ಸಂಕಷ್ಟ ಸಹಿಸಿಕೊಂಡರೆ ಬದುಕು ಬಂಗಾರ: ಸ್ವಾಮೀಜಿ

ನೇಬಗೇರಿಯಲ್ಲಿ ಧಾರ್ಮಿಕ ಕಾರ್ಯಕ್ರಮ ಕಂಪು

Team Udayavani, May 13, 2019, 5:28 PM IST

ಮುದ್ದೇಬಿಹಾಳ: ನೇಬಗೇರಿಯಲ್ಲಿ ಧರ್ಮಸಭೆ, ಉಚಿತ ಸಾಮೂಹಿಕ ವಿವಾಹ ಸಮಾರಂಭವನ್ನು ಶ್ರೀಗಳು ಹಾಗೂ ಗಣ್ಯರು ಉದ್ಘಾಟಿಸಿದರು.

ಮುದ್ದೇಬಿಹಾಳ: ತಾಯಂದಿರು ತಾಳಿದರೆ ಜಗತ್ತು ಉಳಿಯುತ್ತದೆ. ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ತಾಳಿಕೊಳ್ಳುವ ಹೆಣ್ಣಿನ ಬಾಳು ಬಂಗಾರವಾಗುತ್ತದೆ. ಕಷ್ಟ ಕಾರ್ಪಣ್ಯಗಳು ಬಂದಾಗಲೇ ಮನುಷ್ಯನ ಜೀವನ ಪಾವನವಾಗುತ್ತದೆ ಎಂದು ಸರೂರು ಹಾಲುಮತ ಮೂಲ ಗುರುಪೀಠದ ಅಗತೀರ್ಥ ಶಾಖಾಮಠದ ಗುರು ಮಹಾಸ್ವಾಮಿಗಳು ಹೇಳಿದರು.

ಮುದ್ದೇಬಿಹಾಳ ತಾಲೂಕು ನೇಬಗೇರಿ ಗ್ರಾಮದಲ್ಲಿ ರವಿವಾರ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಏರ್ಪಡಿಸಿದ್ದ ಉಚಿತ ಸಾಮೂಹಿಕ ವಿವಾಹ, ಧರ್ಮಸಭೆ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಗ್ರಾಮೀಣ ಜನರು, ತಾಯಂದಿರು ಮೂಢ ನಂಬಿಕೆ ಕೈ ಬಿಡಬೇಕು. ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ಕೊಡಿಸಲು ಮುಂದಾಗಬೇಕು. ಇಂದಿನ ಯುವ ಜನತೆ ಅಂಟಿಸಿಕೊಂಡಿರುವ ದುಷ್ಟ ಚಟಗಳು ಸಂಸಾರವನ್ನೇ ನಾಶಮಾಡುವ ಮಟ್ಟಕ್ಕೆ ಪರಿಣಾಮ ಬೀರುತ್ತಿದ್ದು ಯುವಜನತೆ ಎಚ್ಚೆತ್ತುಕೊಳ್ಳಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ಕರಭಂಟನಾಳ ಗುರು ಗಂಗಾಧರೇಶ್ವರ ಹಿರೇಮಠದ ಶಿವಕುಮಾರ ಸ್ವಾಮಿಗಳು ಮಾತನಾಡಿ, ಉಚಿತ ಸಾಮೂಹಿಕ ವಿವಾಹ ಬಡವರ ಮದುವೆ ಅಲ್ಲ ಇದು ಭಾಗ್ಯವಂತರ ಮದುವೆ. ಧರ್ಮ ಸಭೆಯಂಥ ಧಾರ್ಮಿಕ ವೇದಿಕೆಯಲ್ಲಿ ಶರಣರು, ಶ್ರೀಗಳು, ಪೂಜ್ಯರು ಇರುತ್ತಾರೆ. ಇಂಥ ವೇದಿಕೆ ಮೇಲೆ ಚಪ್ಪಲಿ ಧರಿಸಿ ಬರದಂತೆ ಹಿಂದಿನ ಮೂರು ವರ್ಷಗಳ ಧರ್ಮ ಸಭೆಯಲ್ಲಿ ತಿಳಿಹೇಳಲಾಗಿದೆ. ಆದರೂ ಚಪ್ಪಲಿ ಹಾಕಿ ವೇದಿಕೆ ಏರಿ ಶ್ರೀಗಳ ಜೊತೆ ಪಾಲ್ಗೊಳ್ಳುವ ಸಂಪ್ರದಾಯ ಮುಂದುವರಿದಿದೆ. ಇದು ವೇದಿಕೆಯ ಧಾರ್ಮಿಕ ಗಾಂಭಿರ್ಯಕ್ಕೆ ವಿರುದ್ಧವಾದದ್ದು. ಇನ್ನು ಮುಂದಾದರೂ ಧರ್ಮ ಸಭೆಗಳಲ್ಲಿ ಇಂಥದ್ದಕ್ಕೆ ಆಸ್ಪದ ಕೊಡಬಾರದು ಎಂದರು.

ಎಪಿಎಂಸಿ ಅಧ್ಯಕ್ಷ ಗುರಣ್ಣ ತಾರನಾಳ, ಎಪಿಎಂಸಿ ನಿರ್ದೇಶಕ ವೈ.ಎಚ್. ವಿಜಯಕರ, ಜಿಪಂ ಮಾಜಿ ಅಧ್ಯಕ್ಷೆ ಹಾಲಿ ಸದಸ್ಯೆ ನೀಲಮ್ಮ ಮೇಟಿ, ಬಿಜೆಪಿ ಧುರೀಣರಾದ ಕಾಶೀಬಾಯಿ ರಾಂಪುರ, ಸಂಗಮ್ಮ ದೇವರಳ್ಳಿ ಮಾತನಾಡಿದರು. ವಿಜಯಪುರ ಸಿದ್ದಾರೂಢ ಮಠದ ಭೋಗೇಶ್ವರಿ ಅಮ್ಮನವರು ಆಶೀರ್ವಚನ ನೀಡಿದರು.

ಜಿಪಂ ಮಾಜಿ ಸದಸ್ಯೆ ಕಾಶೀಬಾಯಿ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಅಖೀಲ ಗೋವಾ ಕನ್ನಡಿಗರ ಹೋರಾಟ ಸಮಿತಿ ಗೌರವಾಧ್ಯಕ್ಷ ಸಿದ್ದಣ್ಣ ಮೇಟಿ, ಪಿಎಲ್ಡಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಹಾಲಿ ನಿರ್ದೇಶಕ ಬಿ.ಕೆ.ಬಿರಾದಾರ, ಜಿಪಂ ಮಾಜಿ ಸದಸ್ಯೆ ಸುನಂದಾ ನಾಯಕ, ಗ್ರಾಪಂ ಮಾಜಿ ಅಧ್ಯಕ್ಷ ಸಾಬಣ್ಣ ವಾಲೀಕಾರ, ಸಂಗನಗೌಡ ಪಾಟೀಲ, ಸಂಗಣ್ಣ ಬಿಸಲದಿನ್ನಿ, ಲಕ್ಷ್ಮಣ ಬಿಜ್ಜೂರ, ಮಂಜುನಾಥ ಪಾಟೀಲ, ಬಸಯ್ಯ ಹಿರೇಮಠ, ಎಸ್‌.ಎಸ್‌.ಹುಲ್ಲೂರ, ಹಣಮಗೌಡ ಬ್ಯಾಲ್ಯಾಳ ವೇದಿಕೆಯಲ್ಲಿದ್ದರು.

ಒಟ್ಟು 31 ಜೋಡಿ ವಧು ವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಬಿಆರ್‌ಪಿ ಎಂ.ಎ. ತಳ್ಳಿಕೇರಿ ನಿರೂಪಿಸಿದರು. ಬಿ.ಬಿ. ಪೂಜಾರಿ ವಂದಿಸಿದರು. ಕಾರ್ಯಕ್ರಮಕ್ಕೂ ಮುನ್ನ ಬೆಳಗ್ಗೆ ದೇವಸ್ಥಾನದಲ್ಲಿ ಮೂಲ ಮೂರ್ತಿಗಳಿಗೆ ಅಭಿಷೇಕ ನಡೆಸಲಾಯಿತು. ಡೊಳ್ಳು ವಾದ್ಯ, ಭಾಜಾ ಭಜಂತ್ರಿ ಸಮೇತ ಮಾರುತೇಶ್ವರ ದೇವಸ್ಥಾನದಿಂದ ಪಲ್ಲಕ್ಕಿ, ಕಳಸದ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು.


ಈ ವಿಭಾಗದಿಂದ ಇನ್ನಷ್ಟು

 • ಬೆಂಗಳೂರು: ಸಮಸ್ಯೆಗೆ ಸೂಚಿಸಿದ ಪರಿಹಾರವೇ ಸಮಸ್ಯೆಯಾಗಿ ಪರಿಣಮಿಸಿದರೆ ಏನಾಗಬಹುದು? ಇದನ್ನು ತಿಳಿಯಲು ನೀವು ಒಮ್ಮೆ ಕೆ.ಆರ್‌.ಪುರದ ಟಿನ್‌ ಫ್ಯಾಕ್ಟರಿ ರಸ್ತೆಯಲ್ಲಿ...

 • ಬೆಂಗಳೂರು: ರೈತರ ಸಮಸ್ಯೆ, ನೆಲ, ಜಲಕ್ಕೆ ಸಂಬಂಧಿಸಿದ ಕನ್ನಡ ಪರ ಹೋರಾಟಗಳ ಸಂದರ್ಭದಲ್ಲಿ ಚಿತ್ರರಂಗ ಒಂದಾಗುತ್ತದೆ ಎಂದು ಚಿತ್ರನಟ ಶಿವರಾಜ್‌ಕುಮಾರ್‌ ಹೇಳಿದರು. ಕನ್ನಡ...

 • ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅಲೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದ್ದು, ರಾಜ್ಯದಲ್ಲೂ ಪಕ್ಷ ಇಟ್ಟುಕೊಂಡಿದ್ದ ಗುರಿ ತಲುಪಲು ಶ್ರಮಿಸಿದ...

 • ಬೆಂಗಳೂರು: ಚುನಾವಣೆ ಫ‌ಲಿತಾಂಶ ಹೊರ ಬಿದ್ದು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮತ್ತೆ ಅಧಿಕಾರ ಹಿಡಿದಿದೆ. ಈ ಸಂದರ್ಭದಲ್ಲಿ ದೇಶ, ರಾಜ್ಯ ಹಾಗೂ ನನ್ನ ಕ್ಷೇತ್ರದ...

 • ಬೆಂಗಳೂರು: ಬಿಬಿಎಂಪಿ ವತಿಯಿಂದ ನಗರದಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ಮಳೆಗಾಲ ಆರಂಭವಾಗುವಷ್ಟರಲ್ಲಿ ಪೂರ್ಣಗೊಳಿಸುವಂತೆ ಮೇಯರ್‌ ಗಂಗಾಂಬಿಕೆ ಅಧಿಕಾರಿಗಳಿಗೆ...

ಹೊಸ ಸೇರ್ಪಡೆ

 • ಬ್ರಾಂಡ್‌ ಮೋದಿ..: ಮೋದಿ ಹೆಸರಲ್ಲಿ ದೇಶದಲ್ಲಿ ಏನು ಬೇಕಾದರೂ ಓಡುತ್ತದೆ ಎಂಬುದಕ್ಕೆ ಈ ಚುನಾವಣೆ ಮತ್ತೊಂದು ಉದಾಹರಣೆ. 2014ಕ್ಕಿಂತಲೂ ಈ ಬಾರಿ ದೇಶದ ಮತದಾರ ಹೆಚ್ಚಿನ...

 • ಭಾರತದ ರಾಜಕೀಯ ರಂಗದಲ್ಲಿ ಹೊಸ ಆಶಾಭಾವ ಮೂಡಿಸುವ ಮೂಲಕ 2013ರಲ್ಲಿ ಅಸ್ತಿತ್ವಕ್ಕೆ ಬಂದ ಆಮ್‌ ಆದ್ಮಿ ಪಕ್ಷ (ಎಎಪಿ), ಈ ಬಾರಿ ಮೋದಿ ಅಲೆಯಲ್ಲಿ ಕೊಚ್ಚಿ ಹೋಗಿದೆ. 2013ರಲ್ಲಿ...

 • ಪ್ರಧಾನಿ ನರೇಂದ್ರ ಮೋದಿ ಭಾರತದ ಜನಮೆಚ್ಚಿದ ನಾಯಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಆ ವೈಯಕ್ತಿಕ ವರ್ಚಸ್ಸು ಹಾಗೂ ಜನಪ್ರಿಯತೆಯನ್ನು ರಾಜಕೀಯ ಜಯಭೇರಿಯಾಗಿ...

 • ಲೋಕಸಭೆ ಚುನಾವಣೆ ಉತ್ತರ ಕರ್ನಾಟಕ ಹಾಗೂ ಮಧ್ಯ ಕರ್ನಾಟಕದ ಕೆಲವು ಕಡೆ ಅನಿರೀಕ್ಷಿತ ಹಾಗೂ ಆಘಾತಕಾರಿ ಫ‌ಲಿತಾಂಶ ನೀಡಿದ್ದು, ರಾಜಕೀಯವಾಗಿ ಎಚ್ಚರಿಕೆ ಸಂದೇಶ ನೀಡಿದೆ....

 • ತುಮಕೂರು: ಮಾಜಿ ಪ್ರಧಾನಿ ದೇವೇಗೌಡರ ಸ್ಪರ್ಧೆಯಿಂದ ದೇಶದ ಗಮನ ಸೆಳೆದಿದ್ದ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಮತದಾರರು, ಬಿಜೆಪಿ ಅಭ್ಯರ್ಥಿ ಜಿ.ಎಸ್‌.ಬಸವರಾಜ್‌ಗೆ...

 • ಚಾಮರಾಜನಗರ: ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಸಂಸದ ಆರ್‌.ಧ್ರುವನಾರಾಯಣ ಅವರು ಅಭಿವೃದ್ಧಿ ಕೆಲಸಗಳಲ್ಲಿ ದೇಶದ ಮೂರನೇ ಮತ್ತು ರಾಜ್ಯದ ಮೊದಲನೇ ಸಂಸದ ಎಂಬ ಹೆಗ್ಗಳಿಕೆ...