ಸದ್ಬಳಕೆಯಾಗಲಿ ತಾಪಂ ಅಧೀನದ ಜಾಗೆ

ಅನೈತಿಕ ಚಟುವಟಿಕೆಗಳ ತಾಣವಾದ ಸಾಮರ್ಥ್ಯ ಸೌಧ | ಜನಪ್ರತಿನಿಧಿಗಳು-ಅಧಿಕಾರಿಗಳು ಇಚ್ಛಾಶಕ್ತಿ ತೋರಲಿ

Team Udayavani, Dec 26, 2019, 1:11 PM IST

26-December-8

ಡಿ.ಬಿ.ವಡವಡಗಿ
ಮುದ್ದೇಬಿಹಾಳ:
ಪಟ್ಟಣದ ಬಸವೇಶ್ವರ ವೃತ್ತದ ಬಳಿ ಕೋಟ್ಯಂತರ ಬೆಲೆ ಬಾಳುವ ತಾಪಂ ಅಧೀನದ 4 ಎಕರೆ ಜಾಗೆ, ಅದರಲ್ಲಿನ ಸಿಬ್ಬಂದಿ ಕ್ವಾಟ್ರಸ್‌, ಸಾಮರ್ಥ್ಯ ಸೌಧ, ವಾಣಿಜ್ಯ ಮಳಿಗೆ ಬಳಕೆ ಇಲ್ಲದೆ ನಿರುಪಯುಕ್ತಗೊಂಡು ಅನಧಿಕೃತ, ಅನೈತಿಕ ಚಟುವಟಿಕೆಗಳಿಗೆ ಬಳಕೆ ಆಗುತ್ತಲಿದ್ದು ಸರ್ಕಾರದ ಯೋಜನೆಗಳು ಹಳ್ಳ ಹಿಡಿಯುವುದು ಹೇಗೆ ಎನ್ನುವುದಕ್ಕೆ ಜ್ವಲಂತ ಉದಾಹರಣೆ ಎನ್ನಿಸಿಕೊಂಡಿವೆ.

1959ರಲ್ಲಿ ಪಂಚಾಯತ್‌ ವ್ಯವಸ್ಥೆ ಜಾರಿಗೊಂಡಾಗ ಇಲ್ಲಿ ತಾಲೂಕು ಅಭಿವೃದ್ಧಿ ಸಮಿತಿ (ಟಿಡಿಬಿ) ಇತ್ತು. 1983ರಲ್ಲಿ ಪಂಚಾಯತ್‌ ಕಾಯ್ದೆಗೆ ತಿದ್ದುಪಡಿ ಆದಾಗ ಟಿಡಿಬಿ ಹೋಗಿ ತಾಲೂಕು ಪಂಚಾಯಿತ್‌ ಎಂದು ಬದಲಾಯಿತು. ಆ ಅವಧಿಯಲ್ಲಿ ಟಿಡಿಬಿ (ಈಗಿನ ತಾಪಂ) ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ ಸಹಿತ ಪ್ರಮುಖ ಸಿಬ್ಬಂದಿಗೋಸ್ಕರ ಈ ಜಾಗದಲ್ಲಿ 8 ಮನೆಗಳ ಕ್ವಾಟ್ರಸ್‌ ನಿರ್ಮಿಸಲಾಗಿತ್ತು. ನಿರ್ವಹಣೆ ಕೊರತೆಯಿಂದಾಗಿ ಕಾಲಾಂತರದಲ್ಲಿ ಅವು ಜೀರ್ಣಾವಸ್ಥೆಗೆ ತಲುಪಿ ವಾಸಕ್ಕೆ ಅಯೋಗ್ಯ ಎನ್ನಿಸಿದ್ದರಿಂದ ಕೆಲ ವರ್ಷಗಳಿಂದ ಅಲ್ಲಿ ವಸತಿ ಇಲ್ಲವಾಗಿದೆ. ಹೀಗಾಗಿ ಇವು ನಿರುಪಯುಕ್ತಗೊಂಡು ನೆಲಸಮಕ್ಕಾಗಿ ಕಾಯುತ್ತಿವೆ.

