ಕೆಪಿಎಸ್ಸಿ ಪರೀಕ್ಷೆಯಲ್ಲಿ ಆಶಿಹಾಳ ತಾಂಡಾದ ಪ್ರತಿಭೆಗಳ ಸಾಧನೆ


Team Udayavani, Dec 25, 2019, 1:43 PM IST

25-December-15

ಮುದಗಲ್ಲ: ಕರ್ನಾಟಕ ಪಬ್ಲಿಕ್‌ ಸರ್ವಿಸ್‌ ಕಮಿಷನ್‌ (ಕೆಪಿಎಸ್‌ಸಿ)ಪ್ರಕಟಿಸಿರುವ ಕೆಎಎಸ್‌ ಅಧಿಕಾರಿಗಳ ಆಯ್ಕೆಪಟ್ಟಿಯಲ್ಲಿ ಸಮೀಪದ ಆಶಿಹಾಳ ತಾಂಡಾದ ಇಬ್ಬರು ಬಡ ಪ್ರತಿಭೆಗಳು ಸ್ಥಾನ ಪಡೆದಿದ್ದಾರೆ.

ಇದರಲ್ಲಿ ಒಬ್ಬರು ಕಮರ್ಷಿಯಲ್‌ ಟ್ಯಾಕ್ಸ್‌ ಆಫೀಸರ್‌ ಹುದ್ದೆಗೆ ಆಯ್ಕೆಯಾದರೆ, ಇನ್ನೊಬ್ಬರು ಕಾರ್ಮಿಕ ಇಲಾಖೆ ಲೇಬರ್‌ ಕಮೀಷನರ್‌ ಹುದ್ದೆಗೆ ಆಯ್ಕೆಗೊಂಡು ತಾಂಡಾ ಹಾಗೂ ತಾಲೂಕಿನ ಕೀರ್ತಿ ಬೆಳಗಿಸಿದ್ದಾರೆ.

ಸುನೀಲಕುಮಾರ: ಎಸ್‌ಸಿ ಕೋಟಾದಡಿ ಕಮರ್ಷಿಯಲ್‌ ಟ್ಯಾಕ್ಸ್‌ ಆಫೀಸರ್‌ ಹುದ್ದೆಗೆ ಆಯ್ಕೆಯಾದ ಸುನೀಲಕುಮಾರ ಬಾಳಪ್ಪ ರಾಠೊಡ ಬೆಂಗಳೂರಿನಲ್ಲಿ ಬಿಇ ವ್ಯಾಸಂಗ ಮುಗಿಸಿದ್ದಾರೆ. ಹೈದ್ರಾಬಾದ್‌ನ ಐಎಎಸ್‌ ಮತ್ತು ಕೆಎಎಸ್‌ ಕೋಚಿಂಗ್‌ ಸೇಂಟರ್‌ನಲ್ಲಿ ತರಬೇತಿ ಪಡೆದಿದ್ದಾರೆ. ಈ ಹಿಂದೆ ಕೆಎಎಸ್‌ ಪರೀಕ್ಷೆ ಬರೆದಿದ್ದ ಇವರು ಎಲಿಜಿಬಲ್‌ ಆಗಿದ್ದರು. ಆದರೆ ಸಂದರ್ಶನದಲ್ಲಿ ಫೇಲಾಗಿದ್ದರು.

ಎರಡನೇ ಬಾರಿಗೆ ಕೆಎಎಸ್‌ ಪರೀಕ್ಷೆಯಲ್ಲಿ ತೇರ್ಗಡೆಗೊಂಡು ಕಮರ್ಷಿಯಲ್‌ ಟ್ಯಾಕ್ಸ್‌ ಆಫೀಸರ್‌ ಹುದ್ದೆಗೆ ಆಯ್ಕೆಯಾಗಿದ್ದಾರೆ. ಈತನ ತಂದೆ ಬಾಳಪ್ಪ, ತಾಯಿ ಆರತಿಬಾಯಿ ಆಶಿಹಾಳ ತಾಂಡಾದಲ್ಲಿ ವಾಸವಾಗಿದ್ದಾರೆ. ಅವಿನಾಶ ನಾಯ್ಕ: ಎಸ್‌ಸಿ ಕೆಟಗೇರಿಯಲ್ಲಿ ಕಾರ್ಮಿಕ ಇಲಾಖೆಯಲ್ಲಿ ಲೇಬರ್‌ ಕಮಿಷನರ್‌ ಹುದ್ದೆಗೆ ಆಯ್ಕೆಯಾದ ಆಶಿಹಾಳ ತಾಂಡಾದ ಡಾ| ಅವಿನಾಶ ಬುಡ್ನಾನಾಯ್ಕ ವೃತ್ತಿಯಲ್ಲಿ ಸರ್ಕಾರಿ ವೈದ್ಯರಾಗಿದ್ದಾರೆ. ಬಾಗಲಕೋಟೆಯಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ಎರಡು ಬಾರಿ ಐಎಎಸ್‌ ಪರೀಕ್ಷೆ ಮತ್ತು ಎರಡು ಬಾರಿ ಕೆಎಎಸ್‌ ಪರೀಕ್ಷೆಯಲ್ಲಿ ಪಾಸಾಗಿದ್ದರು. ಆದರೆ ಮೌಖೀಕ ಸಂದರ್ಶನದಲ್ಲಿ ಅಂಕ ಗಳಿಸುವಲ್ಲಿ ಯಶಸ್ವಿ ಆಗಿದ್ದಿಲ್ಲ.

