ಜಿಲ್ಲೆಯಲ್ಲಿ 424 ಸೀಟುಗಳಿಗೆ ಕೇವಲ 118 ಅರ್ಜಿ !

ಆರ್‌ಟಿಇ ತಿದ್ದುಪಡಿ

Team Udayavani, May 19, 2019, 10:05 AM IST

ಮಹಾನಗರ: ಸರಕಾರವು ಆರ್‌ಟಿಇನಲ್ಲಿ ತಿದ್ದುಪಡಿ ತಂದು ಅನುದಾನಿತ ಶಾಲೆಗಳಿಗೆ ಆದ್ಯತೆ ನೀಡಿದ ಪರಿಣಾಮ ದ.ಕ. ಜಿಲ್ಲೆಗೆ ಮೀಸಲಾದ 424 ಆರ್‌ಟಿಇ ಮೀಸಲು ಸೀಟುಗಳಿಗೆ 118 ಅರ್ಜಿಗಳು ಮಾತ್ರ ಸಲ್ಲಿಕೆಯಾಗಿವೆ.

ಆರ್ಥಿಕವಾಗಿ ಹಿಂದುಳಿದ ಕುಟುಂ ಬದ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಪಡೆಯಬೇಕು ಎನ್ನುವ ನಿಟ್ಟಿನಲ್ಲಿ ರಾಜ್ಯದಲ್ಲಿ ಶಿಕ್ಷಣ ಹಕ್ಕು ಕಾಯ್ದೆಯನ್ನು ಅನುಷ್ಠಾನಗೊಳಿಸಲಾಗಿತ್ತು. ಆದಾದ ಬಳಿಕ ರಾಜ್ಯದ ವಿವಿಧ ಭಾಗಗಳಲ್ಲಿ ಅರ್ಹ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಂಡಿದ್ದರು. ಆದರೆ ಈ ಬಾರಿ ಆರ್‌ಟಿಇ ಸೀಟುಗಳಲ್ಲಿ ತಿದ್ದುಪಡಿ ಮಾಡಲಾಗಿದ್ದು, ಅನುದಾನಿತ ಕನ್ನಡ ಮಾಧ್ಯಮ ಶಾಲೆಗಳಿಗೆ ಮಾತ್ರ ಆರ್‌ಟಿಇ ಸೀಟುಗಳನ್ನು ಮೀಸಲಿಡಲಾಯಿತು. ಇದರ ಪರಿಣಾಮ ಆರ್‌ ಟಿಇ ಸೀಟು ಗಳಿಗೆ ಅರ್ಜಿ ಸಲ್ಲಿಸುವವರ ಸಂಖ್ಯೆಯೂ ಕಡಿಮೆಯಾಗಿದೆ.

96 ಶಾಲೆಗಳಲ್ಲಿ ಮಾತ್ರ ಅವಕಾಶ
ಈ ಬಾರಿ ಮೊದಲಿಗೆ ಮಂಗಳೂರು ಉತ್ತರ ವಲಯದಲ್ಲಿ 102, ಮಂಗಳೂರು ದಕ್ಷಿಣದಲ್ಲಿ 138, ಮೂಡುಬಿದಿರೆಯಲ್ಲಿ 16, ಬಂಟ್ವಾಳದಲ್ಲಿ 77, ಬೆಳ್ತಂಗಡಿಯಲ್ಲಿ 24, ಪುತ್ತೂರಿನಲ್ಲಿ 41, ಸುಳ್ಯ ವಲಯದಲ್ಲಿ 26 ಸೀಟುಗಳನ್ನು ಮೀಸಲಿಡಲಾಗಿತ್ತು. ಆರ್‌ಟಿಇ ಪರಿಷ್ಕೃತ ನಿಯಮಾವಳಿ ಪ್ರಕಾರ ದ.ಕ. ಜಿಲ್ಲೆಯ ಅನುದಾನಿತ 86 ಮತ್ತು ಅನುದಾನ ರಹಿತ 10 ಸಹಿತ 96 ಶಾಲೆಗಳಲ್ಲಿ ಕೇವಲ 424 ಸೀಟುಗಳನ್ನು ಮಾತ್ರ ಮೀಸಲಿಡಲಾಗಿದೆ. ಮಂಗಳೂರು ಉತ್ತರದ 3 ಮತ್ತು ದಕ್ಷಿಣದ 7 ಖಾಸಗಿ ಶಾಲೆಗಳನ್ನು ಹೊರತುಪಡಿಸಿದರೆ ಬಂಟ್ವಾಳ, ಪುತ್ತೂರು, ಸುಳ್ಯ, ಬೆಳ್ತಂಗಡಿ ಶೈಕ್ಷಣಿಕ ವಲಯಗಳ ಖಾಸಗಿ ಶಾಲೆಗಳಲ್ಲಿ ಈ ಬಾರಿ ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶವೇ ನೀಡಿಲ್ಲ.

