5 ವರ್ಷವಾದ್ರೂ ಮುಗಿಯದ ಕಾಮಗಾರಿ

ಗುಣಮಟ್ಟದ ಕಟ್ಟಡ ನಿರ್ಮಿಸಲು ಒತ್ತಾಯ

Team Udayavani, Aug 24, 2019, 5:24 PM IST

ಮುಂಡಗೋಡ: ಕಳಪೆಯಾದ ಸಾಲಗಾಂವ್‌ ಗ್ರಾಪಂ ಕಾರ್ಯಾಲಯ.

ಮುಂಡಗೋಡ: ತಾಲೂಕಿನ ಸಾಲಗಾಂವ್‌ ಗ್ರಾಪಂ ಕಚೇರಿ ಕಟ್ಟಡದ ಕಾಮಗಾರಿ 2015 ರಿಂದ ಪ್ರಾರಂಭಗೊಂಡು 2019 ಆದರೂ ಮುಗಿಸಿಲ್ಲ ಎಂದು ಆರೋಪಿಸಲಾಗಿದೆ.

ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಾಣ ಮಾಡುತ್ತಿದ್ದಾರೆ. ಆದರೆ ಈ ಕಾಮಗಾರಿಗೆ 14ನೇ ಹಣಕಾಸಿನಲ್ಲಿ 8 ಲಕ್ಷ ರೂ. ಮಂಜೂರಾಗಿತ್ತು. ಇದಾದ ನಂತರ ಕಟ್ಟಡ ನಿಧಾನ ಗತಿಯಲ್ಲಿ ಸಾಗಿದೆ. ಮತ್ತೆ ಇದೇ ಕಾಮಗಾರಿಗೆ 14ನೇ ಹಣಕಾಸಿನಿಂದ 5 ಲಕ್ಷ ರೂ. ಮಂಜೂರು ಮಾಡಲು ತಿರ್ಮಾನಿಸಲಾಗಿದೆ. ಕಾರಣ ಈ ಕಟ್ಟಡ ಸಂಪೂರ್ಣ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಆರ್‌ಟಿಐ ಕಾರ್ಯಕರ್ತ ಸಂತೋಷ ತಳವಾರ ಈ ಹಿಂದೆ ಜಿಲ್ಲಾಧಿಕಾರಿಗಳ ವಾಟ್ಸ್‌ಆ್ಯಪ್‌ಗೆ ಕಳಪೆ ಗುಣಮಟ್ಟದ ಮರಳು ಬಳಸಿ ಕಾಮಗಾರಿ ನಡೆಸುತ್ತಿದ್ದಾರೆಂದು ದೂರಿದ್ದರು. ಆ ಮೇಲೆ ಜಿಲ್ಲಾಧಿಕಾರಿಯಿಂದ ಗ್ರಾಪಂ ಅಧಿಕಾರಿಗಳಿಗೆ ಪರೀಶಿಲನೆ ನಡೆಸಲು ಸೂಚನೆ ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ಗ್ರಾಪಂ ಅಧಿಕಾರಿ ಈ ಕಾಮಗಾರಿ ಯಾವುದೇ ರೀತಿ ಕಳಪೆಯಾಗಿಲ್ಲ ಎಂದು ಹಾರಿಕೆ ಉತ್ತರ ನೀಡಿದ್ದಾರೆ. ಹಾಗಾದರೆ ಕಾಮಗಾರಿ ಸ್ಥಳದಲ್ಲಿ ಕಳಪೆ ಗುಣಮಟ್ಟದ ಮರಳು ಯಾಕೆ ಇದೆ ಎಂಬುದು ತಿಳಿಯಬೇಕಾಗಿದೆ.