ಈ ಬಾರಿಯ ಕೆಪಿಎಸ್‌ಸಿ ಪರೀಕ್ಷೆಯಲ್ಲಿ 67ನೇ ರ್‍ಯಾಂಕ್‌ ಗಳಿಸುವ ಮೂಲಕ ಲೇಬರ್‌ ಕಮೀಷನರ್‌ ಹುದ್ದೆಗೆ ಆಯ್ಕೆಯಾಗಿದ್ದಾರೆ. ಬಾಲ್ಯದಿಂದಲೂ ಛಲವಂತನಾಗಿದ್ದ ಅವಿನಾಶ ಚುರುಕಾಗಿದ್ದ ಎಂದು ಪಾಲಕರು ಪತ್ರಿಕೆಗೆ ಪ್ರತಿಕ್ರಿಯೆ ನೀಡಿದರು. ಅವಿನಾಶನ ತಂದೆ ಬುಡ್ನಾನಾಯ್ಕ ಬಾಗಲಕೋಟೆಯ ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಮ್ಯಾನೇಜರ್‌ ಆಗಿದ್ದು, ತಾಯಿ ಲಕ್ಷ್ಮೀ ಬಾಗಲಕೋಟೆಯಲ್ಲಿ ವಾಸವಾಗಿದ್ದಾರೆ.

ಟಾಪ್ ನ್ಯೂಸ್

ಒಬಿಸಿ ಕೋಟಾ ಎತ್ತಿಹಿಡಿದ ಸು.ಕೋ.

ಒಬಿಸಿ ಕೋಟಾ ಎತ್ತಿಹಿಡಿದ ಸು.ಕೋ.

ಇಂದು ದ್ವಿತೀಯ ಏಕದಿನ: ಭಾರತದ ಮೇಲೆ ಸರಣಿ ಸಮಬಲ ಒತ್ತಡ

ಇಂದು ದ್ವಿತೀಯ ಏಕದಿನ: ಭಾರತದ ಮೇಲೆ ಸರಣಿ ಸಮಬಲ ಒತ್ತಡ

ಕರ್ಫ್ಯೂ ಪರಿಷ್ಕರಣೆ?: ಇಂದು ಮುಖ್ಯಮಂತ್ರಿ  ನೇತೃತ್ವದಲ್ಲಿ ಮಹತ್ವದ ಸಭೆ ನಿಗದಿ

ಕರ್ಫ್ಯೂ ಪರಿಷ್ಕರಣೆ?: ಇಂದು ಮುಖ್ಯಮಂತ್ರಿ  ನೇತೃತ್ವದಲ್ಲಿ ಮಹತ್ವದ ಸಭೆ ನಿಗದಿ

ಪಿಯು: ಈ ಬಾರಿ ಹೆಚ್ಚುವರಿ ಪ್ರಶ್ನೆಗಳು

ಪಿಯು: ಈ ಬಾರಿ ಹೆಚ್ಚುವರಿ ಪ್ರಶ್ನೆಗಳು

ಕೋವಿಡ್: ಸಾವಿನ ಪ್ರಮಾಣ ಗಣನೀಯ ಕುಸಿತ

ಕೋವಿಡ್: ಸಾವಿನ ಪ್ರಮಾಣ ಗಣನೀಯ ಕುಸಿತ

ಪಂಚ ಚುನಾವಣೆಗೆ ಕಣ ಬಿರುಸು

ಪಂಚ ಚುನಾವಣೆಗೆ ಕಣ ಬಿರುಸು

2021: ಅತೀ ಉಷ್ಣದ ವರ್ಷ

2021: ಅತೀ ಉಷ್ಣದ ವರ್ಷಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸುವಾಗಲೇ ಎದ್ದು ಕುಳಿತ ವ್ಯಕ್ತಿ! 