2018-19ನೇ ಸಾಲಿನಲ್ಲಿ ಅನುದಾನಿತ ಮತ್ತು ಖಾಸಗಿಯನ್ನೊಳಗೊಂಡು 2,727 ವಿದ್ಯಾರ್ಥಿಗಳ ಪ್ರವೇಶಕ್ಕೆ ಮಾತ್ರ ಅವಕಾಶ ಒದಗಿಸಲಾಗಿತ್ತು. ಆದರೆ ಪ್ರಸಕ್ತ ಸಾಲಿನ (2019-20)ಮಿತಿಯನ್ನು 424ಕ್ಕೆ ಸೀಮಿತಗೊಳಿಸಲಾಗಿದೆ.

ಸುಳ್ಯದಲ್ಲಿ ಶೂನ್ಯ ಅರ್ಜಿ
ಪ್ರಸಕ್ತ ಸಾಲಿನಲ್ಲಿ ದ.ಕ. ಜಿಲ್ಲೆಯ 7 ಶಿಕ್ಷಣ ವಲಯಗಳ ಪೈಕಿ ಸುಳ್ಯದಲ್ಲಿ ಒಂದೇ ಒಂದು ಅರ್ಜಿ ಸಲ್ಲಿಕೆಯಾಗಿಲ್ಲ ಎಂಬುದು ಗಮನಾರ್ಹ. ಉಳಿದಂತೆ ಬಂಟ್ವಾಳ ವಲಯದಲ್ಲಿ 20, ಬೆಳ್ತಂಗಡಿಯಲ್ಲಿ 2, ಮಂಗಳೂರು ಉತ್ತರದಲ್ಲಿ 62, ಮಂಗಳೂರು ದಕ್ಷಿಣದಲ್ಲಿ 28, ಮೂಡುಬಿದಿರೆಯಲ್ಲಿ 3, ಪುತ್ತೂರು ವಲಯದಲ್ಲಿ 3 ಅರ್ಜಿಗಳು ಸಲ್ಲಿಕೆಯಾಗಿವೆ. ಆ ಮೂಲಕ ಮಂಗಳೂರು ಉತ್ತರ ಮತ್ತು ದಕ್ಷಿಣದಲ್ಲಿ ಅತಿ ಹೆಚ್ಚು ಆರ್‌ಟಿಇ ಅರ್ಜಿಗಳು ಸಲ್ಲಿಕೆಯಾಗಿವೆ.

