ಅಧಿಕಾರಿಗಳು ಬಡಜನತೆ ನೆರವಿಗೆ ನಿಲ್ಲಬೇಕು: ಶಾಸಕ ಎಚ್.ಪಿ.ಮಂಜುನಾಥ್

Team Udayavani, Jan 26, 2022, 4:39 PM IST

ಅಧಿಕಾರಿಗಳು ಬಡಜನತೆ ನೆರವಿಗೆ ನಿಲ್ಲಬೇಕು: ಶಾಸಕ ಎಚ್.ಪಿ.ಮಂಜುನಾಥ್

ಹುಣಸೂರು:ವಿವಿಧತೆಯಲ್ಲಿ ಏಕತೆಯನ್ನು ಕಂಡದೇಶ ನಮ್ಮದು, ನಮ್ಮ ಸಂವಿದಾನವು ಸರ್ವರಿಗೂ ಸಮಪಾಲು-ಸಮಬಾಳು ಎಂಬ ಆಶಯದೊಂದಿಗೆ ಸಮಾನತೆಯನ್ನು ಕಲ್ಪಿಸಿಕೊಟ್ಟ ಡಾ.ಬಿ.ಆರ್.ಅಂಬೇಡ್ಕರ್ ನೇತೃತ್ವದ ಸಂವಿದಾನ ರಚನಾಕಾರರನ್ನು ಸ್ಮರಿಸುವ ದಿನ ಇದಾಗಿದೆ ಎಂದು ಶಾಸಕ ಎಚ್.ಪಿ.ಮಂಜುನಾಥ್ ತಿಳಿಸಿದರು.

ನಗರದ ಮುನೇಶ್ವರಕಾವಲ್ ಮೈದಾನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿವತಿಯಿಂದ ಆಯೋಜಿಸಿದ್ದ 73ನೇ ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಸಂವಿದಾನವನ್ನು ಒಪ್ಪಿ ನಡೆಯುತ್ತಿರುವ ದಿನಗಳಲ್ಲೇ  ಸಂವಿದಾನದ ಆಶಯಗಳಿಗೆ ಕೊಡಲಿ ಪೆಟ್ಟು ಬೀಳುತ್ತಿದ್ದರೂ ಸಾರ್ವಜನಿಕರು ನಂಬಿ ನಡೆಯುತ್ತಿದ್ದೇವೆಂದರು.

ತಾಲೂಕಿನಲ್ಲಿ ದಿನೇದಿನೇ ಕಾನೂನು ಸುವ್ಯವಸ್ಥೆ-ಆಡಳಿತ ಕುಸಿಯುತ್ತಿದೆ. ಇದರಿಂದ ಸಾರ್ವಜನಿಕರು ಕಷ್ಟ ಅನುಭವಿಸಬೇಕಾಗಲಿದೆ, ಅಧಿಕಾರಿಗಳು ಹಾದಿ ತಪ್ಪಿದಲ್ಲಿ ಜನರು ಸಂಕಷ್ಟಕ್ಕೊಳಗಾಗಲಿದ್ದಾರೆAದು ಎಚ್ಚರಿಸಿ. ಸಂವಿದಾನಾತ್ಮಕ ದಿನದಂದು ಅಧಿಕಾರಿಗಳು ಬಡಜನತೆಗೆ ಸಂವಿದಾನಾತ್ಮಕವಾಗಿ ಸಿಗಬೇಕಾದ ಸವಲತ್ತುಗಳನ್ನು ತಲುಪಿಸುವ, ರಕ್ಷಣೆ ನೀಡುವ ಮಹತ್ತರ ಜವಾಬ್ದಾರಿ ಹೊರಬೇಕಿದೆ ಎಂದರು.

ಸಂಗೊಳ್ಳಿರಾಯಣ್ಣಸ್ಮರಣೆ:

ದೇಶಪ್ರೇಮಿ ಸಂಗೊಳ್ಳಿ ರಾಯಣ್ಣ ವೀರಮರಣವನ್ನಪ್ಪಿದ ದಿನವೂ ಇದಾಗಿದೆ. ಸಂಗೊಳ್ಳಿ ರಾಯಣ್ಣನ ಸ್ವಾತಂತ್ರ್ಯಯದ ಹೋರಾಟ ನಮಗೆಲ್ಲ ದಾರಿದೀಪವಾಗಿದೆ.ಇಂತ ದೇಶಪ್ರೇಮಿಗಳ ಸ್ಮರಣೆ ಅತ್ಯವಶ್ಯವೆಂದರು.

