ಮತ ಜಾಗೃತಿಗೆ 3 ಕಿ.ಮೀ. ಮ್ಯಾರಥಾನ್‌

Team Udayavani, Apr 14, 2019, 3:00 AM IST

ಮೈಸೂರು: ಮತದಾರರನ್ನು ಮತದಾನ ಮಾಡಿ ಎಂದು ಒತ್ತಾಯ ಮಾಡುವ ಪರಿಸ್ಥಿತಿಗೆ ನಮ್ಮ ದೇಶ ತಲುಪಿದೆ ಎಂದು ಚಿತ್ರನಟ ಮಂಡ್ಯ ರಮೇಶ್‌ ವಿಷಾದಿಸಿದರು.

2019ರ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಕಡ್ಡಾಯ ಮತದಾನ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾ ಸ್ವೀಪ್‌ ಸಮಿತಿ ಹಾಗೂ ಮೈಸೂರು ಮಹಾನಗರಪಾಲಿಕೆ ಸಹಯೋಗದಲ್ಲಿ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಆಯೋಜಿಸಿದ್ದ 3 ಕಿ.ಮೀ. ಓಟದ ಮ್ಯಾರಥಾನ್‌ ಕಾರ್ಯಕ್ರಮಕ್ಕೆ ವಿಶ್ರಾಂತ ಕುಲಪತಿ ಪ್ರೊ. ಶೇಖ್‌ ಆಲಿ ಚಾಲನೆ ನೀಡಿದರು.

ಈ ಸಂದರ್ಭ ಮಾತನಾಡಿದ ಚಿತ್ರನಟ ಮಂಡ್ಯ ರಮೇಶ್‌, ಚುನಾವಣೆಯಲ್ಲಿ ಮತದಾರರು ಮತದಾನ ಮಾಡಿ ಎಂದು ಹೇಳುವ ಪರಿಸ್ಥಿತಿಗೆ ನಮ್ಮ ದೇಶ ಇತ್ತೀಚಿನ ದಿನಗಳಲ್ಲಿ ತಲುಪಿದೆ. ಇದು ದುರಾದೃಷ್ಟಕರ ಸಂಗತಿ. ನಮ್ಮ ಮತದಾನ ಹಕ್ಕು ಬಳಸಿ ನಾಗರಿಕ ಮತದಾರರು ಸ್ವಯಂ ಪ್ರೇರಿತರಾಗಿ ಮತಗಟ್ಟೆಗೆ ಹೋಗಿ ಮತ ಚಲಾಯಿಸಬೇಕು. ಆಗ ನಮ್ಮ ಹಕ್ಕಿಗೆ ಸ್ವಾತಂತ್ರ್ಯ ಸಿಕ್ಕ ಹಾಗೆ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಸ್ವೀಪ್‌ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್‌ ಮುಖ್ಯಕಾರ್ಯನಿರ್ವಾಹಕಾಧಿಕಾರಿ ಕೆ.ಜ್ಯೋತಿ, ಮ್ಯಾರಥಾನ್‌ ನಲ್ಲಿ ಭಾಗವಹಿಸಿದ್ದವರಿಗೆ ಚುನಾವಣಾ ಪ್ರತಿಜ್ಞಾವಿಧಿ ಬೋಧಿಸಿ, ಯುವ ಮತದಾರರಾದ ನೀವೆಲ್ಲ ಜಾಗೃತರು. ಹೊಸ ಮತದಾರರಿಗೆ ಅಭಿನಂದನೆ ತಿಳಿಸಿ ಕಡ್ಡಾಯವಾಗಿ ಮತದಾನ ಮಾಡಿ ಆಮೂಲಕ ಮತದಾನ ಪ್ರಮಾಣವನ್ನು ಹೆಚ್ಚಿಸಬಹುದು ಎಂದು ತಿಳಿಸಿದರು.

ಮ್ಯಾರಥಾನ್‌ನಲ್ಲಿ ಕಾವಾ ಕಾಲೇಜು ವಿದ್ಯಾರ್ಥಿಗಳು, ಯುವಜನ ಮತ್ತು ಕ್ರೀಡಾ ಇಲಾಖೆ ಕ್ರೀಡಾಪಟುಗಳು, ಮೈಸೂರು ವಿಶ್ವ ವಿದ್ಯಾನಿಲಯದ ಕ್ರೀಡಾಪಟುಗಳು ಮೈಸೂರು ರನ್ನರ್ಸ್‌ ಹಾಗೂ ಸಾರ್ವಜನಿಕರು ಸೇರಿದಂತೆ ಒಂದು ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಅರಮನೆಯಿಂದ ಹೊರಟ ಮ್ಯಾರಥಾನ್‌ ಟೌನ್‌ ಹಾಲ್‌ ನಲ್ಲಿ ಅಂತ್ಯ ವಾಯಿತು.

ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಚುನಾವಣಾ ವೆಚ್ಚ ವೀಕ್ಷಕರಾದ ಸಂದೀಪ್‌ ಕುಮಾರ್‌ ಮಿಶ್ರ ಹಾಗೂ ಸೂರಜ್‌ ಕುಮಾರ್‌ ಗುಪ್ತ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅಂಬಾಡ ಮಾದವ, ಮೈಸೂರು ನಗರ ಪೊಲೀಸ್‌ ಆಯುಕ್ತರಾದ ಬಾಲಕೃಷ್ಣ,

ಮೈಸೂರು ಮಹಾನಗರಪಾಲಿಕೆ ಆಯುಕ್ತರಾದ ಶಿಲ್ಪಾನಾಗ್‌ ಹಾಗೂ ಹೆಚ್ಚುವರಿ ಆಯುಕ್ತ ಶಿವಾನಂದ ಮೂರ್ತಿ, ಪ್ರೊ.ಕೃಷ್ಣೇಗೌಡ, ಅಥ್ಲೆಟಿಕ್‌ ರಮ್ಯ, ಯೋಗಪಟು ವಿಜೇತೆ ಖುಷಿ, ನಟಿಯರಾದ ಸುಧಾ ಬೆಳವಾಡಿ, ಸಂಯುಕ್ತ ಹೊರ್ನಾಡ್‌ ಸೇರಿದಂತೆ ಇನ್ನಿತರ ಉಪಸ್ಥಿತರಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  •  ಆಗ್ನೇಯ, ಪಶ್ಚಿಮ, ಕೇಂದ್ರ, ದಕ್ಷಿಣ ಭಾರತದ ಕೆಲವೆಡೆ ಅತಿ ಬಿಸಿ  ಪ್ರತೀ ವರ್ಷಕ್ಕಿಂತ ಹೆಚ್ಚು ತಾಪ ಇರಲಿದೆ ಎಂದ ಇಲಾಖೆ  ತೆಲಂಗಾಣ, ಆಂಧ್ರ ಕರಾವಳಿಗಳಲ್ಲಿ ಬಿಸಿಗಾಳಿ...

  • ನಾನೇ ನನಗೆ ಗೌರವ/ಮೌಲ್ಯ ಕೊಟ್ಟುಕೊಳ್ಳುವುದಿಲ್ಲ ಎಂದರೆ, ನನ್ನನ್ನು ನಾನೇ ಪ್ರೀತಿಸುವುದಿಲ್ಲ ಎಂದರೆ, ಬೇರೆಯವರ್ಯಾಕೆ ನನ್ನನ್ನು ಗೌರವಿಸುತ್ತಾರೆ? ಪ್ರೀತಿಸುತ್ತಾರೆ?...

  • ಬೀಜಿಂಗ್‌/ಹೊಸದಿಲ್ಲಿ: ಚೀನದಲ್ಲಿ ಉದ್ಭವಿಸಿದ ಕೊರೊನಾ ವೈರಸ್‌ ಸೋಂಕಿನ ಪರಿಣಾಮ ಈಗ ಜಾಗತಿಕವಾಗಿ ಗೋಚರಿಸಲಾರಂಭಿಸಿದೆ. ಆರು ದಿನಗಳಿಂದ ಜಗತ್ತಿನ ನಾನಾ ಷೇರು...

  • ಇಂದ್ರಾಣಿ ನದಿಯ ಇಂದಿನ ಕುರೂಪಕ್ಕೆ ನಗರಸಭೆಯನ್ನು ಎಷ್ಟು ದೂರಿದರೂ ಸಾಲದು ಎನ್ನುತ್ತವೆ ದಾಖಲೆಗಳು. ಸುದಿನ ಅಧ್ಯಯನ ತಂಡ ಸಂಗ್ರಹಿಸಿದ ಹಲವು ದಾಖಲೆಗಳು ಸಾಬೀತು...

  • ಕಾಸರಗೋಡು: ರಾಜ್ಯ ಸರಕಾರ ಮುಂಗಡಪತ್ರದಲ್ಲಿ ಘೋಷಿಸಿರುವ "ಹಸಿವು ರಹಿತ ರಾಜ್ಯ ಯೋಜನೆ'ಯ ಅಂಗವಾಗಿ ಇನ್ನು ಮುಂದೆ ಕಾಸರಗೋಡಿನಲ್ಲೂ 25 ರೂ.ಗೆ ಮಧ್ಯಾಹ್ನ ಭೋಜನ ಲಭಿಸಲಿದೆ. ಜಿಲ್ಲಾಧಿಕಾರಿ...