ಅರ್ಜಿ ಸಂಖ್ಯೆ ಕುಸಿತ

ಆರ್‌ಟಿಇ ಕಾಯ್ದೆಯಲ್ಲಿ ತಿದ್ದುಪಡಿಯಾದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಭಾಗಗಳಲ್ಲೂ ಅರ್ಜಿ ಸಂಖ್ಯೆಯಲ್ಲಿ ಗಣನೀಯ ಕುಸಿತವಾಗಿದೆ. ಆರ್‌ಟಿಇ ಅರ್ಜಿ ಸಲ್ಲಿಕೆಗೆ ಎಪ್ರಿಲ್ 20 ಕೊನೆಯ ದಿನವಾಗಿತ್ತು. ನಿರೀಕ್ಷಿತ ಅರ್ಜಿಗಳು ಬಾರದ ಕಾರಣ ಅರ್ಜಿ ಸಲ್ಲಿಕೆಯ ದಿನಾಂಕವನ್ನು ವಿಸ್ತರಿಸಲಾಗಿತ್ತು. ಅದರಂತೆ ಎಪ್ರಿಲ್ 25ರವರೆಗೆ 118 ಅರ್ಜಿಗಳು ಮಾತ್ರ ಸಲ್ಲಿಕೆಯಾಗಿವೆೆ.
ವಿಶ್ವನಾಥ್‌,

ನೋಡಲ್ ಅಧಿಕಾರಿ, ಆರ್‌ಟಿಇ ಕಾಯ್ದೆ-ದ.ಕ.ಜಿಲ್ಲೆ
ಪ್ರಜ್ಞಾ ಶೆಟ್ಟಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಮೌನಕ್ಕೆ ಭಾವನೆಗಳೇ ಇಲ್ಲವೆಂಬುದು ಹಲವರ ಭಾವನೆ. ಆದರೆ ಮೌನವೇ ಒಂದು ಅದ್ಭುತ ಭಾವನೆಯೆಂಬ ಸತ್ಯವನ್ನು ಎಲ್ಲರೂ ಮರೆತಿದ್ದಾರೆ. ಅಲ್ಲಿ ಪ್ರೀತಿಯಿದೆ, ಕಾಳಜಿ, ನೋವು,...

  • ಮನುಷ್ಯನ ಉಗಮವಾದಾಗಿನಿಂದಲೂ ಆತ ಪ್ರತಿ ಹಂತದಲ್ಲೂ ಸೋಲು- ಗೆಲುವೆಂಬ ಎರಡು ಮುಖಗಳ ಮಧ್ಯೆ ಜೀವಿಸುತ್ತಾನೆ. ಈ ಎರಡು ಪದಗಳು ಯುಗಾಂತರಗಳಿಂದ ಬಂದಿವೆ. ತ್ರೇತಾಯುಗದಲ್ಲಿ...

  • ಇಲ್ಲಿ ಎಲ್ಲವೂ ಶಾಶ್ವತವಲ್ಲ. ಸದಾ ಸಮತ್ವದಲ್ಲಿರುವ ಗಣಿತವೂ ಅಲ್ಲ. ಬದುಕುವ ಭರವಸೆ ಇದ್ದರಷ್ಟೇ ಇಲ್ಲಿ ಗೆಲುವು ಸಾಧ್ಯ. ನಮ್ಮೊಳಗೆ ಆತ್ಮವಿಶ್ವಾಸದ ಬೆಂಕಿ ಜಾಗೃತವಾಗಿರದೇ...

  • ಒಬ್ಬ ಬುದ್ಧಿವಂತ ಆನೆಗಳ ಕ್ಯಾಂಪ್‌ನಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಆನೆಗಳನ್ನು ಸರಪಳಿಯಲ್ಲಿ ಕಟ್ಟಿಲ್ಲದೆ ಇರುವುದು ಮತ್ತು ಗೂಡಿನೊಳಗೆ ಹಾಕದೇ ಇರುವುದನ್ನು...

  • ವರ್ಷ ಸರಿದಹಾಗೆ ವಯಸ್ಸಿನ ಜತೆಗೆ ಜವಾಬ್ದಾರಿಯು ಅಂಟಿಕೊಳ್ಳುತ್ತಾ ಸಾಗುತ್ತೆ, ಇದರ ನಡುವೆ ಕೆಲವೊಮ್ಮೆ ಸಾಗಿ ಬಂದ ದಾರಿಯ ನೆನಪು ಆವರಿಸುತ್ತದೆ. ಇತ್ತೀಚೆಗೆ...

ಹೊಸ ಸೇರ್ಪಡೆ