ಧ್ವಜಾರೋಹಣ ನೆರವೇರಿಸಿದ ಉಪ ವಿಭಾಗಾಧಿಕಾರಿ ಉಪ ವಿಭಾಗಾಧಿಕಾರಿ ವರ್ಣಿತ್ ನೇಗಿಯವರು ಮಾತನಾಡಿ ದೇಶದ ಸಂವಿದಾನ 1950 ರಲ್ಲಿ ಜಾರಿಗೆ ಬಂದಿದ್ದು, ಈ ಗಣರಾಜ್ಯೋತ್ಸವದಂದು ಸಂವಿದಾನ ರಚನಾಕಾರರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕೆಂದು ಆಶಿಸಿದರು.

ಸಭೆಯಲ್ಲಿ ತಹಸೀಲ್ದಾರ್ ಡಾ.ಅಶೋಕ್,  ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಸದಸ್ಯ ಎಸ್.ಜಯರಾಂ ಮಾತನಾಡಿದರು. ನಗರಸಭೆ ಅಧ್ಯಕ್ಷೆ ಸೌರಭಸಿದ್ದರಾಜು, ಉಪಾಧ್ಯಕ್ಷ ದೇವನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ಯೂನಸ್ ಹಾಗೂ ಸದಸ್ಯರು, ಹುಡಾ ಅಧ್ಯಕ್ಷ ಗಣೇಶ್‌ಕುಮಾರಸ್ವಾಮಿ, ಡಿವೈಎಸ್‌ಪಿ ರವಿಪ್ರಸಾದ್, ತಾ.ಪಂ.ಆಡಳಿತಾಧಿಕಾರಿ ನಂದಾ, ಇಓ ಗಿರೀಶ್, ಪೌರಾಯುಕ್ತ ರಮೇಶ್, ಬಿಇಓ ನಾಗರಾಜ್,ಕೃಷಿ ಅಧಿಕಾರಿ ವೆಂಕಟೇಶ್, ಎಇಇಗಳಾದ ಸಿದ್ದಪ್ಪ, ಬೋಜರಾಜ್ ಸೇರಿದಂತೆ ಅಧಿಕಾರಿಗಳು ಭಾಗವಹಿಸಿದ್ದರು.

ಪಥಸಂಚಲನ: ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ನಡೆದ ಸಮಾರಂಭದಲ್ಲಿ ಎಸ್.ಐ. ಜಮೀರ್ ಅಹಮದ್ ನೇತೃತ್ವದ ಪೊಲೀಸ್‌ರಿಂದ ಧ್ವಜವಂದನೆ, ಹಾಗೂ ಕೇಂಬ್ರಿಡ್ಜ್ ಶಾಲಾ ಮಕ್ಕಳಿಂದ ದೇಶಪ್ರೇಮ ಮೆರೆವ ಸಂಗೀತ ನುಡಿಸುತ್ತಾ ಪಥಸಂಚಲನದಲ್ಲಿ ಸಾಗಿಬಂದರು.  ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿತ್ತು.