ಗ್ರಾಪಂ ಅಧಿಕಾರಿಗಳನ್ನು ವಿಚಾರಿಸಿದಾಗ ಗುತ್ತಿಗೆದಾರನಿಗೆ ಒಳ್ಳೆಯ ಗುಣಮಟ್ಟದ ಮರಳು ಬಳಸಲು ಸೂಚನೆ ನೀಡಲಾಗಿದೆ ಎಂದರು. ವಿಪರ್ಯಾಸ ಎಂದರೆ ಇಂತಹ ಅಧಿಕಾರಿಗಳ ಕುಮ್ಮಕ್ಕು ಗುತ್ತಿಗೆದಾರರಿಗೆ ಇರುವುದರಿಂದ ಕಳಪೆ ಕಾಮಗಾರಿ ನಡೆಯುತ್ತಿರುವದು ಸಾರ್ವಜನಿಕರಲ್ಲಿ ಅನುಮಾನ ಮೂಡಿಸುತ್ತಿದೆ. ಅಲ್ಲಿನ ಸಾರ್ವಜನಿಕರನ್ನು ಕೇಳಿದಾಗ ನಮ್ಮ ಗ್ರಾಪಂಗೆ ಇಂತಹ ಅಭಿವೃದ್ಧಿ ಅಧಿಕಾರಿಗಳ ಅವಶ್ಯಕತೆಯಿಲ್ಲ. ಈ ಕಳಪೆ ಕಾಮಗಾರಿಗೆ ಇವರೇ ನೇರ ಕಾರಣರಾಗಿದ್ದು ಇವರನ್ನು ಇಲ್ಲಿಂದ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಅಕ್ರಮ ಮರಳು ಸಾಗಾಟ ಮಾಡುತ್ತಿದ್ದವರ ಮೇಲೆ ಬಿಗಿ ಕ್ರಮ ಜಾರಿಗೆ ತಂದಾಗಿನಿಂದ ಮರಳು ಸಾಗಾಟಕಾರರಿಗೆ ತೊಂದರೆಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಗುಣಮಟ್ಟದ ಉಸುಕನ್ನು ಪರೀಶಿಲಿಸಿ ತೆಗೆದುಕೊಳ್ಳಬೇಕು ಎಂಬುದಾಗಿ ಸ್ಥಳೀಕರು ಆಗ್ರಹಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಶಿರಸಿ: ಶಿವಮೊಗ್ಗ ಜಿಲ್ಲೆ ಶರಾವತಿ ಅಭಯಾರಣ್ಯಕ್ಕೆ ತಾಲೂಕಿನ ಹೆಬ್ರೆ, ಹುಸೂರು, ಬುಗುಡಿ ಗ್ರಾಮಗಳ ಅರಣ್ಯವಾಸಿಗಳ ಪ್ರದೇಶವನ್ನು ಕೈಬಿಡುವಂತೆ ಆಗ್ರಹಿಸಿ ಜಿಲ್ಲಾ...

  • ಹಳಿಯಾಳ: ಅಪ್ರತೀಮ ವೀರ ಛತ್ರಪತಿ ಶಿವಾಜಿ ಮಹಾರಾಜರು ದೇಶದ ಭವಿಷ್ಯಕ್ಕಾಗಿ ಹೋರಾಡಿದ ಅಗ್ರಗಣ್ಯ ನಾಯಕರಾಗಿದ್ದು ಸರ್ವರನ್ನು ಒಂದೂಗೂಡಿಸಿಕೊಂಡು ಹೋಗುತ್ತಿದ್ದ...

  • ಕಾರವಾರ: ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ಜನಸಂಖ್ಯೆ ಆಧರಿಸಿ ಶೇ.15 ರಿಂದ ಶೇ. 22.5ಗೆ ಹೆಚ್ಚಿಸಬೇಕು ಹಾಗೂ ಪರಿಶಿಷ್ಟ ವರ್ಗದ ಮೀಸಲಾತಿಯನ್ನು ಶೇ.3ರಿಂದ ಶೇ.7.5 ಕ್ಕೆ...

  • ಸಾಗರ: ಇಲ್ಲಿನ ಇತಿಹಾಸ ಪ್ರಸಿದ್ಧ ಹಾಗೂ ರಾಜ್ಯದಲ್ಲಿಯೇ ಎರಡನೇ ಅತಿದೊಡ್ಡ ಜಾತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ನಗರದ ಮಾರಿಕಾಂಬಾ ದೇವಿಯ ಜಾತ್ರೆಯು...

  • ಕುಮಟಾ: ಕಳೆದ ಎರಡು ದಿನಗಳಿಂದ ತಾಲೂಕಿನ ಹೊಳೆಗದ್ದೆ ಟೋಲ್‌ ಗೇಟ್‌ನಲ್ಲಿ ಸ್ಥಳೀಯ ವಾಹನಗಳಿಗೂ ಐಆರ್‌ಬಿ ಕಂಪೆನಿ ಶುಲ್ಕ ವಸೂಲಿ ಮಾಡುತ್ತಿರುವುದನ್ನು ವಿರೋಧಿಸಿ...

ಹೊಸ ಸೇರ್ಪಡೆ