ಇದೇ ಜಾಗದಲ್ಲಿ 2010-11ನೇ ಸಾಲಿನಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿ ಸ್ತ್ರೀಶಕ್ತಿ ಸಂಘಗಳ ಕಾರ್ಯ ಚಟುವಟಿಕೆಗೆಂದು ಸಾಮರ್ಥ್ಯಸೌಧ ಕಟ್ಟಲು ಪ್ರಾರಂಭಿಸಲಾಯಿತು. ಇದಕ್ಕೂ ವಿಘ್ನಗಳು ಬಂದು ಕಳೆದ 4-5 ವರ್ಷದಿಂದ ಈ ಸೌಧವೂ ಅಪೂರ್ಣಗೊಂಡು ನಿರುಪಯುಕ್ತವಾಯಿತು. ಮಾತ್ರವಲ್ಲದೆ ಕಿಡಿಗೇಡಿಗಳ ಕೈಗೆ ಸಿಕ್ಕು ನಾಶವಾಗತೊಡಗಿದೆ. ಇದನ್ನು ಪೂರ್ಣಗೊಳಿಸಲು ತಾಪಂ ಆಡಳಿತವೂ ಹೆಚ್ಚು ಆಸಕ್ತಿ ತೋರಿಸಲಿಲ್ಲ. ಹೀಗಾಗಿ ಸರ್ಕಾರದ ಉದ್ದೇಶ ಈಡೇರಲಿಲ್ಲ. ಪಕ್ಕದಲ್ಲೇ ಮದ್ಯದ ಅಂಗಡಿ, ನಾನವೆಜ್‌ ಹೋಟೆಲ್‌ ಇರುವುದರಿಂದ ಅನೈತಿಕ ಚಟುವಟಿಕೆಗೆ ಆಶ್ರಯ ನೀಡಿದಂತಾಗಿದೆ.

ಇಲ್ಲೇ 2016ರಲ್ಲಿ ಸ್ವರ್ಣ ಜಯಂತಿ ಗ್ರಾಮ ಸ್ವರೋಜಗಾರ ಯೋಜನಾ (ಎಸ್‌ಜಿಎಸ್‌ವೈ) (ಈಗ ಇದನ್ನು ದೀನದಯಾಳ ಉಪಾಧ್ಯಾಯ ಅಂತ್ಯೋದಯ ಯೋಜನೆ ಎಂದು ಕರೆಯಲಾಗುತ್ತಿದೆ) ಅಡಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸಂಘಗಳ ವ್ಯಾಪಾರಕ್ಕೆ ಅನುಕೂಲ ಕಲ್ಪಿಸಲು 16 ಅಂಗಡಿಗಳ ವಾಣಿಜ್ಯ ಮಳಿಗೆ ನಿರ್ಮಿಸಲಾಯಿತು. ಆದರೆ ಇದುವರೆಗೂ ಪಿಡಬ್ಲ್ಯೂಡಿ ಅಧಿಕಾರಿಗಳು ಇವುಗಳಿಗೆ ಬಾಡಿಗೆ ನಿಗದಿಪಡಿಸದ ಕಾರಣ ಟೆಂಡರ್‌ ಪ್ರಕ್ರಿಯೆ ನನೆಗುದಿಗೆ ಬಿದ್ದು ಮಳಿಗೆ ನಿರುಪಯುಕ್ತವಾಗಿದೆ. ಇದರಿಂದಾಗಿ ತಾಪಂಗೆ ಆದಾಯವೂ ಇಲ್ಲದಂತಾಗಿದೆ. ಇವುಗಳನ್ನು ಹೊರತುಪಡಿಸಿ ಉಳಿದಿರುವ ಖಾಲಿ ಜಮೀನು ನಿರ್ವಹಣೆ ಇಲ್ಲದೆ ಮುಳ್ಳುಕಂಟಿ ಬೆಳೆದು, ಸಾರ್ವಜನಿಕರು ತಿಪ್ಪೆಗುಂಡಿಯನ್ನಾಗಿ ಮಾಡಿಕೊಂಡು, ಹಂದಿ, ಬೀದಿನಾಯಿಗಳ ವಾಸಸ್ಥಳವಾಗಿ ಅನಾರೋಗ್ಯಕರ ತಾಣ ಎನ್ನಿಸಿಕೊಂಡಿದೆ.

