ಅಪಾಯಕ್ಕೂ ಮುನ್ನ ಎಚ್ಚೆತ್ತುಕೊಳ್ಳಿ

ಸಂಪೂರ್ಣ ಶಿಥಿಲಾವಸ್ಥೆಯಲ್ಲಿದೆ ಕಾಯಿಪಲ್ಲೆ-ಕಿರಾಣಿ ಮಾರುಕಟ್ಟೆ ವ್ಯಾಪಾರಸ್ಥರಲ್ಲಿ ಜೀವ ಭಯ

Team Udayavani, Dec 12, 2019, 1:03 PM IST

12-December-8

„ಡಿ.ಬಿ. ವಡವಡಗಿ
ಮುದ್ದೇಬಿಹಾಳ:
ಪಟ್ಟಣದ ಹೃದಯ ಭಾಗದಲ್ಲಿನ ಪುರಸಭೆ ಅಧಿನದ 65 ವರ್ಷಗಳಷ್ಟು ಹಳೆಯದಾದ ಕಾಯಿಪಲ್ಲೆ, ಕಿರಾಣಿ ಮಾರುಕಟ್ಟೆ ಸಂಪೂರ್ಣ ಜೀರ್ಣಾವಸ್ಥೆಗೆ ತಲುಪಿದ್ದು ಈಗಲೋ ಆಗಲೂ ಕುಸಿದು ಬಿದ್ದು ಭಾರಿ ಸಾವು ನೋವು ಸಂಭವಿಸುವ ಆತಂಕ ಅಲ್ಲಿರುವ ಕೆಲ ವ್ಯಾಪಾರಸ್ಥರು, ಜನತೆಯನ್ನು ಕಾಡುತ್ತಿದೆ.

ಈ ಹಿಂದೆ ಹಲವು ಬಾರಿ ಮಾರುಕಟ್ಟೆಯ ಒಳಗಿನ ಅಂಗಡಿಗಳ, ಮಾರುಕಟ್ಟೆ ಪ್ರವೇಶಿಸುವ ದ್ವಾರದ ಮೇಲ್ಛಾವಣಿಯ ಸಿಮೆಂಟ್‌ ಕಾಂಕ್ರೀಟ್‌ ಪದರು ಉದುರಿ ಬಿದ್ದು ವ್ಯಾಪಾರಸ್ಥರು ಸೇರಿ ದಂತೆ ಹಲವು ಜನರು ಗಾಯಗೊಂಡಿರುವ ಘಟನೆಗಳು ನಡೆದಿರುವುದು ಈ ಆತಂಕಕ್ಕೆ ಕಾರಣವಾಗಿದೆ.

1950-55ರಲ್ಲಿ ಜನತೆಗೆ ಒಂದೇ ಕಡೆ ಕಾಯಿಪಲ್ಲೆ, ಕಿರಾಣಿ ದಿನಿಸುಗಳು ಸಿಗಲಿ, ಹೆಚ್ಚು ಅನುಕೂಲವಾಗಲಿ ಎಂದು ಹಳೆ ಮುದ್ದೇಬಿಹಾಳ ಎಂದೇ ಕರೆಯಲ್ಪಡುವ ಕಿಲ್ಲಾದ ಹೊರ ವಲಯದಲ್ಲಿ ಇದನ್ನು ನಿರ್ಮಿಸಲಾಗಿತ್ತು. ಜನಸಾಂದ್ರತೆ ಹೆಚ್ಚಿದಂತೆ ಪಟ್ಟಣ ವಿಸ್ತಾರಗೊಂಡಿದ್ದರಿಂದ ಮಾರುಕಟ್ಟೆ ಈಗ ಪಟ್ಟಣದ ಹೃದಯ ಭಾಗದಲ್ಲಿದೆ. ಪ್ರಾರಂಭದಲ್ಲಿ ಕಿರಾಣಿ ದಿನಿಸು, ಸ್ಟೇಶನರಿ ವಸ್ತು ಮಾರಾಟಕ್ಕಾಗಿ ಮಾರುಕಟ್ಟೆ ಸುತ್ತಲೂ ಹೊರ ಭಾಗದಲ್ಲಿ 33, ಒಳ ಭಾಗದಲ್ಲಿ 16 ಅಂಗಡಿ, ಒಳ ಭಾಗದಲ್ಲಿ ಕಾಯಿಪಲ್ಲೆ ಮಾರಾಟಕ್ಕಾಗಿ 8 ಕಟ್ಟೆ, ನಂತರದಲ್ಲಿ 25-30 ವರ್ಷಗಳ ಹಿಂದೆ ಬೇಡಿಕೆ ಪರಿಗಣಿಸಿ ಮಾರುಕಟ್ಟೆ ಮೇಲ್ಭಾಗದಲ್ಲಿ ಹೊಸದಾಗಿ 11 ಅಂಗಡಿ ಕಟ್ಟಲಾಗಿತ್ತು.

