ಅನ್ನದಾತನಿಗೆ ಹೊರೆಯಾದ ಕೂಲಿ

ಕೃಷಿ ಚಟುವಟಿಕೆಗೆ ಕಾರ್ಮಿಕರ ಕೊರತೆ

Team Udayavani, Aug 1, 2019, 10:51 AM IST

1-Agust-10

ಮುದಗಲ್ಲ: ಆಶಿಹಾಳದ ಹೊಲವೊಂದರಲ್ಲಿ ಬಿತ್ತನೆಯಲ್ಲಿ ತೊಡಗಿದ್ದ ರೈತರು.

ದೇವಪ್ಪ ರಾಠೊಡ
ಮುದಗಲ್ಲ:
ಪಟ್ಟಣ ಸೇರಿದಂತೆ ನಾಗರಹಾಳ ಹೋಬಳಿ ವ್ಯಾಪ್ತಿಯಲ್ಲಿ ಉತ್ತಮ ಮಳೆ ಸುರಿದ ಪರಿಣಾಮ ಕೃಷಿ ಚಟುವಟಿಕೆ ಆರಂಭವಾಗಿದೆ. ಒಂದೆಡೆ ಕೂಲಿ ಕಾರ್ಮಿಕರ ಕೊರತೆ ಎದುರಾಗಿದ್ದರೆ, ದುಪ್ಪಟ್ಟು ಕೂಲಿ ರೈತರಿಗೆ ಹೊರೆಯಾಗಿ ಪರಿಣಮಿಸಿದೆ.

ಮುಂಗಾರು ಮಳೆ ಸುಮಾರು ಒಂದು ತಿಂಗಳು ತಡವಾಗಿ ಆರಂಭವಾಗಿದ್ದು, ಇತ್ತೀಚೆಗಷ್ಟೇ ಈ ಭಾಗದಲ್ಲಿ ಉತ್ತಮ ಮಳೆ ಸುರಿದಿದೆ. ಈಗ ಬಿತ್ತನೆಗೆ ಪೂರಕ ವಾತಾವರಣ ನಿರ್ಮಾಣವಾಗಿದೆ. ಈ ಭಾಗದಲ್ಲಿ ಕೃಷಿಕರು ಹೆಚ್ಚಿರುವುದರಿಂದ ಏಕಕಾಲಕ್ಕೆ ಬಿತ್ತನೆ ಚಟುವಟಿಕೆ ಶುರುವಾಗಿದೆ. ಸಣ್ಣ ರೈತರು ಕುಟುಂಬದ ಸದಸ್ಯರೊಂದಿಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದರೆ, ದೊಡ್ಡ ದೊಡ್ಡ ರೈತರು ಕೂಲಿಕಾರರನ್ನು ಅವಲಂಬಿಸಿದ್ದಾರೆ. ಹೀಗಾಗಿ ಕಾರ್ಮಿಕರ ಕೊರತೆ ಎದುರಾಗಿದ್ದು, ಸಹಜವಾಗಿಯೇ ಹೆಚ್ಚಿನ ಕೂಲಿಗೆ ಬೇಡಿಕೆ ಇಡುತ್ತಿದ್ದಾರೆ. ಬಿತ್ತನೆ ಬೀಜ, ರಸಗೊಬ್ಬರ, ಬೇಸಾಯ ಹಾಗೂ ಕೂಲಿಗಾಗಿ ಸಾವಿರಾರು ರೂಪಾಯಿ ಮೀಸಲಿಡಬೇಕಾಗಿದೆ. ವರ್ಷದಿಂದ ವರ್ಷಕ್ಕೆ ಕೂಲಿ ದರ ಹೆಚ್ಚುತ್ತಿದ್ದು ರೈತರಿಗೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ. ವರ್ಷದ ಹಿಂದೆ 100 ರೂ. ಇದ್ದ ಕೂಲಿ ಈಗ 200, 250ಕ್ಕೆ ತಲುಪಿದೆ ಎನ್ನುತ್ತಾರೆ ಅಡವಿಬಾವಿ ಗ್ರಾಮದ ರೈತ ಬಸನಗೌಡ ಮಾಲಿಪಾಟೀಲ.

