ಹಡಗಲಿ: ವೈಭವದ ದುರ್ಗಾದೇವಿ ಜಾತ್ರೆ

Team Udayavani, May 16, 2019, 4:52 PM IST

ಮುದಗಲ್ಲ: ಹಡಗಲಿ ಗ್ರಾಮದ ದುರ್ಗಾದೇವಿ ಜಾತ್ರೆ ಅಂಗವಾಗಿ ಆಗ್ನಿಕುಂಡ ಹಾಯುವ ಕಾರ್ಯಕ್ರಮ ನಡೆಯಿತು.

ಮುದಗಲ್ಲ: ಸಮೀಪದ ಹಡಗಲಿ ಗ್ರಾಮದಲ್ಲಿ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವ ಮೂರು ದಿನಗಳವರೆಗೆ ಅದ್ಧೂರಿಯಾಗಿ ನಡೆಯಿತು.

ಜಾತ್ರೆ ಅಂಗವಾಗಿ ಸೋಮವಾರ ರಾತ್ರಿ ಗ್ರಾಮದ ಹೊರವಲಯದಲ್ಲಿರುವ ಗರ್ಭಗುಡಿಯಲ್ಲಿ ವಿಶೇಷ ಪೂಜೆ, ಪೂಜಾರಿ ಹೇಳಿಕೆ ಕಾರ್ಯಕ್ರಮ ನಡೆಯಿತು.

ಮಂಗಳವಾರ ಬೆಳಗಿನ ಜಾವ ಗ್ರಾಮದಲ್ಲಿರುವ ದೇವಸ್ಥಾನಕ್ಕೆ ಕಳಸರೋಹಣ ಮತ್ತು ವಿಶೇಷ ಪೂಜೆ ನಡೆದವು. ಹಡಗಲಿ ಮತ್ತು ಸುತ್ತಲಿನ ಗ್ರಾಮಗಳಾದ ನಾಗಲಾಪುರ, ದೇಸಾಯಿ ಭೋಗಾಪುರ, ಹಡಗಲಿ ತಾಂಡಾ, ಕನ್ನಾಳ, ತಿಮ್ಮಾಪುರ, ತಲೇಖಾನ್‌ ಸೇರಿ ವಿವಿಧ ತಾಂಡಾ, ಗ್ರಾಮ, ಮುದಗಲ್ಲ ಪಟ್ಟಣ ಸೇರಿ ಆಂಧ್ರದ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡು ದೇವಿಗೆ ಕಾಯಿ, ಕರ್ಪೂರ ಅರ್ಪಿಸಿ ಉಡಿ ತುಂಬಿದರು. ಹರಕೆ ಹೊತ್ತ ಉರಳು ಸೇವೆ ಸಲ್ಲಿಸಿದರು.

ಬುಧವಾರ ಬೆಳಗಿನ ಜಾವ ಪೂಜಾರಿಗಳಿಂದ ಆಗ್ನಿಕುಂಡ ಹಾಯುವ ಹಾಗೂ ಅಕ್ಕಿಪಾಯಸ ತಗೆಯುವ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮ ನೋಡಲು ಸಾವಿರಾರು ಭಕ್ತರು ಆಗಮಿಸಿದ್ದರು.

ಹಡಗಲಿ ತಾಪಂ ಕ್ಷೇತ್ರ ಸದಸ್ಯೆ ಶಾರದಾ ದೇವಪ್ಪ ರಾಠೊಡ, ಪಿಕಾರ್ಡ್‌ ಬ್ಯಾಂಕ ಮಾಜಿ ನಿರ್ದೇಶಕ ಶಂಭುಲಿಂಗಪ್ಪ ವಿಟ್ಲಾಪುರ, ಉತ್ತರ ಕರ್ನಾಟಕ ಬಂಜಾರ ಸಂಘದ ಅಧ್ಯಕ್ಷ ಪಾಂಡುರಂಗ ಪಮ್ಮಾರ, ಗ್ರಾಪಂ ಸದಸ್ಯರಾದ ವೆಂಕನಗೌಡ ಪೊಲೀಸ್‌ ಪಾಟೀಲ, ಪಿಕೆಪ್ಪ ನಾಯ್ಕ, ಮಾನಮ್ಮ ಬಾಲಚಂದ್ರ, ಶಂಕ್ರಮ್ಮ ಮಾನಪ್ಪ, ಮಾಜಿ ಸದಸ್ಯರಾದ ದುರುಗಪ್ಪ ಕಟ್ಟಮನಿ ಸೇರಿ ಸಾವಿರಾರು ಭಕ್ತರು ಭಾಗವಹಿಸಿದ್ದರು.

ಪ್ರಾಣಿ ಬಲಿ: ಗ್ರಾಮದೇವೆಯ ಜಾತ್ರೆಯಲ್ಲಿ ಭಕ್ತರು ಹರಕೆ ತೀರಿಸಲು ದೇವತೆ ಹೆಸರಿನಲ್ಲಿ ನೂರಾರು ಕುರಿ ಬಲಿ ನೀಡಿದರು.


ಈ ವಿಭಾಗದಿಂದ ಇನ್ನಷ್ಟು

  • ಬೆಂಗಳೂರು: ಸಮಸ್ಯೆಗೆ ಸೂಚಿಸಿದ ಪರಿಹಾರವೇ ಸಮಸ್ಯೆಯಾಗಿ ಪರಿಣಮಿಸಿದರೆ ಏನಾಗಬಹುದು? ಇದನ್ನು ತಿಳಿಯಲು ನೀವು ಒಮ್ಮೆ ಕೆ.ಆರ್‌.ಪುರದ ಟಿನ್‌ ಫ್ಯಾಕ್ಟರಿ ರಸ್ತೆಯಲ್ಲಿ...

  • ಬೆಂಗಳೂರು: ರೈತರ ಸಮಸ್ಯೆ, ನೆಲ, ಜಲಕ್ಕೆ ಸಂಬಂಧಿಸಿದ ಕನ್ನಡ ಪರ ಹೋರಾಟಗಳ ಸಂದರ್ಭದಲ್ಲಿ ಚಿತ್ರರಂಗ ಒಂದಾಗುತ್ತದೆ ಎಂದು ಚಿತ್ರನಟ ಶಿವರಾಜ್‌ಕುಮಾರ್‌ ಹೇಳಿದರು. ಕನ್ನಡ...

  • ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅಲೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದ್ದು, ರಾಜ್ಯದಲ್ಲೂ ಪಕ್ಷ ಇಟ್ಟುಕೊಂಡಿದ್ದ ಗುರಿ ತಲುಪಲು ಶ್ರಮಿಸಿದ...

  • ಬೆಂಗಳೂರು: ಚುನಾವಣೆ ಫ‌ಲಿತಾಂಶ ಹೊರ ಬಿದ್ದು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮತ್ತೆ ಅಧಿಕಾರ ಹಿಡಿದಿದೆ. ಈ ಸಂದರ್ಭದಲ್ಲಿ ದೇಶ, ರಾಜ್ಯ ಹಾಗೂ ನನ್ನ ಕ್ಷೇತ್ರದ...

  • ಬೆಂಗಳೂರು: ಬಿಬಿಎಂಪಿ ವತಿಯಿಂದ ನಗರದಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ಮಳೆಗಾಲ ಆರಂಭವಾಗುವಷ್ಟರಲ್ಲಿ ಪೂರ್ಣಗೊಳಿಸುವಂತೆ ಮೇಯರ್‌ ಗಂಗಾಂಬಿಕೆ ಅಧಿಕಾರಿಗಳಿಗೆ...

ಹೊಸ ಸೇರ್ಪಡೆ