Untitled-1

ಕೋವಿಡ್ ಪ್ರಕರಣ ಏರಿಕೆ: ದ.ಕ. ಜಿಲ್ಲೆಯ 5 ಶಾಲೆಗಳಿಗೆ ರಜೆ

ವಾರಾಂತ್ಯ ಕರ್ಫ್ಯೂ: ನಿಯಮ ಉಲ್ಲಂಘನೆ ಚಳವಳಿ: ಕೆನರಾ ಉದ್ಯಮಿಗಳ ಒಕ್ಕೂಟ ಎಚ್ಚರಿಕೆ

ವಾರಾಂತ್ಯ ಕರ್ಫ್ಯೂ: ನಿಯಮ ಉಲ್ಲಂಘನೆ ಚಳವಳಿ: ಕೆನರಾ ಉದ್ಯಮಿಗಳ ಒಕ್ಕೂಟ ಎಚ್ಚರಿಕೆ

ಸಣ್ಣ ನೀರಾವರಿಯಲ್ಲಿ ಶೇ.100; ಕೃಷಿಯಲ್ಲಿ  ಶೇ. 65 ಸಾಧನೆ

ಸಣ್ಣ ನೀರಾವರಿಯಲ್ಲಿ ಶೇ.100; ಕೃಷಿಯಲ್ಲಿ ಶೇ. 65 ಸಾಧನೆ

ಪಾಲಿಕೆ ವ್ಯಾಪ್ತಿಯಲ್ಲಿ  ಗುರಿ ತಲುಪುತ್ತಿಲ್ಲ ಲಸಿಕೆ ಅಭಿಯಾನ

ಪಾಲಿಕೆ ವ್ಯಾಪ್ತಿಯಲ್ಲಿ  ಗುರಿ ತಲುಪುತ್ತಿಲ್ಲ ಲಸಿಕೆ ಅಭಿಯಾನ

MUST WATCH

udayavani youtube

ನಿಯಮ ಉಲ್ಲಂಘಿಸಿದ ಬಿಜೆಪಿ ವಿರುದ್ಧವೂ ಪ್ರಕರಣ ದಾಖಲಾಗಬೇಕು: ಡಿಕೆಶಿ ಎಚ್ಚರಿಕೆ

udayavani youtube

ಆಕರ್ಷಕ ಕುರ್ತಿ(1000 – 1500 Rs. Only!!)| Umbrella Kurthis

udayavani youtube

ದಾಂಡೇಲಿಯ ಬೈಲುಪಾರಿನಲ್ಲಿ ವಿದ್ಯುತ್ ತಂತಿಯ ಮೇಲಿಂದ ಬಿದ್ದು ಗಾಯ ಮಾಡಿಕೊಂಡ ಕೋತಿ

udayavani youtube

ವಾಕಿಂಗ್‌ ವಿಚಾರಕ್ಕೆ ಪ್ರಾಂಶುಪಾಲ-ಪ್ರಾಧ್ಯಾಪಕ ಫೈಟಿಂಗ್‌-ವಿಡಿಯೋ ವೈರಲ್‌

udayavani youtube

ನಾಳೆ ರಾಜ್ಯದ ಕರ್ಫ್ಯೂ ಭವಿಷ್ಯ ನಿರ್ಧಾರ : ಇಕ್ಕಟ್ಟಿಗೆ ಸಿಲುಕಿದ ಸಿಎಂ

ಹೊಸ ಸೇರ್ಪಡೆ

ಒಬಿಸಿ ಕೋಟಾ ಎತ್ತಿಹಿಡಿದ ಸು.ಕೋ.

ಒಬಿಸಿ ಕೋಟಾ ಎತ್ತಿಹಿಡಿದ ಸು.ಕೋ.

ಇಂದು ದ್ವಿತೀಯ ಏಕದಿನ: ಭಾರತದ ಮೇಲೆ ಸರಣಿ ಸಮಬಲ ಒತ್ತಡ

ಇಂದು ದ್ವಿತೀಯ ಏಕದಿನ: ಭಾರತದ ಮೇಲೆ ಸರಣಿ ಸಮಬಲ ಒತ್ತಡ

ಜಗತ್ತಿನ ಪ್ರವಾಸಿ ತಾಣಗಳಲ್ಲಿ ದಿಲ್ಲಿ, ಜೈಪುರ

ಜಗತ್ತಿನ ಪ್ರವಾಸಿ ತಾಣಗಳಲ್ಲಿ ದಿಲ್ಲಿ, ಜೈಪುರ

Untitled-1

ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸುವಾಗಲೇ ಎದ್ದು ಕುಳಿತ ವ್ಯಕ್ತಿ! 

ಬಾಹ್ಯಾಕಾಶದಲ್ಲಿ ಇಳಯರಾಜಾ ಹಾಡುಗಳ ಮೇಳ!

ಬಾಹ್ಯಾಕಾಶದಲ್ಲಿ ಇಳಯರಾಜಾ ಹಾಡುಗಳ ಮೇಳ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.