ಮಾರ್ಚ್ ಒಳಗೆ ಘಟಕಗಳಿಗೆ ಬಿಎಸ್ 6 ಗ್ರೇಡ್ ತೈಲ ಪೂರೈಕೆ; ಎಂಆರ್ಪಿಎಲ್
Team Udayavani, Oct 5, 2019, 6:52 PM IST
ಮಂಗಳೂರು : ಎಂಆರ್ಪಿಎಲ್ನಿಂದ ಬೆಂಗಳೂರು- ಮಂಗಳೂರು ಪೈಪ್ಲೈನ್ ಮೂಲಕ ಬಿಎಸ್ 6 ಗ್ರೇಡ್ನ ಎಂಎಸ್(ಮೋಟಾರ್ ಸ್ಪಿರಿಟ್) ಮತ್ತು ಎಚ್ಎಸ್ಡಿ (ಹೈಸ್ಪೀಡ್ ಡೀಸೆಲ್) ತೈಲ ಪೂರೈಕೆ ನವೆಂಬರ್ ಅಂತ್ಯಕ್ಕೆ ಆರಂಭಗೊಳ್ಳಲಿದ್ದು, ಮಾರ್ಚ್ ಒಳಗೆ ಈ ತೈಲ ನಿಗದಿತ ಪೈಪ್ಲೈನ್ ಮೂಲಕ ಘಟಕಗಳಿಗೆ ತಲುಪಲಿದೆ ಎಂದು ಎಂಆರ್ಪಿಎಲ್ ಆಡಳಿತ ನಿರ್ದೇಶಕ ವೆಂಕಟೇಶ್ ತಿಳಿಸಿದ್ದಾರೆ.
ಈ ಕುರಿತಂತೆ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ದೇಶದಲ್ಲಿ ಬಿಎಸ್ 6 ಗ್ರೇಡ್ನ ಎಂಎಸ್ ಮತ್ತು ಎಚ್ಎಸ್ಡಿ ತೈಲ ಬಳಕೆಯನ್ನು 2020ರ ಎಪ್ರಿಲ್ 1ರಿಂದ ಕಡ್ಡಾಯಗೊಳಿಸಿರುವ ಹಿನ್ನೆಲೆಯಲ್ಲಿ ಈ ತೈಲ ಉತ್ಪಾದನೆಯನ್ನು ಎಂಆರ್ಪಿಎಲ್ನಲ್ಲಿ ಆರಂಭಿಸಲಾಗಿದೆ. 35 ಸಾವಿರ ಕಿಲೋ ಲೀಟರ್ ಮೂಲಕ ತೈಲವು ಪೈಪ್ಲೈನ್ ಮೂಲಕ ವಿವಿಧ ಘಟಕಗಳಿಗೆ ಸಾಗಲಿದೆ ಎಂದರು.
ಸೌದಿಯಲ್ಲಿ ತೈಲ ನೆಲೆಗಳ ಮೇಲೆ ಇತ್ತೀಚೆಗೆ ನಡೆದ ದಾಳಿಯು ಎಂಆರ್ಪಿಎಲ್ಗೆ ಪೂರೈಕೆಯಾಗುವ ಕಚ್ಚಾತೈಲಕ್ಕೆ ಯಾವುದೇ ಸಮಸ್ಯೆಯನ್ನುಂಟು ಮಾಡಿಲ್ಲ. ಆದರೆ, ಭಾರೀ ಮಳೆಯಿಂದಾಗಿ ಎಂಆರ್ಪಿಎಲ್ ರಿಫೈನರಿ ಕಾಂಪ್ಲೆಕ್ಸ್ ನಲ್ಲಿ ಭೂ ಕುಸಿತ ಉಂಟಾಗಿ ರಿಫೈನರಿ ಕಾಂಪ್ಲೆಕ್ಸ್ ನ ಮೂರನೇ ಹಂತದ ಪೈಪ್ ರ್ಯಾಕ್ಗೆ ತೊಂದರೆಯಾಗಿತ್ತು. ಸುರಕ್ಷತೆ ದೃಷ್ಟಿಯಿಂದ ತತ್ಕ್ಷಣವೇ ಅದನ್ನು ಸ್ಥಗಿತಗೊಳಿಸಿ, ದುರಸ್ತಿ ಮಾಡಿ ಸೆಪ್ಟಂಬರ್ನಿಂದ ಮತ್ತೆ ಕಾರ್ಯಾರಂಭಿಸಲಾಗಿದೆ ಎಂದು ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು