Udayavni Special

ಬಿದರಕುಂದಿ ಗ್ರಾಪಂಗೆ ಗ್ರಾಮಸ್ಥರಿಂದ ಬೀಗ

ನೀರಿನ ಸಮಸ್ಯೆ ಪರಿಹಾರಕ್ಕೆ ಸ್ಪಂದಿಸದ ಗ್ರಾಪಂ ಸಿಬ್ಬಂದಿ ವಿರುದ್ಧ 3ನೇ ವಾರ್ಡ್‌ ನಿವಾಸಿಗಳ ಆಕ್ರೋಶ

Team Udayavani, Apr 21, 2019, 1:39 PM IST

21-April-17

ಮುದ್ದೇಬಿಹಾಳ: ಬಿದರಕುಂದಿ ಗ್ರಾಪಂ ಕಚೇರಿಗೆ ಬೀಗ ಜಡಿದು ಧರಣಿ ನಡೆಸಿದ 3ನೇ ವಾರ್ಡ್‌ ನಿವಾಸಿಗಳು

ಮುದ್ದೇಬಿಹಾಳ: ನೀರಿನ ಸಮಸ್ಯೆ ಪರಿಹರಿಸಲು ಆಗ್ರಹಿಸಿ ಬಿದರಕುಂದಿ ಗ್ರಾಪಂ ಕಚೇರಿಗೆ 3ನೇ ವಾರ್ಡ್‌ ನಿವಾಸಿಗಳು ಬೀಗ ಜಡಿದು ಶನಿವಾರ ಪ್ರತಿಭಟಿಸಿದರು.

ಬೇಕೇ ಬೇಕು ನೀರು ಬೇಕು, ನ್ಯಾಯ ಸಿಗುವವರೆಗೂ ಹೋರಾಟ ನಡೆಸುತ್ತೇವೆ ಎಂದು ಘೋಷಣೆ ಕೂಗುತ್ತ ಧರಣಿ ಪ್ರಾರಂಭಿಸಿದ ಜನರು ಗ್ರಾಪಂ ಆಡಳಿತ, ಪಂಚಾಯತ್‌ ಸಿಬ್ಬಂದಿಗೆ ಧಿ ಕ್ಕಾರ ಕೂಗಿದರು. 3ನೇ ವಾರ್ಡ್‌ ಗ್ರಾಮದಿಂದ ಅಂದಾಜು 800 ಮೀ. ದೂರದಲ್ಲಿರುವ ವಿಜಯಪುರ ರಸ್ತೆ ಪಕ್ಕದಲ್ಲಿ ಇದೆ.
ಇದಕ್ಕೆ ಬಿದರಕುಂದಿ ಕ್ರಾಸ್‌ ಎಂದೇ ಕರೆಯಲಾಗುತ್ತದೆ. ಇಲ್ಲಿ ಅಂದಾಜು 200 ಮನೆಗಳಿವೆ. ಇಲ್ಲಿನ ಜನರಿಗೆ ನಲ್ಲಿ ಸಂಪರ್ಕ ಇಲ್ಲ. ಹೀಗಾಗಿ ರಸ್ತೆ ಪಕ್ಕದಲ್ಲಿರುವ ಒಂದೇ ಕಿರು ನೀರು
ಸರಬರಾಜು ಯೋಜನೆ ಅಡಿ ಸೀಮಿತ ಅವಧಿಯಲ್ಲಿ ಬಿಟ್ಟ ನೀರನ್ನು ತುಂಬಿಟ್ಟುಕೊಳ್ಳುವ ಅನಿವಾರ್ಯತೆ ಇದೆ. ಹಲವು ಬಾರಿ ಸಮಸ್ಯೆ ಪರಿಹಾರಕ್ಕೆ ಕೋರಿದ್ದರೂ ಪ್ರಯೋಜನ ಕಾಣದೆ
ಇರುವುದರಿಂದ ಆಕ್ರೋಶಗೊಂಡು ಬೀಗ ಜಡಿಯುವ ತೀರ್ಮಾನ ಕಾರ್ಯರೂಪಕ್ಕೆ ತಂದಿದ್ದರು.

ಈ ವೇಳೆ ಮಾತನಾಡಿದ ನಿವಾಸಿಗಳು, ನಸುಕಿನಲ್ಲಿ 3ಕ್ಕೆ ಎದ್ದು ನೀರು ತರುವ ದುಸ್ಥಿತಿ ಕಳೆದ 3-4 ತಿಂಗಳಿಂದಲೂ ಇದೆ. ನೀರು ಬರುವುದನ್ನು ಕಾಯುತ್ತ ರಸ್ತೆಯಲ್ಲೇ ಮಲಗಿಕೊಂಡಿದ್ದೇವೆ.
ಹಲವು ಬಾರಿ ಪಿಡಿಒ ಗಮನಕ್ಕೆ ತಂದು ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿದ್ದರೂ ಸ್ಪಂ ದಿಸುತ್ತಿಲ್ಲ. ಗ್ರಾಪಂ ಆಡಳಿತದ ನಿರ್ಲಕ್ಷ್ಯ
ಧೋರಣೆಯೇ ಇದಕ್ಕೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮಕ್ಕೆ ಬಸರಕೋಡ ಬಹುಹಳ್ಳಿ ಕುಡಿವ ನೀರಿನ ಸಂಪರ್ಕ ಇದೆ. ಆದರೆ ಕ್ರಾಸ್‌ನಲ್ಲಿರುವ ಜನರಿಗೆ ಇದರ ಪ್ರಯೋಜನ ದೊರಕಿಸಿ ಕೊಟ್ಟಿಲ್ಲ. ಕ್ರಾಸ್‌ನಲ್ಲಿರುವ ಜನತೆಗೆ ಪೈಪ್‌ಲೈನ್‌ ಮೂಲಕ ನಲ್ಲಿ ನೀರು ಕೊಡಲು ಯೋಜನೆ ರೂಪಿಸಿದ್ದರೂ ಇನ್ನೂ
ಕಾರ್ಯರೂಪಕ್ಕೆ ತಂದಿಲ್ಲ. ಹೀಗಾಗಿ ಇರುವ ಒಂದೇ ಟ್ಯಾಂಕ್‌ಗೆ ನಿತ್ಯ ನೂರಾರು ಜನ ಮುಗಿಬಿದ್ದು ನೀರು
ತರುವ ಪರಿಸ್ಥಿತಿ ಇದೆ ಎಂದು ಪರಿಸ್ಥಿತಿ ವಿವರಿಸಿದರು.

ಗ್ರಾಮೀಣ ನೀರು ಸರಬರಾಜು ಇಲಾಖೆಯು ಕುಡಿವ ನೀರಿನ ಸಮಸ್ಯೆ ಪರಿಹಾರದ ಹೊಣೆ ಹೊಂದಿದೆ.
ಇವರಿಗೆ ಪಂಚಾಯತ್‌ನವರು ಸಹಕಾರ ನೀಡಬೇಕು. ಆದರೆ ಇಲ್ಲಿ ಸಹಕಾರ ಇಲ್ಲದಿರುವುದು ಮತ್ತು ಇಲಾಖೆಯ ಎಂಜಿನಿಯರ್‌ ಜೆ.ಪಿ. ಶೆಟ್ಟಿ ಅವರು ಈ ಬಗ್ಗೆ ಹೆಚ್ಚು ಕಾಳಜಿ ವಹಿಸದಿರುವುದು ಸಮಸ್ಯೆ
ಗಂಭೀರಗೊಳ್ಳಲು ಕಾರಣವಾಗಿದೆ ಎಂದು ಜನರು ದೂರಿದರು.

ತಾಪಂ ಇಒಗೆ ಘೇರಾವ್‌: ಪಂಚಾಯತ್‌ಗೆ ಬೀಗ ಹಾಕಿ ಪ್ರತಿಭಟಿಸುತ್ತಿರುವ ವಿಷಯ ತಿಳಿದ ತಾಪಂ ಪ್ರಭಾರ ಕಾರ್ಯ ನಿರ್ವಾಹಕ ಅಧಿಕಾರಿ ಪ್ರಕಾಶ ದೇಸಾಯಿ ಸ್ಥಳಕ್ಕೆ ಆಗಮಿಸಿದರು. ಆಕ್ರೋಶಗೊಂಡಿದ್ದ ಜನರು ಅವರಿಗೆ ಘೇರಾವ್‌
ಹಾಕಿದಾಗ ವಾಗ್ವಾದ ನಡೆಯಿತು.

ಕ್ರಾಸ್‌ನಲ್ಲಿರುವ ಜನರಿಗೆ ನೀರಿನ ವ್ಯವಸ್ಥೆ ಮಾಡುವವರೆಗೂ ಧರಣಿ ಕೈ ಬಿಡುವುದಿಲ್ಲ, ಕಚೇರಿಗೆ ಹಾಕಿದ ಬೀಗವನ್ನೂ ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದರು.

ಹೇಗೋ ಹರಸಾಹಸಪಟ್ಟು ಜನರ ಮನವೊಲಿಸುವಲ್ಲಿ ಯಶಸ್ವಿಯಾದ ದೇಸಾಯಿ ಅವರು ಚುನಾವಣೆ ನೀತಿ ಸಂಹಿತೆ ಮುಗಿದ ಕೂಡಲೇ
ಶಾಶ್ವತ ಪರಿಹಾರ ಕಲ್ಪಿಸುವ ಮತ್ತು ಅಲ್ಲಿವರೆಗೂ ನೀರು ಪೂರೈಸಲು ತಾತ್ಕಾಲಿಕ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿ ಧರಣಿ ಅಂತ್ಯಗೊಳಿಸುವಂತೆ ಜನತೆಗೆ ಮನವಿ ಮಾಡಿದರು.

ಪಿಡಿಒ ಆನಂದ ಹಿರೇಮಠ, 3ನೇ ವಾರ್ಡ್‌ ಪ್ರತಿನಿ ಧಿಸುವ ಗ್ರಾಪಂ ಸದಸ್ಯ ಸಂಗಣ್ಣ ಚಲವಾದಿ, ನಿವಾಸಿಗಳಾದ ಮಹಾಂತೇಶ ಹನುಮಸಾಗರ, ರುದ್ರೇಶ ಚಿನಿವಾರ, ಮಾಳಪ್ಪ ಬಾಗೇವಾಡಿ, ರಫೀಕ್‌ ಢವಳಗಿ, ಮಲ್ಲನಗೌಡ ಪಾಟೀಲ, ಶಿವು ಚಿನಿವಾರ, ಅಕ್ಬರ್‌ ಗುರಿಕಾರ, ರಿಜ್ವಾನ್‌ ಭಾಗವಹಿಸಿದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