ಕಾರ್ಮಿಕರ ಕೊರತೆ: ಇಷ್ಟು ದಿನ ಮಳೆ ಇಲ್ಲದ್ದಕ್ಕೆ ಈ ಭಾಗದ ಗ್ರಾಮ ಮತ್ತು ತಾಂಡಾಗಳಲ್ಲಿನ ಸಣ್ಣ ರೈತರು, ಕೃಷಿ ಕಾರ್ಮಿಕರು ಉದ್ಯೋಗ ಅರಸಿ ದೂರದ ಮಹಾನಗರಗಳಿಗೆ ಗುಳೆ ಹೋಗಿದ್ದಾರೆ. ಇನ್ನು ಸ್ಥಳೀಯವಾಗಿ ಇರುವವರು ಕೆಲವೆಡೆ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸದಲ್ಲಿ ತೊಡಗಿದ್ದಾರೆ. ಹೀಗಾಗಿ ಕೃಷಿ ಚಟುವಟಿಕೆಗೆ ಕೃಷಿ ಕಾರ್ಮಿಕರ ಕೊರತೆ ಎದುರಾಗಿದೆ ಎನ್ನುತ್ತಾರೆ ರೈತರು.

ಬೆಳೆಗೆ ಜೀವ ಕಳೆ: ಖೈರವಾಡಗಿ, ಕಾಚಾಪುರ, ಬಯ್ನಾಪುರ, ಅಮದಿಹಾಳ, ಉಪ್ಪಾರ ನಂದಿಹಾಳ ಹಾಗೂ ನಾಗರಹಾಳ ಗ್ರಾಪಂ ವ್ಯಾಪ್ತಿಯಲ್ಲಿ ಜೂನ್‌ ತಿಂಗಳಲ್ಲಿಯೇ ಉತ್ತಮ ಮಳೆ ಸುರಿದ ಕಾರಣ ರೈತರು ಹರ್ಷದಿಂದ ಬಿತ್ತನೆ ಆರಂಭಿಸಿದ್ದರು. ಬಿತ್ತನೆ ಮಾಡಿ 25 ದಿನಗಳೇ ಕಳೆದಿದ್ದವು. ಮತ್ತೆ ಮಧ್ಯದಲ್ಲಿ ಮಳೆ ಕೈಕೊಟ್ಟ ಕಾರಣ ಆತಂಕಗೊಂಡಿದ್ದರು. ಆದರೆ ಕಳೆದ ವಾರದಿಂದ ಉತ್ತಮ ಮಳೆ ಸುರಿದ ಕಾರಣ ಬೆಳೆಗಳಿಗೆ ಜೀವಕಳೆ ಬಂದಿದೆ. ಹತ್ತಿ, ತೊಗರಿ, ಸಜ್ಜಿ, ಹೆಸರು, ಮೆಕ್ಕೆಜೋಳ, ಎಳ್ಳು ಬೆಳೆ ಚೆನ್ನಾಗಿ ಬಂದಿದೆ. ಕೂಲಿಕಾರರ ಸಮಸ್ಯೆ ನಡುವೆಯೂ ಎಡೆಕುಂಟೆ, ಕಸ ತಗೆಯುವುದು, ರಸಗೊಬ್ಬರ ಬಳಕೆ ಕಾರ್ಯದಲ್ಲಿ ರೈತರು ತೊಡಗಿದ್ದಾರೆ.

ಎತ್ತುಗಳಿಗೆ ಬೇಡಿಕೆ: ರೈತರ ಮಿತ್ರ ಎನ್ನಿಸಿಕೊಂಡಿರುವ ಎತ್ತುಗಳಿಗೆ ಬೇಡಿಕೆ ಹೆಚ್ಚಿದೆ. ಮಳೆ ಸುರಿದಾಗ ಭೂಮಿ ಹದಗೊಳಿಸಲು, ಬಿತ್ತನೆ ಮಾಡಲು, ಎಡೆಕುಂಟಿಗೆ ರಾಸುಗಳು ಬೇಕೇಬೇಕು. ರೈತರು ರಾಸುಗಳನ್ನು ಬಾಡಿಗೆ ಪಡೆಯಲು ದಿನ ಒಂದಕ್ಕೆ 1000 ದಿಂದ 1500 ರೂ. ನೀಡಬೇಕಾಗಿದೆ. ಎಂದು ಆಶಿಹಾಳ ತಾಂಡಾದ ರೈತ ಮಾನಪ್ಪ ರಾಮದಾಸಪ್ಪ ತಿಳಿಸಿದ್ದಾರೆ.