ಸುತ್ತಲಿನ ಜಾಗವನ್ನು ಖಾಸಗಿ ವ್ಯಕ್ತಿಗಳು ಅಲ್ವಸ್ವಲ್ಪ ಅತಿಕ್ರಮಣ ಮಾಡಿಕೊಳ್ಳುತ್ತಿರುವ ಆರೋಪವೂ ಕೇಳಿಬರುತ್ತಿದೆ. ಸಮಸ್ತ ಅನೈತಿಕ ಚಟುವಟಿಕೆಗಳಿಗೆ ಪ್ರಶಸ್ತವಾದ ಸ್ಥಳ ಎನ್ನಿಸಿಕೊಂಡಿದೆ. ಕೋಟ್ಯಂತರ ರೂ. ಅನುದಾನ ಬಳಸಿ ಕಟ್ಟಡ, ಮಳಿಗೆಗಳನ್ನು ಕಟ್ಟಿ ಅದನ್ನು ಸಾರ್ಥಕವಾಗಿ ಬಳಕೆ ಮಾಡಿಕೊಳ್ಳಲು ಮುಂದಾಗದಿದ್ದರೆ ಸರ್ಕಾರದ ಯೋಜನೆಗಳು ಹೇಗೆ ವಿಫಲಗೊಳ್ಳುತ್ತವೆ ಎನ್ನುವುದಕ್ಕೆ ಹಾಗೂ ಆಡಳಿತ ನಡೆಸುವವರು ನಿರಾಸಕ್ತಿ ತೋರಿದಲ್ಲಿ ಅಂಥ ಯೋಜನೆಗಳು ಹಳ್ಳ ಹಿಡಿಯುವುದು ಮಾತ್ರವಲ್ಲದೆ ಪುಂಡ ಪೋಕರಿಗಳಿಗೆ, ಅನೈತಿಕ ದಂಧೆ ನಡೆಸುವವರಿಗೆ ಹೇಗೆ ಆಶ್ರಯ ತಾಣಗಳಾಗುತ್ತವೆ ಎನ್ನುವುದಕ್ಕೆ ಈ ಪ್ರದೇಶ ಸೂಕ್ತ ಎನ್ನಿಸಿಕೊಂಡಿದೆ.

ಈಗಲಾದರೂ ತಾಪಂ ಆಡಳಿತ ಚುಕ್ಕಾಣಿ ಹಿಡಿದವರು, ಜನಪ್ರತಿನಿಧಿಗಳು, ಅಧಿಕಾರಿ ವರ್ಗದವರು ಎಚ್ಚೆತ್ತುಕೊಂಡು 4 ಎಕರೆ ಜಾಗ ಜನೋಪಯೋಗಿಯನ್ನಾಗಿ ಮಾಡಿ ಸರ್ಕಾರದ ಯೋಜನೆ ಜನರಿಗೆ ತಲುಪುವಂತೆ ನೋಡಿಕೊಳ್ಳಬೇಕೆನ್ನುವುದು ಸಾರ್ವಜನಿಕರ ಬೇಡಿಕೆಯಾಗಿದೆ.