ಟಾಪ್ ನ್ಯೂಸ್

ಭಾರತ-ನೇಪಾಲ ಸ್ನೇಹ ಹಿಮಾಲಯದಷ್ಟು ಗಾಢ; ಬುದ್ಧನ ನಾಡಿನಲ್ಲಿ ಪ್ರಧಾನಿ ಮೋದಿ ಪ್ರತಿಪಾದನೆ

ಭಾರತ-ನೇಪಾಲ ಸ್ನೇಹ ಹಿಮಾಲಯದಷ್ಟು ಗಾಢ; ಬುದ್ಧನ ನಾಡಿನಲ್ಲಿ ಪ್ರಧಾನಿ ಮೋದಿ ಪ್ರತಿಪಾದನೆ

ರಾಜ್ಯ ವಿಪತ್ತು ಸ್ಪಂದನ ದಳಕ್ಕೆ ಮಾಜಿ ಸೈನಿಕರೇ ಗತಿ

ರಾಜ್ಯ ವಿಪತ್ತು ಸ್ಪಂದನ ದಳಕ್ಕೆ ಮಾಜಿ ಸೈನಿಕರೇ ಗತಿ

ಭೂಮಿ ಗುತ್ತಿಗೆಗೆ ಅನ್ನದಾತರ ಅಪಸ್ವರ; ಒತ್ತುವರಿ ಭೂಮಿ ಹಂಚಿಕೆಗೆ ಹರ್ಷ

ಭೂಮಿ ಗುತ್ತಿಗೆಗೆ ಅನ್ನದಾತರ ಅಪಸ್ವರ; ಒತ್ತುವರಿ ಭೂಮಿ ಹಂಚಿಕೆಗೆ ಹರ್ಷ

astrology

ಮಂಗಳವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ

ಮೂರು ತಿಂಗಳು ಸಮವಸ್ತ್ರ ಸಿಗದು; ಸಮವಸ್ತ್ರಕ್ಕೆ ಇನ್ನೂ ಟೆಂಡರ್‌ ಪ್ರಕ್ರಿಯೆ ಆರಂಭವಾಗಿಲ್ಲ

ಮೂರು ತಿಂಗಳು ಸಮವಸ್ತ್ರ ಸಿಗದು; ಸಮವಸ್ತ್ರಕ್ಕೆ ಇನ್ನೂ ಟೆಂಡರ್‌ ಪ್ರಕ್ರಿಯೆ ಆರಂಭವಾಗಿಲ್ಲ

4 ತಿಂಗಳ ಗಾಢ ಕತ್ತಲೆಯಲ್ಲಿ ವಿಜ್ಞಾನಿಗಳ ವಾಸ!

4 ತಿಂಗಳ ಗಾಢ ಕತ್ತಲೆಯಲ್ಲಿ ವಿಜ್ಞಾನಿಗಳ ವಾಸ!

3 ಹುಲಿ ಮರಿಗಳಿಗೆ ತಾಯಿಯಾದ ನಾಯಿ-ವಿಡಿಯೋ ವೈರಲ್

ಈ 3 ಹುಲಿ ಮರಿಗಳಿಗೆ ನಾಯಿಯೇ “ತಾಯಿ’!-ವಿಡಿಯೋ ವೈರಲ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ffsfsfsd-fs