ಭೂ ರಹಿತರು ನಗರ ಪ್ರದೇಶಗಳಿಗೆ ಗುಳೆ ಹೋಗಿದ್ದಾರೆ. ಇಲ್ಲಿಯೇ ಇರುವ ಕೆಲ ಕೂಲಿ ಕಾರ್ಮಿಕರು ನರೇಗಾ ಕೆಲಸದಲ್ಲಿ ತೊಡಗಿದ್ದಾರೆ. ಹೀಗಾಗಿ ಕೃಷಿ ಚಟುವಟಿಕೆಗೆ ಕೂಲಿಕಾರರ ಕೊರತೆ ಎದುರಾಗಿದೆ.
ದೇವಪ್ಪ ತೊಂಡಿಹಾಳ ,
ರೈತ

ಮುಂಗಾರು ತಡವಾದರೂ ಉತ್ತಮ ಮಳೆಯಾಗಿದ್ದರಿಂದ ಬೆಳೆ ಚೆನ್ನಾಗಿಬಂದಿದೆ. ರೈತರು ಕೃಷಿ ಇಲಾಖೆ ಮಾರ್ಗದರ್ಶನದಲ್ಲಿ ಕೃಷಿಯಲ್ಲಿ ತೊಡಗಿ ಹೆಚ್ಚಿನ ಇಳುವರಿ ಪಡೆಯಬಹುದು.
ವೆಂಕಟೇಶ ಕುಲಕರ್ಣಿ,
ಕೃಷಿ ಅಧಿಕಾರಿ

ಟಾಪ್ ನ್ಯೂಸ್

ಅಂತಾರಾಷ್ಟ್ರೀಯ ವಿಮಾನ ಸಂಚಾರ ನಿರ್ಬಂಧ: ಫೆಬ್ರವರಿ 28ರವರೆಗೂ ವಿಸ್ತರಣೆ:ಡಿಜಿಸಿಎ

ಅಂತಾರಾಷ್ಟ್ರೀಯ ವಿಮಾನ ಸಂಚಾರ ನಿರ್ಬಂಧ: ಫೆಬ್ರವರಿ 28ರವರೆಗೂ ವಿಸ್ತರಣೆ:ಡಿಜಿಸಿಎ

aravind

ಗೋವಾ ಚುನಾವಣೆಗೂ ಸಿಎಂ ಅಭ್ಯರ್ಥಿ ಘೋಷಣೆ ಮಾಡಿದ ಆಪ್

1-aseqwe

ಲಾಕ್ ಡೌನ್, ಕರ್ಫ್ಯೂ ತೆಗೆಯಿರಿ: ಸರಕಾರದ ವಿರುದ್ಧವೇ ಸಿಂಹ ಘರ್ಜನೆ !

pratap

ಗುಣಮಟ್ಟದ ಆಧಾರದಲ್ಲಿ ಸ್ತಬ್ಧ ಚಿತ್ರ ಆಯ್ಕೆ: ಸಿದ್ದರಾಮಯ್ಯಗೆ ಪ್ರತಾಪ್ ಸಿಂಹ ತಿರುಗೇಟು

1-sasa

ತಮಿಳುನಾಡಿನ ಎಲ್ಲ ಜಿಲ್ಲೆಗಳಲ್ಲಿ ಕೇಂದ್ರ ತಿರಸ್ಕೃತ ಟ್ಯಾಬ್ಲೋ ಪ್ರದರ್ಶನ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಐವರ ವಿರುದ್ಧ ದೂರು

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಐವರ ವಿರುದ್ಧ ದೂರು

cm-bomm

ಹನ್ನೊಂದು ದಿನಗಳ ಕಾಲ ಮನೆಯಲ್ಲಿ ಕುಳಿತ ಉದಾಹರಣೆಯೇ ಇರಲಿಲ್ಲ: ಸಿಎಂ ಬೊಮ್ಮಾಯಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅತಿಥಿ ಉಪನ್ಯಾಸಕರ ಪರ ಅವೈಜ್ಞಾನಿಕ ಆದೇಶ

ಅತಿಥಿ ಉಪನ್ಯಾಸಕರ ಪರ ಅವೈಜ್ಞಾನಿಕ ಆದೇಶ

2,054 ಮನೆಗೆ ಉಚಿತ ವಿದ್ಯುತ್‌ ಭಾಗ್ಯ!

