ಅಂತೂ ಬಂತು 20 ಸಾವಿರ ಲೀ. ಪ್ರಾಣವಾಯು
ಜಿಲ್ಲಾಡಳಿತದ ಸುಪರ್ದಿಗೆ ಆಮ್ಲಜನಕ ಕಂಟೈನರ್, ಘಟಕದಲ್ಲಿ ಶೇಖರಣೆ
Team Udayavani, May 13, 2021, 5:36 PM IST
ಮೈಸೂರು: 20 ಸಾವಿರ ಲೀಟರ್ ಆಮ್ಲಜನಕ ತುಂಬಿರುವ ಒಂದು ಕಂಟೈನರ್ ಮೈಸೂರಿಗೆ ಬುಧವಾರ ಆಗಮಿಸಿದ್ದು, ಇದನ್ನು ಜಿಲ್ಲಾಡಳಿದ ಸುಪರ್ದಿಗೆ ಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರವು ಆಮ್ಲಜನಕ ಎಕ್ಸ್‌ಪ್ರೆಸ್‌ನಲ್ಲಿ ಮಂಗಳವಾರ ಬೆಂಗಳೂರಿಗೆ ಸಾಗಿಸಿದ್ದ ಕಂಟೈನರ್‌ಗಳಲ್ಲಿ ಒಂದು ಮೈಸೂರು ತಲುಪಿದ್ದು, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ವಿಕೋಪ ನಿರ್ವಹಣೆ ಕಾಯ್ದೆಯಡಿ ಕಡಕೊಳ ಕೈಗಾರಿಕಾ ಪ್ರದೇಶದ ತ್ರಿನೇತ್ರ ಗ್ಯಾಸಸ್‌ನಲ್ಲಿದ್ದ ಸೌಲಭ್ಯವನ್ನು ಜಿಲ್ಲಾಡಳಿತದ ಸುಪರ್ದಿಗೆ ಪಡೆದು, 20 ಸಾವಿರ ಲೀಟರ್ ಸಾಮರ್ಥ್ಯದ ಆಮ್ಲಜನಕ ಘಟಕದಲ್ಲಿ ಶೇಖರಿಸಿಡಲಾಗಿದೆ.
ಕಂಟೈನರ್‌ನಲ್ಲಿ ಬರುವ ಬೃಹತ್ ಪ್ರಮಾಣದ ಆಮ್ಲಜನಕವನ್ನು ಶೇಖರಣೆ ಮಾಡಿಟ್ಟುಕೊಳ್ಳಲು ಮೈಸೂರು ಜಿಲ್ಲೆಯಲ್ಲಿ ಶೇಖರಣಾ ಘಟಕದ ಅಭಾವ ಇದ್ದುದ್ದರಿಂದ ಕಡಕೊಳ ಕೈಗಾರಿಕಾ ಪ್ರದೇಶದಲ್ಲಿದ್ದ ತ್ರಿನೇತ್ರ ಗ್ಯಾಸಸ್‌ನ ಆಮ್ಲಜನಕ ಶೇಖರಣೆ ಘಟಕವನ್ನು ಡಿಸಾಸ್ಟರ್ ಮ್ಯಾನೇಜ್ ಮೆಂಟ್ ಆ್ಯಕ್ಟ್ 2005 ಕಲಂ 34(ಜೆ) 64ರಡಿಯಲ್ಲಿ ವಶಕ್ಕೆ ಪಡೆದು ಸಂಗ್ರಹಿಸಿಡಲಾಗಿದೆ. ಈ ಘಟಕದ ಸುಪರ್ದಿಯನ್ನು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕರು ಹಾಗೂ ಸಹಾಯಕ ಔಷಧ ನಿಯಂತ್ರಕರಿಗೆ ನೀಡಿದ್ದು, ಕೇಂದ್ರ ಸರ್ಕಾರವು ಸರಬರಾಜು ಮಾಡಲಿರುವ ಆಮ್ಲಜನಕವನ್ನು ಶೇಖರಿಸಿಡಲು ಹಾಗೂ ಜಿಲ್ಲಾಡಳಿತದ ನಿರ್ದೇಶನದಂತೆ ಹಂಚಿಕೆ ಮಾಡಲು ಕ್ರಮ ವಹಿಸಲು ಆದೇಶಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಿಲ್ ತುಂಬದ ಗ್ರಾ. ಪಂಚಾಯತ್ :ವಾರದಿಂದ ಗ್ರಾಮದಲ್ಲಿ ಬೆಳಗದ ಬೀದಿ ದೀಪ, ಗ್ರಾಮಸ್ಥರ ಹಿಡಿಶಾಪ
ಅಭಿಮಾನಿಯ ಟೀ ಅಂಗಡಿಯಲ್ಲಿ ಚಹಾ ಸವಿದ ಶಿವಣ್ಣ : 5 ವರ್ಷದ ಕನಸು – ನನಸು
ಮಳೆಯ ಅಬ್ಬರ : ಉಡುಪಿ, ದ.ಕನ್ನಡದಲ್ಲಿ ನಾಳೆಯೂ ಶಾಲಾ – ಕಾಲೇಜುಗಳಿಗೆ ರಜೆ
ಅಂಜನಾದ್ರಿಯನ್ನು ಹೈಜಾಕ್ ಮಾಡಲು ಬಿಜೆಪಿ-ಸಂಘಪರಿವಾರದವರಿಗೆ ಬಿಡಲ್ಲ: ಎಚ್.ಆರ್.ಶ್ರೀನಾಥ
ಚಾ.ನಗರದಲ್ಲಿ ʼಬೈರಾಗಿʼ ವೀಕ್ಷಿಸಿದ ಶಿವಣ್ಣ: ಚಿತ್ರ ಪ್ರದರ್ಶನ ಯಾತ್ರೆಗೆ ಅದ್ದೂರಿ ಸ್ವಾಗತ
MUST WATCH
ಹೊಸ ಸೇರ್ಪಡೆ