ಎಲ್ಲ ಸೇರಿ ಒಟ್ಟು 60 ಅಂಗಡಿ, 8 ಕಟ್ಟೆ ಇಲ್ಲಿವೆ. ಈ ಪೈಕಿ ಸಂಪೂರ್ಣ ಜೀರ್ಣಾವಸ್ಥೆಗೆ ತಲುಪಿರುವ 16 ಅಂಗಡಿ ಬಂದ್‌ ಮಾಡಿದ್ದು ಸದ್ಯ 44 ಅಂಗಡಿ ಮಾತ್ರ ಚಾಲೂ ಇವೆ. ಕಾಯಿಪಲ್ಲೆ ಮಾರಾಟವನ್ನು ಇಂದಿರಾ ವೃತ್ತದ ಬಳಿ ಇರುವ ಹೊಸ ಮಾರುಕಟ್ಟೆಗೆ ವರ್ಗಾಯಿಸಿದ್ದರಿಂದ 8 ಕಟ್ಟೆ ನಿರುಪಯುಕ್ತವಾಗಿವೆ. ಪುರಸಭೆಯು ಇಲ್ಲಿನ ಅಂಗಡಿಗಳಿಗೆ ತೆರಿಗೆ ಹೊರತುಪಡಿಸಿ ವಾರ್ಷಿಕ ಬಾಡಿಗೆ ನಿಗದಿಪಡಿಸಲಾಗಿದೆ. 10 ಅಂಗಡಿಗಳಿಗೆ ತಲಾ 20450 ರೂ., 13 ಅಂಗಡಿಗಳಿಗೆ ತಲಾ 15905 ರೂ., 10 ಕಾಳುಕಡಿ ಅಂಗಡಿಗಳಿಗೆ ತಲಾ 13723 ರೂ., ಮೊದಲ ಅಂತಸ್ತಿನ 10 ಅಂಗಡಿಗಳಿಗೆ 6000-6500 ರೂ., 11ನೇ ಅಂಗಡಿಗೆ 12500 ರೂ. ಬಾಡಿಗೆ ವಿಧಿಸಲಾಗುತ್ತಿದೆ. ಪ್ರತಿ ವರ್ಷ ಅಂದಾಜು 7 ಲಕ್ಷ ರೂ. ಆದಾಯ ಬರುತ್ತದೆ. ಈಗಿನ ದಿನಗಳಿಗೆ ಹೋಲಿಸಿದಲ್ಲಿ ಇದು ಅತ್ಯಲ್ಪ ಆದಾಯ ಎನ್ನಬಹುದು. ಒಳಗಿನ 16 ಅಂಗಡಿ, 8 ಕಟ್ಟೆ ಬಂದ್‌ ಆಗಿದ್ದು ಆದಾಯ ಇಲ್ಲದಂತಾಗಿದೆ.

65 ವರ್ಷಗಳ ಹಿಂದೆ ಇದನ್ನು ಕಟ್ಟಿದ್ದರಿಂದ ಅದರ ಬಾಳಿಕೆ ಅವಧಿ ಕುಂಠಿತಗೊಳ್ಳುತ್ತಿದೆ. ಕೆಲ ಅಂಗಡಿ ಮೇಲ್ಛಾವಣಿ ಕುಸಿದಿದ್ದರೆ, ಮತ್ತೆ ಕೆಲವು ಅಂಗಡಿಗಳ ಮೇಲ್ಛಾವಣಿ ಸಿಮೆಂಟ್‌ ಕಾಂಕ್ರೀಟ್‌ ಪದರು ಉದುರಿ ಬೀಳುತ್ತಿದ್ದು ತುಕ್ಕು ಹಿಡಿದ ಸರಳಗಳು ಕಾಣತೊಡಗಿದೆ. ಕಾಂಕ್ರೀಟ್‌ನಲ್ಲಿ ಹಾಕಿದ ಸರಳು ವಾತಾವರಣಕ್ಕೆ ತೆರೆದುಕೊಂಡು ತುಕ್ಕು ಹಿಡಿಯತೊಡಗಿದರೆ ಅದರ ಶಕ್ತಿ ಸಂಪೂರ್ಣ ಹಾಳಾದಂತೆ. ಮೇಲಿನ ಭಾರ ತಾಳದೆ ಮುರಿದು ಮೇಲ್ಛಾವಣಿಯೇ ಕುಸಿದು ಬೀಳುವ ಅವಕಾಶ ಹೇರಳವಾಗಿದೆ. ಎಂಟ್ರನ್ಸ್‌ಗಳ ಮೇಲ್ಛಾವಣಿಯ ಪ್ಲಾಸ್ಟರ್‌ ಆಗಾಗ ಕಳಚಿ ಬಿದ್ದು ಕೆಳಗೆ ತಿರುಗಾಡುವವರಿಗೆ ಅಪಾಯ ನಿಶ್ಚಿತ.