2,054 ಮನೆಗೆ ಉಚಿತ ವಿದ್ಯುತ್‌ ಭಾಗ್ಯ!

ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಹೆಚ್ಚಳ

ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಹೆಚ್ಚಳ

ಹಗಲು ವೇಳೆ ಸಮರ್ಪಕ ತ್ರಿಫೇಸ್‌ ವಿದ್ಯುತ್‌ ನೀಡಿ

ಹಗಲು ವೇಳೆ ಸಮರ್ಪಕ ತ್ರಿಫೇಸ್‌ ವಿದ್ಯುತ್‌ ನೀಡಿ

ರೇಷ್ಮೆನಗರಿಯಲ್ಲಿ ಕೊರೊನಾ ನರ್ತನ

ರೇಷ್ಮೆನಗರಿಯಲ್ಲಿ ಕೊರೊನಾ ನರ್ತನ

MUST WATCH

udayavani youtube

ಮೊಸಳೆಯ ಜೊತೆ ಯುವಕನ ಮೃತದೇಹ : ದಾಂಡೇಲಿಯ ಕಾಳಿ ನದಿಯಲ್ಲಿ ಘಟನೆ

udayavani youtube

ಕೃಷ್ಣಾಪುರ ಪರ್ಯಾಯ – 2022 Highlights

udayavani youtube

18 ವರ್ಷಗಳ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಿದ ಧನುಷ್ – ಐಶ್ವರ್ಯಾ

udayavani youtube

ಪರ್ಯಾಯ ಮಹೋತ್ಸವ : ದಂಡ ತೀರ್ಥದಲ್ಲಿ ಶ್ರೀ ಕೃಷ್ಣಾಪುರ ಮಠಾಧೀಶರಿಂದ ಪವಿತ್ರ ಸ್ನಾನ

udayavani youtube

ನಿಷೇಧದ ನಡುವೆಯೂ ರಥೋತ್ಸವ : ಜನರನ್ನು ನಿಯಂತ್ರಿಸಲು ಪೊಲೀಸರು ವಿಫಲ

ಹೊಸ ಸೇರ್ಪಡೆ

dr-ashwath

ರಾಜ್ಯದಲ್ಲಿ ಕೋವಿಡ್ ಸ್ಫೋಟದ ಆತಂಕ: ಅಶ್ವಥ್ ನಾರಾಯಣ

ಅಂತಾರಾಷ್ಟ್ರೀಯ ವಿಮಾನ ಸಂಚಾರ ನಿರ್ಬಂಧ: ಫೆಬ್ರವರಿ 28ರವರೆಗೂ ವಿಸ್ತರಣೆ:ಡಿಜಿಸಿಎ

ಅಂತಾರಾಷ್ಟ್ರೀಯ ವಿಮಾನ ಸಂಚಾರ ನಿರ್ಬಂಧ: ಫೆಬ್ರವರಿ 28ರವರೆಗೂ ವಿಸ್ತರಣೆ:ಡಿಜಿಸಿಎ

ಅತಿಥಿ ಉಪನ್ಯಾಸಕರ ಪರ ಅವೈಜ್ಞಾನಿಕ ಆದೇಶ

ಅತಿಥಿ ಉಪನ್ಯಾಸಕರ ಪರ ಅವೈಜ್ಞಾನಿಕ ಆದೇಶ

2,054 ಮನೆಗೆ ಉಚಿತ ವಿದ್ಯುತ್‌ ಭಾಗ್ಯ!

2,054 ಮನೆಗೆ ಉಚಿತ ವಿದ್ಯುತ್‌ ಭಾಗ್ಯ!

aravind

ಗೋವಾ ಚುನಾವಣೆಗೂ ಸಿಎಂ ಅಭ್ಯರ್ಥಿ ಘೋಷಣೆ ಮಾಡಿದ ಆಪ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.