ಶಾಸಕ ನಡಹಳ್ಳಿ ಕನಸು
ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ ಅವರು ಈ ಮತಕ್ಷೇತ್ರಕ್ಕೆ ಶಾಸಕರಾಗಿ ಆಯ್ಕೆ ಆದ ಕೂಡಲೇ ಅತಿಕ್ರಮಣಗೊಂಡಿರುವ ಸರ್ಕಾರದ ಆಸ್ತಿ ಲೆಕ್ಕ ಹಾಕಲು ಅಧಿಕಾರಿಗಳಿಗೆ ಸೂಚಿಸಿದ್ದರು. ಆಗ ತಾಪಂ ಅಧೀನದಲ್ಲಿರುವ ಈ 4 ಎಕರೆ ಜಾಗದ ಮಾಹಿತಿಯೂ
ದೊರಕಿತು. ಪಟ್ಟಣದಲ್ಲಿ ತಾಪಂಗೆ ಆಡಳಿತ ಕಚೇರಿ ಹೊರತುಪಡಿಸಿ ಇರುವುದು ಕೋಟ್ಯಾಂತರ ಬೆಳೆ ಬಾಳುವ ಇದೊಂದೇ ಆಸ್ತಿ. ಹೀಗಾಗಿ ಇದನ್ನು ಜೀರ್ಣೋದ್ಧಾರಗೊಳಿಸುವ ಚಿಂತನೆ ನಡೆಸಿದರು. ಇದಕ್ಕೆ ಕೋಟ್ಯಾಂತರ ರೂ. ಖರ್ಚು ತಗುಲುತ್ತದೆ. ಆದರೆ ತಾಪಂ ಬಳಿ ಅಷ್ಟೊಂದು ಆದಾಯ, ಸಂಪನ್ಮೂಲ ಇಲ್ಲ ಎನ್ನುವುದನ್ನು ಮನಗಂಡು ಸರ್ಕಾರದಿಂದ ಯಾವುದಾದರೂ ಹೊಸ ಯೋಜನೆ ತಂದು ಈ ಜಾಗವನ್ನು ಸದ್ಬಳಕೆ ಮಾಡಿಕೊಳ್ಳಲು ಚರ್ಚಿಸಿದರು. ಆ ಜಾಗದಲ್ಲಿ ಮಿನಿ ವಿಧಾನಸೌಧದಲ್ಲಿರುವ ಸರ್ಕಾರ ಕಚೇರಿ ಹೊರತುಪಡಿಸಿ ಬೇರೆ ಕಡೆ ಚದುರಿದಂತೆ ಅಲ್ಲಲ್ಲಿ ಇರುವ, ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಇತರೆ ಕಚೇರಿಗಳನ್ನು ತಂದು ಸರ್ಕಾರಿ ಕಚೇರಿಗಳ ಸಮುತ್ಛಯ ನಿರ್ಮಿಸಿ ಜನರಿಗೆ ಅನುಕೂಲ ಕಲ್ಪಿಸಬೇಕು ಎನ್ನುವ ಕನಸನ್ನು ಶಾಸಕರು ಹೊಂದಿದ್ದಾರೆ.

ನಿರುಪಯುಕ್ತ, ಅನೈತಿಕ ಚಟುವಟಿಕೆಗಳ ತಾಣವಾಗಿರುವ ಈ ಜಾಗದ ಸದುಪಯೋಗ ಮಾಡಿಕೊಳ್ಳಲು ತಾಪಂ ಆಡಳಿತ, ಜನಪ್ರತಿನಿಧಿಗಳು ಮುಂದಾಗಬೇಕು. ಇದೂ ಅತಿಕ್ರಮಣಗೊಂಡಲ್ಲಿ ಮುಂದಿನ ದಿನಗಳಲ್ಲಿ ಸರ್ಕಾರಿ ಕಚೇರಿಗಳಿಗೆ ಜಾಗವೆ ಇಲ್ಲದಂತಾಗಬಹುದು.
ಸಿದ್ದು ಚಲವಾದಿ,
ಪ್ರಧಾನ ಕಾರ್ಯದರ್ಶಿ, ಕಾನಿಪ ಸಂಘ, ಮುದ್ದೇಬಿಹಾಳ

ಈ ಜಾಗದ ಬಗ್ಗೆ ತಾಪಂ ಸಾಮಾನ್ಯ ಸಭೆಯಲ್ಲಿ ಹಲವು ಬಾರಿ ಚರ್ಚಿಸಲಾಗಿದೆ. ಹಳೆ ಕಟ್ಟಡ ನೆಲಸಮಗೊಳಿಸಿ ಹೊಸ ಕಟ್ಟಡ ಕಟ್ಟಲು ಆರ್ಥಿಕ ಸಮಸ್ಯೆ ಇದೆ. ಸಾಮರ್ಥ್ಯಸೌಧ, ವಾಣಿಜ್ಯಮಳಿಗೆ ಶೀಘ್ರ ಪ್ರಾರಂಭಕ್ಕೆ ಮತ್ತೂಮ್ಮೆ ಪ್ರಸ್ತಾಪ ಮಾಡುತ್ತೇನೆ.
ಮಂಜುನಾಥಗೌಡ ಪಾಟೀಲ,
ಉಪಾಧ್ಯಕ್ಷರು, ತಾಪಂ

