‌ ಯೋಜನೆ ಆರಂ ಭಿಸಿದೆ. 3 ವರ್ಷದೊಳಗಿನ ಮಗು ತಾಯಿಯ ಆರೈಕೆಯಲ್ಲಿರಬೇಕಾದ್ದರಿಂದ, ಮಕ್ಕಳ ಆಟ-ಪಾಠಗಳಿಗೆ ಅನುಗುಣವಾಗಿ ಅಂಗನವಾಡಿಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಆದ ಕಾರಣ ಅಂಗನವಾಡಿ ಕೇಂದ್ರಗಳಲ್ಲಿ ಎಲ್ಕೆಜಿ, ಯುಕೆಜಿ ಪ್ರಾರಂಭಿಸುವಂತೆ ಒತ್ತಾಯಿಸಿದರು.

ನಿವೃತ್ತಿಯಾದವರಿಗೆ ಪಿಂಚಣಿ ನೀಡಿ: ಕೇಂದ್ರ ಮತ್ತು ರಾಜ್ಯಸರ್ಕಾರಿ ನೌಕರರಿಗೆ ಕೊಡುವ ಎನ್‌ಪಿಎಸ್‌ ಮಾನದಂಡಗಳನ್ನು ಅಂಗನವಾಡಿ ಕಾರ್ಯಕರ್ತರಿಗೂ ಅನ್ವಯಿಸಬೇಕು. ನಿವೃತ್ತಿ ಹೊಂದಿದ ಕಾರ್ಯ ಕರ್ತೆಯರು, ಸಹಾಯಕಿಯರಿಗೆ ಇಡಗಂಟನ್ನು ತಕ್ಷಣವೇ ಬಿಡುಗಡೆ ಮಾಡುವುದು. ಕಾರ್ಯಕರ್ತೆ, ಸಹಾಯಕಿಯರಿಗೆ ತಕ್ಷಣವೇ ಪಾನ್‌ಕಾರ್ಡ್‌ ನೀಡಬೇಕು. 2016ರ ಏಪ್ರಿಲ್ನಿಂದ ಆಯ್ಕೆ ಆದ ಕಾರ್ಯಕರ್ತೆ, ಸಹಾಯಕಿಯರಿಗೆ ಕಾಯಂ ನಿವೃತ್ತಿ ಸೌಲಭ್ಯದಡಿ ತರಬೇಕು, ಈಗಾಗಲೇ ನಿವೃತ್ತಿ ಆದವರಿಗೆ ಕನಿಷ್ಠ 3 ಸಾವಿರ ರೂ. ಪಿಂಚಣಿ ನೀಡುವಂತೆ ಆಗ್ರಹಿಸಿದರು.

ಅಂಗನವಾಡಿ ಕೇಂದ್ರಗಳಲ್ಲಿ ಮಾತೃಪೂರ್ಣ ಯಶಸ್ವಿ ಮಾಡಲು ಹೆಚ್ಚುವರಿ ಸಹಾಯಕಿಯನ್ನು ಕೊಡಬೇಕು. ಅಂಗನವಾಡಿ ಕೇಂದ್ರಗಳಿಗೆ ಎಲ್ಲ ರೀತಿಯ ಗುಣಾತ್ಮಕ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು. 1995ರಿಂದ ಪ್ರಾರಂಭವಾಗಿರುವ ಎಲ್ಲಾ ಯೋಜನೆಗಳು ಮತ್ತು ಆಯ್ಕೆಯಾಗಿರುವ ಎಲ್ಲ ಅಂಗನವಾಡಿ ಕಾರ್ಯಕರ್ತೆಯರು ಎಸ್‌ಎಸ್‌ಎಲ್ಸಿ ಪಾಸಾಗಿರುವುದರಿಂದ ಅವರಿಗೆ ತರಬೇತಿ ಕೊಟ್ಟು ಅಂಗನವಾಡಿ ಕೇಂದ್ರಗಳಲ್ಲೇ ಎಲ್ಕೆಜಿ, ಯುಕೆಜಿಯನ್ನು ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.