siddaramaiah

ಬೆಳಗಾವಿ ನಮ್ಮದು, ನೀವೊಬ್ಬರು ಮುಖ್ಯಮಂತ್ರಿ ಎಂದು ಮರೆಯಬೇಡಿ; ಮಹಾ ಸಿಎಂ ಗೆ ಸಿದ್ದರಾಮಯ್ಯ

ಸಿಎಂಗೆ ಪತ್ರ ಬರೆದಿಟ್ಟು ಅರಣ್ಯ ಇಲಾಖೆಯ ಅರೆಕಾಲಿಕ ನೌಕರ ಕಚೇರಿಯಲ್ಲಿ ನೇಣಿಗೆ ಶರಣು

ಸಿಎಂಗೆ ಪತ್ರ ಬರೆದಿಟ್ಟು ಅರಣ್ಯ ಇಲಾಖೆಯ ಅರೆಕಾಲಿಕ ನೌಕರ ಕಚೇರಿಯಲ್ಲಿ ನೇಣಿಗೆ ಶರಣು

2ಲಕ್ಷಕ್ಕೂ ಅಧಿಕ ಮಂದಿಗೆ ಲಸಿಕೆ, 447 ಫಲಾನುಭವಿಗಳಲ್ಲಿ ಅಡ್ಡಪರಿಣಾಮ ಪತ್ತೆ: ಕೇಂದ್ರ

2ಲಕ್ಷಕ್ಕೂ ಅಧಿಕ ಮಂದಿಗೆ ಲಸಿಕೆ, 447 ಫಲಾನುಭವಿಗಳಲ್ಲಿ ಅಡ್ಡಪರಿಣಾಮ ಪತ್ತೆ: ಕೇಂದ್ರ

ಮಹಾರಾಷ್ಟ್ರದಲ್ಲಿ ಸಾವಿರ ಮುಖ್ಯಮಂತ್ರಿ ಬಂದರೂ ಬೆಳಗಾವಿ ಕರ್ನಾಟದಲ್ಲೇ ಇರುತ್ತದೆ: ಸವದಿ

ಮಹಾರಾಷ್ಟ್ರದಲ್ಲಿ ಸಾವಿರ ಮುಖ್ಯಮಂತ್ರಿ ಬಂದರೂ ಬೆಳಗಾವಿ ಕರ್ನಾಟದಲ್ಲೇ ಇರುತ್ತದೆ: ಸವದಿ

ದೇಶದ ಏಕತೆಗೆ ಮಾರಕ: ಉದ್ಧವ್ ಠಾಕ್ರೆ ಮಾತಿಗೆ ಯಡಿಯೂರಪ್ಪ ಖಂಡನೆ

ದೇಶದ ಏಕತೆಗೆ ಮಾರಕ: ಉದ್ಧವ್ ಠಾಕ್ರೆ ಮಾತಿಗೆ ಯಡಿಯೂರಪ್ಪ ಖಂಡನೆ

ಲಂಕಾಸುರ

ಹೊಸ ಜೋಶ್‌ನಲ್ಲಿ ಚಿತ್ರರಂಗ ಸಾಲು ಸಾಲು ಸಿನಿಮಾಗಳಿಗೆ ಪೂಜೆ

ಸಿಗ್ನಲ್‌ಗೆ ಈಗ ಡಿಮ್ಯಾಂಡಪ್ಪೋ ಡಿಮ್ಯಾಂಡು!

ಸಿಗ್ನಲ್‌ಗೆ ಈಗ ಡಿಮ್ಯಾಂಡಪ್ಪೋ ಡಿಮ್ಯಾಂಡು!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾರ್ಲಕಜೆ ಅಕ್ಕಿ ಕೃಷಿ ಸಚಿವರಿಂದ ಬಿಡುಗಡೆ