ಕೆಲ ಅಂಗಡಿಗಳ ಗೋಡೆಗಳಲ್ಲಿ ಬಿರುಕು ಕಂಡು ಬಂದಿದ್ದರೆ, ಮತ್ತೇ ಕೆಲ ಅಂಗಡಿಗಳ ಒಳಭಾಗದಲ್ಲಿ ಆಹಾರ ಅರಸಿ ಬರುವ ಇಲಿ, ಹೆಗ್ಗಣಗಳು ದೊಡ್ಡ ಗುದ್ದು ಹಾಕಿ ಕಟ್ಟಡದ ಅಡಿಪಾಯವನ್ನೇ ಅಪಾಯಕಾರಿಯನ್ನಾಗಿಸಿವೆ. ಮೇಲ್ಛಾವಣಿಯಂತೂ ಈಗಲೇ ಆಗಲೋ ಕುಸಿದು ಬೀಳುವಷ್ಟು ಕೃಷವಾಗಿದೆ. ಹಲವು ಅಂಗಡಿಗಳ ಮೇಲ್ಛಾವಣಿ ಮೇಲೆ ತಗಡು ಹಾಕಿ ಮಳೆ ನೀರು ಸೋರದಂತೆ ನೋಡಿಕೊಳ್ಳಲಾಗಿದೆ. ಸಣ್ಣ ಪ್ರಮಾಣದ ಭೂಕಂಪ ತಡೆಗುಕೊಳ್ಳುವ ಶಕ್ತಿಯೂ ಇದಕ್ಕಿಲ್ಲದಾಗಿದೆ.

ಅಕಸ್ಮಾತ್‌ ಭೂಕಂಪ ಸಂಭವಿಸಿದಲ್ಲಿ ಇಡಿ ಕಟ್ಟಡ ನೆಲಸಮಗೊಳ್ಳುವುದು ಖಚಿತ. ಈ ಹಿಂದೆ ಸಂಭವಿಸಿದ ಭೂಕಂಪಗಳಿಂದ ಮಾರುಕಟ್ಟೆ ಕಟ್ಟಡದ ಕೆಲ ಭಾಗದಲ್ಲಿ ಬಿರುಕು ಕಂಡು ಬಂದಿದ್ದು ಇದಕ್ಕೆ ಸಾಕ್ಷಿ. ಮಾರುಕಟ್ಟೆ ಸಂಪೂರ್ಣ ಶಿಥಿಲಗೊಂಡಿರುವುದು ವ್ಯಾಪಾರಸ್ಥರಿಗೆ ಗೊತ್ತಿದೆ. ಆದರೆ ಪರ್ಯಾಯ ವ್ಯವಸ್ಥೆ ಇಲ್ಲದ್ದರಿಂದ, ಎಲ್ಲರಿಗೂ ಹತ್ತಿರ ಆಗುವುದರಿಂದ ಅನಿವಾರ್ಯವಾಗಿ ಅಪಾಯದ ಸ್ಥಿತಿಗೆ ಒಗ್ಗಿಕೊಂಡಿದ್ದಾರೆ.