ದುಬಾರಿ, ಕಳಪೆ ರಸಗೊಬ್ಬರ: ಕ್ರಮ ಕೈಗೊಳ್ಳಲು ಶಾಸಕ ಕೆ. ಮಹದೇವ್ ಸೂಚನೆ

ಪಠ್ಯಕ್ರಮ ಮುಗಿಸುವುದಷ್ಟೇ ಪ್ರಾಧ್ಯಾಪಕರ ಕೆಲಸ ಅಲ್ಲ

ಪಠ್ಯಕ್ರಮ ಮುಗಿಸುವುದಷ್ಟೇ ಪ್ರಾಧ್ಯಾಪಕರ ಕೆಲಸ ಅಲ್ಲ

1-sds

75ರ ಸಂಭ್ರಮದಲ್ಲಿ ಹಿರಿಯ ರಾಜಕಾರಣಿ ಹೆಚ್. ವಿಶ್ವನಾಥ್

ಪಿರಿಯಾಪಟ್ಟಣ : ಶೀಲ ಶಂಕಿಸಿ ಪತ್ನಿಯನ್ನೇ ಕೊಲೆಗೈದು ಜಮೀನಿನಲ್ಲಿ ಎಸೆದು ಪರಾರಿಯಾದ ಪತಿ

ಪಿರಿಯಾಪಟ್ಟಣ : ಶೀಲ ಶಂಕಿಸಿ ಪತ್ನಿಯನ್ನೇ ಕೊಲೆಗೈದು ಜಮೀನಿನಲ್ಲಿ ಎಸೆದು ಪರಾರಿಯಾದ ಪತಿ

ಬಿಜೆಪಿ ಅಭ್ಯರ್ಥಿ ರವಿಶಂಕರ್‌ ಗೆಲುವು ಖಚಿತ

ಬಿಜೆಪಿ ಅಭ್ಯರ್ಥಿ ರವಿಶಂಕರ್‌ ಗೆಲುವು ಖಚಿತ

MUST WATCH

udayavani youtube

ಜ್ಞಾನವಾಪಿ ಮಸೀದಿ ಸರ್ವೇ ಸಂಪೂರ್ಣ; ಬಾವಿಯಲ್ಲಿ ‘ಶಿವಲಿಂಗ’ಪತ್ತೆ

udayavani youtube

ದತ್ತ ಜಯಂತಿ ಸಮಯದಲ್ಲಿ ಹೋಮದ ಹೊಗೆ.. ಬೇರೆ ಸಮಯದಲ್ಲಿ ಮಾಂಸದ ಹೊಗೆ

udayavani youtube

ಶಾಲಾ ಪ್ರಾರಂಭೋತ್ಸವ ಹಿರಿಯಡ್ಕ ಸರಕಾರಿ ಪಬ್ಲಿಕ್ ಸ್ಕೂಲ್ ನಲ್ಲಿ ಮಕ್ಕಳಿಗೆ ಸಂಭ್ರಮದ ಸ್ವಾಗತ

udayavani youtube

ಶಂಕರನಾರಾಯಣ : ಶಾಲಾರಂಭದ ದಿನದಂದೇ ಸರಕಾರಿ ಶಾಲೆಯಲ್ಲಿ ಪ್ರತಿಭಟನೆ ಬಿಸಿ

udayavani youtube

ಫಲಜ್ಯೋತಿಷ್ಯದಲ್ಲಿ ದೀರ್ಘಕಾಲೀನ ಫಲಾದೇಶ ಮಾಡುವುದು ಹೇಗೆ ?

ಹೊಸ ಸೇರ್ಪಡೆ

ಭಾರತ-ನೇಪಾಲ ಸ್ನೇಹ ಹಿಮಾಲಯದಷ್ಟು ಗಾಢ; ಬುದ್ಧನ ನಾಡಿನಲ್ಲಿ ಪ್ರಧಾನಿ ಮೋದಿ ಪ್ರತಿಪಾದನೆ

ಭಾರತ-ನೇಪಾಲ ಸ್ನೇಹ ಹಿಮಾಲಯದಷ್ಟು ಗಾಢ; ಬುದ್ಧನ ನಾಡಿನಲ್ಲಿ ಪ್ರಧಾನಿ ಮೋದಿ ಪ್ರತಿಪಾದನೆ

ರಾಜ್ಯ ವಿಪತ್ತು ಸ್ಪಂದನ ದಳಕ್ಕೆ ಮಾಜಿ ಸೈನಿಕರೇ ಗತಿ

ರಾಜ್ಯ ವಿಪತ್ತು ಸ್ಪಂದನ ದಳಕ್ಕೆ ಮಾಜಿ ಸೈನಿಕರೇ ಗತಿ

ಭೂಮಿ ಗುತ್ತಿಗೆಗೆ ಅನ್ನದಾತರ ಅಪಸ್ವರ; ಒತ್ತುವರಿ ಭೂಮಿ ಹಂಚಿಕೆಗೆ ಹರ್ಷ

ಭೂಮಿ ಗುತ್ತಿಗೆಗೆ ಅನ್ನದಾತರ ಅಪಸ್ವರ; ಒತ್ತುವರಿ ಭೂಮಿ ಹಂಚಿಕೆಗೆ ಹರ್ಷ

astrology

ಮಂಗಳವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ

ಮೂರು ತಿಂಗಳು ಸಮವಸ್ತ್ರ ಸಿಗದು; ಸಮವಸ್ತ್ರಕ್ಕೆ ಇನ್ನೂ ಟೆಂಡರ್‌ ಪ್ರಕ್ರಿಯೆ ಆರಂಭವಾಗಿಲ್ಲ

ಮೂರು ತಿಂಗಳು ಸಮವಸ್ತ್ರ ಸಿಗದು; ಸಮವಸ್ತ್ರಕ್ಕೆ ಇನ್ನೂ ಟೆಂಡರ್‌ ಪ್ರಕ್ರಿಯೆ ಆರಂಭವಾಗಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.