ಈಗಾಗಲೇ ಸರ್ಕಾರಿ ಶಾಲೆಗಳಲ್ಲಿ ಪ್ರಾರಂಭವಾಗಿರುವ ಮತ್ತು ಪ್ರಾರಂಭವಾಗುತ್ತಿರುವ ಎಲ್ಕೆಜಿ, ಯುಕೆಜಿ ತರಗತಿಗಳಿಗೆ ಇಲಾಖೆಯಿಂದ ತಡೆಯೊಡ್ಡಬೇಕು. ಅದಕ್ಕೆ ಬೇಕಾದ ಎಲ್ಲಾ ಕ್ರಮಗಳನ್ನು ಕೂಡಲೇ ವಹಿಸಬೇಕು. ಮಾತೃಪೂರ್ಣ ಯೋಜನೆಯ ಸಹಾಯಕಿಯರ ಕೆಲಸ ದುಪ್ಪಟ್ಟು ಆಗಿರುವುದರಿಂದ ಕಾರ್ಯಕರ್ತೆಯರಿಗೆ ನೀಡುವ ಗೌರವ ಧನದ ಶೇ. 75ರಷ್ಟು ಕೊಡಬೇಕು ಎಂದು ಆಗ್ರಹಿಸಿದರು.

ಮುಂಬಡ್ತಿಗೆ ವಯಸ್ಸಿನ ಮಿತಿ ಸಡಿಲಿಸಿ: ಅಂಗನವಾಡಿ ಸಹಾಯಕ ಕಾರ್ಯಕರ್ತೆಯಾಗಿ ಮುಂಬಡ್ತಿ ಪಡೆಯಲು ಇರುವ ವಯಸ್ಸಿನ ಭೌಗೋಳಿಕ ವಿಸ್ತೀರ್ಣದ ಮಿತಿಯನ್ನು ಸಡಿಲಿಸಬೇಕು. ಅನುಕಂಪದ ಆಧಾರದಲ್ಲಿರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳನ್ನು ಮದುವೆಯಾಗದ ಹೆಣ್ಣು ಮಕ್ಕಳಿಗೆ ಮಾತ್ರ ಎಂಬ ಷರತ್ತನ್ನು ತೆಗೆದು ಕುಟುಂಬದವ ರಿಗೆ ನೀಡುವಂತೆ ತಿದ್ದುಪಡಿಯಾಗಬೇಕು. ಖಾಲಿ ಇರುವ ಸಹಾಯಕಿ ಮತ್ತು ಕಾರ್ಯಕರ್ತೆಯರ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡುವುದು. ಅಂಗನವಾಡಿ ಕಾರ್ಯಕರ್ತೆಯರಿಗೆ ಸೇವಾ ನಿಯಮಾಳಿ ರಚಿಸಿ, ಕೇಂದ್ರ ಸರ್ಕಾರ ಕಡಿತ ಮಾಡಿರುವ ಅನುದಾನ ವಾಪಸ್ಸು ನೀಡುವಂತೆ ಒತ್ತಾಯಿಸಿದರು.

ಅಪಘಾತಗಳಿಗೆ ಪರಿಹಾರ ನೀಡಿ: ಅಂಗನವಾಡಿ ಕೇಂದ್ರದ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಸೂಚನೆಯನ್ನು ಸರ್ಕಾರ ಒಪ್ಪಬಾರದು. ಅಂಗನವಾಡಿ ನೌಕರರು ಇಲಾಖಾ ಕೆಲಸಗಳಿಗಾಗಿ ಓಡಾಡುವಾಗ ಆಗುವ ಅಪಘಾತಗಳಿಗೆ ಪರಿಹಾರ ನೀಡ ಬೇಕು. ಈಗಾಗಲೇ ಜಮಖಂಡಿಯಲ್ಲಿ 8 ಜನ ಅಂಗನವಾಡಿ ನೌಕರರು ಗೌರವಧನದ ಸಭೆಗೆ ಹೋಗಿದ್ದ ಸಮಯದಲ್ಲಿ ಸಂಭವಿಸಿದ ಅಪಘಾತದಲ್ಲಿ 1.39 ಲಕ್ಷ ರೂ. ಖರ್ಚಾಗಿದೆ. ಈ ಹಣವನ್ನು ತಕ್ಷಣವೇ ನೊಂದವರಿಗೆ ಪಾವತಿ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಮುಖಂಡರಾದ ಪುಷ್ಪಾವತಿ, ಲತಾ, ಕಮಲಾ, ಗೀತಾ, ಸವಿತಾ, ಸಾವಿತ್ರಮ್ಮ, ಧನಲಕ್ಷ್ಮಿ, ಜಯಲಕ್ಷ್ಮಮ್ಮ, ಪ್ರೇಮೀಳಕುಮಾರಿ, ಸಿ. ಕುಮಾರಿ, ನಾಗಮ್ಮ, ಶಿವಮ್ಮ, ರೋಹಿಣಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