ತಲೆ ಮೇಲೆ ಛಾವಣಿ ಕುಸಿದು ಬೀಳುತ್ತದೆ ಎಂದು ಗೊತ್ತಿದ್ದರೂ ತಮ್ಮನ್ನು ನಂಬಿದ ಕುಟುಂಬದ ಹೊಟ್ಟೆ ತುಂಬಿಸಲು, ಜನರಿಗೆ ಅನುಕೂಲ ಮಾಡಿಕೊಡಲು ಅಪಾಯ ಲೆಕ್ಕಿಸದೆ ವ್ಯಾಪಾರ ನಡೆಸುತ್ತಿದ್ದಾರೆ. ಕಾಯಿಪಲ್ಲೆ ಮಾರಾಟಗಾರರು ಹೊಸ ಮಾರುಕಟ್ಟೆಗೆ ಹೋಗಲು ನಿರಾಕರಿಸಿ ಇಲ್ಲೇ ವ್ಯಾಪಾರ ಮುಂದುವರಿಸಿದ್ದಾರೆ.

ಒಟ್ಟಾರೆ ಹೇಳುವುದಾದರೆ ಇಲ್ಲಿನ ಅಂಗಡಿಕಾರರು ಮಾರುಕಟ್ಟೆ ದುರಸ್ತಿಪಡಿಸಿಕೊಡಲು ಒತ್ತಾಯಿಸುತ್ತಾರೆಯೇ ಹೊರತು ಹೊಸ ಮಾರುಕಟ್ಟೆ ನಿರ್ಮಾಣಕ್ಕೆ ಸುತಾರಾಂ ಒಪ್ಪುತ್ತಿಲ್ಲ. ಇದಕ್ಕೆ ಏನೇನೋ ಕಾರಣಗಳಿರಬಹುದು. ಆದರೆ ವ್ಯಾಪಾರಸ್ಥರು, ಜನರ ಪ್ರಾಣ ಮುಖ್ಯ ಎನ್ನುವುದನ್ನು ಪುರಸಭೆ ಆಡಳಿತ, ಜನಪ್ರತಿನಿಧಿಗಳು ಅರಿತುಕೊಂಡಿದ್ದು ಹೊಸ ಮಾರುಕಟ್ಟೆ ಕಟ್ಟಲು ಮನವೊಲಿಸುವ ಪ್ರಯತ್ನಗಳು ನಿರಂತರ ನಡೆದಿವೆ.

ಸಂಭವನೀಯ ಪ್ರಾಣಾಪಾಯ ತಪ್ಪಿಸಲು ಪ್ರಾಣಘಾತುಕ ಆಗಲಿರುವ ಈ ಮಾರುಕಟ್ಟೆ ಕೆಡವಿ ಹೊಸದಾಗಿ ಕಮರ್ಷಿಯಲ್‌ ಕಾಂಪ್ಲೆಕ್ಸ್‌ ನಿರ್ಮಿಸಬೇಕು. ಕೆಳಗೆ ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥೆ ಕಲ್ಪಿಸುವುದರಿಂದ ಬಜಾರ್‌ನಲ್ಲಿ ಸಂಚಾರ ಒತ್ತಡ, ಪಾರ್ಕಿಂಗ್‌ ಸಮಸ್ಯೆ ನಿವಾರಿಸಬಹುದು. ಪುರಸಭೆಗೂ ಆದಾಯ ಹೆಚ್ಚುತ್ತದೆ. ವ್ಯಾಪಾರಸ್ಥರು, ಸಾರ್ವಜನಿಕರು ಆತಂಕ ಇಲ್ಲದೆ ನೆಮ್ಮದಿಯಿಂದ ನಿತ್ಯದ ಚಟುವಟಿಕೆ ನಡೆಸಬಹುದು. ಉದ್ಯೋಗಾವಕಾಶಗಳು ಹೆಚ್ಚುತ್ತವೆ. ಇದಕ್ಕಾಗಿ ಮಾರುಕಟ್ಟೆಯನ್ನು ಸಂಪೂರ್ಣ ನೆಲಸಮಗೊಳಿಸಿ ಹೊಸದಾಗಿ ಕಾಂಪ್ಲೆಕ್ಸ್‌ ಕಟ್ಟಬೇಕು ಅನ್ನೋದು ಜನರ ಅಪೇಕ್ಷೆ, ಬೇಡಿಕೆ. ಜನಪ್ರತಿನಿಧಿಗಳು, ಪುರಸಭೆ ಆಡಳಿತ ಕ್ರಿಯಾಶೀಲಗೊಂಡು ಜನರ ಅಪೇಕ್ಷೆ ಅರಿತು ಅಭಿವೃದ್ಧಿಗೆ ಮುಂದಾಗಬೇಕಿದೆ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.