ಮಂಗಳೂರು ಪಾಲಿಕೆ ಚುನಾವಣೆ: ಕೋಮು ಸೌಹಾರ್ದಕ್ಕೆ ಸಾಕ್ಷಿಯಾದ ವಾರ್ಡ್20 ರ ವಿಜಯೋತ್ಸವ

Team Udayavani, Nov 15, 2019, 12:05 PM IST

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ವಾರ್ಡ್ ನಂಬರ್ 20 ರ ತಿರುವೈಲ್ ನಲ್ಲಿ ಬಿಜೆಪಿ ವಿಜಯೋತ್ಸವವು ಕೋಮು ಸೌಹಾರ್ದಕ್ಕೆ ಸಾಕ್ಷಿಯಾಯಿತು.

ವಾರ್ಡಿನ ಬಿಜೆಪಿ ಅಭ್ಯರ್ಥಿ ಗೆಲ್ಲುತ್ತಿದ್ದಂತೆ ಕಮಲ ಪಕ್ಷದ ಕೇಸರಿ ಧ್ವಜದ ಜೊತೆಗೆ ಮುಸ್ಲಿಮರ ಹಸಿರು ಪತಾಕೆ, ಕ್ರೈಸ್ತರ ಬಿಳಿ ಧ್ವಜವೂ ರಾರಾಜಿಸುವ ಮೂಲಕ ವಿಜಯೋತ್ಸವವು ಕೋಮು ಸೌಹಾರ್ದ ಸಂಭ್ರಮಾಚರಣೆಗೆ ಸಾಕ್ಷಿಯಾಯಿತು. ಈ ಮೂಲಕ ಯಾವುದೇ ಧರ್ಮ ಭೇದವಿಲ್ಲದೆ ಹಿಂದೂ, ಮುಸ್ಲಿಂ, ಕ್ರೈಸ್ತರು ಜೊತೆಯಾಗಿ ಬಿಜೆಪಿ ಅಭ್ಯರ್ಥಿಯ ಗೆಲುವನ್ನು ಸಂಭ್ರಮಿಸಿದ್ದಾರೆ.

ವಾರ್ಡ್ ನಂಬರ್ 20 ರ ತಿರುವೈಲ್ ನಲ್ಲಿ ಬಿಜೆಪಿಯ ಹೇಮಲತಾ ರಘು ಸಾಲಿಯಾನ್ ಯವರು 3028 ಗಳಿಸುವ ಮೂಲಕ ಕಾಂಗ್ರೆಸ್‌ನ ಪ್ರತಿಭಾ ರಾಜ್ ಕುಮಾರ್ ಶೆಟ್ಟಿ ರವರನ್ನು 1125 ರ ಮತಗಳ ಅಂತರದಿಂದ ಸೋಲಿಸುವ ಮೂಲಕ ಜಯಸಾಧಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