ಕೃಷಿ ಸಚಿವರಿಂದ ಬಿಡುಗಡೆಕಾರ್ಲಕಜೆ ಅಕ್ಕಿ

ಸಿಎಂಗೆ ಪತ್ರ ಬರೆದಿಟ್ಟು ಅರಣ್ಯ ಇಲಾಖೆಯ ಅರೆಕಾಲಿಕ ನೌಕರ ಕಚೇರಿಯಲ್ಲಿ ನೇಣಿಗೆ ಶರಣು

ಸಿಎಂಗೆ ಪತ್ರ ಬರೆದಿಟ್ಟು ಅರಣ್ಯ ಇಲಾಖೆಯ ಅರೆಕಾಲಿಕ ನೌಕರ ಕಚೇರಿಯಲ್ಲಿ ನೇಣಿಗೆ ಶರಣು

ಮಹಾರಾಷ್ಟ್ರದಲ್ಲಿ ಸಾವಿರ ಮುಖ್ಯಮಂತ್ರಿ ಬಂದರೂ ಬೆಳಗಾವಿ ಕರ್ನಾಟದಲ್ಲೇ ಇರುತ್ತದೆ: ಸವದಿ

ಮಹಾರಾಷ್ಟ್ರದಲ್ಲಿ ಸಾವಿರ ಮುಖ್ಯಮಂತ್ರಿ ಬಂದರೂ ಬೆಳಗಾವಿ ಕರ್ನಾಟದಲ್ಲೇ ಇರುತ್ತದೆ: ಸವದಿ

ಇಂದಿನಿಂದ ಪೂರ್ಣ ಪ್ರಮಾಣದ ಲಸಿಕೆ

ಇಂದಿನಿಂದ ಪೂರ್ಣ ಪ್ರಮಾಣದ ಲಸಿಕೆ

ಮಿತ ಬಳಕೆಯಷ್ಟೇ ಜಲ ಸಂರಕ್ಷಣೆಗೆ ಉಳಿದಿರುವ ದಾರಿ

ಮಿತ ಬಳಕೆಯಷ್ಟೇ ಜಲ ಸಂರಕ್ಷಣೆಗೆ ಉಳಿದಿರುವ ದಾರಿ

MUST WATCH

udayavani youtube

KBCಯಲ್ಲಿ 12.5 ಲಕ್ಷ ಗೆದ್ದು ಬಡ ಮಕ್ಕಳ ಆಶಾಕಿರಣವಾದ ರವಿ ಕಟಪಾಡಿ | Udayavani

udayavani youtube

Whatsapp ಅನ್ನು ಓವರ್ ಟೇಕ್ ಮಾಡಿದ ಸಿಗ್ನಲ್!!??

udayavani youtube

ದ.ಕ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ವಿತರಣೆ ಅಭಿಯಾನಕ್ಕೆ ಕೋಟ ಶ್ರೀನಿವಾಸ ಪೂಜಾರಿ ಚಾಲನೆ

udayavani youtube

ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ 19 ಲಸಿಕೆ ಅಭಿಯಾನ; ಪ್ರಥಮ ಡೋಸ್ ನೀಡಿ ಚಾಲನೆ

udayavani youtube

ಉಡುಪಿಯಲ್ಲಿ ಕೋರೋನಾ ಲಸಿಕೆ ಪಡೆದ ಮೊದಲ ವ್ಯಕ್ತಿಯ ಮಾತು

ಹೊಸ ಸೇರ್ಪಡೆ

ಕಾರ್ಲಕಜೆ ಅಕ್ಕಿ ಕೃಷಿ ಸಚಿವರಿಂದ ಬಿಡುಗಡೆ

ಕೃಷಿ ಸಚಿವರಿಂದ ಬಿಡುಗಡೆಕಾರ್ಲಕಜೆ ಅಕ್ಕಿ

siddaramaiah

ಬೆಳಗಾವಿ ನಮ್ಮದು, ನೀವೊಬ್ಬರು ಮುಖ್ಯಮಂತ್ರಿ ಎಂದು ಮರೆಯಬೇಡಿ; ಮಹಾ ಸಿಎಂ ಗೆ ಸಿದ್ದರಾಮಯ್ಯ

ಸಿಎಂಗೆ ಪತ್ರ ಬರೆದಿಟ್ಟು ಅರಣ್ಯ ಇಲಾಖೆಯ ಅರೆಕಾಲಿಕ ನೌಕರ ಕಚೇರಿಯಲ್ಲಿ ನೇಣಿಗೆ ಶರಣು

ಸಿಎಂಗೆ ಪತ್ರ ಬರೆದಿಟ್ಟು ಅರಣ್ಯ ಇಲಾಖೆಯ ಅರೆಕಾಲಿಕ ನೌಕರ ಕಚೇರಿಯಲ್ಲಿ ನೇಣಿಗೆ ಶರಣು

2ಲಕ್ಷಕ್ಕೂ ಅಧಿಕ ಮಂದಿಗೆ ಲಸಿಕೆ, 447 ಫಲಾನುಭವಿಗಳಲ್ಲಿ ಅಡ್ಡಪರಿಣಾಮ ಪತ್ತೆ: ಕೇಂದ್ರ

2ಲಕ್ಷಕ್ಕೂ ಅಧಿಕ ಮಂದಿಗೆ ಲಸಿಕೆ, 447 ಫಲಾನುಭವಿಗಳಲ್ಲಿ ಅಡ್ಡಪರಿಣಾಮ ಪತ್ತೆ: ಕೇಂದ್ರ

ಮಹಾರಾಷ್ಟ್ರದಲ್ಲಿ ಸಾವಿರ ಮುಖ್ಯಮಂತ್ರಿ ಬಂದರೂ ಬೆಳಗಾವಿ ಕರ್ನಾಟದಲ್ಲೇ ಇರುತ್ತದೆ: ಸವದಿ

ಮಹಾರಾಷ್ಟ್ರದಲ್ಲಿ ಸಾವಿರ ಮುಖ್ಯಮಂತ್ರಿ ಬಂದರೂ ಬೆಳಗಾವಿ ಕರ್ನಾಟದಲ್ಲೇ ಇರುತ್ತದೆ: ಸವದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.