ಕ್ವಾಟ್ರಸ್‌ಗಳು ತುಂಬಾ ಹಳೆಯದಾಗಿದ್ದು ಡೆಮಾಲಿಶ್‌ ಮಾಡಬೇಕಿದೆ. ಹೊಸ ಮಳಿಗೆಗೆ ಪಿಡಬ್ಲ್ಯೂಡಿಯವರು ಬಾಡಿಗೆ ನಿಗದಿಪಡಿಸಿದ ನಂತರ ಟೆಂಡರ್‌ ಕರೆದು ಜನಬಳಕೆಗೆ ಮುಕ್ತಗೊಳಿಸಲಾಗುತ್ತದೆ.
ಶಶಿಧರ ಶಿವಪುರೆ,
ಕಾರ್ಯನಿರ್ವಾಹಕ ಅಧಿಕಾರಿ, ತಾಪಂ

4 ಎಕರೆ ಜಾಗ, ಕಟ್ಟಡಗಳ ಮಾಹಿತಿ ಇದೆ. ಆದರೆ ಜಿಪಂ ಅನುದಾನ ಕೊಡುವುದು ಕಷ್ಟಕರ. ಸರ್ಕಾರದ ಮಟ್ಟದಲ್ಲೇ ಪ್ರಯತ್ನ ನಡೆದು ವಿಶೇಷ ಅನುದಾನ ತಂದು ಆ ಜಾಗ ಸದ್ಭಳಕೆ ಮಾಡುಕೊಳ್ಳುವುದು ಹೆಚ್ಚು ಸೂಕ್ತ.
ಪ್ರಭುಗೌಡ ದೇಸಾಯಿ,
ಉಪಾಧ್ಯಕ್ಷರು, ಜಿಪಂ, ವಿಜಯಪುರ 

ಟಾಪ್ ನ್ಯೂಸ್

ಹಳದಿ ಶಾಸ್ತ್ರದ ವೇಳೆ ವರನಿಗೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿಯಲ್ಲಿ ಕೊನೆಯುಸಿರು

ಹಳದಿ ಶಾಸ್ತ್ರದ ವೇಳೆ ವರನಿಗೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರು

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Rahul Gandhi 3

U-turn ಹೊಡೆದ ರಾಹುಲ್: ಸಂಪತ್ತು ಹಂಚಿಕೆ ಬಗ್ಗೆ ಹೇಳಿಲ್ಲ,ಅನ್ಯಾಯ…

ತಂಗಿ ಮದುವೆಗೆ ಟಿವಿ ಗಿಫ್ಟ್‌ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ

ತಂಗಿ ಮದುವೆಗೆ ಟಿವಿ ಗಿಫ್ಟ್‌ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ

15

ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqeqwewq

Congress ನಿಂದ ಬದುಕು; ಬಿಜೆಪಿಯದ್ದು ಭಾವನೆಗಳ ಚೆಲ್ಲಾಟ: ಡಾ| ಭಂಡಾರಿ

15

ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಳದಿ ಶಾಸ್ತ್ರದ ವೇಳೆ ವರನಿಗೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿಯಲ್ಲಿ ಕೊನೆಯುಸಿರು

ಹಳದಿ ಶಾಸ್ತ್ರದ ವೇಳೆ ವರನಿಗೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರು

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

5-uv-fusion

Yugadi: ವರುಷದ ಆದಿ ಯುಗಾದಿ

Rahul Gandhi 3

U-turn ಹೊಡೆದ ರಾಹುಲ್: ಸಂಪತ್ತು ಹಂಚಿಕೆ ಬಗ್ಗೆ ಹೇಳಿಲ್ಲ,ಅನ್ಯಾಯ…

ತಂಗಿ ಮದುವೆಗೆ ಟಿವಿ ಗಿಫ್ಟ್‌ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ

ತಂಗಿ ಮದುವೆಗೆ ಟಿವಿ ಗಿಫ್ಟ್‌ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.